Subscribe to Updates
Get the latest creative news from FooBar about art, design and business.
Author: kannadanewsnow05
ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಅಶ್ವಿನಿ ಕುಮಾರರ ಹೆಸರನ್ನು ಕೇಳಿರುತ್ತೀರಿ ಇವರು ವೈದ್ಯ ದೇವತೆಗಳು ಋಗ್ವೇದದಲ್ಲಿ ದೈವಿಕ ಅವಳಿ ಕುದುರೆ ಸವಾರರು, ಮೋಡಗಳ ದೇವತೆಗಳು ಇವರು ಸೂರ್ಯೋದಯ ಮತ್ತು ಸೂರ್ಯಾಸ್ತದ ಹೊಳಪನ್ನು ಸಂಕೇತಿಸುತ್ತಾರೆ, ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564 ಸೂರ್ಯೋದಯಕ್ಕೆ ಮುಂಚೆ ಆಕಾಶದಲ್ಲಿ ಸುವರ್ಣ ರಥದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಮನುಷ್ಯರಿಗೆ ಸಂಪತ್ತನ್ನು ದಯಪಾಲಿಸುತ್ತಾರೆ ಮತ್ತು…
ಮಂಗಳೂರು : ಕಳೆದ ತಿಂಗಳು ರೌಡಿಶೀಟರ್ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೂ 15ಕ್ಕೂ ಹೆಚ್ಚು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು, ಅಲ್ಲದೆ ರಾಷ್ಟ್ರೀಯ ತನಿಖಾ ದಳ (NIA) ಕೂಡ ತನಿಖೆಯನ್ನು ಚುರುಕುಗೊಳಿಸಿದೆ. ಇದೀಗ ಸುಹಾಸ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಹತ್ಯೆಯಲ್ಲಿ ಭಾಗಿಯಾದ ಬಹುತೇಕರಿಗೆ PFI ನಂಟು ಇದೆ. ಬಹುತೇಕರಿಗೆ ನಿಷೇಧಿತ PFI ನಂಟು ಇದೆ ಎಂದು ಸಾಕ್ಷಿ ಕೂಡ ಲಭ್ಯವಾಗಿದೆ. ಬಂಧಿತರ ಬ್ಯಾಂಕ್ ಖಾತೆಗಳಿಗೆ ವಿದೇಶಿ ಫಂಡಿಂಗ್ ಬರುತ್ತಿತ್ತು. 12 ಆರೋಪಿಗಳ ಬ್ಯಾಂಕ್ ಖಾತೆಯ ವಿವರವನ್ನು NIA ತಂಡ ಸಂಗ್ರಹಿಸಿದೆ. ಎನ್ಐಎ ಡಿಐಜಿ ರಾಹುಲ್, ಎಸ್ಪಿ ಶಿವಕುಮಾರ್ ಡಿವೈಎಸ್.ಪಿ ಪವನ್ ಕುಮಾರ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.
ಚಾಮರಾಜನಗರ : ಮಲೆ ಮಹದೇಶ್ವರ ವನ್ಯ ಧಾಮದಲ್ಲಿ 5 ಹುಲಿಗಳ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.ಮಾದ ಅಲಿಯಾಸ್ ಮಧುರಾಜು ಹಾಗೂ ನಾಗರಾಜ್ ಎನ್ನುವ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಸದ್ಯ ಮೀಣ್ಯಂ ಅರಣ್ಯ ಭವನದಲ್ಲಿ ಬಂಧಿತ ಇಬ್ಬರು ಆರೋಪಿಗಳು ಇದ್ದಾರೆ. ಮಾದ ಅಲಿಯಾಸ್ ಮಾಧುರಾಜುಗೆ ಸೇರಿದ ಹಸುವನ್ನು ಹುಲಿ ಬಲಿ ಪಡೆದಿತ್ತು. ಕೆಂಚಿ ಎಂದು ಮಾಧುರಾಜು ಹಸುವಿಗೆ ಹೆಸರು ಇಟ್ಟಿದ್ದ. ಹುಲಿ ತನ್ನ ಹಸುವನ್ನು ಬಲಿ ಪಡೆದ ವಿಚಾರ ತಿಳಿದು, ತನ್ನ ನೋವನ್ನು ನಾಗರಾಜ್ ಬಳಿ ಹೇಳಿಕೊಂಡು ಮಾದ ಕಣ್ಣೀರು ಹಾಕಿದ್ದ. ಹಸು ಬಲಿ ಪಡೆದ ಹುಲಿಯನ್ನು ಮಾದ ಮತ್ತು ನಾಗರಾಜ್ ಕೊಲ್ಲಲು ನಿರ್ಧರಿಸಿದ್ದಾರೆ. ಹುಲಿ ಕೊಲ್ಲಲು ಕ್ರಿಮಿನಾಶಕವನ್ನು ನಾಗರಾಜ್ ಮತ್ತು ಮಾಧುರಜು ತಂದಿದ್ದರು. ಸತ್ತ ಹಸುವಿನ ಮೇಲೆ ನಾಗರಾಜ್ ವಿಷ ಹಾಕಿ ಬಂದಿದ್ದ. ಬಳಿಕ ಹಸುವಿನ ಮಾಂಸ ತಿಂದು ಹುಲಿಮರಿಗಳು ಸತ್ತಿವೆ.ಹುಲಿಗಳು ಸತ್ತಿದ್ದನು ನೋಡಿ ಮಾದರಾಜು ಸಂತಸ ವ್ಯಕ್ತಪಡಿಸಿದ್ದ. ವಿಚಾರಣೆ ಆರೋಪಿಗಳು ಒಂದೊಂದೇ ಸತ್ಯ…
ಹಾಸನ : ಹಾಸನ ಜಿಲ್ಲೆಯಲ್ಲಿ ಇತ್ತೀಚಿಗೆ ಆತಂಕಕಾರಿ ಬೆಳವಣಿಗೆ ಆಗುತ್ತಿದ್ದು, ಕಳೆದ ಒಂದೇ ತಿಂಗಳಲ್ಲಿ ನಿನ್ನೆಯವರೆಗೆ 15 ಜನ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಇದೀಗ ಇಂದು ಹಾಸನದಲ್ಲಿ ಮತ್ತೋರ್ವ ವ್ಯಕ್ತಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಈ ಒಂದು ಬೆಳವಣಿಗೆಯಿಂದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿದೆ. ಹಾಸನ ಜಿಲ್ಲೆಯಲ್ಲಿ ಹೌದು ಹೃದಯಘಾತಕ್ಕೆ ಮತ್ತೊಬ್ಬ ಬಲಿಯಾಗಿದ್ದು, ಹೃದಯಾಘಾತದಿಂದ ಗೋವಿಂದ (37) ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸಿದ್ಧೇಶ್ವರ ನಗರ ನಿವಾಸಿಯಾಗಿರುವ ಗೋವಿಂದ ಅವರು ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಗೋವಿಂದ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ ಆಟೋ ಚಲಾಯಿಸುವಾಗ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆಟೋ ಚಲಾಯಿಸಿಕೊಂಡು ಗೋವಿಂದ ಜಿಲ್ಲಾ ಆಸ್ಪತ್ರೆಗೆ ತೆರಳಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಗೋವಿಂದ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಜಲಿಯಲ್ಲಿ ಒಂದು ತಿಂಗಳ ಅಂತರದಲ್ಲಿ ಇದೀಗ 16 ಜನ ಹೃದಯಾಘಾತದಿಂದ ಸಾವನ್ನಪ್ಪಿರುವುದು ಆತಂಕಕ್ಕೆ ಈಡು ಮಾಡಿದೆ.
BREAKING : ಮುಸ್ಲಿಂ ಯುವತಿಗೆ ಡ್ರಾಪ್ ಕೊಟ್ಟಿದ್ದಕ್ಕೆ ಯುವಕನ ಮೇಲೆ ಹಲ್ಲೆ : ಕಲಬುರ್ಗಿಯಲ್ಲಿ 6 ಆರೋಪಿಗಳು ಅರೆಸ್ಟ್!
