Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಹಾವೇರಿ : ಹಾವೇರಿ ಜಿಲ್ಲಾಸ್ಪತ್ರೆಯ ವೈದ್ಯರು ಮಹಾ ಎಡವಟ್ಟು ಮಾಡಿದ್ದು, ಹರ್ನಿಯ ಆಪರೇಷನ್ ವೇಳೆ ಬಾಲಕನೊಬ್ಬ ಕೋಮಾಗೆ ಹೋಗಿದ್ದಾನೆ. ಹಾಗಾಗಿ ಇದೀಗ ಬಾಲಕನ ಪೋಷಕರು ಆಸ್ಪತ್ರೆ ಹಾಗು ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದು, ಪ್ರತಿಭಟನೆ ಮಾಡುತ್ತಿದ್ದಾರೆ. ಹರ್ನಿಯ ಆಪರೇಷನ್ ಮಾಡಿದ ವೇಳೆ 7 ವರ್ಷದ ಚಾಂದ್ ಪೀರ್ ಸಾಬ್ ದೊಡಮನಿ ಎಂದು ತಿಳಿದುಬಂದಿದೆ. ವೈದ್ಯರು, ಸಿಬ್ಬಂದಿ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೋಮಾಗೆ ಹೋದ ಬಾಲಕನನ್ನ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ. ಬಾಲಕನ ಚಿಕಿತ್ಸೆಗೆ ಲಕ್ಷಾಂತರ ರೂ.ಖರ್ಚು ಮಾಡಿರುವ ಕುಟುಂಬ ಸದಸ್ಯರು ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಚಾಂದ್ ಪೀರ್ ಹರ್ನಿಯ ಆಪರೇಷನ್ ಮಾಡಿದ ವೈದ್ಯರ ವಿರುದ್ಧ ದೂರು ದಾಖಲಾಗಬೇಕು ತನಿಖೆ ನಡೆಸಿ ಬಾಲಕನ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸೋದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿರುವ ಬೆನ್ನಲ್ಲೆ, ಶಾಸಕ ನಾರಾಯಣಸ್ವಾಮಿ ಸ್ಪೋಟಕ ಸುಳಿವು ನೀಡಿದ್ದು, ಮೇ 15ರ ಒಳಗೆ ಸಂಪುಟ ಪುನರ್ ರಚನೆಯ ಸುದ್ದಿ ಸಿಗಲಿದೆ ಅಂತ ಕಾಂಗ್ರೆಸ್ ಶಾಸಕ ಬಂಗಾರಪೇಟೆ ನಾರಾಯಣಸ್ವಾಮಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೇ ಎರಡನೇ ವಾರದಲ್ಲಿ ಪುನರ್ ರಚನೆ ಆಗೋ ವಿಶ್ವಾಸ ಇದೆ. ಸರ್ಕಾರಕ್ಕೆ ಮೂರು ವರ್ಷ ಆಗಿದೆ. ಈಗಲೇ ಪುನರ್ ರಚನೆ ಆಗಬೇಕು. ಈಗ ಮಂತ್ರಿ ಮಾಡಿದ್ರೆ ಇನ್ನೊಂದು ವರ್ಷ ಕೆಲಸ ಮಾಡೋಕೆ ಸಮಯ ಸಿಗಲಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ವಿಶೇಷ ಮುತುವರ್ಜಿ ವಹಿಸಬೇಕು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕಾದ್ರೆ ಸಂಪುಟ ಪುನರ್ ರಚನೆ ಅಗಲೇಬೇಕು ಅಂತ ತಿಳಿಸಿದ್ದಾರೆ. ಸಂಪುಟ ಪುನರ್ ರಚನೆ ಆಗಲೇಬೇಕು. ದೆಹಲಿಗೆ ಹೋಗಿ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ್ವಿ. ಅವರು ನಮಗೆ ಭರವಸೆ ನೀಡಿದ್ದಾರೆ. ಕೆಲಸ ಮಾಡದ ಮಂತ್ರಿಗಳನ್ನು ಕೈ ಬಿಟ್ಟು ಹೊಸಬರನ್ನು ಸೇರಿಸಬೇಕು. 2028ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದ್ರೆ ಸಂಪುಟ ಪುನರ್ ರಚನೆ…
