Author: kannadanewsnow05

ಕೋಲಾರ : ಕೋಲಾರದಲ್ಲಿ ಘೋರವಾದ ಘಟನೆ ನಡೆದಿದ್ದು, ದೇವಸ್ಥಾನದ ಕಲ್ಯಾಣಿಯಲ್ಲಿ ಮುಳುಗಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಕುರುಡುಮಲೆ ವಿನಾಯಕ ದೇವಸ್ಥಾನದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ದೇವಸ್ಥಾನದ ಕಲ್ಯಾಣಿಯಲ್ಲಿ ಮುಳುಗಿ 9 ವರ್ಷದ ಬಾಲಕ ಸಾವನಪ್ಪಿದ್ದಾನೆ. ಮೃತ ಬಾಲಕನನ್ನು ಕುಶಾಲ್ (9) ಎಂದು ತಿಳಿದುಬಂದಿದೆ. ಈತ ಚಿತ್ರದುರ್ಗ ಜಿಲ್ಲೆಯ ಮುಳ್ಳಾಲಕೆರೆ ತಾಲಕಟ್ಟೆ ನಿವಾಸಿ ಎಂದು ತಿಳಿದುಬಂದಿದೆ.ಇಂದು ಪೋಷಕರೊಂದಿಗೆ ಬಾಲಕ ದೇವಾಲಯಕ್ಕೆ ಬಂದಿದ್ದ. ಆಟವಾಡುವ ವೇಳೆ ದೇವಸ್ಥಾನದ ಕಲ್ಯಾಣಿಯಲ್ಲಿ ಬಿದ್ದು ಕುಶಾಲ್ ಸಾವನಪ್ಪಿದ್ದಾನೆ. ಘಟನೆ ಕುರಿತಂತೆ ಮುಳಬಾಗಿಲು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಳಗಾವಿ : ರಾಜ್ಯದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಈಗಾಗಲೇ ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಮಳೆಯಿಂದಾಗಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿರುವ ಅಂಬೋಲಿ ಫಾಲ್ಸ್ ಬಳಿ ಫಾಲ್ಸ್ ನೋಡುವಾಗ ಕಾಲು ಜಾರಿ 300 ಅಡಿ ಆಳಕ್ಕೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಹೌದು ಕಾಲು ಜಾರಿ 300 ಅಡಿ ಆಳದ ಕಣಿವೆಗೆ ಬಿದ್ದ ವ್ಯಕ್ತಿ ದುರ್ಮರಣ ಹೊಂದಿದ್ದಾರೆ. ಅಂಬೋಲಿ ಫಾಲ್ಸ್ ಬಳಿಯ ಕವಲಿದಾಸ್ ಪಾಯಿಂಟ್ ನಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಮಹಾರಾಷ್ಟ್ರ ಮತ್ತು ಬೆಳಗಾವಿ ಗಡಿಯಲ್ಲಿರುವಂತಹ ಅಂಬೋಲಿ ಫಾಲ್ಸ್ ವೀಕ್ಷಣೆಗೆ ಎಂದು ತೆರಳಿದ್ದಾಗ, ಕೊಲ್ಹಾಪುರದ ನಿವಾಸಿ ಬಾಲಸೋ ಸಂಗರ್ (45) ಮೃತ ದುರ್ದೈವಿ ಎಂದು ತಿಳಿದುಬಂದಿದೆ. 300 ಅಡಿ ಆಳದಿಂದ ಪೊಲೀಸರು ಮತ್ತು ಸ್ಥಳೀಯರು ಶವವನ್ನು ಮೇಲಕ್ಕೆ ಎತ್ತಿದ್ದಾರೆ.

