Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG BREAKING: ನಟ ಚೇತನ್ ಅಹಿಂಸಾ ವಿರುದ್ಧ FIR ದಾಖಲು

06/05/2026 3:50 PM

BIG NEWS : ವಚನಾನಂದ ಶ್ರೀಗಳಿಗೆ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಮಂಜೂರು

06/05/2026 3:49 PM

SHOCKING : ಬೆಂಗಳೂರಲ್ಲಿ ಮನೆ ಬಾಡಿಗೆಗೆ ಇದ್ದ ಯುವತಿ ಸ್ನಾನ ಮಾಡುವಾಗ ವಿಡಿಯೋ ಮಾಡಿದ ಕಾಮುಕ!

06/05/2026 3:16 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಬೆಂಗಳೂರಲ್ಲಿ ಮನೆ ಬಾಡಿಗೆಗೆ ಇದ್ದ ಯುವತಿ ಸ್ನಾನ ಮಾಡುವಾಗ ವಿಡಿಯೋ ಮಾಡಿದ ಕಾಮುಕ!
KARNATAKA

SHOCKING : ಬೆಂಗಳೂರಲ್ಲಿ ಮನೆ ಬಾಡಿಗೆಗೆ ಇದ್ದ ಯುವತಿ ಸ್ನಾನ ಮಾಡುವಾಗ ವಿಡಿಯೋ ಮಾಡಿದ ಕಾಮುಕ!

By kannadanewsnow0506/05/2026 3:16 PM

ಬೆಂಗಳೂರು : ಬಾಡಿಗೆ ಮನೆಯಲ್ಲಿ ಯುವತಿ ಸ್ನಾನ ಮಾಡುವಾಗ ಅಪರಿಚಿತ ವ್ಯಕ್ತಿಯೋರ್ವ ವಿಡಿಯೋ ಚಿತ್ರೀಕರಣ ಮಾಡಿರುವ ಘಟನೆ ನಗರದ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 23 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಯುವತಿ ಈ ಬಗ್ಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ದೂರುದಾರೆ ಯುವತಿ ಕಳೆದ ಒಂಬತ್ತು ತಿಂಗಳ ಹಿಂದೆ ಗರುಡಾಚಾರ್ ಪಾಳ್ಯಕ್ಕೆ ವಾಸ್ತವ್ಯ ಬದಲಾಯಿಸಿದ್ದರು. ಏಪ್ರಿಲ್​​ 29ರಂದು ರಾತ್ರಿ ಸುಮಾರು 9.30ರಿಂದ 9.40ರ ವೇಳೆ ಅವರು ಸ್ನಾನ ಮಾಡುತ್ತಿದ್ದಾಗ, ಪಕ್ಕದ ಕಟ್ಟಡದಿಂದ ಯಾರೋ ಫೋನ್ ಮೂಲಕ ವಿಡಿಯೋ ಮಾಡುತ್ತಿರುವುದನ್ನು ಗಮನಿಸಿ ಬೆಚ್ಚಿಬಿದ್ದಿ ಕಿರುಚಿದ್ದಾರೆ. ಈ ವೇಳೆ ಆ ವ್ಯಕ್ತಿ ಮೊಬೈಲ್​ ಸಮೇತ ಓಡಿ ಹೋಗಿದ್ದಾನೆ. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯಿಂದ ತೀವ್ರ ಮಾನಸಿಕ ನೋವಿಗೆ ಒಳಗಾಗಿರುವ ದೂರುದಾರೆ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಆತಂಕ ಎದುರಿಸುತ್ತಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯ ವಿವರ: ನಗರದ ಗರುಡಾಚಾರ್ ಪಾಳ್ಯದಲ್ಲಿ ವಾಸವಾಗಿರುವ 23 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಈ ಕೃತ್ಯಕ್ಕೆ ಬಲಿಯಾದವರು. ಏಪ್ರಿಲ್ 29ರಂದು ರಾತ್ರಿ ಸುಮಾರು 9.30ರಿಂದ 9.40ರ ಅವಧಿಯಲ್ಲಿ ಯುವತಿ ತನ್ನ ಮನೆಯ ಬಾತ್‌ರೂಮ್‌ನಲ್ಲಿ ಸ್ನಾನ ಮಾಡುತ್ತಿದ್ದರು. ಈ ವೇಳೆ ಪಕ್ಕದ ಕಟ್ಟಡದಿಂದ ವ್ಯಕ್ತಿಯೊಬ್ಬ ಮೊಬೈಲ್ ಫೋನ್ ಮೂಲಕ ವಿಡಿಯೋ ಮಾಡುತ್ತಿರುವುದನ್ನು ಅವರು ಗಮನಿಸಿದ್ದಾರೆ. ತಕ್ಷಣವೇ ಯುವತಿ ಕಿರುಚಿಕೊಂಡಿದ್ದು, ಇದನ್ನು ಕಂಡ ಆರೋಪಿಯು ಮೊಬೈಲ್ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸ್ ತನಿಖೆ: ಯುವತಿ ನೀಡಿದ ದೂರಿನನ್ವಯ ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ಒಂಬತ್ತು ತಿಂಗಳ ಹಿಂದೆಯಷ್ಟೇ ಯುವತಿ ಈ ಪ್ರದೇಶಕ್ಕೆ ವಾಸ್ತವ್ಯ ಬದಲಾಯಿಸಿದ್ದರು. ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ಪಕ್ಕದ ಕಟ್ಟಡದಲ್ಲಿ ವಾಸವಿರುವವರು ಅಥವಾ ಆ ಸಮಯದಲ್ಲಿ ಅಲ್ಲಿ ಓಡಾಡುತ್ತಿದ್ದವರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಮಾನಸಿಕ ಆಘಾತ: ಈ ಕೃತ್ಯದಿಂದ ಯುವತಿ ತೀವ್ರವಾಗಿ ಬೆಚ್ಚಿಬಿದ್ದಿದ್ದು, ಮಾನಸಿಕ ನೋವಿಗೆ ಒಳಗಾಗಿದ್ದಾರೆ. ತನ್ನ ಖಾಸಗಿ ವಿಡಿಯೋವನ್ನು ಆರೋಪಿಯು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ವೈರಲ್ ಮಾಡುತ್ತಾನೋ ಎಂಬ ಆತಂಕ ಅವರನ್ನು ಕಾಡುತ್ತಿದೆ. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಕಿಡಿಗೇಡಿಯನ್ನು ಶೀಘ್ರವೇ ಬಂಧಿಸುವ ಭರವಸೆ ನೀಡಿದ್ದಾರೆ.

