Author: kannadanewsnow05

ಮೈಸೂರು : ಸದ್ಯ ರಾಜ್ಯ ರಾಜಕಾರಣದಲ್ಲಿ ಒಂದು ಕಡೆ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತದೆ ಸೆಪ್ಟೆಂಬರ್ ನಲ್ಲಿ ಬದಲಾವಣೆ ಗಾಳಿ ಬೀಸಲಿದೆ ಎಂದು ಕಾಂಗ್ರೆಸ್ ನಾಯಕರೇ ಹೇಳಿಕೆ ನೀಡುತ್ತಿದ್ದು, ಮತ್ತೊಂದು ಕಡೆ ರಾಜ್ಯ ಬಿಜೆಪಿಯಲ್ಲು ಸಹ ರಾಜ್ಯಾಧ್ಯಕ್ಷರ ಬದಲಾವಣೆ ಆಗಲಿದೆ ಎಂಬ ಕೂಗು ಕೇಳಿ ಬರುತ್ತಿದೆ ಇದರ ಮಧ್ಯ ಆರ್ ಅಶೋಕ ಈ ಬಾರಿ ದಸರಾ ಹಬ್ಬಕ್ಕೆ ಹೊಸ ಸಿಎಂ ಚಾಲನೆ ನೀಡಲಿದ್ದಾರೆ ಎಂದು ಸ್ಪೋಟಕ ಭವಿಷ್ಯ ನುಡಿದರು. ಹೌದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ ಸದ್ಯದಲ್ಲೇ ಸಿಎಂ ಬದಲಾವಣೆ ಆಗುತ್ತದೆ ಈ ಬಾರಿ ಸಿದ್ದರಾಮಯ್ಯ ಮೈಸೂರು ದಸರಾ ಮಾಡುವುದಿಲ್ಲ ಈ ಬಾರಿ ಹೊಸ ಸಿಎಂ ದಸರಾ ಮಾಡುತ್ತಾರೆ ಎಂದು ಆರ್ ಅಶೋಕ್ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಸಿಎಂ ಬದಲಾವಣೆ ಆಗುತ್ತೆ ಎಂದು ಈಗಾಗಲೇ ಹೇಳಿದ್ದೇನೆ.ಈಗಾಗಲೇ ಮುಖ್ಯಮಂತ್ರಿ ಕುರ್ಚಿಗೆ ಕಚ್ಚಾಟ ನಡೆಯುತ್ತಿದೆ. ಇದು ಕೇವಲ ಟ್ರೈಲರ್ ಅಷ್ಟೇ ಮುಂದೆ ಪಿಕ್ಚರ್ ಬರುತ್ತದೆ.ಅವರ ಸಚಿವರೆ ಮಹಾ…

