Author: kannadanewsnow05

ಬೆಂಗಳೂರು : ಐಪಿಎಲ್ 18 ನೇ ಆವೃತ್ತಿಯಲ್ಲಿ ಮೊಟ್ಟಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ನಿನ್ನೆ ಅಹಮದಾಬಾದ್ ನಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ನಡುವೆ ನಡೆದ ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್ ವಿರುದ್ಧ 6 ರನ್ ಗಳ ರೋಚಕ ಗೆಲುವು ಸಾಧಿಸಿ ಮೊದಲ ಬಾರಿಗೆ ಚೊಚ್ಚಲ ಕಪ್ ಎತ್ತಿ ಹಿಡಿಯಿತು. ಹಾಗಾಗಿ ಆರ್‌ಸಿಬಿ ಆಟಗಾರರಿಗೆ ಅಭಿನಂದನೆ ಸಲ್ಲಿಸಲು ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಗ್ರಾಂಡ್ ಸ್ಟೆಪ್ ಮೇಲೆ ಈಗಾಗಲೇ ಸಿಬ್ಬಂದಿಗಳು ವೇದಿಕೆಯನ್ನು ಸಿದ್ಧಪಡಿಸುತ್ತಿದ್ದಾರೆ. ಸರ್ಕಾರದಿಂದ ಆರ್‌ಸಿಬಿ ಆಟಗಾರರಿಗೆ ಗೌರವ ನೀಡಲು ಸಿದ್ಧತೆ ನಡೆಸಿದೆ ಅಭಿನಂದನೆ ಸಲ್ಲಿಕೆಗೆ ಭರದ ಸಿದ್ಧತೆ ನಡೆಸುತ್ತಿದೆ. ಸಂಜೆ 5 ಗಂಟೆಗೆ ಗೆ ವಿಕ್ಟರಿ ಪರೇಡ್ಡಿಯಲ್ಲಿದ್ದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ವಿಕ್ಟರಿ ಪರೇಡನಲ್ಲಿ ಯಾವುದೇ ಸಮಸ್ಯೆ ಆಗಬಾರದು ಎಂದು ಡಿಜಿ ಮತ್ತು ಐಜಿಪಿ ಸಲೀಂ ಹಾಗೂ ಸಂಚಾರಿ ಜಂಟಿ ಆಯುಕ್ತ ಎಂ ಎನ್ ಅನುಚೆತ್…

Read More

ಬೆಂಗಳೂರು : ಐಪಿಎಲ್ 18 ನೇ ಆವೃತ್ತಿಯಲ್ಲಿ ಮೊಟ್ಟಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ನಿನ್ನೆ ಅಹಮದಾಬಾದ್ ನಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ನಡುವೆ ನಡೆದ ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್ ವಿರುದ್ಧ 6 ರನ್ ಗಳ ರೋಚಕ ಗೆಲುವು ಸಾಧಿಸಿ ಮೊದಲ ಬಾರಿಗೆ ಚೊಚ್ಚಲ ಕಪ್ ಎತ್ತಿ ಹಿಡಿಯಿತು. ಇದೀಗ ಸಿಎಂ ಸಿದ್ದರಾಮಯ್ಯ ಆರ್‌ಸಿಬಿಐ ಎಲ್ಲಾ ಆಟಗಾರರಿಗೆ ಹಾಗೂ ಅಭಿಮಾನಿಗಳಿಗೂ ಕೂಡ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‌ಸಿಬಿ ತಂಡದ ಎಲ್ಲಾ ಆಟಗಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲದೇ ಅಭಿಮಾನಿಗಳಿಗೂ ಕೂಡ ಅಭಿನಂದನೆ ಸಲ್ಲಿಸುತ್ತೇನೆ. ಆರ್ ಸಿ ಬಿ ಇದುವರೆಗೂ ಐಪಿಎಲ್ ಕಪ್ ಗೆದ್ದಿರಲಿಲ್ಲ ಆದರೆ 18ನೇ ಆವೃತ್ತಿಯಲ್ಲಿ ಕಪ್ ಗೆದ್ದಿದ್ದಾರೆ. ಸಂಜೆ 4 ಗಂಟೆಗೆ ಗೆ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಎಲ್ಲಾ ಆಟಗಾರರಿಗೆ ಬಹುಮಾನ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Read More

