ಬೆಂಗಳೂರು : ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿ ಕಾಲ ಕಳೆಯುತ್ತಿದ್ದಾರೆ. ಅಲ್ಲದೆ ಇತ್ತೀಚಿಗೆ ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದು, ಈ ವಿಚಾರವಾಗಿ ಹಾಡಿ ಸರಕಾರಕ್ಕೆ ಸುಪ್ರೀಂಕೋರ್ಟ್ ಒಂದು ವಾರದ ಒಳಗಾಗಿ ವರದಿ ನೀಡುವಂತೆ ಸೂಚನೆ ನೀಡಿದೆ.
ಇದಕ್ಕಿಂತ ಮೊದಲು ದರ್ಶನ್ ಜೈಲಿನಲ್ಲಿ ಇದ್ದಾಗ ಪತ್ನಿ ವಿಜಯಲಕ್ಷ್ಮಿ, ಹೋಗದ ದೇವಸ್ಥಾನಗಳಿಲ್ಲ. ತೀರಿಸಿದ ಹರಕೆಗಳಿಲ್ಲ. ಪತಿ ದರ್ಶನ್ ಗಾಗಿ ದೇವಸ್ಥಾನ, ದೇವರುಗಳ ಮೊರೆ ಹೋಗಿದ್ದರು. ಈಗಲೂ ಸಹ ಅವರು ದರ್ಶನ್ ಗಾಗಿ ಪ್ರಾರ್ಥನೆ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಇನ್ಸ್ಟಾಗ್ರಾಮ್ ನಲ್ಲಿ ವಿಜಯಲಕ್ಷ್ಮಿ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಅದಕ್ಕೆ ಒಬ್ಬರು ಕಮೆಂಟ್ ಮಾಡಿದ್ದು ಭಾರಿ ವೈರಲ್ ಆಗುತ್ತಿದೆ.
ಹೌದು ಇಂದು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ. ರೇಷ್ಮೆ ಸೀರೆಯನ್ನು ಉಟ್ಟು, ತಲೆಯಲ್ಲಿ ಮಲ್ಲಿಗೆ ಮುಡಿದು, ಮುಗುಳ್ನಗುತ್ತಾ ಸಾಂಪ್ರದಾಯಿಕ ಉಡುಗೆಯಲ್ಲಿ ವಿಜಯಲಕ್ಷ್ಮಿ ಕಂಗೊಳಿಸಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಒಂದು ಕ್ಷಣ ದರ್ಶನ್ ಅವರ ಈ ಸ್ಥಿತಿಯನ್ನು ಮರೆತು ವಿಜಯಲಕ್ಷ್ಮಿ ಅವರ ಸೌಂದರ್ಯಕ್ಕೆ ಮನಸೋತಿದ್ದಾರೆ.
ಈ ಒಂದು ಪೋಸ್ಟ್ ಗೆ ಎಲ್ಲರ ಗಮನ ಸೆಳೆದದ್ದು ಒಬ್ಬ ಅಭಿಮಾನಿಯ ಮಾರ್ಮಿಕ ನುಡಿ. ಆತ ಕಾಮೆಂಟ್ ಮಾಡುತ್ತಾ, “ನಿಮ್ಮಂತಹ ದೇವತೆಯನ್ನು ಬಿಟ್ಟು ಪರ ಸ್ತ್ರೀಗಾಗಿ ಪರದಾಡಿದ್ದಕ್ಕೆ ನಿಮ್ಮ ಯಜಮಾನನಿಗೆ ಈ ಪರಿಸ್ಥಿತಿ ಬಂದಿರೋದು… ನಿಮ್ಮನ್ನು ಒಬ್ಬರನ್ನೇ ಆರಾಧಿಸಿದ್ದರೆ ದರ್ಶನ್ ಇವತ್ತು ರಾಜನ ಹಾಗೆ ಇರುತ್ತಿದ್ದರು!” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಕಾಮೆಂಟ್ ಈಗ ಎಲ್ಲೆಡೆ ಸದ್ದು ಮಾಡುತ್ತಿದ್ದು, ದರ್ಶನ್ ಮತ್ತು ಪವಿತ್ರಾ ಗೌಡ ಅವರ ಸಂಬಂಧದ ಬಗ್ಗೆ ಪರೋಕ್ಷವಾಗಿ ಚಾಟಿ ಬೀಸಿದೆ.