ಮುಂಬೈ : ಸಾಮಾನ್ಯವಾಗಿ ಊಟ ಆದ್ಮೇಲೆ ಜೀರ್ಣ ಕ್ರೀಯೇ ಅಗಲಿ ಎಂದು ಬಾಳೆ ಹಣ್ಣು ಸೇವಿಸುತ್ತಾರೆ. ಆದರೆ ಊಟ ಆದ್ಮೇಲೆ ಕಲ್ಲಂಗಡಿ ಹಣ್ಣು ತಿಂದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಮುಂಬೈಯಲ್ಲಿ ಬಿರಿಯಾನಿ ಸೇವಿಸಿದ ಬಳಿಕ ಕಲ್ಲಂಗಡಿ ತಿಂದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿಗೆ ನಿಖರ ಕಾರಣ ಏನು ಎನ್ನುವುದನ್ನು ಪತ್ತೆ ಹಚ್ಚಲು ಮರಣೋತ್ತರ ಪರೀಕ್ಷೆಗೆ ಮೃತದೇಹಗಳನ್ನು ಕಳುಹಿಸಲಾಗಿದೆ. ಈ ಪ್ರಕರಣದ ಬೆನ್ನಲ್ಲೇ ಆರೋಗ್ಯ ತಜ್ಞರು ಊಟ ಮಾಡಿದ ನಂತರ ಕಲ್ಲಂಗಡಿ ಸೇವಿಸಬಾರದು ಎಂದು ಸಲಹೆ ನೀಡುತ್ತಿದ್ದಾರೆ. ಊಟ ಮಾಡಿದ ತಕ್ಷಣ ಕಲ್ಲಂಗಡಿ ಹಣ್ಣನ್ನು ತಿನ್ನುವುದು ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು. ಆಯುರ್ವೇದದ ಪ್ರಕಾರ, ಕೆಲವು ಆಹಾರಗಳನ್ನು ಕಲ್ಲಂಗಡಿಯೊಂದಿಗೆ ಸೇರಿಸುವುದು ದೇಹದಲ್ಲಿ ವಿಷಕಾರಿ ಅಂಶಗಳನ್ನು ಉತ್ಪತ್ತಿ ಮಾಡುವ ಸಾಧ್ಯತೆ ಇರುತ್ತದೆ. ಕಲ್ಲಂಗಡಿ ಹಣ್ಣು ಹೊಟ್ಟೆಯಲ್ಲಿ ತುಂಬಾ ಬೇಗ (ಸುಮಾರು 20-30 ನಿಮಿಷದಲ್ಲಿ) ಜೀರ್ಣವಾಗುತ್ತದೆ. ಆದರೆ ನಾವು ತಿಂದ ಊಟ…
ಬೆಂಗಳೂರು : ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರ ನಡುವೆ ತೆರೆ ಮರೆಯಲ್ಲಿ ಭಾರಿ ಸರ್ಕಸ್ ನಡೆದಿದ್ದು, ಇದರ ಮಧ್ಯ ಸಿಎಂ ಸಿದ್ದರಾಮಯ್ಯ ಅಧಿಕಾರ ಮುಂದುವರಿಸಲು ಮತ್ತು ಪದತ್ಯಾಗ ಎರಡಕ್ಕೂ ಸಿದ್ಧರಾಗಿದ್ದಾರೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು. ಬೆಂಗಳೂರಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಗೊಂದಲ ಬಗೆಹರಿಸಬೇಕು. ಗೊಂದಲ ಬಗೆಹರಿಸಿದಷ್ಟು ರಾಜ್ಯಕ್ಕೆ ಒಳ್ಳೆಯದು. ಗೊಂದಲ ಮುಂದುವರಿಯಲು ಹೈಕಮಾಂಡ್ ಅವಕಾಶ ನೀಡಬಾರದು. ಹೈಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ಸಿದ್ದರಾಮಯ್ಯ ಬದ್ಧರಾಗಿದ್ದಾರೆ. ಇದು ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರ ಅಲ್ಲ. ಸಿದ್ದರಾಮಯ್ಯ ಅವರು ಅಧಿಕಾರ ಮುಂದುವರಿಕೆಗೂ ಸಿದ್ದರಾಗಿದ್ದಾರೆ, ಪದತ್ಯಾಗಕ್ಕೂ ಸಿದ್ದರಾಗಿದ್ದಾರೆ ಎಂದರು. ಅಧಿಕಾರ ಶಾಶ್ವತವಲ್ಲ. ಅಧಿಕಾರ ಕಳೆದುಕೊಂಡವರು ಗಳಿಸ್ತಾರೆ. ರಾಹುಲ್ ನಿರ್ದೇಶನದಂತೆ ಹೋಗಬೇಕು ಎಂಬುದು ಸಿಎಂ ಮನಸ್ಥಿತಿ. ಸಿದ್ದರಾಮಯ್ಯ ಮುಂದುವರಿಯಬೇಕು ಎಂಬ ಬಗ್ಗೆ ನಾವೆಲ್ಲ ನಮ್ಮ ಅಭಿಪ್ರಾಯವನ್ನು ಹೈಕಮಾಂಡ್ಗೆ ಹೇಳಿದ್ದೇವೆ. ದಲಿತ ಸಿಎಂ ಆಗಬೇಕು ಎಂಬುದಕ್ಕೆ ನಾನು ಈಗಲೂ ಬದ್ಧ. ಅಹಿಂದ ವರ್ಗ ನಿಜವಾಗಿ ಸಮಾಧಾನವಾಗಿಲ್ಲ. 2013-18 ರ…
ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ಮನುಷ್ಯಕುಲವೇ ತಲೆತಗ್ಗಿಸುವಂತಹ ಭೀಕರ ಘಟನೆಯೊಂದು ಜರುಗಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಕೌಟುಂಬಿಕ ಕಲಹವೊಂದು ಇಡೀ ಸಂಸಾರವನ್ನೇ ಬೀದಿಗೆ ತಂದಿದ್ದು, ಪತ್ನಿಯನ್ನೇ ಕೊಚ್ಚಿ ಕೊಂದ ಪತಿ ತಾನೂ ಮಗುವಿನೊಂದಿಗೆ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾನೆ. ಘಟನೆಯ ವಿವರ: ಅಫಜಲಪುರ ತಾಲೂಕಿನ ಮದರಾ (ಕೆ) ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. 23 ವರ್ಷದ ