Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ನಟ ರಿಷಬ್ ಶೆಟ್ಟಿ ನಟನೆಯ ಕಾಂತರಾ ಚಾಪ್ಟರ್ 1 ಚಿತ್ರದ ದೈವ ಪಾತ್ರದ ಬಗ್ಗೆ ಅವಮಾನಕಾರಿ ಸನ್ನೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಹೈಕೋರ್ಟ್ ಮತ್ತೆ ರಿಲೀಫ್ ನೀಡಿದೆ. ಈ ಒಂದು ಪ್ರಕರಣವನ್ನು ರದ್ದುಗೊಳಿಸುವಂತೆ ರಣವೀರ್ ಸಿಂಗ್ ಕಳೆದ ವಾರ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಮುಂದಿನ ವಿಚಾರಣೆಯವರೆಗೂ ರಣವೀರ್ ಸಿಂಗ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನೀಡಿದ್ದ ಆದೇಶವನ್ನು ಹೈಕೋರ್ಟ್ ವಿಸ್ತರಿಸಿದೆ. ತನ್ನ ವಿರುದ್ಧ ದಾಖಲಾಗಿರುವ ಖಾಸಗಿ ದೂರು ಮತ್ತು ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ರಣವೀರ್ ಸಿಂಗ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಈ ಹಿಂದೆ ನೀಡಿದ್ದ ಆದೇಶ ವಿಸ್ತರಿಸಿ ಆದೇಶಿಸಿತು. ಪ್ರಕರಣದ ಹಿನ್ನೆಲೆ ಗೋವಾದಲ್ಲಿ ಕಳೆದ 2025ರ ನ.28ರಂದು ನಡೆದಿದ್ದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ರಣವೀರ್ ಸಿಂಗ್, ಕಾಂತಾರ…
ಹಾಸನ : ಹಾಸನದಲ್ಲಿ ಕ್ಷುಲ್ಲಕ ವಿಚಾರವಾಗಿ ಕೊಲೆ ನಡೆದಿದ್ದು, ನಿಧಾನವಾಗಿ ಕಾರು ಓಡಿಸು ಎದ್ದಿದ್ದಕ್ಕೆ ಯುವಕನಿಗೆ ಗುದ್ದಿಸಿ, ಭೀಕರವಾಗಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಸುರನಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ.ಹತ್ಯೆಯಾದ ಯುವಕನನ್ನು ಮನು (27) ಎಂದು ಗುರುತಿಸಲಾಗಿದೆ. ತಡರಾತ್ರಿ 12 ಗಂಟೆ ಸಮಯದಲ್ಲಿ ಮನು, ಅಭಿಷೇಕ್, ರಾಕೇಶ್ ಹಾಗೂ ಕುಶಾಲ್ ರಸ್ತೆ ಪಕ್ಕದಲ್ಲಿ ನಿಂತು ಮಾತನಾಡುತ್ತಿದ್ದರು. ಈ ವೇಳೆ KA-01-ಎಂಎಫ್-2883 ನಂಬರ್‌ನ ಕಾರಿನಲ್ಲಿ ಅತಿ ವೇಗವಾಗಿ ಅಪರಿಚಿತ ವ್ಯಕ್ತಿ ಬಂದಿದ್ದಾನೆ. ಇದನ್ನು ಕಂಡ ಯುವಕರ ತಂಡ, ಕಾರು ಚಾಲಕನಿಗೆ ನಿಧಾನವಾಗಿ ಹೋಗು ಎಂದು ಹೇಳಿದ್ದರು. ಇದರಿಂದ ಕೋಪಗೊಂಡ ಕಾರು ಚಾಲಕ ಸ್ಬಲ್ಪ ದೂರು ಹೋಗಿ ತಿರುಗಿಸಿಕೊಂಡು ಬಂದು, ಮಾತನಾಡುತ್ತ ನಿಂತಿದ್ದವರಿಗೆ ಡಿಕ್ಕಿ ಹೊಡೆಸಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಡಿಕ್ಕಿ ರಭಸಕ್ಕೆ ಮನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಭಿಷೇಕ್ ಸೇರಿ ಮೂವರು ಯುವಕರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಲ್ವರು…