Read More

ತುಮಕೂರು : ತುಮಕೂರು ಜಿಲ್ಲೆಯ ಮಧುಗಿರಿಯನ್ನು ಜಿಲ್ಲೆಯಾಗಿ ಘೋಷಣೆ ಮಾಡುತ್ತೇವೆ. ನನ್ನ ಅವಧಿಯಲ್ಲಿ ಮಧುಗಿರಿಯನ್ನು ಜಿಲ್ಲೆಯಾಗಿ ಘೋಷಣೆ ಮಾಡುತ್ತೇನೆ ಎಂದು ತುಮಕೂರಿನಲ್ಲಿ ಇಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ನೀಡಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತುಮಕೂರು ಜಿಲ್ಲೆಯನ್ನು ಮೂರು ಜಿಲ್ಲೆಯಾಗಿ ಮಾಡಬಹುದು. ಹೇಗೆ ಧಾರವಾಡವನ್ನು ಮೂರು ಜಿಲ್ಲೆಯಾಗಿ ಮಾಡಲಾಗಿದೆಯೋ, ಅದೇ ರೀತಿ ತುಮಕೂರು ಜಿಲ್ಲೆಯನ್ನು ಮೂರು ಜಿಲ್ಲೆಯಾಗಿ ಮಾಡಬಹುದು. ತುಮಕೂರು ಮಧುಗಿರಿ ಹಾಗೂ ತಿಪಟೂರನ್ನು ಜಿಲ್ಲೆಯಾಗಿ ಮಾಡಬಹುದು ಎಂದು ಕೆ.ಎನ್ ರಾಜಣ್ಣ ಹೇಳಿಕೆ ನೀಡಿದರು. ಸಿಎಂ ಬದಲಾವಣೆ ಬಗ್ಗೆ ಕಾಲವೇ ನಿರ್ಣಯ ಮಾಡಲಿದೆ. ನನ್ನ ಪ್ರಕಾರ ಕಾಂಗ್ರೆಸ್ ನಲ್ಲಿ ಮೂರು ಪವರ್ ಸೆಂಟರ್ ಇದೆ. ನಾನು ಯಾವತ್ತೂ ಸಿಎಂ ಸಿದ್ದರಾಮಯ್ಯ ಜೊತೆಗೆ ಇರುತ್ತೇನೆ. ಇಂದು ನಾಳೆ ಮುಂದೆಯೂ ನಾನು ಸಿಎಂ ಸಿದ್ದರಾಮಯ್ಯ ಪರವಾಗಿ ಇರುತ್ತೇನೆ. ಸುರ್ಜೆವಾಲಾ ಬಂದರೆ ನನಗೆ ಯಾಕೆ ತಾಕಿತ್ತು ಮಾಡುತ್ತಾರೆ? ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಪ್ರಶ್ನಿಸಿದರು.

Read More

ಮುಂಬೈ : ಹಿಂದಿ ಬಿಗ್ ಬಾಸ್ 13 ರ ಮೂಲಕ ಹೆಸರುವಾಸಿಯಾಗಿದ್ದ ನಟಿ ಶೆಫಾಲಿ ಜರಿವಾಲಾ ಅವರು 42 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವುದು ಇಡೀ ಬಣ್ಣದ ಲೋಕವನ್ನು ದಿಗ್ಭ್ರಮೆಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ಹಾರ್ಟ್​ ಎಟ್ಯಾಕ್​ ಎನ್ನುವುದು ಚಿಕ್ಕ ವಯಸ್ಸಿನವರನ್ನೇ ಬಲಿ ಪಡೆಯುತ್ತಿರುವುದು ಆಘಾತ ತರುತ್ತಿರುವ ನಡುವೆಯೇ, ಇದೀಗ ಇನ್ನೊಂದು ಅಚ್ಚರಿಯ ಸಂಗತಿಯೂ ಹೊರಬಂದಿದೆ. ಹೌದು ನಟಿ ಶೆಫಾಲಿ ಮೃತಪಟ್ಟಿದ್ದು ಹೃದಯಘಾತದಿಂದಾನ? ಎಂದು ತೀವ್ರ ಚರ್ಚೆಗೆ ಇದೀಗ ಹುಟ್ಟು ಹಾಕಿದೆ. ಶೆಫಾಲಿ ಜರಿವಾಲಾ ಸಾವಿಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ ಎಂದು ಸಾವಿನ ಬಗ್ಗೆ ಮುಂಬೈ ಪೊಲೀಸ್ರು ಶಾಕಿಂಗ್ ಮಾಹಿತಿ ನೀಡಿದ್ದಾರೆ. ಅಂಧೇರಿಯ ನಿವಾಸದಲ್ಲಿ ಶೆಫಾಲಿ ಅವರ ಪತ್ತೆಯಾಗಿದೆ ಮುಂಬೈ ಪೋಲಿಸರಿಗೆ ಈ ಬಗ್ಗೆ ಮಾಹಿತಿ ಲಭ್ಯವಾಗಿತ್ತು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ತಿಳಿದು ಬಂದಿದೆ. ಶೆಫಾಲಿ ಅವರ ಮೃತದೇಹವನ್ನು ಕೂಪರ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಹಾಗಾಗಿ ನಿಗೂಢ ಸಾವಿನ ತಣಿಕೆಗೆ…

