Author: kannadanewsnow05

ಮೈಸೂರು : ಕಳೆದ 17 ವರ್ಷಗಳಿಂದ ವನವಾಸ ಅನುಭವಿಸಿ ಕೊನೆಗೂ 18ನೇ ಬಾರಿಗೆ ಚೊಚ್ಚಲ ಐಪಿಎಲ್ ಟ್ರೊಫಿಯನ್ನು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎತ್ತಿ ಹಿಡಿದಿದೆ. ಕೋಟ್ಯಾನುಕೋಟಿ ಅಭಿಮಾನಿಗಳ ಕನಸು ಇದೀಗ ಇಂದು ನನಸಾಗಿದೆ. ಮೊಟ್ಟಮೊದಲ ಬಾರಿಗೆ ಆರ್‌ಸಿಬಿ ಚೊಚ್ಚಲ ಐಪಿಎಲ್ ಕಪ್ ಗೆದ್ದಿರುವ ಹಿನ್ನೆಲೆಯಲ್ಲಿ ಇಂದು, ಮೈಸೂರು ನಗರದ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತವಾಗಿ ಹೋಳಿಗೆ ಊಟ ನೀಡಲಾಗುತ್ತಿದೆ. ಹೌದು ನಿನ್ನೆ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಪಂಜಾಬ್ ವಿರುದ್ಧ ಆರ್‌ಸಿಬಿ 6 ರನ್ ಗಳ ರೋಚಕ ಗೆಲುವು ಸಾಧಿಸಿದೆ.ಈ ಹಿನ್ನೆಲೆಯಲ್ಲಿ ಮೈಸೂರು ನಗರದ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತವಾಗಿ ಇಂದು ಹೋಳಿಗೆ ಊಟ ನೀಡಲಾಗುತ್ತಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನು ನಡೆಸಿದ್ದು, ಗಾಂಜಾ, ಹೆರಾಯಿನ್ ಮಾರಾಟ ಮಾಡುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ಮಾಲು ಸಮೇತ ಅರೆಸ್ಟ್ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಬುಕ್ಕಸಾಗರ ಕೆರೆ ಬಳಿ ಬಂಧಿಸಲಾಗಿದೆ. ಬಂಧಿತರನ್ನು ಒಡಿಶಾದ ಬದ್ರಕ್ ಜಿಲ್ಲೆ ಮೂಲದ ಮಾಸ್ತೇನಹಳ್ಳಿ ವಾಸಿ ಬಿಗ್ ಬಾಸ್ಕೆಟ್​ನಲ್ಲಿ ಕೆಲಸ ಮಾಡುತ್ತಿದ್ದ ಅಕ್ಷಯ್ (24), ಅಸ್ಸಾಂನ ದೆಮಾಜಿ ಜಿಲ್ಲೆ ಮೂಲದ ವೀರಸಂದ್ರದ ಪ್ಲಿಪ್ಕಾರ್ಟ್ ಉದ್ಯೋಗಿ ಬಿಸ್ವಜಿತ್ ದಾವೊ(24), ಅಸ್ಸಾಂನ ಕರಿಮಾಗಂಜ್ ಜಿಲ್ಲೆ ಮೂಲದ ವೀರಸಂದ್ರ ಡೆಲಿವರಿ ಬಾಯ್ ಜಾಕಿರ್ ಹುಸೇನ್ (24), ಮಂಗಳೂರು ನಗರ ಮೂಲದ ತಿರುಪಾಳ್ಯ ವಾಸಿ ಚಾಲಕ ಸರ್ಪುದ್ದೀನ್ (28) ಬಂದಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ 88 ಗ್ರಾಂ ಎಂಡಿಎಂಎ, 01.100 ಕಿಲೋ ಗಾಂಜಾ, 04.06 ಗ್ರಾಂ ಹೆರಾಯಿನ್, 4 ಸಿರೆಂಜ್, 4 ಮೊಬೈಲ್ ಸಮೇತ ಎರಡು ಬೈಕ್ ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಮಾದಕವಸ್ತು ಮಾರಾಟ ನಿಷೇಧ ಕಾಯಿದೆಯಂತೆ ಪ್ರಕರಣ ದಾಖಲಿಸಿರುವ ಜಿಗಣಿ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ…