ಬೆಂಗಳೂರು : ಹೋಳಿ ಹುಣ್ಣಿಮೆಯ ಗ್ರಹಣಕ್ಕೂ ಯುದ್ಧಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಗವಿ ಗಂಗಾಧರೇಶ್ವರ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿಕೆ ನೀಡಿದರು. ಈ ಗ್ರಹಣ ಇರಾನ್ ಇಸ್ರೇಲ್ ಯುದ್ಧಕ್ಕೆ ಪ್ರಭಾವವಾಗಿಲ್ಲ. ಆದರೆ ಇದು ಭಾರತಕ್ಕೆ ಬರಬಾರದು ಎಂದು ಶಾಂತಿ ಹೋಮ ಮಾಡಲಾಗುತ್ತಿದೆ. ಗವಿ ಗಂಗಾಧರೇಶ್ವರ ದೇಗುಲದಲ್ಲಿ ಶಾಂತಿ ಹೋಮ ಮಾಡಲಾಗುತ್ತೆ. ಈ ವರ್ಷ ಜಲಕಂಟಕ ಮತ್ತು ಅಗ್ನಿ ಅವಘಡ ಆಗಲಿದೆ ಉತ್ತರ ಭಾರತದಲ್ಲಿಯೇ ಹೆಚ್ಚು ಸಮಸ್ಯೆ ಆಗಲಿದೆ ಎಂದು ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಗವಿ ಗಂಗಾಧರೇಶ್ವರ ದೇಗುಲದ ಅರ್ಚಕ ಸೋಮ ಸುಂದರ್ ದೀಕ್ಷಿತ್ ಹೇಳಿಕೆ ನೀಡಿದರು.
ಮಂಡ್ಯ : ತಮ್ಮ ಮಗನ ಏಳಿಗೆಗಾಗಿ, ಅಣ್ಣನ ಮಗ ಪ್ರಜ್ವಲ್ ರೇವಣ್ಣ ಜೈಲು ಸೇರಲು ಕುಮಾರಸ್ವಾಮಿ ಕಾರಣ ಎಂದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಕಾಂಗ್ರೆಸ್ ಶಾಸಕ ಕದಲೂರು ಉದಯ್ ಆರೋಪ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡಿದ ಅವರು, ಅಣ್ಣನ ಮಗನನ್ನೇ ಸಹಿಸಿಕೊಳ್ಳಲಿಲ್ಲ ಇನ್ನು ನಮ್ಮನ್ನು ಸಹಿಸಿಕೊಳ್ಳುತ್ತಾರ? ಇವರ ಮಗ ಗೆದ್ದಿಲ್ಲ ಅಂತ ಅಣ್ಣನ ಮಗನ ಜೈಲಿಗೆ ಕಳುಹಿಸಿದರು. ಕ್ರಿಯೇಟ್ ಮಾಡಿ ಪ್ರಜ್ವಲ್ ರೇವಣ್ಣನನ್ನು ಜೈಲಿಗೆ ಕಳುಹಿಸಿದರು. ಪ್ರಜ್ವಲ್ ಜೈಲಿಗೆ ಹೋಗಲು ನೂರಕ್ಕೆ ನೂರರಷ್ಟು ಹೆಚ್ ಡಿ ಕುಮಾರಸ್ವಾಮಿ ಕಾರಣ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮನಸು ಮಾಡಿದರೆ ಬಿಡಿಸಬಹುದಾಗಿತ್ತು. ಆದರೆ ಷಡ್ಯಂತರ ಮಾಡಿ ಪ್ರಜ್ವಲ್ ನನ್ನು ಜೈಲಿಗೆ ಹಾಕಿಸಿದ್ದಾರೆ. ಮಗನ ಏಳಿಗೆಗೆ ಹೆಚ್ ಡಿ ಕುಮಾರಸ್ವಾಮಿ ಅಣ್ಣನ ಮಗನನ್ನು ಜೈಲಿಗೆ ಕಳುಹಿಸಿದ್ದಾರೆ. ಎಂದು ಮದ್ದೂರಿನಲ್ಲಿ ಕಾಂಗ್ರೆಸ್ ಶಾಸಕ ಕದಲೂರು ಉದಯ ಹೇಳಿಕೆ ನೀಡಿದರು.
