Author: kannadanewsnow05

ಉತ್ತರಕನ್ನಡ : ಉತ್ತರ ಕನ್ನಡದಲ್ಲಿ ಭಾರಿ ಅಪಘಾತವನ್ನು ಸಂಭವಿಸಿದ್ದು, ಚಲಿಸುತ್ತಿದ್ದ ಸರ್ಕಾರಿ ಬಸ್ ವೀಲ್ ಬೋಲೆಂಡ್ ತುಂಡಾಗಿ ಭೀಕರ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಬಸ್ ನಲ್ಲಿ ಇದ್ದಂತಹ 49 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಮಿರ್ಜಾಂ ಸಮೀಪ ಖಂಡಗಾರ ಕ್ರಾಸ್ ನಲ್ಲಿ ಸರ್ಕಾರಿ ಬಸ್ ಅಪಘಾತಕ್ಕೆ ಈಡಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು ವ್ಯಾಪ್ತಿಯ ಖಂಡಕರ ಕ್ರಾಸ್ ಬಳಿ ಈ ಒಂದು ಅಪಘಾತ ಸಂಭವಿಸಿದೆ. ಹೊನ್ನಾವರದಿಂದ ಕೆಎಸ್ಆರ್ಟಿಸಿ ಬಸ್ ದಾಂಡೇಲಿಗೆ ತೆರಳುತ್ತಿತ್ತು. ವೇಗವಾಗಿ ಚಲಿಸುತ್ತಿದ್ದ ಸರ್ಕಾರಿ ಬಸ್ಸಿನ ವ್ಹಿಲ್ ಬೋಲೆಂಡ್ ಕಟ್ಟಾಗಿದೆ. ರಸ್ತೆಯ ಎಡಬದಿಯಿಂದ ಡಿವೈಡರ್ ದಾಟಿ ಬಲಬದಿಯ ಗುಡ್ಡಕ್ಕೆ ಬಸ್ ಡಿಕ್ಕಿ ಹೊಡೆದಿದೆ. ಬಸ್ ಗುಡ್ಡಕ್ಕೆ ಡಿಕ್ಕಿ ಹೊಡೆದ ರಬ್ಬಸಕ್ಕೆ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಗೊಂಡ ಪ್ರಯಾಣಿಕರಿಗೆ ತಕ್ಷಣ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. KA 25 3411 ಸಂಖ್ಯೆಯ ಬಸ್ಸಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ…

Read More

ಮಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಮಂಗಳೂರಲ್ಲಿ ರೌಡಿಶೀಟರ್ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಭೀಕರ ಕೊಲೆಯಾಗಿತ್ತು. ಈಗ ಈ ಒಂದು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ ಸಿಸಿಬಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಹೌದು ಮಂಗಳೂರು ಸಿಸಿಬಿ ಪೊಲೀಸರು ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಇದೀಗ ಮತ್ತೊಬ್ಬ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಬಜಪೇ ಶಾಂತಿಗುಡ್ಡೆ ನಿವಾಸಿಯಾದ ಅಬ್ದುಲ್ ರಜಾಕ್ ನನ್ನು ಇದೀಗ ಮಂಗಳೂರು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರಮುಖ ಆರೋಪಿಗಳ ಜೊತೆ ಸೇರಿದ್ದ ಎನ್ನುವ ಆರೋಪ ಕೇಳಿ ಬಂದಿದೆ ಆರೋಪಿಗಳು ತಲೆಮರೆಸಿಕೊಳ್ಳಲು ಈತನೇ ಸಹಾಯ ಮಾಡಿದ್ದ ಎನ್ನಲಾಗಿದೆ. ಪ್ರಮುಖ ಆರೋಪಿ ಮುಜಾಮಿಲ್ ತಂದೆ ಅಬ್ದುಲ್ ರಜಾಕ್ ಎಂದು ತಿಳಿದುಬಂದಿದೆ.ಮುಜಾಮಿಲ್ ಮಗಳ ಗಂಡ ನೌಷಾದ್ ಜೊತೆ ಸೇರಿ ಸುಹಾಸ ಕೊಲೆಗೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.

Read More

ದಕ್ಷಿಣಕನ್ನಡ : ಇತ್ತೀಚಿಗೆ ಬಂಟ್ವಾಳದಲ್ಲಿ ಅಬ್ದುಲ್ ರೆಹಮಾನ್ ಎನ್ನುವ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಪೊಲೀಸರು ಈಗಾಗಲೇ ಐವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು. ಇದೀಗ ತಲೆಮರಿಸಿಕೊಂಡಿದ್ದ ಮತ್ತೆ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದು ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಹೌದು ಬಂಟ್ವಾಳದಲ್ಲಿ ಅಬ್ದುಲ್ ರೆಹಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇದೀಗ ಮತ್ತೆ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ತೇಜಾಕ್ಷ ಮತ್ತು ಅಭಿನ್ ರೈ ಎನ್ನುವ ಆರೋಪಿಗಳನ್ನು ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದೀಗ ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

Read More

ಹಾಸನ : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದಿದ್ದು, ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕೆರಳೂರು ಗ್ರಾಮದಲ್ಲಿ ಅನೈತಿಕ ಸಂಬಂಧಕ್ಕೆ ತೊಂದರೆ ಆಗುತ್ತದೆ ಎಂಬ ಆತಂಕದಲ್ಲಿ ತನ್ನ ಗಂಡ, ಮಕ್ಕಳು, ಅತ್ತೆ, ಮಾವನಿಗೆ ಊಟದಲ್ಲಿ ವಿಷ ಹಾಕಿ ಕೊಲೆಗೆ ಯತ್ನಿಸಿದ್ದ ಆರೋಪದಡಿ ಆರೋಪಿ ಚೈತ್ರಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಚೈತ್ರಾ ಎಂದು ತಿಳಿದುಬಂದಿದೆ.ಕೆರಳೂರು ಗ್ರಾಮದ ಗಜೇಂದ್ರ ಅವರು 11 ವರ್ಷಗಳ ಹಿಂದೆ ಚೈತ್ರಾಳನ್ನು ಮದುವೆಯಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. 3 ವರ್ಷಗಳಿಂದ ಸಣ್ಣಪುಟ್ಟ ವಿಚಾರಕ್ಕೆ ಗಂಜೇಂದ್ರ ಅವರೊಂದಿಗೆ ಜಗಳ ತೆಗೆಯುತ್ತಿದ್ದ ಚೈತ್ರಾ, ಗಂಡ, ಮಕ್ಕಳಿಗೆ ಬೈಯುತ್ತಿದ್ದಳು. ಈ ಮಧ್ಯೆ ಚೈತ್ರಾಳಿಗೆ, ಪುನೀತ್ ಎಂಬಾತನ ಜೊತೆ ಅನೈತಿಕ ಸಂಬಂಧ ಬೆಳೆದಿತ್ತು. ಈ ವಿಚಾರವನ್ನು ಚೈತ್ರಾಳ ತಂದೆ- ತಾಯಿಗೆ ತಿಳಿಸಿದ್ದು, ರಾಜಿ ಪಂಚಾಯ್ತಿ ಮಾಡಲಾಗಿತ್ತು. 2024 ರಿಂದ ಚೈತ್ರಾಳಿಗೆ ಅದೇ ಗ್ರಾಮದ ಶಿವು ಎಂಬಾತನೊಂದಿಗೆ ಅನೈತಿಕ ಸಂಬಂಧ ಬೆಳೆದಿತ್ತು. ಇದಕ್ಕೆ ಗಂಡ, ಮಕ್ಕಳು, ಅತ್ತೆ, ಮಾವ ತೊಂದರೆ ಆಗುತ್ತಾರೆ ಎಂದು…

Read More

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಘೋರವಾದಂತಹ ದುರಂತ ಒಂದು ಸಂಭವಿಸಿದ್ದು ಪೈಪ್ಲೈನ್ ಕಾಮಗಾರಿ ವೇಳೆ ಮಣ್ಣು ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು ಮತ್ತು ಅವರ ಸಿಟಿ ಗಂಭೀರವಾಗಿರುವ ಘಟನೆ ಹುಬ್ಬಳ್ಳಿಯ ಅರಳಿಕಟ್ಟಿ ಓಣಿಯಲ್ಲಿ ನಡೆದಿದೆ. ಹೌದು ಪೈಪ್ ಲೈನ್ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವನಪ್ಪಿದ್ದಾರೆ. ಹುಬ್ಬಳ್ಳಿಯ ಅರಳಿಕಟ್ಟಿ ಓಣಿಯಲ್ಲಿ ಚೇತನ್ ಜಾಧವ (35) ಎನ್ನುವವರು ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿಯ ಉಣಕಲ್ ನಿವಾಸಿ ಚೇತನ್ ಜಾಧವ್ ಮೃತ ದುರ್ದವಿ ಎಂದು ತಿಳಿದು ಬಂದಿದೆ. ಹುಬ್ಬಳ್ಳಿ ಧಾರವಾಡ ಪಾಲಿಕೆ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಗುತ್ತಿಗೆಯನ್ನು L&T ಕಂಪನಿ ಗುತ್ತಿಗೆ ಪಡೆದಿದ್ದು, ಅದರ ನಿರ್ಲಕ್ಷದಿಂದ ದುರಂತ ಸಂಭವಿಸಿದೆ. ಮುಂಜಾಗ್ರತ ಕ್ರಮ ಕೈಗೊಳ್ಳದೆ ಕಾಮಗಾರಿ ನಡೆಸುತ್ತಿದೆ ಎಂದು ಕಂಪನಿಯ ವಿರುದ್ಧ ಆರೋಪ ಕೇಳಿ ಬಂದಿದೆ.

Read More

ಕಲಬುರ್ಗಿ : ಕಲ್ಬುರ್ಗಿಯಲ್ಲಿ ಇಂದು ವಿವಿಧ ಕಾಮಗಾರಿಗಳ ಬಿಲ್ ಪಾಸ್ ಮಾಡುವ ಬಗ್ಗೆ ಎರಡು ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಜೆಸ್ಕಾಂ ಇಂಜಿನಿಯರ್ ಒಬ್ಬರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಕಲಬುರ್ಗಿ ನಗರದಲ್ಲಿ ನಡೆದಿದೆ. ಹೌದು ವಿದ್ಯುತ್ ಹೆಚ್ಚುವರಿ ಟಿಸಿ, ಲೈನ್ ಮೈಂಟೆನನ್ಸ್ ಹೊಸ ಟಿಸಿಗಳು ಮತ್ತು ಗಂಗಾ ಕಲ್ಯಾಣ ಯೋಜನೆಗಳ ಬಿಲ್ಲುಗಳು ಪಾಸ್ ಮಾಡೋದಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜೆಸ್ಕಾಂ ಇಂಜಿನಿಯರ್‌ರೊಬ್ಬರು ಇನ್ನು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಶೇಖರ್ ಬಹುರೂಪಿ ಎಂಬಾತರೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಅಧಿಕಾರಿ ಎಂದು ತಿಳಿದುಬಂದಿದೆ. ಜೇವರ್ಗಿಯ ಕಾಂಟ್ರಾಕ್ಟರ್ ಸಾಯಬಣ್ಣ ಪೂಜಾರಿ ಲೋಕಾಯುಕ್ತಕ್ಕೆ ದೂರು ನೀಡಿದ ಮೇರೆಗೆ ಲೋಕಾಯುಕ್ತ ಪೊಲೀಸರು ಪ್ರತ್ಯೇಕ ತಂಡವನ್ನು ರಚಿಸಿ ಚುರುಕು ಕಾರ್ಯಾಚರಣೆಯಲ್ಲಿ ಆರೋಪಿ ಇಂಜಿನಿಯ‌ರ್ ಶೇಖ‌ರ್ ಅವರನ್ನು 2 ಲಕ್ಷ ರೂಪಾಯಿ ಹಣ ತೆಗೆದುಕೊಳ್ಳುತ್ತಿದ್ದ ವೇಳೆಯಲ್ಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು…

Read More

ಬೆಂಗಳೂರು : ಕನ್ನಡ ತಮಿಳುನಿಂದ ಹುಟ್ಟಿದ್ದು ಎಂದು ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆದರೂ ಕೂಡ ಅವರು ನಾನು ತಪ್ಪು ಹೇಳಿಲ್ಲ ಹಾಗಾಗಿ ನಾನು ಯಾಕೆ ಕ್ಷಮೆ ಕೇಳಬೇಕು ಎಂದು ಉದ್ಧಟತನ ತೋರಿದ್ದಾರೆ. ಈ ವಿಚಾರವಾಗಿ ಇಂದು ಬೆಂಗಳೂರಿನ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಸಭೆ ನಡೆಯಿತು. ಈ ಒಂದು ಸಭೆಯಲ್ಲಿ ಕಮಲಹಾಸನ್ ಚಿತ್ರತಂಡ ಸಂಧಾನಕ್ಕೆ ಬಂದರೆ ನಾವು ಸಿದ್ಧರಿದ್ದೇವೆ ಆದರೆ ಕ್ಷಮೆ ಕೇಳಲೇಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು. ಈ ಕುರಿತು ಬೆಂಗಳೂರಿನ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಿತು. ಫಿಲ್ಮ ಚೇಂಬರ್ ಅಧ್ಯಕ್ಷ, ಉಪಾಧ್ಯಕ್ಷ ಹಾಗು ಪದಾಧಿಕಾರಿಗಳು ಈ ಒಂದು ಸಭೆಯಲ್ಲಿ ಭಾಗಿಯಾಗಿದ್ದರು. ಕಮಲ್ ಹಾಸನ್ ಹೇಳಿಕೆ ವಿಚಾರವಾಗಿ ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ಒಂದು ಸಭೆ ನಡೆಯಿತು. ಸಭೆಯಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು ಕಮಲ್ ಹಾಸನ್ ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದ್ದಾರೆ. ಚಿತ್ರದ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಬಗ್ಗೆ ನಾವು…

Read More

ಬೆಂಗಳೂರು : ರಾಜ್ಯಕ್ಕೆ ಕೊರೋನಾ ರೂಪಾಂತರೀಯ ಎರಡನೇ ಹೊಸ ತಳಿ ಎಂಟ್ರಿ ಕೊಟ್ಟಿದ್ದು ಇದುವರೆಗೂ ರಾಜ್ಯದಲ್ಲಿ ಕೊರೊನ ಸೊಂಕಿತರ ಸಂಖ್ಯೆ ಒಟ್ಟು 584 ಕ್ಕೆ ಏರಿಕೆಯಾಗಿದ್ದು ಹಿಂದೂ ರಾಜ್ಯದಲ್ಲಿ ಒಟ್ಟು 53 ಮತ್ತೆ ಹೊಸ ಪ್ರಕರಣಗಳು ಪತ್ತೆಯಾಗಿವೆ. ಹೌದು ರಾಜ್ಯದಲ್ಲಿ ಇಂದು 53 ಜನರಿಗೆ ಕೊರೊನ ಸೋಂಕು ದೃಢವಾಗಿದೆ. ಇದುವರೆಗೂ ರಾಜ್ಯದಲ್ಲಿ ಕೊರೊನ ಸಂಖ್ಯಾತರ ಸಂಖ್ಯೆ 582 ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ ಒಟ್ಟು ಕೊರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ 324 ಇದೆ. ಇನ್ನು ಹೋಂ ಐಸೊಲೇಶನ್ನಲ್ಲಿ 319 ಜನರು ಇದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ನೀಡಿದೆ.

Read More

ಧಾರವಾಡ : ಧಾರವಾಡದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವೇಳೆ ರೈತರೊಬ್ಬರು ಬೋರ್ವೆಲ್ ತಂತಿಯನ್ನು ಕಂಬಕ್ಕೆ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹೌದು ವಿದ್ಯುತ್ ಪ್ರವಹಿಸಿ ರೈತ ಸಾವನ್ನಪ್ಪಿರುವ ಘಟನೆ ಕಲಿಕೇರಿ ಮತ್ತು ಮುಗದ ರಸ್ತೆಯಲ್ಲಿನ ಜಮೀನಿನಲ್ಲಿ ಈ ಒಂದು ಘಟನೆ ನಡೆದಿದೆ. ವಿದ್ಯುತ್ ಪ್ರವಹಿಸಿ ರೈತ ನಿಂಗಪ್ಪ (50) ಸಾವನ್ನಪ್ಪಿದ್ದರೆ. ಬೋರ್ವೆಲ್ ನ ತಂತಿ ಕಂಬಕ್ಕೆ ಕಟ್ಟುವಾಗ ಈ ಒಂದು ದುರಂತ ಸಂಭವಿಸಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ತಂದೆಯೊಬ್ಬ ತನ್ನ ಹೆಣ್ಣು ಮಗುವಿನ ಮೇಲೆ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಕ್ರೂರವಾಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದ ಬಾಲಾಜಿ ಲೇಔಟ್‌ನಲ್ಲಿ ನಡೆದಿದೆ. ಬಾಲಾಜಿ ಲೇಔಟ್‌ನ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ನೇಪಾಳ ಮೂಲದ ದಂಪತಿಗಳಾದ ಲೋಕೇಶ್ ಮತ್ತು ಅಮೃತ ದಂಪತಿಗಳ ಮಗುವಿನ ಮೇಲೆ ಈ ದೌರ್ಜನ್ಯ ನಡೆದಿದೆ. ಲೋಕೇಶ್, ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರೆ, ಅಮೃತ ಮನೆಕೆಲಸಗಾರರಾಗಿ ಜೀವನ ನಿರ್ವಹಿಸುತ್ತಿದ್ದರು. ಲೋಕೇಶ್ ತನ್ನ ಮಗಳಿಗೆ ಕೈ, ಕಾಲು ಮತ್ತು ದೇಹದಾದ್ಯಂತ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಇದರಿಂದ ಮಗುವಿನ ದೇಹದಲ್ಲಿ ರಕ್ತ ಹೆಪ್ಪುಗಟ್ಟಿದೆ. ಮಗುವು ಬೇಡ ಎಂದು ಕೂಗಾಡಿದರೂ, ತಂದೆ ಹಲ್ಲೆಯನ್ನು ನಿಲ್ಲಿಸಲಿಲ್ಲ. ಘಟನೆಯಿಂದ ಸ್ಥಳೀಯರು ಆಘಾತಕ್ಕೊಳಗಾಗಿದ್ದು, ಮಗುವಿನ ಕಿರುಚಾಟ ಕೇಳಿ ಓಡಿಬಂದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾರಣ್ಯಪುರ ಹೊಯ್ಸಳ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ತಂದೆ ಲೋಕೇಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣವನ್ನು ಭಾರತೀಯ ದಂಡ ಸಂಹಿತೆ…

Read More