Read More

ಅಹಮದಾಬಾದ್ : ಸತತ 17 ವರ್ಷಗಳ ಕಾಲ ಕಪ್ ಬರ ಎದುರಿಸುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಿನ್ನೆ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಅಹಮದಾಬಾದ್ ನಲ್ಲಿ ನಿನ್ನೆ ರಾತ್ರಿ ನಡೆದ ಆರ್‌ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ 6 ಗೆಲುವು ಸಾಧಿಸಿದ ಆರ್ಸಿಬಿ ಮೊದಲ ಬಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಪಂದ್ಯದ ಬಳಿಕ, ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮಾತನಾಡಿ, ತಮ್ಮ ಸೋಲಿಗೆ ಪ್ರಮುಖ ಕಾರಣ ವಿವರಿಸಿದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸೋಲು ದೊಡ್ಡ ನಿರಾಶೆ ತಂದಿದೆ. ನಾವು ಫೈನಲ್‌ನಲ್ಲಿ ಸೋತಿದ್ದರೂ, ನಮ್ಮ ಹುಡುಗರು ಅವಕಾಶಕ್ಕೆ ತಕ್ಕಂತೆ ಆಡಿದರು. ಈ ಪಂದ್ಯದಲ್ಲಿ ನಾವು ಸೋಲಬಾರದಿತ್ತು ಎಂದರು. ಕಳೆದ ಪಂದ್ಯದಲ್ಲಿ ನಾವು 200 ರನ್‌ಗಳ ಗುರಿಯನ್ನು ಸುಲಭವಾಗಿ ಸಾಧಿಸಿದ್ದೇವೆ. ಆದರೆ, ಈ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು ಅದ್ಭುತ ಬೌಲಿಂಗ್ ಮಾಡಿದರು. ವಿಶೇಷವಾಗಿ ಕೃನಾಲ್ ಪಾಂಡ್ಯ ಅಸಾಧಾರಣ ಪ್ರದರ್ಶನದೊಂದಿಗೆ ಪಂದ್ಯದ ದಿಕ್ಕನ್ನೇ ತಿರುಗಿಸಿದರು. ಅವರು ತಮ್ಮ ಅನುಭವವನ್ನು ಬಳಸಿಕೊಂಡು…

Read More

ಬೆಂಗಳೂರು : ಸತತ 17 ವರ್ಷಗಳ ಕಾಲ ಕಪ್ ಬರ ಎದುರಿಸುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ನಿನ್ನೆ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಅಹಮದಾಬಾದ್ ನಲ್ಲಿ ನಿನ್ನೆ ರಾತ್ರಿ ನಡೆದ ಆರ್‌ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ 6 ಗೆಲುವು ಸಾಧಿಸಿದ ಆರ್ಸಿಬಿ ಮೊದಲ ಬಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಆರ್ಸಿಬಿ ಕಪ್ ಗೆಲ್ಲಲು ಪ್ರತಿಯೊಬ್ಬ ಆಟಗಾರನ ಸಾಕಷ್ಟು ಶ್ರಮವಿದೆ. ಅದರಲ್ಲೂ ಅಭಿಮಾನಿಗಳ ಪ್ರೀತಿಗೆ ತಲೆಬಾಗಿ ರನ್ ಮಷೀನ್ ವಿರಾಟ್ ಕೊಹ್ಲಿ ಅವರು ಒಂದೇ ಒಂದು ತಂಡಕ್ಕೆ ಸುಧೀರ್ಘವಾಗಿ 18 ವರ್ಷಗಳ ಕಾಲ ಆಡಿರುವುದು ದೊಡ್ಡ ದಾಖಲೆ. ಇದೀಗ ಆರ್‌ಸಿಬಿ ಈ ಒಂದು 2025ನೇ ಐಪಿಎಲ್ ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ತವರಿನ ಪಂದ್ಯಗಳನ್ನು ಹೊರತುಪಡಿಸಿ ಹೊರಗಿನ ಮೈದಾನದಲ್ಲಿ ಸತತವಾಗಿ ಗೆಲುವು ಸಾಧಿಸಿದ್ದು ಮತ್ತೊಂದು ದಾಖಲೆ ನಿರ್ಮಿಸಿದೆ. ಹೌದು ಐಪಿಎಲ್ ಸೀಸನ್​ವೊಂದರಲ್ಲಿ ತವರಿನ ಹೊರಗೆ ಸತತ 9 ಪಂದ್ಯಗಳನ್ನು ಗೆದ್ದು ಟ್ರೋಫಿ ಎತ್ತಿ ಹಿಡಿದ ಮತ್ತೊಂದು…