Share. Facebook Twitter LinkedIn WhatsApp Email

Related Posts

BIG BREAKING: ನಟ ಚೇತನ್ ಅಹಿಂಸಾ ವಿರುದ್ಧ FIR ದಾಖಲು

06/05/2026 3:50 PM2 Mins Read

BIG NEWS : ವಚನಾನಂದ ಶ್ರೀಗಳಿಗೆ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಮಂಜೂರು

06/05/2026 3:49 PM1 Min Read

BREAKING : ದಕ್ಷಿಣಕನ್ನಡದಲ್ಲಿ ಟ್ಯಾಂಕ‌ರ್, ಬೈಕ್ ನಡುವೆ ಭೀಕರ ಅಪಘಾತ : ಇಬ್ಬರು ಯುವಕರು ಸಾವು!

06/05/2026 3:08 PM1 Min Read
Recent News

BIG BREAKING: ನಟ ಚೇತನ್ ಅಹಿಂಸಾ ವಿರುದ್ಧ FIR ದಾಖಲು

06/05/2026 3:50 PM

BIG NEWS : ವಚನಾನಂದ ಶ್ರೀಗಳಿಗೆ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಮಂಜೂರು

06/05/2026 3:49 PM

SHOCKING : ಬೆಂಗಳೂರಲ್ಲಿ ಮನೆ ಬಾಡಿಗೆಗೆ ಇದ್ದ ಯುವತಿ ಸ್ನಾನ ಮಾಡುವಾಗ ವಿಡಿಯೋ ಮಾಡಿದ ಕಾಮುಕ!

06/05/2026 3:16 PM

BREAKING : ದಕ್ಷಿಣಕನ್ನಡದಲ್ಲಿ ಟ್ಯಾಂಕ‌ರ್, ಬೈಕ್ ನಡುವೆ ಭೀಕರ ಅಪಘಾತ : ಇಬ್ಬರು ಯುವಕರು ಸಾವು!

06/05/2026 3:08 PM
State News
KARNATAKA

BIG BREAKING: ನಟ ಚೇತನ್ ಅಹಿಂಸಾ ವಿರುದ್ಧ FIR ದಾಖಲು

By kannadanewsnow0906/05/2026 3:50 PM KARNATAKA 2 Mins Read

ಬೆಂಗಳೂರು:  ಡಾ.ರಾಜ್‌ಕುಮಾರ್ ಅವರ ಸಮಾಧಿ ಜಾಗದ ಕುರಿತಾಗಿ ಶುರುವಾಗಿದ್ದ ವಿವಾದ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ನಟ ಚೇತನ್ ಅಹಿಂಸಾ…

BIG NEWS : ವಚನಾನಂದ ಶ್ರೀಗಳಿಗೆ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಮಂಜೂರು

06/05/2026 3:49 PM

SHOCKING : ಬೆಂಗಳೂರಲ್ಲಿ ಮನೆ ಬಾಡಿಗೆಗೆ ಇದ್ದ ಯುವತಿ ಸ್ನಾನ ಮಾಡುವಾಗ ವಿಡಿಯೋ ಮಾಡಿದ ಕಾಮುಕ!

06/05/2026 3:16 PM

BREAKING : ದಕ್ಷಿಣಕನ್ನಡದಲ್ಲಿ ಟ್ಯಾಂಕ‌ರ್, ಬೈಕ್ ನಡುವೆ ಭೀಕರ ಅಪಘಾತ : ಇಬ್ಬರು ಯುವಕರು ಸಾವು!

06/05/2026 3:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.