Read More

ದಕ್ಷಿಣಕನ್ನಡ : ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭವತಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ ರಾವ್ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಈಗ ಮದುವೆಗೆ ನಿರಾಕರಿಸಿದ್ದಾನೆ. ಹಾಗಾಗಿ ಡಿಎನ್ಎ ಪರೀಕ್ಷೆಯ ಮೂಲಕ ಪೊಲೀಸರು ಇದೀಗ ಪ್ರಕರಣವನ್ನು ಭೇದಿಸಲು ಮುಂದಾಗಿದ್ದಾರೆ. ಹೌದು ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ಕೃಷ್ಣ ಜೆ. ರಾವ್ ನಾಪತ್ತೆಯಾಗಿದ್ದಾನೆ. ಯುವಕ ಕೃಷ್ಣ ಜೆ. ರಾವ್ ವಿರುದ್ಧ ಲವ್, ಸೆಕ್ಸ್ ದೋಖಾ ಆರೋಪ ಕೇಳಿ ಬಂದಿದೆ. ಕೃಷ್ಣ ಮತ್ತು ಸಂತ್ರಸ್ತ ಯುವತಿಯ ನಡುವೆ ಪ್ರೇಮಾಂಕುರವಾಗಿದೆ. ಕೃಷ್ಣ ತನ್ನ ಮನೆಗೆ ಕರೆಸಿಕೊಂಡು ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಯುವತಿ ಆರೋಪಿಸಿದ್ದಾಳೆ. 2014 ಅಕ್ಟೋಬರ್ 11ರಂದು ನನ್ನ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾಳೆ. ಅಲ್ಲದೇ ಮದುವೆಯಾಗುತ್ತೇನೆ ಎಂದು ನಂಬಿಸಿ ಕೃಷ್ಣ ಯುವತಿಯ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೇ. ಅದಾದ ಬಳಿಕ 2025…

Read More

ಚಿಕ್ಕಮಗಳೂರು : ಕಳೆದ ಒಂದು ತಿಂಗಳಲ್ಲಿ ರಾಜ್ಯದಲ್ಲಿ ಹೃದಯಾಘಾತದಿಂದ ಇದುವರೆಗೂ 19 ಜನರು ಹಾಸನ ಜಿಲ್ಲೆ ಒಂದರಲ್ಲೆ ಸಾವನಪ್ಪಿದ್ದಾರೆ. ಇದೀಗ ಹೃದಯಾಘಾತಕ್ಕೆ ಮತ್ತೊಂದು ಜೀವ ಬಲಿಯಾಗಿದ್ದು, ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಟಿವಿಎಸ್ ಶೋರೂಮ್ನಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಕಾರ್ಡ್ ಒಬ್ಬರು ಕುರ್ಚಿಯ ಮೇಲೆ ಕುಳಿತಲ್ಲಿಯೇ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ, ಚಿಕ್ಕಮಂಗಳೂರಿನ ಬೇಲೂರು ರಸ್ತೆಯಲ್ಲಿರುವ ಟಿವಿಎಸ್ ಶೋರೂಮ್ ನಲ್ಲಿ ನಡೆದಿದೆ. ಹೌದು ಕರ್ತವ್ಯ ನಿರ್ವಹಿಸುವಾಗಲೇ ಹೃದಯಘಾತದಿಂದ ಸೆಕ್ಯೂರಿಟಿ ಗಾರ್ಡ್ ಸಾವನಪ್ಪಿದ್ದಾರೆ. ಚಿಕ್ಕಮಂಗಳೂರಿನ ಬೇಲೂರು ರಸ್ತೆಯಲ್ಲಿರುವ ಟಿವಿಎಸ್ ಶೋರೂಮ್ನಲ್ಲಿ ಈ ಒಂದು ಘಟನೆ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ಆಗಿದ್ದ ಹಿರೇಗೌಜ ಗ್ರಾಮದ ನಿವಾಸಿ ಶಿವಾನಂದ್ (55) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಕಳೆದ ಆರು ತಿಂಗಳ ಹಿಂದೆ ಅಷ್ಟೇ ಶಿವಾನಂದ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿದ್ದರು ಎಂದು ತಿಳಿದುಬಂದಿದೆ. ಹಾರ್ಟ್ ಅಟ್ಯಾಕ್ ಆದ ನಂತರ ತಕ್ಷಣ ಮಲ್ಲೇಗೌಡ ಸರ್ಕಾರಿ ಜಿಲಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಮಗಳೂರು ಇಲಾಖೆ…

