Subscribe to Updates
Get the latest creative news from FooBar about art, design and business.
Author: kannadanewsnow05
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಕರ್ತವ್ಯದಲ್ಲಿ ಇದ್ದಂತಹ ಫಾರೆಸ್ಟ್ ಗಾರ್ಡ್ ನಾಪತ್ತೆಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಾಲ್ಕು ದಿನಗಳಿಂದ ಫಾರೆಸ್ಟ್ ಗಾರ್ಡ್ ಶರತ್ (33) ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ನೀಲಗಿರಿ ಪ್ಲಾಂಟೇಶನ್ ಬಳಿ ಶರತ್ ಬಟ್ಟೆ ಹಾಗೂ ಬೈಕ್ ಪತ್ತೆಯಾಗಿದೆ. ನೀಲಗಿರಿ ಪ್ಲಾಂಟೇಶನ್ ನಿಂದ ಶರತ್ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ನಾಲ್ಕು ತಿಂಗಳ ಹಿಂದೆ ಅಷ್ಟೇ ಕಡೂರು ಅರಣ್ಯ ವಿಭಾಗಕ್ಕೆ ಶರತ್ ವರ್ಗಾವಣೆಯಾಗಿದ್ದ ಹಲವು ಅನುಮಾನಕ್ಕೆ ಇದೀಗ ಫಾರೆಸ್ಟ್ ಗಾರ್ಡ್ ನಾಪತ್ತೆ ಪ್ರಕರಣ ಕಾರಣವಾಗಿದೆ. ಈ ಕುರಿತು ಸಖರಾಯ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ : ಇತ್ತೀಚಿಗೆ ರಾಜ್ಯದಲ್ಲಿ ಹಸುವಿನ ಕತ್ತು ಕೊಯ್ದು ಪಾಪಿಗಳು ವಿಕೃತಿ ಮರದಿದ್ದರೂ ಅಲ್ಲದೆ ಕಳೆದ ಎರಡು ದಿನಗಳ ಹಿಂದೆ ಅಷ್ಟೇ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ನಡೆದಿತ್ತು ಇದೀಗ ಶಿವಮೊಗ್ಗದಲ್ಲಿ ಮತ್ತೊಂದು ಘಟನೆ ನಡೆದಿದ್ದು, ತನ್ನ ಪಾಡಿಗೆ ತಾನು ಮೆಯುತ್ತಿದ್ದ ಗೋ ಮಾತೆಯ ಕೆಚ್ಚಲು ಕೊಯ್ದು ಪಾಪಿಗಳು ವಿಕೃತಿ ಮೆರೆದಿದ್ದಾರೆ. ಹೌದು ಹಸುವಿನ ಕೆಚ್ಚಲು ಕೊಯ್ದು ಪಾಪಿಗಳು ಕ್ರೌರ್ಯ ಮೆರೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವಿಜಾಪುರದಲ್ಲಿ ಒಂದು ರಾಕ್ಷಸಿಯ ಕೃತ್ಯ ನಡೆದಿದೆ. ರಾಕ್ಷಸರು ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದಾರೆ. ಹಸು ಮೇಯ್ಯುತ್ತಿದ್ದಾಗ ಕೃತ್ಯ ನಡೆದಿದೆ. ವಿಜಯಕುಮಾರ್ ಗೆ ಸೇರಿದ ಹಸು ರಕ್ತಸ್ರಾವದಿಂದ ತೀವ್ರ ನರಳಾಟ ನಡೆಸುತ್ತಿದೆ. ರಕ್ತಸ್ರಾವದಿಂದ ನರಳುತ್ತಿದ್ದ ಹಸುವಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಬೆಂಗಳೂರು : ಕಾವೇರಿ ಆರತಿ ಕುರಿತಂತೆ ನಿನ್ನೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಕೃಷ್ಣರಾಜ ಸಾಗರ(ಕೆಆರ್‌ಎಸ್) ಜಲಾಶಯದ ಬಳಿ ಉದ್ದೇಶಿತ ಕಾವೇರಿ ಆರತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಶುಕ್ರವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಇದು ಸಂಭಾವ್ಯ ಪರಿಸರ ಮತ್ತು ಸುರಕ್ಷತಾ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದೆ. ಇದೆ ವಿಚಾರವಾಗಿ ಇಂದು ಬೆಂಗಳೂರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿ, ಏನೇ ಇದ್ದರೂ ಕಾನೂನು ಪ್ರಕಾರ ಉತ್ತರ ನೀಡುತ್ತೇವೆ. ಪ್ರಾರ್ಥನೆ, ಪೂಜೆ ಮಾಡುವುದಕ್ಕೆ ಯಾರು ಅಡ್ಡಿ ಮಾಡುತ್ತಿಲ್ಲ. ಕೆಲವರಿಗೆ ಆತಂಕ ಇದೆ ಆರತಿ ವಿಚಾರಕ್ಕೆ ಯಾರು ಅನುಮತಿ ಕೇಳುತ್ತಿಲ್ಲ. ನಾವು ಪ್ರತಿದಿನ ಆರತಿ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿಗೆ ಶಿವಕುಮಾರ್ ಹೇಳಿಕೆ ನೀಡಿದರು. ಇನ್ನು ಸಿಎಂ ಬದಲಾವಣೆ ಆಗುತ್ತದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ವಿಪಕ್ಷ ಆರ್ ಅಶೋಕ್ ಏನಾದರೂ ಜ್ಯೋತಿಷ್ಯ ಕಲಿತಿದ್ದಾರಾ? ನನಗೂ ಟೈಮ್ ಕೊಡಿಸಿ ನಾನು ಸಹ ಅವರನ್ನು…
ಉತ್ತರಪ್ರದೇಶ : ಇತ್ತೀಚಿಗೆ ದೇಶದಲ್ಲಿ ಹೆಂಡತಿಯರು ಬೇರೆ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದುವುದು ಅಷ್ಟೇ ಅಲ್ಲದೆ, ಕಟ್ಟಿಕೊಂಡ ಗಂಡನನ್ನೇ ಭೀಕರವಾಗಿ ಕೊಲೆ ಮಾಡುತ್ತಿರುವ ಪ್ರಕರಣಗಳು ಆತಂಕಕಾರಿ ಬೆಳವಣಿಗೆಗೆ ಕಾರಣವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಮೇಘಾಲಯದಲ್ಲಿ ರಾಜ ರಘುವಂಶಿ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೆಳಿಸಿತ್ತು. ಇದೀಗ ಇದೇ ಮಾದರಿಯಲ್ಲಿ ಉತ್ತರ ಪ್ರದೇಶದಲ್ಲಿ ಮತ್ತೊಂದು ಭೀಕರವಾದ ಕೊಲೆ ನಡೆದಿದೆ. ಹೌದು ಇಂದ್ರ ಕುಮಾರ್ ಎಂಬಾತನ ಆಸ್ತಿ ಮೇಲೆ ಕಣ್ಣಿಟ್ಟಿದ್ದ ಮಹಿಳೆ ಅವರನ್ನು ಹೇಗೋ ಬಲೆಗೆ ಬೀಳಿಸಿ ಮದುವೆಯಾಗಿ ಮರುಕ್ಷಣವೇ ಕೊಂದು ಚರಂಡಿಗೆ ಎಸೆದಿರುವ ಮಾಹಿತಿ ಲಭ್ಯವಾಗಿದೆ. ಈ ಘಟನೆ ಉತ್ತರ ಪ್ರದೇಶದ, ಖುಷಿನಗರದ ಹಟಾ ಪ್ರದೇಶದಲ್ಲಿ ನಡೆದಿದೆ. ಮಹಿಳೆಯೊಬ್ಬಳು 45 ವರ್ಷದ ವ್ಯಕ್ತಿಯನ್ನು ಆನ್ಲೈನ್ ಮೂಲಕ ಪರಿಚಯ ಮಾಡಿಕೊಂಡು, ನಂತರ ಬಲೆಗೆ ಬೀಳಿಸಿ, ಮದುವೆಯ ಆಮಿಷವೊಡ್ಡಿ, ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ಆತನನ್ನು ಕೊಂದು ಚರಂಡಿಗೆಸೆದಿದ್ದಾಳೆ. ಸಾಮಾಜಿಕ ಮಾಧ್ಯಮದ ಮೂಲಕ ತಿವಾರಿ ಅವರನ್ನು ಸಂಪರ್ಕಿಸಿ, ನಕಲಿ ಆಧಾರ್ ಕಾರ್ಡ್ ಬಳಸಿ ತನ್ನ ಗುರುತನ್ನು…
BREAKING : ಅತ್ತೆ ಜೊತೆ ಅಳಿಯ ಪರಾರಿಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : 6 ತಿಂಗಳು ಬಳಿಕ ಮಹಿಳೆ ದಿಢೀರ್ ಪ್ರತ್ಯಕ್ಷ!
ದಾವಣಗೆರೆ : ಕಳೆದ ಕೆಲವು ದಿನಗಳ ಹಿಂದೆ ದಾವಣಗೆರೆಯಲ್ಲಿ ಒಂದು ಬೆಚ್ಚಿಬಿಳಿಸುವ ಘಟನೆ ನಡೆದಿತ್ತು . ಪತಿ ಮಹಾಶಯನೊಬ್ಬ ತನ್ನ ಪತ್ನಿಯನ್ನು ಬಿಟ್ಟು ಆಕೆಯ ಮಲತಾಯಿಯ ಜೊತೆಗೆ ಪರಾರಿಯಾಗಿದ್ದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೆಳಿಸಿತ್ತು ಇದೀಗ ಈ ಒಂದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಆರು ತಿಂಗಳು ಬಳಿಕ ಇದೀಗ ಅಳಿಯ ಜೊತೆಗೆ ಪರಾರಿಯಾಗಿದ್ದ ಅತ್ತೆ ಶಾಂತ ದಿಢೀರ್ ಎಂದು ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದಾಳೆ. ಹೌದು ಅಳಿಯನ ಜೊತೆಗೆ ಅತ್ತೆ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಆರು ತಿಂಗಳ ಬಳಿಕ ಅತ್ತೆ ಶಾಂತ ಇದೀಗ ಮನೆಗೆ ಮರಳಿದ್ದಾರೆ. ಚೆನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮಕ್ಕೆ ವಾಪಸ್ ಆಗಿದ್ದು ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಮರಳಿ ಬಂದು ನಾನು ಎಲ್ಲೂ ಹೋಗಿಲ್ಲ ಊರಿನಲ್ಲಿಯೇ ಇದ್ದೇನೆ ಆದರೆ ಅಳಿಯ ಎಲ್ಲಿ ಹೋಗಿದ್ದಾನೋ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ ಅವರು ಪತಿಯ ಮನೆಯವರ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದು, ನನಗೂ…