ಕಲಬುರ್ಗಿ : ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವತಿಗೆ ಬೈಕ್ ನಲ್ಲಿ ಡ್ರಾಪ್ ನೀಡಿದ್ದಕ್ಕೆ ಮುಸ್ಲಿಂ ಯುವಕರು ಡ್ರಾಪ್ ಕೊಟ್ಟ ಯುವಕನ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿ ಹಲ್ಲೆ ಮಾಡಿರುವ ಘಟನೆ ಕಲ್ಬುರ್ಗಿಯಲ್ಲಿ ಜೂನ್ 26ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೌದು ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಬೈಲಪ್ಪ, ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಅನ್ಯಕೋಮಿನ ಯುವತಿಗೆ ತಮ್ಮ ಬೈಕ್ನಲ್ಲಿ ಡ್ರಾಪ್ ನೀಡಿದ್ದಾರೆ. ಈ ವೇಳೆ ಬೈಕ್ ಅಡ್ಡಗಟ್ಟಿ ಕಿಡಗೇಡಿಗಳು ತಮ್ಮ ಸಮುದಾಯದ ಯವತಿಯನ್ನು ಬೈಕ್ ಮೇಲೆ ಡ್ರಾಪ್ ಮಾಡಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಎಂ.ಬಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಬಳಿಕ ಸದ್ಯ ನಗರದ ಎಂ.ಬಿ.ನಗರ ಠಾಣೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಮೊಹಮ್ಮದ್ ಸಲ್ಮಾನ್, ಮೊಹಮ್ಮದ್ ಆದಿಲ್, ಮೊಹಮ್ಮದ್ ರೆಹಾನ್, ಮೊಹಮ್ಮದ್ ಉಜೈರ್, ಮೊಹಮ್ಮದ್ ಫೈಜ್, ಮೊಹಮ್ಮದ್ ಆಸಿಫ್ ಬಂಧಿತರು ಎಂದು ತಿಳಿದುಬಂದಿದೆ.
ಹೈದ್ರಾಬಾದ್ : 2,000 ರೂ.ಗೆ ಸೆಕ್ಸ್ ಲೈವ್ ಸ್ಟ್ರೀಮ್ ಮಾಡ್ತಿದ್ದ ಹೈದರಾಬಾದ್ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ.ಸೋಷಿಯಲ್ ಮೀಡಿಯಾ ಅಪ್ಲಿಕೇಶನ್‌ನಲ್ಲಿ ಸೆಕ್ಸ್ ಕೃತ್ಯವನ್ನ ಲೈವ್ ಸ್ಟ್ರೀಮ್ ಮಾಡಿದ್ದಕ್ಕಾಗಿ ಹೈದರಾಬಾದ್ ಪೊಲೀಸರು 41 ವರ್ಷದ ಪತಿ, 37 ವರ್ಷದ ಪತ್ನಿಯನ್ನ ಬಂಧಿಸಿದ್ದಾರೆ. ಸುಲಭವಾಗಿ ಹಣಗಳಿಸುವ ಉದ್ದೇಶದಿಂದ ಕೃತ್ಯ ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದ ಪತಿ ಸುಲಭವಾಗಿ ಹಣ ಗಳಿಸುವ ಉದ್ದೇಶ ಹೊಂದಿದ್ದ. ಇದಕ್ಕಾಗಿ ಇಬ್ಬರೂ ಒಪ್ಪಿಕೊಂಡು ಕೃತ್ಯದಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ ಲೈವ್ ಸ್ಟ್ರೀಮ್‌ಗೆ ಯುವಕರು, ವೃದ್ಧದಿಂದ 2,000 ರೂ. ಪಡೆಯುತ್ತಿದ್ದರು ಮತ್ತು ರೆಕಾರ್ಡ್ ಮಾಡಿದ ಕ್ಲಿಪ್ ಅನ್ನು 500 ರೂ.ಗೆ ಮಾರಾಟ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಮಕ್ಕಳ ಕಾಲೇಜ್ ಫೀಸ್ ಗಾಗಿ ಇಂತ ಕೃತ್ಯ! 2,000 ರೂ.ಗೆ ಸೆಕ್ಸ್ ಲೈವ್ ಸ್ಟ್ರೀಮ್ ಮಾಡ್ತಿದ್ದ ದಂಪತಿಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಆದ್ರೆ ದಂಪತಿಯ ಬಗ್ಗೆ ಅಚ್ಚರಿ ಸಂಗತಿಯೊಂದು ಬೆಳಕಿಗೆ ಬಂದಿದೆ.ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಪತಿ ವೃತ್ತಿಯಲ್ಲಿ ಕ್ಯಾಬ್ ಡ್ರೈವರ್ ಆಗಿದ್ದರೆ, ಪತ್ನಿ ಗೃಹಿಣಿಯಾಗಿದ್ದಳು. ಮನೆಯಲ್ಲಿ ಆರ್ಥಿಕ…