Read More

ಚಾಮರಾಜನಗರ : ಮಲೆಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹುಲಿಗಳನ್ನು ಕೊಂದಿದ್ದ ಇಬ್ಬರು ಹಂತಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೆ ಇದೀಗ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೌದು ಮಾದ ಅಲಿಯಾಸ್ ಮಾದುರಾಜು ನಾಗರಾಜ್ ಹಾಗು ಇದೀಗ ಕೋನಪ್ಪ ಎಂಬ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತನ್ನ ಹಸುವನ್ನ ಕೊಂದಿದ್ದಕ್ಕೆ ವಿಷ ಹಾಕಿರುವುದಾಗಿ ಮಾದ ತಪ್ಪೊಪ್ಪಿಗೆ ನೀಡಿದ್ದಾರೆ.ಸದ್ಯ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಗಳಿಂದ ವಿಚಾರಣೆ ನಡೆದಿದೆ. ತನ್ನ ಹಸುವನ್ನು ಹುಲಿ ಕೊಂದಿದ್ದಕ್ಕೆ ತಾನೇ ವಿಷ ಹಾಕಿ ಹುಲಿಯನ್ನು ಕೊಂದಿರುವುದಾಗಿ ಮಾದನ ತಂದೆ ಶಿವಣ್ಣ ಹೇಳಿಕೆ ನೀಡಿದ್ದರು. ಪುತ್ರನನ್ನು ರಕ್ಷಿಸುವ ಸಲುವಾಗಿ ತಾನು ಹುಲಿ ಸಾಯಿಸಿದ್ದಾಗಿ ಹೇಳಿದ್ದರು. ಆದರೆ ಅನುಮಾನಗೊಂಡು ತೀವ್ರ ವಿಚಾರಣೆ ನಡೆಸಿದಾಗ ಶಿವಣ್ಣನ ಪುತ್ರ ಮಾದ ಅಲಿಯಾಸ್ ಮಾದುರಾಜು ಐದು ಹುಲಿಗಳ ಸಾವಿಗೆ ತಾನು ಕಾರಣ. ತಾನೇ ವಿಷಹಾಕಿ ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

Read More

ಬೆಂಗಳೂರು : ಸಂವಿಧಾನದ ವಿರುದ್ಧವಾಗಿ ಹೇಳಿಕೆ ನೀಡಿರುವ RSS ನ ದತ್ತಾತ್ರೇಯ ಹೊಸಬಾಳೆ ಅವರ ವಿರುದ್ಧ ಸಮಾಜ ಕಲ್ಯಾಣ ಇಲಾಖೆಯ ಸಚಿವ HC ಮಹದೇವಪ್ಪ ಕಿಡಿ ಕಾರಿದ್ದು RSS ತನ್ನ ದೇಶದ್ರೋಹಿ ನಡವಳಿಕೆಗೆ ಕಡಿವಾಣ ಹಾಕಲಿ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ಸಿ ಮಹದೇವಪ್ಪ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಸಾಮಾಜಿಕ ಜಾಲತಾಣ X ನಲ್ಲಿ ಈ ಕುರಿತು ಹೇಳಿರುವ ಅವರು, ಜಾತಿ ಮತ್ತು ಧರ್ಮದ ಬೇಧ ನೋಡದೆ ಎಲ್ಲರನ್ನು ಸಮಾನರಾಗಿ ಕಾಣುವುದು. ಸಮಾಜವಾದ ಎಂದರೆ ಸಾಮಾಜಿಕ ಮತ್ತು ಆರ್ಥಿಕವಾಗಿ ಎಲ್ಲರಿಗೂ ನ್ಯಾಯವಾದಗಿಸುವುದು ಎಂದರ್ಥ. ನಮ್ಮ ಸಂವಿಧಾನದ ಮೂಲ ಆಶಯಗಳಲ್ಲಿ ಹೇಳಿದ ಸಮಾನತೆ ಮತ್ತು ನ್ಯಾಯಾಧ ಅಂಶವು ಅತ್ಯಂತ ಮಹತ್ವದವಾಗಿರುವಂತದ್ದು ಹಾಗೂ ಒಂದು ದೇಶದ ಉಳಿವಿಗೆ ಬೇಕಾಗಿರುವಂತಹ ಸಂಗತಿಗಳು. ಹೀಗಿರುವಾಗ ಇಂತಹ ಮಹತ್ವದ ಅಂಶಗಳನ್ನು ತೆಗೆದು ಹಾಕಬೇಕೆಂದು ಹೇಳುತ್ತಿರುವ ಆರ್ ಎಸ್ ಎಸ್ ದತ್ತಾತ್ರೇಯ ಹೊಸ ಬಾಳೆಯವರು ಜಾತ್ಯತೀತತೆ ಹಾಗೂ ಸಮಾಜವಾದದ ಎಂಬ ಪದವನ್ನು ಅರ್ಥ ಮಾಡಿಕೊಳ್ಳುವುದೇ ಸಂವಿಧಾನ ವಿರೋಧಿಯಾಗಿ ಮಾತನಾಡುತ್ತಿರುವುದು…

Read More

ಬೆಂಗಳೂರು : ಪ್ರೀತಿಸಿ ಮದುವೆಯಾಗಿದ್ದ ನವ ಜೋಡಿ ಅಪಹರಣಕ್ಕೆ ವಿಫಲ ಯತ್ನ ನಡೆಸಿದ್ದು, ಹುಡುಗಿ ಮನೆ ಕಡೆಯವರಿಂದ ನವ ಜೋಡಿ ಅಪಹರಣಕ್ಕೆ ಯತ್ನಿಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರ ಬಳಿ ನಿನ್ನೆ ರಾತ್ರಿ ಈ ಒಂದು ಘಟನೆ ನಡೆದಿದೆ. ನವಜೋಡಿ ಸಂಜಯ್ ಮತ್ತು ದಿವ್ಯ ಅಪಹಾರಣಕ್ಕೆ ಯತ್ನಿಸಲಾಗಿದೆ. ಅಳಿ ಬೊಮ್ಮಸಂದ್ರ ವಾಸಿ ಶೋಭಾ ಮತ್ತು ಗ್ಯಾಂಗ್ನಿಂದ ಕಿಡ್ನಾಪ್ ಗೆ ಯತ್ನಿಸಲಾಗಿದ್ದು, 8 ವರ್ಷದಿಂದ ಗುಡ್ಡಹಟ್ಟಿ ನಿವಾಸಿ ಸಂಜಯ್ ಮತ್ತು ದಿವ್ಯ ಪ್ರೀತಿಸುತ್ತಿದ್ದರು. ಪ್ರೇಮ ವಿವಾಹಕ್ಕೆ ಹುಡುಗಿಯ ಪೋಷಕರು ವಿರೋಧ ಮಾಡಿದ್ದರು. ವಿರೋಧದ ನಡುವೆ 15 ದಿನಗಳ ಹಿಂದೆ ಮದುವೆಯಾಗಿದ್ದರು. ಆದರೆ ನೆನ್ನೆ ತಂದೆಗೆ ಹುಷಾರಿಲ್ಲ ಎಂದು ಮಗಳ ಬಳಿ ತಾಯಿ ತೆರಳಿದ್ದಾಳೆ.ಜಯದೇವ ಆಸ್ಪತ್ರೆಗೆ ಬರುವಂತೆ ದಿವ್ಯ ತಾಯಿ ಹೇಳಿದ್ದಾಳೆ ಈ ವೇಳೆ ತಾಯಿಯ ಜೊತೆಗೆ ತೆರಳದೆ ಪತಿಯ ಬೈಕಿನಲ್ಲಿ ದಿವ್ಯ ತೆರಳಿದ್ದಾಳೆ ಎರಡು ಕಾರುಗಳಲ್ಲಿ ಬೈಕ್ ಚೇಸ್ ಮಾಡಿ ಅಪಹರಣಕ್ಕೆ ಯತ್ನಿಸಲಾಗಿದೆ. ಚಂದಾಪುರ ಬಳಿ ಬೈಕ್ ಅಡಗಟ್ಟಿ…