ಬೆಂಗಳೂರು : ಒಂದು ಕಡೆ ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಸಚಿವಾ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರೆ ಇನ್ನೊಂದು ಕಡೆ ಬಜೆಟ್ ನಲ್ಲಿ ಈ ಬಾರಿ ಪೆಟ್ರೋಲ್ ಡೀಸೆಲ್ ಮೇಲೆ ಒಂದು ರೂಪಾಯಿ ವಿಧಿಸಲು ಇದೀಗ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಈ ಮೂಲಕ ರಾಜ್ಯದ ಜನತೆಗೆ ಮತ್ತೊಂದು ಶಾಕ್ ನೀಡಲು ಸರ್ಕಾರ ಮುಂದಾಗಿದೆ. ಹೌದು ಗ್ಯಾರಂಟಿ ಯೋಜನೆಗಳು ಸೃಷ್ಟಿಸಿದ ಆರ್ಥಿಕ ಹೊರೆ ಒಂದೆಡೆಯಾದರೆ ಸಂಪನ್ಮೂಲ ಕ್ರೋಡೀಕರಣ ಇಲಾಖೆಗಳಿಗೆ ನೀಡಿದ್ದ ರಾಜಸ್ವ ಸಂಗ್ರಹಣೆಯ ಗುರಿ ಈಗಾಗಲೇ ಅತಿಯಾಗಿದೆ. ಹೀಗಾಗಿ ಹೊಸ ಆದಾಯದ ಮೂಲಗಳನ್ನು ಅರಸುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿ ಪರಿಣಮಿಸಿದೆ. ಹೀಗಾಗಿ ಪೆಟ್ರೋಲ್ ಹಾಗೂ ಡೀಸೆಲ್‌ಗಳ ಮೇಲೆ ಹೆಚ್ಚುವರಿಯಾಗಿ ಮಾರಾಟ ತೆರಿಗೆ ಹೇರುವುದು ಅನಿವಾರ್ಯವಾಗುವ ಸಾಧ್ಯತೆ 2໖. ಹಣಕಾಸು ಇಲಾಖೆ ಅಧಿಕಾರಿಗಳ ಜತೆಗೆ ಕಳೆದ ಕೆಲ ದಿನಗಳಿಂದ ಪ್ರತ್ಯೇಕ ಚರ್ಚೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಈ ಪ್ರಸ್ತಾಪವೊಂದು ಈಗಾಗಲೇ ಸಲ್ಲಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್…
ಶಿವಮೊಗ್ಗ : ಶಿವಮೊಗ್ಗದಲ್ಲಿ ನಿವೃತ್ತ ನೌಕರನ ಬಳಿ 1 ಲಕ್ಷ ಸ್ವೀಕರಿಸುವ ವೇಳೆ ಬಿಇಓ ಒಬ್ಬರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆದಿದೆ.ತಮ್ಮ ಕಚೇರಿಯ ನಿವೃತ್ತ ನೌಕರನ ವಾರ್ಷಿಕ ಬಡ್ತಿ ಮತ್ತು ಭತ್ಯೆ ನೀಡಲು 4 ಲಕ್ಷ ರೂ ಲಂಚದ ಬೇಡಿಕೆಯಲ್ಲಿ 1 ಲಕ್ಷ ರೂ ಹಣ ಪಡೆಯುವಾಗ ಭದ್ರಾವತಿಯ ಬಿಇಓ ನಾಗೇಂದ್ರ ಎ.ಕೆ ಸೇರಿದಂತೆ ಖಾಸಗಿ ವ್ಯಕ್ತಿ ಮಂಜುನಾಥ್ ಎಂಬವರು ಶಿವಮೊಗ್ಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಲಿಂಗರಾಜು ಅವರು 2011ರಿಂದ 2023ರ ತನಕ ಶಿಕ್ಷಣ ಇಲಾಖೆಯಿಂದ ಬರಬೇಕಾದ ವಾರ್ಷಿಕ ವೇತನ ಬಡ್ತಿಗಳು ಮತ್ತು ಇತರೆ ಭತ್ಯೆಗಳು ಸೇರಿ ಆರ್ಥಿಕ ಸೌಲಭ್ಯಗಳನ್ನು ನೀಡುವಂತೆ ಅನೇಕ ಬಾರಿ ತಮ್ಮ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಬಿಇಓ ನಾಗೇಂದ್ರಪ್ಪ ಎ.ಕೆ ಅವರು ಹಾಗೂ ಮಧ್ಯವರ್ತಿ ಮಂಜುನಾಥ್ ಅವರು ಸೇರಿ ಲಿಂಗರಾಜು…
ವಿಜಯಪುರ : ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನಿರ್ಧರಿಸುತ್ತಾರೆ. 2028 ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಭವಿಷ್ಯ ನುಡಿದಿದ್ದಾರೆ. ವಿಜಯಪುರದಲ್ಲಿ ಜೆಡಿಎಸ್ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಮಾತನಾಡಿದ ಅವರು, ಸದ್ಯ ನಾವು ಎನ್.ಡಿ.ಎ ಮೈತ್ರಿಕೂಟದಲ್ಲಿ ಇದ್ದೇವೆ. ಕೊಟ್ಟು ಪಡೆಯುವ ಶಕ್ತಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಲ್ಲಿ ಇದೆ ನಾನು ಸಾಯುವ ಮುನ್ನ ಯೋಗ್ಯ ಆಡಳಿತ ನೀಡುವ ಪಕ್ಷ ಬರಬೇಕು. ಉತ್ತಮ ಆಡಳಿತ ನೀಡುವ ಪಕ್ಷ ಅಧಿಕಾರಕ್ಕೆ ಬರುವುದನ್ನು ನೋಡುವೆ. ಅದರ ಬಗ್ಗೆ ಪ್ರಧಾನ ನರೇಂದ್ರ ಮೋದಿಯವರು ಮಾತನಾಡುತ್ತಾರೆ.ಈ ಮೂಲಕ ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಅತ್ಯಂತ ಕೆಟ್ಟ ಹಾಗು ಭ್ರಷ್ಟ ಸರ್ಕಾರವಾಗಿದೆ. ನಾನು ಹಿಂದೆಂದೂ ಇಂತಹ ಸರ್ಕಾರ…
ಬೆಂಗಳೂರು : ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವ ನಗರದ ಸಾಂಸ್ಕೃತಿಕ, ಐತಿಹಾಸಿಕ ಪರಂಪರೆಯ ಹೆಗ್ಗುರುತು. ಹೂವಿನ ದಂಡನ್ನ ಹೊತ್ತು ಸಾಗುವ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಇದೀಗ ದಿನಾಂಕ ಫಿಕ್ಸ್ ಆಗಿದೆ.ಮಾರ್ಚ್ 24ರಂದು ಧ್ವಜಾರೋಹಣದ ಮೂಲಕ ಉತ್ಸವಕ್ಕೆ ಚಾಲನೆ ಸಿಗಲಿದೆ. ಏಪ್ರಿಲ್ 1ರ ಮಧ್ಯರಾತ್ರಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಚೈತ್ರ ಪೌರ್ಣಮಿಯ ಮಧ್ಯರಾತ್ರಿ ಆದಿಶಕ್ತಿ ದ್ರೌಪದಿದೇವಿಯ ಕರಗ ಶಕ್ತ್ಯೋತ್ಸವ ನಡೆಯಲಿದ್ದು, ಇದರ ಪ್ರಥಮ ಭಾಗವಾಗಿ ಮಾರ್ಚ್ 30ರಂದು ಹಸಿಕರಗ ನಡೆಯಲಿದೆ. ಬೆಳಿಗ್ಗೆ ನಾಲ್ಕು ಗಂಟೆ ಸುಮಾರಿಗೆ ಹಸಿಕರಗಕ್ಕೆ ಚಾಲನೆ ದೊರೆಯಲಿದೆ. ಇನ್ನು 16ನೇ ಬಾರಿಗೆ ಅರ್ಚಕರು ಎ.ಜ್ಞಾನೇಂದ್ರಸ್ವಾಮಿ ಬೆಂಗಳೂರು ಕರಗ ಹೊರಲಿದ್ದಾರೆ. ಮಾರ್ಚ್ 30ರಂದು ಹಸಿಕರಗ ನಡೆಯಲಿದೆ. ಬಳಿಕ ಏಪ್ರಿಲ್ 1ರ ಮಧ್ಯರಾತ್ರಿ ಬೆಂಗಳೂರು ಕರಗ ಶಕ್ತ್ಯೋತ್ಸವ ನಡೆಯಲಿದೆ. ಇನ್ನು ಒಟ್ಟು 11 ದಿನಗಳ ಕಾಲ ಬೆಂಗಳೂರು ಕರಗ ಶಕ್ತ್ಯೋತ್ಸವ ನಡೆಯಲಿದೆ. ಕಳೆದ ವರ್ಷ ಬೆಂಗಳೂರು ಕರಗ ಹೊತ್ತಿದ್ದ ಅರ್ಚಕರು ಎ.ಜ್ಞಾನೇಂದ್ರ ಸ್ವಾಮಿ ಅವರು 16ನೇ ಬಾರಿಗೆ ಕರಗ ಹೊರಲಿದ್ದಾರೆ. ಬೆಂಗಳೂರು ಕರಗ…