ಕೊಪ್ಪಳ : ಡಿಕೆ ಶಿವಕುಮಾರ್ ಸಿಎಂ ಆಗಲು ಸಿದ್ದರಾಮಯ್ಯ ಬಿಡಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಮುಂದುವರಿಯಲು ಡಿಕೆ ಶಿವಕುಮಾರ್ ಬಿಡಲ್ಲ. ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಏಳುವುದಕ್ಕೂ ಬಿಡುತ್ತಿಲ್ಲ. ಕಾಂಗ್ರೆಸ್ ಅವರ ಆಂತರಿಕ ಕಚ್ಚಾಟದಿಂದಲೇ ಈ ಸರ್ಕಾರ ಬೀಳುತ್ತದೆ.ಮುಂದಿನ ಸಿಎಂ ಡಿಕೆ ಶಿವಕುಮಾರ್ ಅಲ್ಲ ಸರ್ಕಾರ ಬೀಳುತ್ತೆ ಎಂದು ಕೊಪ್ಪಳದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜವಾದಿ ಅಲ್ಲ ಮಜಾವಾದಿ ಎಂದು ವಾಗ್ದಾಳಿ ನಡೆಸಿದರು.ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕಾಗಿ ಬೇರೆ ಪಕ್ಷಕ್ಕೆ ಹೋಗುತ್ತಾರೆ. ಸಿದ್ದರಾಮಯ್ಯ ಮೂಲ ಕಾಂಗ್ರೆಸ್ಸಿಗ ಅಲ್ಲ ಅವರು ಇಂದಿಗೂ ಅತೃಪ್ತರು. ಸಿದ್ದರಾಮಯ್ಯ ಎಲ್ಲೆಲ್ಲಿ ಹೋಗಿದ್ದಾರೆ ಅಲ್ಲಿ ಮಜಾ ಉಡಾಯಿಸಿದ್ದಾರೆ.ವಸತಿ ಇಲಾಖೆಯಲ್ಲಿ ಹಗರಣ ನಡೆದಿದೆ ಆದರೂ ಸಿದ್ದರಾಮಯ್ಯನವರು ಜಮೀರ್ ಅಹ್ಮದ್ ರನ್ನು ಇಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯಗೆ ನೈತಿಕತೆ ಇದ್ದರೆ ಕೊಡಲೇ ರಾಜೀನಾಮೆ ಕೊಡಬೇಕಿತ್ತು, ಭ್ರಷ್ಟಾಚಾರ ಹೆಚ್ಚಾಗಿದೆ ಅಂತ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ ಎಂದು ಕಿಡಿ ಕಾರಿದರು.
ಹಾವೇರಿ : ರಾಜ್ಯ ರಾಜಕಾರಣದಲ್ಲಿ ಭಾರಿ ಬೆಳವಣಿಗೆ ಆಗುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಕಳೆದ ಕೆಲವು ದಿನಗಳಿಂದ ಹಲವು ಬದಲಾವಣೆಗಳಾಗುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ. ಇದರ ಬೆನ್ನಲ್ಲೇ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ 2026ರಲ್ಲಿ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಇದೆ ಎಂದು ಸ್ಫೋಟಕವಾದ ಹೇಳಿಕೆ ನೀಡಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಈ ಗೊಂದಲದ ಫಲಶ್ರುತಿ ಎಂಬಂತೆ 2026 ರಲ್ಲಿ ಕರ್ನಾಟಕಕ್ಕೆ ಮಧ್ಯಂತರ ಚುನಾವಣೆ ಬರೋ ಸಾಧ್ಯತೆ ಇದೆ. ಯಾವಾಗ ಚುನಾವಣೆ ಬಂದರೂ ಚುನಾವಣೆ ಎದುರಿಸಲು ಬಿಜೆಪಿ ಸಿದ್ದವಾಗಿದೆ ಎಂದು ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ ಅವರು ಸ್ಫೋಟಕವದ ಭವಿಷ್ಯ ನುಡಿದರು. ರಾಜ್ಯದಲ್ಲಿ ಸಾಮೂಹಿಕ ಅತ್ಯಾಚಾರದಿಂದ ಹಿಡಿದು ಕೊಲೆ ಸುಲಿಗೆ ಸಾಮಾನ್ಯವಾಗಿದೆ. ಡ್ರಗ್ಸ್ ಸಿಕ್ಕ ಸಿಕ್ಕಲ್ಲಿ ಮಾರ್ತಾ ಇದಾರೆ. ದಿನ ನಿತ್ಯ ಕೊಲೆ ಸುಲಿಗೆ ಕಾಣ್ತಾ ಇಲ್ಲವಾ ಇವರಿಗೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರನ್ನು ಮೊದಲಿನಿಂದ ನೋಡುತ್ತಿದ್ದೇನೆ. ಕಳೆದ 5 ವರ್ಷ ಸಿಎಂ ಆದಾಗ ನೋಡಿದ್ದೇನೆ. ಸಿದ್ದರಾಮಯ್ಯ…
ಬೆಳಗಾವಿ : ಬೆಳಗಾವಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯನೊಬ್ಬ ಗೂಂಡಾ ವರ್ತನೆ ತೋರಿಸಿದ್ದು, ಬಂದೂಕಿನಿಂದ ಗುಂಡು ಹಾರಿಸಿ ಬರ್ತಡೆ ಆಚರಣೆ ಮಾಡಿಕೊಂಡಿದ್ದಾನೆ. ಸಾರ್ವಜನಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ ಗ್ರಾಮ ಪಂಚಾಯಿತಿ ಸದಸ್ಯನನ್ನು ಅರೆಸ್ಟ್ ಮಾಡಲಾಗಿದೆ. ಗ್ರಾಮ ಪಂಚಾಯತಿ ಸದಸ್ಯನಿಂದ ಈ ಒಂದು ಗುಂಡಾ ವರ್ತನೆ ನಡೆದಿದೆ.ಬಾಬಾಜಾನ್ ಖಾಲಿ ಮುಂಡಾಸೈ ಎಂಬಾತನಿಂದ ಈ ಒಂದು ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ನಡೆದಿದೆ. ನಡು ರಸ್ತೆಯಲ್ಲಿಯೇ ಗುಂಡು ಹಾರಿಸಿದ್ದು ಆತನ ಸುತ್ತಮುತ್ತ ಇರುವ ಯುವಕರು ಕೈಯಲ್ಲಿ ಚಾಕು ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದೆ. ವಿಡಿಯೋ ಬಳಿಕ ಬಾಬಾ ಜಾನ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕುಡ್ಸಿ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ FIR ಸಹ ದಾಖಲಾಗಿದೆ.
ಬೆಂಗಳೂರು : ಇತ್ತೀಚೆಗೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ ತಿಂಗಳಿನಿಂದ ನಿನ್ನೆಯವರೆಗೂ ಹಾಸನ ಜಿಲ್ಲೆ ಒಂದರಲ್ಲಿಯೇ ಹರ್ಯಾಘಾತಕ್ಕೆ 19 ಜನರು ಬಿಳಿಯಾಗಿದ್ದಾರೆ ಇದೀಗ ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯರು ಶಾಕಿಂಗ್ ವರದಿಯೊಂದು ಬಹಿರಂಗಪಡಿಸಿದ್ದು ನಗರ ಪ್ರದೇಶದ ಮಹಿಳೆಯರೇ ಈ ಒಂದು ಹೃದಯಘಾತಕ್ಕೆ ಹೆಚ್ಚು ಬರಿಯಾಗುತ್ತಿದ್ದಾರೆ ಎಂದು ವರದಿ ಬಹಿರಂಗಪಡಿಸಿದ್ದಾರೆ. ಹೌದು ಹೃದಯಾಘಾತದ ಬಗ್ಗೆ ಮತ್ತೊಂದು ಶಾಕಿಂಗ್ ವರದಿ ಬಹಿರಂಗವಾಗಿದ್ದು, ಹೃದಯಾಘಾತಕ್ಕೆ ಮಹಿಳೆಯರೇ ಫಸ್ಟ್ ಟಾರ್ಗೆಟ್ ಎಂದು ತಿಳಿದುಬಂದಿದೆ. ನಗರದಲ್ಲಿ ಹಾರ್ಟ್ ಅಟ್ಯಾಕ್ ಗೆ ಯುವತಿಯರೇ ಹೆಚ್ಚು ಬಳಿಯಾಗಿದ್ದಾರೆ. ಯುವಜನತೆಯ ಪ್ರಾಣವನ್ನು ಹೃದಯ ಹಿಂಡುತ್ತಿದೆ. ಹೃದಯಾಘಾತದ ಬಗ್ಗೆ ಜಯದೇವ ಆಸ್ಪತ್ರೆಯ ವೈದ್ಯರು ಇದೀಗ ಬೆಚ್ಚಿ ಬೀಳಿಸುವ ವರದಿ ನೀಡಿದ್ದು, ನಗರ ಪ್ರದೇಶದ ಮಹಿಳೆಯರಲ್ಲಿ ಹೆಚ್ಚು ಹೃದಯಘಾತವಾಗುತ್ತಿದೆ. ಪ್ರತಿ 10 ಪ್ರಕರಣಗಳಲ್ಲಿ 3-4 ಮಹಿಳೆಯರಲ್ಲಿ ಹೃದಯಾಘಾತ ಸಂಭವಿಸುತ್ತಿದೆ. 18ರಿಂದ 40 ವರ್ಷದೊಳಗಿನ ಮಹಿಳೆಯರೇ ಹೃದಯಘಾತಕ್ಕೆ ಟಾರ್ಗೆಟ್ ಆಗಿದ್ದಾರೆ. ನಗರದಲ್ಲಿ ಮೂರರಿಂದ ನಾಲ್ಕು ಮಹಿಳೆಯರು ಈ ಒಂದು ಹೃದಯಘಾತಕ್ಕೆ ಬಲಿಯಾಗುತ್ತಿದ್ದಾರೆ.ಕೆಲಸದ ಒತ್ತಡ, ಕೌಟುಂಬಿಕ ಮತ್ತು…
ರಾಮನಗರ : ರಾಜ್ಯ ರಾಜಕಾರಣದಲ್ಲಿ ಸದ್ಯ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳಲ್ಲೂ ಭಾರಿ ಬದಲಾವಣೆ ಮಾತುಗಳು ಕೇಳಿ ಬರುತ್ತಿದ್ದು, ಒಂದು ಕಡೆ ಸಿಎಂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಆಗುತ್ತದೆ ಎಂದು ಹೇಳುತ್ತಿದ್ದರೆ ಇತ್ತ ಬಿಜೆಪಿ ಪಕ್ಷದಲ್ಲೂ ರಾಜ್ಯಾಧ್ಯಕ್ಷರ ಬದಲಾವಣೆ ಆಗಲಿದೆ ಎಂದು ಹೇಳಲಾಗುತ್ತಿದೆ ಇದರ ಮಧ್ಯ ರಾಮನಗರ ಶಾಸಕ ಇಕ್ಬಾಲ್ ಹುಸೈನ್ ಮುಂದಿನ ಮೂರು ತಿಂಗಳಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ಮೂರು ತಿಂಗಳಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಸ್ಪೋಟಕವಾದ ಹೇಳಿಕೆ ನೀಡಿದರು. ನಮಗೆ ಯಾವುದೇ ಪವರ್ ಸೆಂಟರ್ ಇಲ್ಲ ಹೈಕಮಾಂಡ್ ಒಂದೇ ಇರೋದು. ರಾಜಕಾರಣದಲ್ಲಿ ಬದಲಾವಣೆ ಸಹಜ ಪಕ್ಷದಲ್ಲಿ ಯಾರಿಗೆ ಸೂಕ್ತ ಅನಿಸುತ್ತೋ ಅವರಿಗೆ ಅಧಿಕಾರ ಸಿಗಲಿದೆ ಎಂದರು. ಈ ಸರ್ಕಾರ ಬರುವ ಮುನ್ನ ಕಾಂಗ್ರೆಸ್ ಶಾಸಕರ ಸಂಖ್ಯೆ ಎಷ್ಟಿತ್ತು? 136 ಸೀಟ್ ಬರಲು ಹೋರಾಟ,…