ಬೆಳಗಾವಿ : ನಿನ್ನೆ ಮೊಟ್ಟಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 18ನೇ ಆವೃತ್ತಿಯ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಹಾಗಾಗಿ ಆರ್‌ಸಿಬಿ ಅಭಿಮಾನಿಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆ ರಾತ್ರಿಯಿಂದ ಬೆಳಗಿನ ನಸುಕಿನ ಜಾವದವರೆಗೂ ಸಂಭ್ರಮಾಚರಣೆ ಮಾಡಿದ್ದಾರೆ. ಅದೇ ರೀತಿ ಬೆಳಗಾವಿಯಲ್ಲಿ ಸಂಭ್ರಮಾಚರಣೆಯ ವೇಳೆ ಆರ್‌ಸಿಬಿಯ ಕಟ್ಟಾ ಅಭಿಮಾನಿ ಡ್ಯಾನ್ಸ್ ಮಾಡುತ್ತಲೇ, ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಹೌದು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ನಿನ್ನೆ ರಾತ್ರಿ ಆರ್ ಸಿ ಬಿ ಗೆದ್ದ ಬಳಿಕ ಸಂಭ್ರಮಾಚರಣೆಯ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಟ್ಟಾ ಅಭಿಮಾನಿಯಾಗಿದ್ದ ಮಂಜುನಾಥ್ ಈರಪ್ಪ ಕಂಬಾರ್ (28) ಹೃದಯಾಘಾತದಿಂದ ಸಾವನಪ್ಪಿದ್ದಾನೆ. ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಆರ್‌ಸಿಬಿ ಗೆಲವು ಸಂಭ್ರಮಾಚರಣೆಯ ವೇಳೆ ಕುಣಿಯುತ್ತಲೇ, ಕುಸಿದು ಬಿದ್ದು ಮಂಜುನಾಥ್ ಸಾವನಪ್ಪಿದ್ದಾನೆ. ಮೃತ ಮಂಜುನಾಥ ಕೆ ಕ್ರಿಕೆಟ್ ಅಂದರೆ ಎಲ್ಲಿಲ್ಲದ ಹುಚ್ಚು ಅದರಲ್ಲೂ ಐಪಿಎಲ್ ಅಂತ ಬಂದರೆ ಆರ್ ಸಿ ಬಿ ಆತನ ನೆಚ್ಚಿನ ತಂಡವಾಗಿತ್ತು. ಅಲ್ಲದೆ…

Read More

ಬೆಂಗಳೂರು : 17 ವರ್ಷಗಳ ವನವಾಸ ದ ಬಳಿಕ ಅವಮಾನ, ಟ್ರೊಲ್ ಎಲ್ಲವನ್ನು ಸಹಿಸಿಕೊಂಡು ಇದೀಗ ಐಪಿಎಲ್ 18ನೇ ಆವೃತ್ತಿಯಲ್ಲಿ ಚೊಚ್ಚಲ ಕಪ್ ಎತ್ತಿ ಹಿಡಿದಿದೆ. 2025ರ ಐಪಿಎಲ್​ ಚಾಂಪಿಯನ್ ಆಗಿ ಹೊರಹೊಮ್ಮಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದಲ್ಲಿ ಸನ್ಮಾನಿಸಲಿದ್ದಾರೆ. ಹೌದು ಚೊಚ್ಚಲ ಬಾರಿಗೆ ಐಪಿಎಲ್‌ ಚಾಂಪಿಯನ್​ ಪಟ್ಟ ಮುಡಿಗೇರಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರನ್ನು ಬರಮಾಡಿಕೊಳ್ಳಲು ತವರಿನ ಅಭಿಮಾನಿಗಳು ಸಜ್ಜಾಗಿದ್ದಾರೆ. ಆರ್‌ಸಿಬಿ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ತಂಡದ ಆಟಗಾರರು, ತರಬೇತುದಾರರು ಹಾಗೂ ಸಹಾಯಕ ಸಿಬ್ಬಂದಿಗೆ ಸನ್ಮಾನ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಅಹಮದಾಬಾದ್‌‌ನಿಂದ ಆರ್‌ಸಿಬಿ ಆಟಗಾರರು ನಿರ್ಗಮಿಸಿದ್ದು, ಮಧ್ಯಾಹ್ನ 1:30ಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಬಳಿಕ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಆರ್‌ಸಿಬಿ ತಂಡದ ಆಟಗಾರರು, ತರಬೇತುದಾರರು, ವ್ಯವಸ್ಥಾಪಕರು ಸೇರಿದಂತೆ ತಂಡದ ಸದಸ್ಯರನ್ನು ಸನ್ಮಾನಿಸಲಿದ್ದಾರೆ. ಬಳಿಕ ಆರ್‌ಸಿಬಿ ತಂಡದ ಆಟಗಾರರು ವಿಧಾನಸೌಧದಿಂದ…