ಹಾವೇರಿ : ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಲಿದ್ದು, ಬಳಿಕ SSLC ಪರೀಕ್ಷೆ ಆರಂಭವಾಗಲಿವೆ. ಇದೀಗ ಹಾವೇರಿಯಲ್ಲಿ ಪರೀಕ್ಷೆಗೆ ಹೆದರಿ ಐವರು SSLC ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯ SSLC ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸುಣಕಲಬಿದರಿ ಬಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ನಾಪತ್ತೆಯಾಗಿರುವ ಐವರು ಮಕ್ಕಳ ಮಾಹಿತಿಯನ್ನು ಅಧಿಕಾರಿಗಳು ಮುಚ್ಚಿಡುತ್ತಿದ್ದಾರೆ. ಮಕ್ಕಳು ಇದ್ದಾರೆ ಸಿಕ್ಕಿದ್ದಾರೆ ಅಂತ ಹೆಡ್ ಮಾಸ್ಟರ್ ನಾಗರಾಜ್ ಹೇಳುತ್ತಿದ್ದರೆ, ಮಕ್ಕಳು ಬೇರೆ ಕಡೆ ಇದ್ದಾರೆ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅಬ್ದುಲ್ ಮಿರಜ್ ಉತ್ತರ ನೀಡುತ್ತಿದ್ದಾರೆ. ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ ನಿನ್ನೆ ರಾತ್ರಿ ವಾಚ್ ಮನ್ ಇರಲಿಲ್ಲ. ಎಸ್ ಎಸ್ ಎಲ್ ಸಿ ಪೂರ್ವಭಾವಿ ಪರೀಕ್ಷೆಗಳು ನಡೆಯುತ್ತಿದ್ದವು. ಪರೀಕ್ಷೆಗೆ ಹೆದರಿ ವಿದ್ಯಾರ್ಥಿಗಳು ಪರಾರಿಯಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ನಾಪತ್ತೆಯಾಗಿರುವ ಮಕ್ಕಳಿಗಾಗಿ ಹೆಡ್ ಮಾಸ್ಟರ್ ಮತ್ತು ಶಾಲಾ ಸಿಬ್ಬಂದಿಗಳು ಹುಡುಕಾಟ ನಡೆಸುತ್ತಿದ್ದಾರೆ.
ಬೆಂಗಳೂರು : ಗುತ್ತಿಗೆದಾರನಿಂದ 5 ಲಕ್ಷ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕ ಚಂದ್ರು ಲಮಾಣಿ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಶಾಸಕ ಚಂದ್ರು ಲಮಾಣಿ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ವಾದ ಮಂಡಿಸಿದರು. ಎಸ್ಪಿಪಿ ವಾದಮಂಡನೆಗೆ ಕಾಲಾವಕಾಶ ಕೋರಿದ್ದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿತು. ತಡೆಗೋಡೆ ನಿರ್ಮಾಣ ಒಂದಕ್ಕೆ ಗುತ್ತಿಗೆದಾರನ ಬಳಿ 11% ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಳಗೆ ಶಾಸಕ ಚಂದ್ರು ಲಮಾಣಿ ರೆಡ್ ಹ್ಯಾಂಡಾಗಿ ಸಿಗಿಬಿದ್ದಿದ್ದಾರೆ.