Read More

ಮೈಸೂರು : ಇಂದು ಮೈಸೂರಲ್ಲಿ ಘೋರವಾದ ಘಟನೆ ಒಂದು ನಡೆದಿದ್ದು, ಹುಚ್ಚುನಾಯಿ ಕಚ್ಚಿ 20ಕ್ಕೂ ಹೆಚ್ಚು ಮಕ್ಕಳಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ಒಂದು ಘಟನೆ ನಡೆದಿದೆ. ಗಾಯಾಳು ಮಕ್ಕಳಿಗೆ ತಕ್ಷಣ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಇಲ್ಲದೆ ಪೋಷಕರು ಪರದಾಟ ನಡೆಸುತ್ತಿದ್ದಾರೆ.ವೈದ್ಯರ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಸೂಕ್ತ ಚಿಕಿತ್ಸೆ ಸಿಗದೇ ಪೋಷಕರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿದ್ದಾರೆ. ಗ್ರಾಮದಲ್ಲಿ ಒಂದು ಹುಚ್ಚು ನಾಯಿಯನ್ನು ಜನರು ಹೊಡೆದು ಕೊಂದಿದ್ದಾರೆ.

Read More

ಬೆಂಗಳೂರು : ನಿನ್ನೆ ತಾನೆ ಬೆಂಗಳೂರಿನಲ್ಲಿ ವಿಷಯುಕ್ತ ಆಹಾರ ಸೇವಿಸಿ 5 ನಾಯಿಗಳು ನರಳಾಡಿ ಪ್ರಾಣ ಬಿಟ್ಟ ಘಟನೆ ನಡೆದಿದ್ದು, ಇದೀಗ ಮತ್ತೊಂದು ಬೆಚ್ಚಿ ಬೆಳಿಸುವ ಘಟನೆ ನಡೆದಿದ್ದು ಬಂಗಾಳಿ ಮಹಿಳೆಯೊಬ್ಬಳು ಬ್ಲ್ಯಾಕ್ ಮ್ಯಾಜಿಕ್ ಆಗಿ ತಾನೇ ಸಾಕಿರುವ ನಾಯಿಗಳನ್ನು ಹತ್ಯೆಗೈದಿರುವ ಆಘಾತಕಾರಿ ಘಟನೆ ಬೆಂಗಳೂರು ಮಹಾದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಪ್ಪ ಲೇಔಟ್‌ನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಹೌದು ಬೆಂಗಳೂರಿನ ಮಹಾದೇವಪುರದಲ್ಲಿ ನಾಯಿಯೊಂದನ್ನು ಕತ್ತು ಕೊಯ್ದು ಹತ್ಯೆ ಮಾಡಲಾಗಿದ್ದು, ಮಹಿಳೆಯೊಬ್ಬರ ಮೇಲೆ ಆರೋಪ ಕೇಳಿಬಂದಿದೆ. ತ್ರಿಪಾರ್ಣ ಪಾಯ್ಕ ಎಂಬ ಮಹಿಳೆಯು ಪಶ್ಚಿಮ ಬಂಗಾಳದವಳಾಗಿದ್ದು, , ನಾಲ್ಕು ದಿನಗಳ ಹಿಂದೆ ತನ್ನದೇ ಪೋಷಣೆಯಲ್ಲಿದ್ದ ನಾಯಿಯನ್ನು ಕತ್ತು ಕೊಯ್ದು ಹತ್ಯೆ ಮಾಡಿ, ಬಟ್ಟೆಯಿಂದ ಸುತ್ತಿಹಾಕಿ ಬಚ್ಚಿಟ್ಟಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಆರೋಪಿತೆಯು ನಾಲ್ಕು ಲ್ಯಾಬ್ರಡರ್ ನಾಯಿಗಳನ್ನು ಸಾಕುತ್ತಿದ್ದರು. ಸುಮಾರು ನಾಲ್ಕು ತಿಂಗಳ ಹಿಂದೆ ಇದೇ ಮಹಿಳೆಯ ಮನೆಯೊಂದರಲ್ಲಿ ಮತ್ತೊಂದು ನಾಯಿ ಕಾಣೆಯಾಗಿದ್ದರೂ, ಇದೀಗ ಮತ್ತೆ ನಾಯಿಯ ಹತ್ಯೆ ನಡೆದಿರುವುದು ಅನುಮಾನಕ್ಕೆ ಎಡೆಮಾಡಿದೆ. ಮೃತ…

Read More

ಹಾಸನ : ಕಳೆದ 7 ವರ್ಷಗಳ ಹಿಂದೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿಯ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳ ಬಳಿ ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರೈಲ್ವೆ ಪೊಲೀಸರು ಅಂತರಾಜ್ಯ ಕಳ್ಳನನ್ನು ಅರೆಸ್ಟ್ ಮಾಡಿದ್ದಾರೆ. ಹೌದು 2018ರಲ್ಲಿ ಸ್ವಾಮೀಜಿ ಬಾಗಲಕೋಟೆಯಿಂದ ಅರಸೀಕೆರೆಗೆ ರೈಲಿನ ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ಲೆದರ್ ಬ್ಯಾಗ್‌ನಲ್ಲಿ 250 ಗ್ರಾಂ ಚಿನ್ನದ ಸರ, ಗೌರಿಶಂಕರ ರುದ್ರಾಕ್ಷಿ ಪದಕ, 50 ಗ್ರಾಂನ ಎರಡು ಚಿನ್ನದ ಉಂಗುರಗಳು ಹಾಗೂ 1.62 ಲಕ್ಷ ರೂ. ನಗದು ಹಣವನ್ನು ಇಟ್ಟಿದ್ದರು. ತಲೆಯ ಕೆಳಗೆ ಬ್ಯಾಗ್ ಇಟ್ಟು ನಿದ್ದೆಗೆ ಜಾರಿದ್ದ ಸ್ವಾಮೀಜಿ, ತಡರಾತ್ರಿ 2:15ಕ್ಕೆ ಎದ್ದು ನೋಡಿದಾಗ ಬ್ಯಾಗ್ ಸ್ಥಾನ ಬದಲಾಗಿ, ಅದರಲ್ಲಿದ್ದ ಚಿನ್ನಾಭರಣ ಮತ್ತು ಹಣ ಕಾಣೆಯಾಗಿತ್ತು. ಈ ಬಗ್ಗೆ ಅರಸೀಕೆರೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಜಿತೇಂದ್ರ ಕುಮಾರ್ ರೈಲಿನ ಎಸಿ ಕೋಚ್‌ಗಳಲ್ಲಿ ಪ್ರಯಾಣಿಕರಂತೆ ಟಿಕೆಟ್…

Read More

ಬೆಂಗಳೂರು : ಬೆಂಗಳೂರಲ್ಲಿ ಭಾರಿ ಅನಾಹುತ ಒಂದು ತಪ್ಪಿದ್ದು, ಬ್ರೇಕ್ ಫೈಲ್ ಆಗಿ KSRTC ಬಸ್ ಒಂದು ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ, ಬಸ್ ನಲ್ಲಿದ್ದ ಓರ್ವ ಮಹಿಳೆಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಬೆಂಗಳೂರಿನ ಎಸ್.ಆರ್.ಎಸ್ ಸಿಗ್ನಲ್ ನಲ್ಲಿ ನಡೆದಿದೆ. ಬಸ್ ಸಿಗ್ನಲ್ ಇದ್ದಿದ್ದರಿಂದ ನಿಂತುಕೊಂಡಿತ್ತು. ಸಿಗ್ನಲ್ ಮುಗಿದ ಬಳಿಕ ಚಲಿಸುವಾಗ ಏಕಾಏಕಿ ಟೆಂಪೋ ಅಡ್ಡ ಬಂದಿದೆ ಈ ವೇಳೆ ತಕ್ಷಣ ಬ್ರೇಕ್ ಹಾಕಲು ಹೋದಾಗ ಬ್ರೇಕ್ ಫೇಲ್ ಆಗಿ ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಇವಳೇ ಓರ್ವ ಮಹಿಳೆಗೆ ಗಂಭೀರವಾದ ಗಾಯಗಳಾಗಿದ್ದು ಉಳಿದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ.

Read More