ನವದೆಹಲಿ : ಕಳೆದ ಕೆಲವು ದಿನಗಳಿಂದ ರಾಜ್ಯ ಬಿಜೆಪಿಯಲ್ಲಿ ಹಲವು ಆಂತರಿಕ ಬದಲಾವಣೆಗಳು ಆಗುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರ ನೇಮಕ ಮಾಡಲಾಗುತ್ತಿದೆ ಎಂದು ಸುದ್ದಿ ಹರಿದಾಡುತ್ತಿದೆ. ಅಲ್ಲದೆ ಇತ್ತ ರೆಬೆಲ್ ನಾಯಕರು ಸಾಲು ಸಾಲು ಸಭೆ ಮಾಡುತ್ತಿದ್ದಾರೆ.ಇದರ ಮಧ್ಯ ವಿಪಕ್ಷ ನಾಯಕ ಆರ್ ಅಶೋಕ್ ದೆಹಲಿಗೆ ತೆರಳಿದ್ದು ಹೈಕಮಾಂಡ್ ಅವರನ್ನು ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ. ನವದೆಹಲಿಯಲ್ಲಿ ಹೈಕಮಾಂಡ್ ಅವರನ್ನು ಭೇಟಿಯಾದ ಬಳಿಕ ಆರ್ ಅಶೋಕ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಇಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಯಾವುದೇ ರೀತಿಯಾಗಿ ಚರ್ಚೆ ನಡೆದಿಲ್ಲ. ಯಾವುದೇ ಬದಲಾವಣೆ ಸಹ ಇಲ್ಲ. ರಾಜ್ಯಾಧ್ಯಕ್ಷರ ಬದಲಾವಣೆ ಮಾಧ್ಯಮದಲ್ಲಿ ಬರುತ್ತಿದೆ ಅಷ್ಟೇ. ಆದರೆ ಇಲ್ಲಿ ಯಾವುದೇ ರೀತಿಯ ಬದಲಾವಣೆಯ ಚರ್ಚೆ ನಡೆದೇ ಇಲ್ಲ ಎಂದು ಸ್ಪಷ್ಟನೆ ನೀಡಿದರು. ನಮಗೆ ಏನಿದ್ದರೂ ಕೇಂದ್ರದ ನಾಯಕರ ನಿರ್ಧಾರವೇ ಅಂತಿಮವಾಗಿದೆ ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಎಲ್ಲ ರಾಜ್ಯಗಳ ಅಧ್ಯಕ್ಷರ ನೇಮಕ ಆಗುತ್ತಿದ್ದು ವಿಜಯೇಂದ್ರ ಅವರ ವಿರುದ್ಧ…
ಬೆಂಗಳೂರು : ರಾಜ್ಯವನ್ನು ಮುನ್ನಡೆಸುವ ಶಕ್ತಿ ಡಿಕೆ ಶಿವಕುಮಾರ್ ಗೆ ಸಿಗಲಿ ಡಿಕೆ ಶಿವಕುಮಾರ್ ನಾಡಿನ ಪ್ರಭುವಾಗಲಿ ಎಂದು ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ನಿಶ್ಚಲಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಇಂದು ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯ ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ನಿಶ್ಚಲಾನಂದ ಸ್ವಾಮೀಜಿ ಅವರು ಮಾತನಾಡಿ, ಅಭಿವೃದ್ಧಿಯ ಹರಿಕಾರವಾಗಿ ಬೆಂಗಳೂರು ನಗರ, ರಾಜ್ಯದ ಎಲ್ಲ ಜನರಿಗೆ ಉದ್ಯೋಗ ವರಮಾನ ಜೀವನ ಎಲ್ಲವೂ ನೀಡುತ್ತಿದೆ. ಹಾಗಾಗಿ ಈ ನಗರವನ್ನು ಇನ್ನೂ ಹೆಚ್ಚು ಫಲದಾಯಕವನ್ನಾಗಿ, ಅಭಿವೃದ್ಧಿಯನ್ನಾಗಿ ಮಾಡಬೇಕು ಅಂತ ಹೇಳಿ ಡಿಕೆ ಶಿವಕುಮಾರ್ ಬಹಳ ಕಠಿಣ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದರು. ನಿಜವಾಗಿಯೂ ಉಪಮುಖ್ಯಮಂತ್ರಿಗಳಿಗೆ ಅನೇಕರು ಟೀಕೆ ಮಾಡಬಹುದು.