Read More

ಬೆಂಗಳೂರು : ನಿನ್ನೆ ರಾತ್ರಿ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಪಂಜಾಬ್ ವಿರುದ್ಧ 6 ಕೆಲವು ಸಾಧಿಸಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಟ್ರೋಫಿಯನ್ನು ಗೆದ್ದಿದೆ. ಕಳೆದ 17 ವರ್ಷಗಳಿಂದ ಕಪ್ ಬರ ಎದುರಿಸುತ್ತಿದ್ದ ಆರ್‌ಸಿಬಿ ಇದೀಗ ಚೊಚ್ಚಲ ಕಪ್ ಗೆದ್ದು ಬೀಗಿದೆ. ಈ ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಆರ್‌ಸಿಬಿ ಆಟಗಾರರಿಂದ ವಿಜಯೋತ್ಸವ ರ‍್ಯಾಲಿ ನಡೆಯಲಿದೆ. ಹೌದು ತೊಚ್ಚಲ ಐಪಿಎಲ್ ಟ್ರೋಫಿ ಗೆದ್ದಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆರ್‌ಸಿಬಿ ಬಾಯ್ಸ್ ನಿಂದ ವಿಜಯಯಾತ್ರೆ ನಡೆಸಲಿದ್ದಾರೆ. ಬೆಂಗಳೂರಿಗೆ ಆಗಮಿಸಿ RCB ಬಾಯ್ಸ್ ಬಸ್ ನಲ್ಲಿ ವಿಜಯಯಾತ್ರೆ ನಡೆಸಲಿದ್ದಾರೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಆರ್‌ಸಿಬಿ ರ‍್ಯಾಲಿ ನಡೆಸಲಾಗುತ್ತೆ. ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂ ಅವರಿಗೆ ಆರ್‌ಸಿಬಿ ಬಾಯ್ಸ್ ರ‍್ಯಾಲಿ ನಡೆಸಲಿದ್ದಾರೆ. ಇಂದು ಸಂಜೆ 3.30ಕ್ಕೆ ವಿಜಯಯಾತ್ರೆಗೆ ಪ್ಲಾನ್ ಕೂಡ ಮಾಡಲಾಗಿದೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.

Read More

ರಾಯಚೂರು : ಹೋಂ ಗಾರ್ಡ್ ಕೆಲಸಕ್ಕೆ ನಿಯೋಜಿಸಲು 6 ಸಾವಿರ ಲಂಚ ಸ್ವೀಕರಿಸುವ ಹೋಂ ಗಾರ್ಡ್ ಕಮಾಂಡೆಂಟ್ ಒಬ್ಬರು ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಹೋಂ ಗಾರ್ಡ್ ಕಮಾಂಡೆಂಟ್ ಜಂಬಣ್ಣ ರಾಮಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಾರಪ್ಪ ಎಂಬುವರಿಗೆ ಹೋಂ ಗಾರ್ಡ್ ಕೆಲಸಕ್ಕೆ ನಿಯೋಜಿಸಲು ಲಂಚ ಸ್ವೀಕರಿಸಿದ್ದಾರೆ. ಮಹಿಳಾ ಠಾಣೆಗೆ ಕೆಲಸಕ್ಕೆ ನಿಯೋಜಿಸಲು 10,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 6,000 ಲಂಚ ಪಡೆಯುವಾಗ ಜಂಬಣ್ಣ ರಾಮಸ್ವಾಮಿ ಲೋಕಾಯುಕ್ತ ಬೆಲೆಗೆ ಬಿದ್ದಿದ್ದಾರೆ. ಜಂಬಣ್ಣ ರಾಮಸ್ವಾಮಿ ರಾಯಚೂರು ಜಿಲ್ಲಾ ಹೋಂ ಗಾರ್ಡ್ ಕಮಾಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿನ್ನೆ ರಾತ್ರಿ ರಾಯಚೂರಲ್ಲಿ ಜಂಬಣ್ಣ ಲೋಕಾಯುಕ್ತ ಬೆಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಎಸ್ಪಿ ಸತೀಶ್ ಚಿಡಗುಬ್ಬಿ ನೇತ್ರತ್ವದಲ್ಲಿ ದಾಳಿ ನಡೆಸಲಾಗಿತ್ತು. ಸದ್ಯಕ್ಕೆ ಲೋಕಾಯುಕ್ತ ಪೊಲೀಸರು ಹೋಂ ಗಾರ್ಡ್ ಕಮಾಂಡೆಂಟ್ ಜಂಬಣ್ಣ ರಾಮಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ

Read More

ಬೆಂಗಳೂರು : ನಿನ್ನೆ ರಾತ್ರಿ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಪಂಜಾಬ್ ವಿರುದ್ಧ 6 ಕೆಲವು ಸಾಧಿಸಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಟ್ರೋಫಿಯನ್ನು ಗೆದ್ದಿದೆ. ಕಳೆದ 17 ವರ್ಷಗಳಿಂದ ಕಪ್ ಬರ ಎದುರಿಸುತ್ತಿದ್ದ ಆರ್‌ಸಿಬಿ ಇದೀಗ ಚೊಚ್ಚಲ ಕಪ್ ಗೆದ್ದು ಬೀಗಿದೆ. ಈ ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಆರ್‌ಸಿಬಿ ಆಟಗಾರರಿಂದ ವಿಜಯೋತ್ಸವ ರ‍್ಯಾಲಿ ನಡೆಯಲಿದೆ. ಹೌದು ತೊಚ್ಚಲ ಐಪಿಎಲ್ ಟ್ರೋಫಿ ಗೆದ್ದಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆರ್‌ಸಿಬಿ ಬಾಯ್ಸ್ ನಿಂದ ವಿಜಯಯಾತ್ರೆ ನಡೆಸಲಿದ್ದಾರೆ. ಬೆಂಗಳೂರಿಗೆ ಆಗಮಿಸಿ RCB ಬಾಯ್ಸ್ ಬಸ್ ನಲ್ಲಿ ವಿಜಯಯಾತ್ರೆ ನಡೆಸಲಿದ್ದಾರೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಆರ್‌ಸಿಬಿ ರ‍್ಯಾಲಿ ನಡೆಸಲಾಗುತ್ತೆ. ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂ ಅವರಿಗೆ ಆರ್‌ಸಿಬಿ ಬಾಯ್ಸ್ ರ‍್ಯಾಲಿ ನಡೆಸಲಿದ್ದಾರೆ. ಇಂದು ಸಂಜೆ 3.30ಕ್ಕೆ ವಿಜಯಯಾತ್ರೆಗೆ ಪ್ಲಾನ್ ಕೂಡ ಮಾಡಲಾಗಿದೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.

Read More

ಬೆಂಗಳೂರು : ನಿನ್ನೆ ರಾತ್ರಿ ಪಂಜಾಬ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ಭರ್ಜರಿ ಗೆಲವು ಸಾಧಿಸಿದೆ. ಈ ಮೂಲಕ ಆರ್​ಸಿಬಿ ಐಪಿಎಲ್​ ಚಾಂಪಿಯನ್ಸ್​ ಟ್ರೋಫಿಗೆ ಮುತ್ತಿಟ್ಟಿದೆ. ಆರ್​ಸಿಬಿ ಗೆಲ್ಲುತ್ತಿದ್ದಂತೆ ಬೆಂಗಳೂರು, ತಮಕೂರು, ಹಾಸನ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಹೌದು ತಡ ರಾತ್ರಿ ಬೆಂಗಳೂರಿನ MG ರೋಡ್​, ಚರ್ಚ್​​ಸ್ಟ್ರೀಟ್​, ವಿಜಯನಗರ ಸೇರಿದಂತೆ ಹಲವು ಏರಿಯಾಗಳಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಚರ್ಚ್​ಸ್ಟ್ರೀಟ್​ನಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇನ್ನು, ಪಬ್ ಮತ್ತು ಹೋಟೆಲ್​ಗಳಲ್ಲಿ ಡಿಜೆ ಸಾಂಗ್​ಗೆ ಅಭಿಮಾನಿಗಳು ಸಕತ್​ ಸ್ಟೆಪ್​​ ಹಾಕುತ್ತಿದ್ದಾರೆ. ಈ ಸಲ ಕಪ್​ ನಮ್ದು, ಜೈ ಆರ್​ಸಿಬಿ ಎಂದು ಘೋಷಣೆಗಳನ್ನು ಕೂಗಿದರು. https://twitter.com/zoo_bear/status/1929961461314400358?t=IrMHEiPkMesGF4kGLQAA8Q&s=19

Read More

ಬೆಂಗಳೂರು : ಬೆಂಗಳೂರಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸವಾರರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಮಂಡ್ಯ ಜಿಲ್ಲೆಯ ಮಳವಳ್ಳಿ ಮೂಲದ ಆಕಾಶ್ (26) ಮತ್ತು ಮಂಗಳೂರು ಮೂಲದ ಅಫಲ್ (26) ಎಂದು ತಿಳಿದುಬಂದಿದೆ. ಮಣಿ ಮತ್ತು ಕಾಸಿಂ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರಿದಿದೆ. ಮಂಗಳವಾರ ಮುಂಜಾನೆ ಸುಮಾರು 1.30ಕ್ಕೆ ಬಿಜಿಎಸ್ ಮೇಲೇತುವೆಯಲ್ಲಿ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಸವಾರರಾದ ಕೆ.ಪಿ.ಅಗ್ರಹಾರ ನಿವಾಸಿ ಆಕಾಶ್ ಡ್ರೈಂಡ‌ರ್ ಮೆಕ್ಯಾನಿಕ್ ಕೆಲಸ ಮತ್ತು ವಿಜಯನಗರ ನಿವಾಸಿ ಅಫೂಲ್‌ ಬಟ್ಟೆ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದರು. ಆಕಾಶ್ ಮತ್ತು ಮಣಿ ರಾತ್ರಿ ಊಟ ಮಾಡಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆ ಕಡೆಗೆ ಹೊರಟಿದ್ದರು. ಬಿಜಿಎಸ್ ಮೇತುವೆ ಗಣೇಶ ದೇವಸ್ಥಾನದ ಬಳಿ ವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ಮುಂದೆ…

Read More

ಮಂಗಳೂರು : ಕಳೆದ ಹಲವು ದಿನಗಳಿಂದ ಹೃದಯಘಾತದಿಂದ ಅನೇಕರು ಸಾವನ್ನಪ್ಪುತ್ತಿದ್ದಾರೆ. ಇದೀಗ ಮಂಗಳೂರಿನಲ್ಲಿ ಆಟೋ ಚಲಿಸುತ್ತಿರುವಾಗಲೇ ಏಕಾಏಕಿ ಹೃದಯಾಘಾತವಾಗಿ ಚಾಲಕ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಕೊಕ್ಕಡದಲ್ಲಿ ನಡೆದಿದೆ. ಮೃತ ಆಟೋ ಚಾಲಕನನ್ನು ಶರತ್ ಕುಮಾರ್ ಕೆ (36) ಎಂದು ತಿಳಿದುಬಂದಿದೆ. ಶರತ್ ಕುಮಾರ್ ಅವರು ಪ್ರತಿದಿನದಂತೆ ಇಂದು ಬೆಳಿಗ್ಗೆ ವಿದ್ಯಾರ್ಥಿಗಳನ್ನು ಶಾಲೆಗೆ ಬಿಟ್ಟು ಮರುಪಯಣದಲ್ಲಿ ತಮ್ಮ ಸ್ವಂತ ಆಟೋ ರಿಕ್ಷಾ ಚಲಾಯಿಸಿಕೊಂಡು ಮನೆಗೆ ಮರಳುತ್ತಿದ್ದರು. ಈ ವೇಳೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ರಿಕ್ಷಾ ಚಲಾಯಿಸುವ ನಡುವೆಯೇ ನಿಧನರಾದರು. ಸ್ಥಳೀಯರು ಕೂಡಲೇ ವಿಷಯ ಗಮನಿಸಿ ಶರತ್‌ ಅವರನ್ನು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿಸಿದರು. ಆದರೆ, ಅದಾಗಲೇ ಅವರು ನಿಧನ ಹೊಂದಿದ್ದರು.

Read More