ಬಾಗಲಕೋಟೆ / ದಾವಣಗೆರೆ : ಕರ್ನಾಟಕ ಉಪಚುನಾವಣೆ ಹಿನ್ನೆಲೆ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈಗಾಗಲೇ ಮತ ಎಣಿಕೆ ಆರಂಭವಾಗಿದ್ದು ಈಗಾಗಲೇ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮತ ಎಣಿಕೆ ನಡೆಯುತ್ತಿದ್ದು ಕೆಲವು ಮತ ಎಣಿಕೆ ಸುತ್ತಿನಲ್ಲಿ ಹಾವು ಏಣಿ ಆಟ ನಡೆಯುತ್ತಿದೆ. ಇದೀಗ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಎರಡು ಕಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ 7ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಕರಿಯಪ್ಪಗೆ ಹಿನ್ನಡೆಯಾಗಿದ್ದು, ಸಮರ್ಥ್ 4617 ಮತಗಳ ಮುನ್ನಡೆ ಪಡೆದಿದ್ದಾರೆ. ಇನ್ನು ಬಾಗಲಕೋಟೆಯಲ್ಲಿ ಕೂಡ ಉಪಚುನಾವಣೆ ಮತ ಎಣಿಕೆ ನಡೆಯುತ್ತಿದ್ದು 10ನೇ ಸುತ್ತಿನಲ್ಲೂ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮಟ್ಟಿಗೆ 11384 ಮತಗಳ ಮುನ್ನಡೆ ಇದ್ದು, ಇನ್ನೂ ಬಿಜೆಪಿ ಅಭ್ಯರ್ಥಿ ವೀರನ ಚರಂತಿಮಠ ಅವರಿಗೆ ಹಿನ್ನಡೆಯಾಗಿದೆ. ಉಮೇಶ್ ಮೇಟಿಗೆ ಇದುವರೆಗೂ 44,620 ಮತಗಳು ಬಂದಿದ್ದು, ಇನ್ನೂ ವೀರಣ್ಣ ಚರಂತಿಮಠ ಅವರಿಗೆ 33736 ಮತಗಳು ಬಿದ್ದಿವೆ.