Read More

ಬೆಂಗಳೂರು : ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಗೆದ್ದಿರುವ ಆರ್‌ಸಿಬಿ ತಂಡ ಇದೀಗ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟಿದ್ದು, ಮಧ್ಯಾಹ್ನ 1: 30 ಗಂಟೆ ಸುಮಾರಿಗೆ ಬೆಂಗಳೂರಿಗೆ ಆರ್‌ಸಿಬಿ ತಂಡ ಆಗಮಿಸಲಿದೆ. ಅಲ್ಲದೆ ಇಂದು ಸಂಜೆ 5 ಗಂಟೆಗೆ ಬೆಂಗಳೂರಿನ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರಿಗೆ ವಿಕ್ಟರಿ ಪರೇಡ್ ನಡೆಸಲಿದೆ. ಇನ್ನು ಈ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ನಮ್ಮ ಕರ್ನಾಟಕಕ್ಕೆ ಆರ್‌ಸಿಬಿ ಯುವಕರು ಹೆಮ್ಮೆ, ಗೌರವ ತಂದಿದ್ದಾರೆ. ನಾನು ಕೂಡ ನಿನ್ನೆ ನಡೆದಂತಹ ಫೈನಲ್ ಪಂದ್ಯವನ್ನು ನೋಡಿದ್ದೇನೆ. ಆರ್ಸಿಬಿ ತಂಡದ ಆಟಗಾರರು ಇಂದು ಮಧ್ಯಾಹ್ನ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಹಾಗಾಗಿ ಆರ್‌ಸಿಬಿ ಆಟಗಾರರಿಗೆ ಸನ್ಮಾನ ಮಾಡುವ ಕುರಿತಂತೆ ಗೃಹ ಸಚಿವ ಜಿ ಪರಮೇಶ್ವರ್ ಹಾಗು ಪೊಲೀಸ್ ಕಮಿಷನರ್ ಜೊತೆಗೆ ಮಾತನಾಡುತ್ತೇನೆ. ಟ್ರಾಫಿಕ್ ಕಂಟ್ರೋಲ್ ಮಾಡೋದೆಲ್ಲ ಇರುತ್ತದೆ ಎಂದು ತಿಳಿಸಿದರು.

Read More

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಭೀಕರವಾದ ಕೊಲೆ ನಡೆದಿದ್ದು ವ್ಯಕ್ತಿ ಒಬ್ಬರನ್ನು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಬಿ.ಬಿ ರಸ್ತೆಯ ಎಸ್ ಬಿಐ ಬ್ಯಾಂಕ್ ಬಳಿ ಇಂದು ಮುಂಜಾನೆ ನಡೆದಿದೆ. ಹತ್ಯೆಯಾದ ವ್ಯಕ್ತಿಯನ್ನು ನಗರದ ಚಾಮರಾಜಪೇಟೆ ಕಾಲೊನಿಯ ಶ್ರೀಕಾಂತ್ (29) ಎಂದು ತಿಳಿದುಬಂದಿದೆ. ಮೃತ ಶ್ರೀಕಾಂತ್ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದರು. ವಿವಾಹಿತರಾದ ಶ್ರೀಕಾಂತ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಶವದ ಬಳಿ ರಕ್ತಸಿಕ್ತವಾದ ಕಲ್ಲು ದೊರೆತಿದೆ. ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ‌ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಭೇಟಿ ನೀಡಿ ಪರಿಶೀಲಿಸಿದರು. ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಕೋಟ್ಯಾನು ಕೋಟಿ ಅಭಿಮಾನಿಗಳ ಕನಸು ಕಳೆದ 17 ವರ್ಷಗಳಿಂದ ವನವಾಸ. ಡಿಕೆ ಅವಮಾನ ಟ್ರೋಲ್ ಇದೆಲ್ಲವನ್ನು ಸಹಿಸಿ ಇದೀಗ ಐಪಿಎಲ್ ನ 18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊಟ್ಟ ಮೊದಲ ಬಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದು, ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದಿದೆ. ಹೀಗಾಗಿ ಇಂದು ಬೆಂಗಳೂರಿನಲ್ಲಿ ವಿಕ್ಟರಿ ಪರೇಡ್ ನಡೆಸುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಒಂದು ಗಂಟೆಗೆ ಆರ್‌ಸಿಬಿ ತಂಡ ಬೆಂಗಳೂರಿಗೆ ಆಗಮಿಸಲಿದೆ. ಹೌದು ಟ್ರೊಫಿ ಸಮೇತ ಬೆಂಗಳೂರಿಗೆ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೆಂಗಳೂರಿಗೆ ಆಗಮಿಸಲಿದೆ. ಈ ಕುರಿತು ವಿರಾಟ್ ಕೊಹ್ಲಿ ಅವರು ನಿನ್ನೆನೇ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಮಧ್ಯಾಹ್ನ 1:30 ಕ್ಕೆ ಆರ್ಸಿಬಿ ತಂಡ ಎಚ್ ಎ ಎಲ್ ಗೆ ಬಂದು ಇಳಿಯಲಿದೆ. ಬೆಳಿಗ್ಗೆ 11 ಗಂಟೆಗೆ ಅಹಮದಾಬಾದ್ ನಿಂದ ಆರ್ಸಿಬಿ ತಂಡ ಹೊರಡಲಿದೆ. ಅಹಮದಾಬಾದ್ ನಿಂದ ನೇರವಾಗಿ ಆರ್ಸಿಬಿ ತಂಡ ಬೆಂಗಳೂರಿಗೆ ಆಗಮಿಸಲಿದೆ. ಸ್ಟಾರ್ ಏರ್ ನ ವಿಶೇಷ ವಿಮಾನದಲ್ಲಿ…