ಆದರೆ ಅವರ ಕೆಲಸದ ವೈಖರಿ ಹಿಡಿದ ಹಠವನ್ನು ಸಾಧಿಸುವಂತಹ ಛಲ, ಮಾಡಿಯೇ ತೀರುತ್ತೇನೆ ಎಂಬ ಹಂಬಲ, ಸಂಕಲ್ಪ ಶಕ್ತಿಯನ್ನ ಹಾಗು ಅವರನ್ನು ಉನ್ನತ ಸ್ಥಾನದಲ್ಲಿ ಕೂರಿಸಲಿಕ್ಕೆ ನಾಡಪ್ರಭು ಕೆಂಪೇಗೌಡರು ಹೆಚ್ಚಿನ ಆಶೀರ್ವಾದ…
ಬೆಂಗಳೂರು : ಹಾಸನ ಜಿಲ್ಲೆಯ ಹೊಳೆ ನರಸೀಪುರ ತಾಲೂಕಿನ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ಅಲ್ಲಿ ನಡೆಯಿತು. ಸರ್ಕಾರದ ಪರ ವಕೀಲ ಹಾಗೂ ಪ್ರಜ್ವಲ್ ರೇವಣ್ಣ ಪರ ವಕೀಲರ ವಾದ ಮತ್ತು ಪ್ರತಿವಾದ ಆಲಿಸಿದ ನ್ಯಾಯಾಲಯವು ಜುಲೈ 2ಕ್ಕೆ ವಿಚಾರಣೆ ಮುಂದೂಡಿ ಆದೇಶಿಸಿತು. ಸರ್ಕಾರದ ಪರವಾಗಿ ಎಸ್ಪಿಪಿ ಪ್ರೊಫೆಸರ್ ರವಿವರ್ಮ ಕುಮಾರ್ ಅವರು ವಾದ ಮಂಡಿಸಿದರು. ಸುಪ್ರೀಂಕೋರ್ಟ್ ಕೂಡ ಪ್ರಜ್ವಲ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಬದಲಾದ ಪರಿಸ್ಥಿತಿ ಇದ್ದರೆ ಸೆಷನ್ಸ್ ಕೋರ್ಟಿಗೆ ಅರ್ಜಿ ಸಲ್ಲಿಸಬಹುದು. ಆದರೆ ಪ್ರಕ್ರಿಯೆ ಉಲ್ಲಂಘಿಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವಾದಿಸಿದರು. ಬಳಿಕ ಹೈಕೋರ್ಟ್ ಜುಲೈ 2ಕ್ಕೆ ವಿಚಾರಣೆಯನ್ನು ಮುಂದೂಡಿತು.
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಬಂಧಿಸಿದ್ದು, ವಿದ್ಯುತ್ ಸ್ಪರ್ಶಿಸಿ ದಂಪತಿ ಸಾವನ್ನಪ್ಪಿದ ಘಟನೆ ನಡೆದಿದೆ. ಸೊರಬ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಕೃಷ್ಣಪ್ಪ (55) ಮತ್ತು ಅವರ ಪತ್ನಿ ವಿನೋದ (42) ಎಂದು ಗುರುತಿಸಲಾಗಿದೆ. ಮನೆ ಮುಂದೆ ಬಟ್ಟೆ ಒಣಗಿಸಲು ಹಾಕಿದ್ದ ಕಬ್ಬಿಣದ ತಂತಿಗೆ ಮನೆಯ ವಿದ್ಯುತ್ ಮೋಟಾರ್‌ನ ವೈರ್‌ಗಳು ಸಂಪರ್ಕವಾಗಿದ್ದು, ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದ ತಂತಿ ತೇವಗೊಂಡಿದೆ. ತಂತಿಯಲ್ಲಿ ಬಟ್ಟೆ ಒಣಗಿಸಲು ಹೋದ ವಿನೋದ ಅವರಿಗೆ ವಿದ್ಯುತ್ ತಗುಲಿದ್ದು, ಅವರನ್ನು ರಕ್ಷಿಸಲು ಧಾವಿಸಿದ ಪತಿ ಕೃಷ್ಣಪ್ಪ ಅವರಿಗೂ ಶಾಕ್ ಹೊಡೆದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಟ್ಟೆ ಒಣಗಿಸುವ ತಂತಿಗೆ ಮೋಟಾರ್‌ನ ಸ್ಕಿನ್ ಹೋಗಿರುವ ವೈರ್ ಮೂಲಕ ವಿದ್ಯುತ್ ಹರಿದಿದ್ದು ಇದಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಸೊರಬ ಪೊಲೀಸ್ ಠಾಣೆಯ ಪಿಎಸ್ಐ ನವೀನ್ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ…