Read More

ಬಳ್ಳಾರಿ : ಬಿಜೆಪಿ ಪಕ್ಷದಿಂದ ಉಚ್ಚಾಟನೆಯಾದ ಬಳಿಕ ನನಗೂ ಸಹ ಕಾಂಗ್ರೆಸ್ ನಿಂದ ಆಫರ್ ಬಂದಿತ್ತು. ಬಿಜೆಪಿ ಬಿಟ್ಟು ನಾನು ಬೇರೆ ಯಾವ ಪಕ್ಷಕ್ಕೂ ಹೋಗುವುದಿಲ್ಲ. ನಾನು ಹೋದರೆ ಮತ್ತೆ ಬಿಜೆಪಿಗೆ ಹೋಗುತ್ತೇನೆ ಎಂದು ಬಳ್ಳಾರಿಯಲಿ ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಹೇಳಿಕೆ ನೀಡಿದರು. ನಾನು, ಬಿಎಸ್ ಯಡಿಯೂರಪ್ಪ ಅನಂತ್ ಕುಮಾರ್ ಸೇರಿದಂತೆ ಹಲವರು ರಾಜ್ಯದಲ್ಲಿ ಪಕ್ಷ ಕಟ್ಟಿದ್ವಿ. ಅದಕ್ಕೂ ಮೊದಲು ಹಲವರು ರಕ್ತಸ್ರಸಿ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆ, ಕಾರ್ಪೊರೇಷನ್ ಚುನಾವಣೆ ಮಾಡೋದಕ್ಕೂ ಜನ ಇರಲಿಲ್ಲ. ಅಂತಹ ಸಂದರ್ಭದಲ್ಲಿ ನಾವು ಪಕ್ಷ ಕಟ್ಟಿದ್ದೇವೆ ಕರ್ನಾಟಕದಲ್ಲಿ ಈಗ ಪಕ್ಷ ಸ್ವಲ್ಪ ಕುಸಿದಿದೆ. ಮತ್ತೆ ಪಕ್ಷವನ್ನು ಕಟ್ಟಬೇಕಿದೆ. ಬೇರೆ ಪಕ್ಷಗಳಿಂದಲೂ ನನಗೆ ಆಫರ್ ಬಂತು. ಸಿದ್ದರಾಮಯ್ಯ ಸಂಪುಟದ ಹಲವು ಸಚಿವರು ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿದ್ದರು. ನನಗೆ ಹಾಗೂ ನನ್ನ ಮಗನಿಗೆ ಸ್ಥಾನಮಾನ ಕೊಡುವುದಾಗಿ ಹೇಳಿದ್ದರು. ಅಲ್ಲದೇ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಕೂಡ ನನ್ನನ್ನು…

Read More

ಚಿಕ್ಕಬಳ್ಳಾಪುರ : ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಉಪನ್ಯಾಸಕನ ಬಳಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ್ದು, ಬಳಿಕ ಹಣ ವಾಪಸ್ ಕೇಳಿದ ಉಪನ್ಯಾಸಕನನ್ನು ಬರ್ಬರವಾಗಿ ಕೊಂದಿದ್ದ ಮೂವರು ಹಂತಕರನ್ನು ಇದೀಗ ಪೊಲಿಸರು ಅರೆಸ್ಟ್ ಮಾಡಿದ್ದಾರೆ.ಬಂಧಿತರನ್ನು ಸುಧಾಕರ್ ಮನೋಜ್ ಮತ್ತು ಮಂಜುನಾಥ್ ಎಂದು ತಿಳಿದುಬಂದಿದೆ. ಹೌದು ವಿದೇಶದಲ್ಲಿ ಉನ್ನತ ಹುದ್ದೆ ಕೊಡಿಸುವುದಾಗಿ ನಂಬಿಸಿ, ಭೀಕರವಾಗಿ ಕೊಲೆ ಮಾಡಲಾಗಿತ್ತು. ಇಂದು ಚಿಂತಾಮಣಿ ಗ್ರಾಮಾಂತರ ಠಾಣೆ ಪೋಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ, ವಿದೇಶದಲ್ಲಿ ಉನ್ನತ ಹುದ್ದೆ ಕೊಡಿಸುತ್ತೇವೆ ಎಂದು ಮೊದಲಿಗೆ ಹಣ ವಸೂಲಿ ಮಾಡಿದ್ದಾರೆ ರಾಮಾಂಜಿ ಎಂಬ ವ್ಯಕ್ತಿಯ ಬಳಿ ಆರೋಪಿಗಳು 11,00,000 ಹಣ ವಸೂಲಿ ಮಾಡಿದ್ದಾರೆ. ಹಣ ವಾಪಸ್ ಕೇಳಿದ್ದಕ್ಕೆ ರಾಮಾಂಜಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಚಲಿಸುವ ಕಾರಿನಲ್ಲಿ ರಾಮಾಂಜಿ ಕತ್ತು ಹಿಸುಕಿ ಕೊಂದು, ಬಳಿಕ ಶವಕ್ಕೆ ಕಲ್ಲು ಕಟ್ಟಿ ಬಾವಿಗೆ ಎಸೆದಿರುವ ಘಟನೆ ನಡೆದಿತ್ತು. ಜೂನ್ 23 ರಂದು ಕೆಂಪದೆಯನಹಳ್ಳಿ ಬಳಿ ಶವ ಪತ್ತೆಯಾಗಿದ್ದು, ಯಲಹಂಕದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ.…

Read More

ಬಾಗಲಕೋಟೆ : ದಸರಾ ವೇಳೆಗೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವುದು ಫಿಕ್ಸ್ ಎಂದು ಬಾಗಲಕೋಟೆಯಲ್ಲಿ ಬಿಜೆಪಿಯ ಮಾಜಿ ಸಚಿವ ಶ್ರೀರಾಮುಲು ಹೊಸ ಬಾಂಬ್ ಸಿಡಿಸಿದ್ದಾರೆ. ಯಾವುದೇ ಕ್ಷಣದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಥಮವಾಗಲಿದೆ ಎಂದು ಸ್ಪೋಟಕ ಭವಿಷ್ಯ ನೋಡಿದ್ದರು. ಬಾಗಲಕೋಟೆಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ, ಮಾತನಾಡಿದ ಅವರು ದಸರಾ ವೇಳೆಗೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವುದು ಫಿಕ್ಸ್. ಯಾವುದೇ ಕ್ಷಣದಲ್ಲಾದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ನೂರಕ್ಕೆ ನೂರು ಸರ್ಕಾರ ಪತನವಾಗಲಿದೆ.ಈ ಹಿಂದೆ ಕಾಂಗ್ರೆಸ್ ಸರ್ಕಾರ ಬಿದ್ದಾಗ ಕಾಂಗ್ರೆಸ್ ನವರೇ ಸರ್ಕಾರವನ್ನು ಕೆಡವಿದ್ದರು. ರಾಜ್ಯದಲ್ಲಿ ಈಗಲೂ ಕಾಂಗ್ರೆಸ್ ನಾಯಕರಿಂದಲೇ ಸರ್ಕಾರ ಬೀಳುತ್ತದೆ. ಅಧಿಕಾರ ಹಸ್ತಾಂತರ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಹೀಗಾಗಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಲಿದೆ ಸಚಿವ ಕೆ.ಎನ್ ರಾಜಣ್ಣ ಸಹ ರಾಜ್ಯದಲ್ಲಿ ಕ್ರಾಂತಿಯಾಗಲಿದೆ ಎಂದಿದ್ದಾರೆ. ಸಚಿವ ರಾಜಣ್ಣ ಅವರ ಮಾತು ಕೇಳಿದರೆ ಸರ್ಕಾರ ಪತನವಾಗಲಿದೆ ರಾಜ್ಯದಲ್ಲಿ ನಾವು ಮತ್ತೆ ಬಿಜೆಪಿ ಬಾವುಟ ಹಾರಿಸುವ ಕೆಲಸ ಮಾಡುತ್ತೇವೆ ಎಂದು ಬಾಗಲಕೋಟೆ…

Read More

ತುಮಕೂರು : ತುಮಕೂರಿನಲ್ಲಿ ಭಾರಿ ಅಪಘಾತ ಒಂದು ಸಂಭವಿಸಿದ್ದು, ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಟೈರ್ ಬ್ಲಾಸ್ಟ್ ಆಗಿದ್ದ ಪರಿಣಾಮ ಏಕಾಏಕಿ ನಿಯಂತ್ರಣ ಕಳೆದುಕೊಂಡು ಮನೆಗೆ ನುಗ್ಗಿರುವ ಘಟನೆ ತುಮಕೂರು ಜಿಲ್ಲೆಯ ಸಿದ್ದಾಪುರದಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ಹೌದು ಕೆಎಸ್ಆರ್ಟಿಸಿ ಬಸ್ ಒಂದು ನಿಯಂತ್ರಣ ಕಳೆದುಕೊಂಡು ಮನೆಗೆ ನುಗ್ಗಿದೆ. ಈ ವೇಳೆ ಮನೆಯ ಸದಸ್ಯರೆಲ್ಲರೂ ಶಾಕ್ ಆಗಿದ್ದಾರೆ. ಮಿಂಚಿನ ವೇಗದಲ್ಲಿ ಬಂದು ಕೆಎಸ್ಆರ್ಟಿಸಿ ಬಸ್ ಒಂದು ಮನೆಗೆ ನುಗ್ಗಿದೆ. ಚಲಿಸುತ್ತಿದ್ದ ಬಸ್ ಟೈಯರ್ ಬ್ಲಾಸ್ಟ್ ಆಗಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆದರೆ ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ತುಮಕೂರು ಜಿಲ್ಲೆಯ ಸಿದ್ದಾಪುರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.

Read More

ದಾವಣಗೆರೆ : ರಾಜ್ಯದಲ್ಲಿ ಮತ್ತೊಂದು ಎಟಿಎಂ ಮಷೀನ್ ದರೋಡೆಗೆ ಯತ್ನ ನಡೆದಿದ್ದು ಆದರೆ ಎಟಿಎಂ ದರೋಡೆ ಮಾಡಲು ವಿಫಲರಾದ ಕಳ್ಳರು ಸ್ಥಳದಿಂದ ಪರಾರಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಿಚೋಡು ಎಂಬ ಗ್ರಾಮದಲ್ಲಿ ನಡೆದಿದೆ. ಹೌದು ಕೆನರಾ ಬ್ಯಾಂಕ್ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ ನಡೆದಿರುವ ಘಟನೆ ಬಿಳಿಚೋಡು ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಕಬ್ಬಿಣದ ಸರಳು ಬಳಸಿಕೊಂಡು ಕದೀಮರು ಎಟಿಎಂ ಮಷೀನ್ ಒಡೆಯಲು ಯತ್ನಿಸಿದ್ದಾರೆ. ಇದು ಸಾಧ್ಯವಾಗದೆ ಇದ್ದಾಗ ಪೆಟ್ರೋಲ್ ಸುರದಿದ್ದಾರೆ. ಈ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ದಟ್ಟ ಆವರಿಸುತ್ತಿದ್ದಂತೆ ಸುತ್ತಿದಂತೆ ದರೋಡೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.ಘಟನೆಯ ಸಂಪೂರ್ಣ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಈ ಕುರಿತು ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದಂತ ಕೊಲೆಯಾಗಿದ್ದು, ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿ ಮೂಟೆ ಕಟ್ಟಿ ದುಷ್ಕರ್ಮಿಗಳು ಕಸದ ಲಾರಿಯಲ್ಲಿ ಇಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನ ಚೆನ್ನಮ್ಮನಕೆರೆ ಠಾಣೆ ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್ ಬಳಿ ಈ ಒಂದು ಘಟನೆ ನಡೆದಿದೆ. ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಆಟೋದಲ್ಲಿ ಮಹಿಳೆಯ ಶವವನ್ನು ತಂದಿದ್ದಾರೆ. ಶವವನ್ನು ಮೈದಾನದ ಬಳಿ ನಿಲ್ಲಿಸಿದ್ದ ಕಸದ ಲಾರಿಯಲ್ಲಿ ಇಟ್ಟು ಪರಾರಿ ಆಗಿದ್ದಾರೆ. ಸುಮಾರು 30 ರಿಂದ 35 ವರ್ಷದ ಮಹಿಳೆಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.ಏಕೆಂದರೆ ಮಹಿಳೆಯ ದೇಹದ ಮೇಲೆ ಅರ್ಬನ್ ಎಂಬ ಕಂಪನಿಯ ಟಿ-ಶರ್ಟ್ ಬಿಟ್ಟರೆ ಯಾವುದೇ ಒಳ ಉಡುಪುಗಳು ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಮಹಿಳೆಯ ಗುರುತು ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಪರಿಚಿತ ಮಹಿಳೆಯ ಶವ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹಂತಕರ ಪತ್ತೆಗಾಗಿ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಘಟನೆ ಕುರಿತಂತೆ ಚನ್ನಮ್ಮನ ಅಚ್ಚುಕಟ್ಟು…

Read More