Read More

ಕೊಪ್ಪಳ : ಕಳೆದ 17 ವರ್ಷಗಳಿಂದ ನಿರಂತರವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ನಿರಾಸೆ ಅನುಭವಿಸುತ್ತಾ ಬಂದಿದ್ದಾರೆ. ಆದರೂ ಸಹ ತಂಡದ ಮೇಲಿನ ಪ್ರೀತಿ, ಗೌರವ ಹಾಗು ಅಭಿಮಾನ ಯಾವತ್ತಿಗೂ ಕಡಿಮೆಯಾಗಿಲ್ಲ. ನಿನ್ನೆ ನಡೆದ ಪಂಜಾಬಿ ವಿರುದ್ಧ ಪಂದ್ಯದಲ್ಲಿ ಆರ್‌ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದಿದೆ. ನಿನ್ನೆ ಆರ್‌ಸಿಬಿ ಗೆದ್ದಿದ್ದೇ ತಡ ಇಡೀ ರಾಜ್ಯಾದ್ಯಂತ ಹಬ್ಬಗಳಂತೆ ಆರ್‌ಸಿಬಿ ಗೆಲುವನ್ನು ಸಂಭ್ರಮಿಸುತಿದ್ದಾರೆ. ಇದೀಗ ಮದುವೆ ಮಂಟಪದಲ್ಲಿ ಕೂಡ ನವ ಜೋಡಿ RCB ಗೆಲುವನ್ನು ಸಂಭ್ರಮಿಸಿದ್ದಾರೆ. ಹೌದು ಕೊಪ್ಪಳದ ಕಾರಟಗಿ ಮರ್ಲಾನಹಳ್ಳಿಯಲ್ಲಿ ಆರ್‌ಸಿಬಿ ಗೆಲುವು ಸಂಭ್ರಮಾಚರಣೆ ಮಾಡಿದ್ದಾರೆ.ವೇದಿಕೆ ಮೇಲೆನೆ ಆರ್‌ಸಿಬಿ ಮತ್ತು ಪಂಜಾಬ್ ಪಂದ್ಯದ ಸ್ಕ್ರೀನ್ ವ್ಯವಸ್ಥೆ ಸಹ ಮಾಡಿಕೊಂಡಿದ್ದು, ಸ್ಕ್ರೀನ್ ಪಕ್ಕದಲ್ಲಿ ನಿಂತು ನವಜೋಡಿಗಳು ಟೀ ಶರ್ಟ್ ಹಿಡಿದು ಆರ್ಸಿಬಿ ಗೆಲುವನ್ನು ಸಂಭ್ರಮಿಸಿದ್ದಾರೆ. ಇದೀಗ ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದೆ.

Read More

ಬೆಂಗಳೂರು : ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೊದಲ ಚಾಂಪಿಯನ್‌ಶಿಪ್ ಗೆದ್ದಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಯೋಜಿತವಾಗಿರುವ ವಿಜಯೋತ್ಸವದ ಪರೇಡ್‌ಗೆ ಪೊಲೀಸ್ ಇಲಾಖೆಯಿಂದ ಅನುಮತಿ ದೊರೆತಿದ್ದು, ಸಂಜೆ 5 ಗಂಟೆಗೆ ವಿಧಾನಸೌಧದಿಂದ ವಿಕ್ಟರಿ ಪರೇಡ್ ಆರಂಭವಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ವರೆಗೆ ನಡೆಯಲಿದೆ. ವಿಧಾನಸೌಧದಿಂದ ಎಂ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಪರೇಡ್ ನಡೆಸಲು ಆರ್‌ಸಿಬಿ ತಂಡವು ಅನುಮತಿ ಕೋರಿದೆ. ವರದಿಗಳ ಪ್ರಕಾರ, ಈ ವಿಜಯೋತ್ಸವದ ಪರೇಡ್ ಜೂನ್ 4, ಅಂದರೆ ಇಂದು 2025ರಂದು ಮಧ್ಯಾಹ್ನ 5 ಗಂಟೆಗೆ ವಿಧಾನಸೌಧದಿಂದ ಆರಂಭವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಗೆ ಅಹಮದಾಬಾದ್ ನಿಂದ ಆರ್‌ಸಿಬಿ ತಂಡ ಮಧ್ಯಾಹ್ನ 1:30ಕ್ಕೆ ಬೆಂಗಳೂರಿನ ಎಚ್ ಎ ಎಲ್ ಗೆ ಬಂದು ಇಳಿಯಲಿದೆ. ಬಳಿಕ ತಾಜ್ ವೆಸ್ಟ್ ಅಂಡ್ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆದು ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಂಡ ಭೇಟಿಯಾಗಲಿದೆ ತದನಂತರ ಸಂಜೆ 5 ಗಂಟೆಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ವಿಕ್ಟರಿ ಪರೇಡ್…

Read More

ಬೆಂಗಳೂರು : ಕೋಟ್ಯಾನು ಕೋಟಿ ಅಭಿಮಾನಿಗಳ ಕನಸು ಕಳೆದ 17 ವರ್ಷಗಳಿಂದ ವನವಾಸ. ಡಿಕೆ ಅವಮಾನ ಟ್ರೋಲ್ ಇದೆಲ್ಲವನ್ನು ಸಹಿಸಿ ಇದೀಗ ಐಪಿಎಲ್ ನ 18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊಟ್ಟ ಮೊದಲ ಬಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದು, ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದಿದೆ. ಹೀಗಾಗಿ ಇಂದು ಬೆಂಗಳೂರಿನಲ್ಲಿ ವಿಕ್ಟರಿ ಪರೇಡ್ ನಡೆಸುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಒಂದು ಗಂಟೆಗೆ ಆರ್‌ಸಿಬಿ ತಂಡ ಬೆಂಗಳೂರಿಗೆ ಆಗಮಿಸಲಿದೆ. ಹೌದು ಟ್ರೊಫಿ ಸಮೇತ ಬೆಂಗಳೂರಿಗೆ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೆಂಗಳೂರಿಗೆ ಆಗಮಿಸಲಿದೆ. ಮಧ್ಯಾಹ್ನ 1:30 ಕ್ಕೆ ಆರ್ಸಿಬಿ ತಂಡ ಎಚ್ ಎ ಎಲ್ ಗೆ ಬಂದು ಇಳಿಯಲಿದೆ. ಬೆಳಿಗ್ಗೆ 11 ಗಂಟೆಗೆ ಅಹಮದಾಬಾದ್ ನಿಂದ ಆರ್ಸಿಬಿ ತಂಡ ಹೊರಡಲಿದೆ. ಅಹಮದಾಬಾದ್ ನಿಂದ ನೇರವಾಗಿ ಆರ್ಸಿಬಿ ತಂಡ ಬೆಂಗಳೂರಿಗೆ ಆಗಮಿಸಲಿದೆ. ಸ್ಟಾರ್ ಏರ್ ನ ವಿಶೇಷ ವಿಮಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಕೆಂಪೇಗೌಡ ವಿಮಾನ…

Read More