Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇದುವರೆಗೂ ನನ್ನ ರಾಹುಲ್ ಗಾಂಧಿ ಕರೆದಿಲ್ಲ, ಸದ್ಯಕ್ಕೆ ದೆಹಲಿಗೆ ಹೋಗಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

06/05/2026 2:11 PM

ಚಿನ್ನದ ವ್ಯಾಪಾರದಲ್ಲಿ ಹೊಸ ಕ್ರಾಂತಿ: `NSE’ಯಿಂದ ‘ಎಲೆಕ್ಟ್ರಾನಿಕ್ ಗೋಲ್ಡ್ ರಶೀದಿ’ ಬಿಡುಗಡೆ

06/05/2026 1:45 PM

ಓಪನ್ ಮಾಡಿದ `ಎಣ್ಣೆ ಬಾಟಲಿ’ ಎಷ್ಟು ದಿನಗಳಲ್ಲಿ ಖಾಲಿ ಮಾಡಬೇಕು? `ಮದ್ಯ’ ಪ್ರಿಯರು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ.!

06/05/2026 1:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಣವೀರ್ ಸಿಂಗ್​ ಗೆ ಮತ್ತೆ ರಿಲೀಫ್ : ಬಲವಂತದ ಕ್ರಮ ಕೈಗೊಳ್ಳದಂತೆ ನೀಡಿದ್ದ ಆದೇಶ ವಿಸ್ತರಿಸಿದ ಹೈಕೋರ್ಟ್
KARNATAKA

BIG NEWS : ರಣವೀರ್ ಸಿಂಗ್​ ಗೆ ಮತ್ತೆ ರಿಲೀಫ್ : ಬಲವಂತದ ಕ್ರಮ ಕೈಗೊಳ್ಳದಂತೆ ನೀಡಿದ್ದ ಆದೇಶ ವಿಸ್ತರಿಸಿದ ಹೈಕೋರ್ಟ್

By kannadanewsnow0503/03/2026 10:48 AM

ಬೆಂಗಳೂರು : ನಟ ರಿಷಬ್ ಶೆಟ್ಟಿ ನಟನೆಯ ಕಾಂತರಾ ಚಾಪ್ಟರ್ 1 ಚಿತ್ರದ ದೈವ ಪಾತ್ರದ ಬಗ್ಗೆ ಅವಮಾನಕಾರಿ ಸನ್ನೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಹೈಕೋರ್ಟ್ ಮತ್ತೆ ರಿಲೀಫ್ ನೀಡಿದೆ. ಈ ಒಂದು ಪ್ರಕರಣವನ್ನು ರದ್ದುಗೊಳಿಸುವಂತೆ ರಣವೀರ್ ಸಿಂಗ್ ಕಳೆದ ವಾರ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಮುಂದಿನ ವಿಚಾರಣೆಯವರೆಗೂ ರಣವೀರ್ ಸಿಂಗ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನೀಡಿದ್ದ ಆದೇಶವನ್ನು ಹೈಕೋರ್ಟ್ ವಿಸ್ತರಿಸಿದೆ.

ತನ್ನ ವಿರುದ್ಧ ದಾಖಲಾಗಿರುವ ಖಾಸಗಿ ದೂರು ಮತ್ತು ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ರಣವೀರ್‌ ಸಿಂಗ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಈ ಹಿಂದೆ ನೀಡಿದ್ದ ಆದೇಶ ವಿಸ್ತರಿಸಿ ಆದೇಶಿಸಿತು.

ಪ್ರಕರಣದ ಹಿನ್ನೆಲೆ

ಗೋವಾದಲ್ಲಿ ಕಳೆದ 2025ರ ನ.28ರಂದು ನಡೆದಿದ್ದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ರಣವೀರ್‌ ಸಿಂಗ್‌, ಕಾಂತಾರ ಚಾಪ್ಟರ್‌-1 ಕುರಿತು ಮಾತನಾಡಿದ್ದರು. ಈ ವೇಳೆ ಚಿತ್ರದ ಕರವಾಳಿ ಕರ್ನಾಟಕ ಭಾಗದ ಪಂಜುರ್ಲಿ/ಗುಳಿಗ ದೈವದ ದೈವಿಕ ಅಭಿವ್ಯಕ್ತಿಗಳನ್ನು ಒರಟು, ಹಾಸ್ಯಮಯ ಮತ್ತು ಅವಹೇಳನಕಾರಿ ರೀತಿಯಲ್ಲಿ ಸನ್ನೆ ಮೂಲಕ ಅನುಕರಿಸಿದ್ದಾರೆ.

ಚಾವುಂಡಿ ದೈವವನ್ನು ಹೆಣ್ಣು ದೆವ್ವ ಎಂದು ಕರೆದು ಅಪಮಾನ ಮಾಡಿದ್ದಾರೆ. ಇದರಿಂದ ಚಾಮುಂಡಿ ದೈವ ಭಕ್ತರ ಮನಸ್ಸಿಗೆ ನೋವಾಗಿದೆ. ಆ ಮೂಲಕ ರಣವೀರ್‌, ಲಕ್ಷಾಂತರ ಭಕ್ತರ ಧಾರ್ಮಿಕ ಮನೋಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಸಮಾಜದಲ್ಲಿ ವಿಭಿನ್ನ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಪ್ರಚೋದನೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರಶಾಂತ್‌ ಮೆಥಲ್‌ ಎಂಬುವರು 1ನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದರು.

ಈ ದೂರಿನ ವಿಚಾರಣೆ ನಡೆಸಿದ್ದ ಸಿಜೆಎಂ ನ್ಯಾಯಾಲಯವು ತನಿಖೆ ನಡೆಸುವಂತೆ 2026ರ ಜ.23ರಂದು ಪೊಲೀಸರಿಗೆ ನಿರ್ದೇಶಿಸಿತ್ತು. ಅದರಂತೆ ಹೈಗ್ರೌಂಡ್ಸ್‌ ಠಾಣಾ ಪೊಲೀಸರು, ಬಿಎನ್‌ಎಸ್‌ ಸೆಕ್ಷನ್‌ 196, 299 ಮತ್ತು 302 ಅಡಿಯಲ್ಲಿ ವಿಭಿನ್ನ ಗುಂಪುಗಳ ನಡುವೆ ದ್ವೇಷ ಭಾವನೆಗೆ ಪ್ರಚೋದಿಸಿದ, ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿದ ಮತ್ತು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸಿದ್ದರು. ವಿಚಾರಣೆಗೆ ಹಾಜರಾಗಲು ರಣವೀರ್‌ಗೆ ನೋಟಿಸ್‌ ನೀಡಿದ್ದರು. ಇದರಿಂದ ಪ್ರಕರಣ ರದ್ದತಿಗೆ ಕೋರಿ ರಣವೀರ್‌ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

Share. Facebook Twitter LinkedIn WhatsApp Email

Related Posts

ಇದುವರೆಗೂ ನನ್ನ ರಾಹುಲ್ ಗಾಂಧಿ ಕರೆದಿಲ್ಲ, ಸದ್ಯಕ್ಕೆ ದೆಹಲಿಗೆ ಹೋಗಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

06/05/2026 2:11 PM1 Min Read

ಓಪನ್ ಮಾಡಿದ `ಎಣ್ಣೆ ಬಾಟಲಿ’ ಎಷ್ಟು ದಿನಗಳಲ್ಲಿ ಖಾಲಿ ಮಾಡಬೇಕು? `ಮದ್ಯ’ ಪ್ರಿಯರು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ.!

06/05/2026 1:13 PM2 Mins Read

GOOD NEWS : ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್ : ಶೀಘ್ರವೇ ‘BMTC’ ಬಸ್ ನಲ್ಲಿ ಪ್ರಿಪೇಯ್ಡ್ ಕಾರ್ಡ್ ಸೌಲಭ್ಯ!

06/05/2026 1:01 PM1 Min Read
Recent News

ಇದುವರೆಗೂ ನನ್ನ ರಾಹುಲ್ ಗಾಂಧಿ ಕರೆದಿಲ್ಲ, ಸದ್ಯಕ್ಕೆ ದೆಹಲಿಗೆ ಹೋಗಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

06/05/2026 2:11 PM

ಚಿನ್ನದ ವ್ಯಾಪಾರದಲ್ಲಿ ಹೊಸ ಕ್ರಾಂತಿ: `NSE’ಯಿಂದ ‘ಎಲೆಕ್ಟ್ರಾನಿಕ್ ಗೋಲ್ಡ್ ರಶೀದಿ’ ಬಿಡುಗಡೆ

06/05/2026 1:45 PM

ಓಪನ್ ಮಾಡಿದ `ಎಣ್ಣೆ ಬಾಟಲಿ’ ಎಷ್ಟು ದಿನಗಳಲ್ಲಿ ಖಾಲಿ ಮಾಡಬೇಕು? `ಮದ್ಯ’ ಪ್ರಿಯರು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ.!

06/05/2026 1:13 PM

GOOD NEWS : ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್ : ಶೀಘ್ರವೇ ‘BMTC’ ಬಸ್ ನಲ್ಲಿ ಪ್ರಿಪೇಯ್ಡ್ ಕಾರ್ಡ್ ಸೌಲಭ್ಯ!

06/05/2026 1:01 PM
State News
KARNATAKA

ಇದುವರೆಗೂ ನನ್ನ ರಾಹುಲ್ ಗಾಂಧಿ ಕರೆದಿಲ್ಲ, ಸದ್ಯಕ್ಕೆ ದೆಹಲಿಗೆ ಹೋಗಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

By kannadanewsnow0506/05/2026 2:11 PM KARNATAKA 1 Min Read

ಮೈಸೂರು : ರಾಜ್ಯದಲಿ ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನಾರಚನೆ ಕುರಿತಂತೆ ಹೈಕಮಾಂಡ್ ಈಗಾಗಲೇ ಮಹೂರ್ತ ಫಿಕ್ಸ್ ಮಾಡಿದೆ ಎಂದು…

ಓಪನ್ ಮಾಡಿದ `ಎಣ್ಣೆ ಬಾಟಲಿ’ ಎಷ್ಟು ದಿನಗಳಲ್ಲಿ ಖಾಲಿ ಮಾಡಬೇಕು? `ಮದ್ಯ’ ಪ್ರಿಯರು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ.!

06/05/2026 1:13 PM

GOOD NEWS : ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್ : ಶೀಘ್ರವೇ ‘BMTC’ ಬಸ್ ನಲ್ಲಿ ಪ್ರಿಪೇಯ್ಡ್ ಕಾರ್ಡ್ ಸೌಲಭ್ಯ!

06/05/2026 1:01 PM

ದೇವತೆಯಂತ ಇರೋ ನಿಮ್ಮನ್ನ ಬಿಟ್ಟು ಪರಸ್ತ್ರಿ ಬೆನ್ನು ಹತ್ತಿದಕ್ಕೆ ದರ್ಶನ್ ಗೆ ಈ ಸ್ಥಿತಿ : ಇನ್ಸ್ಟಾಗ್ರಾಮ್ ನಲ್ಲಿ ಕಮೆಂಟ್ ಸಖತ್ ವೈರಲ್!

06/05/2026 12:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.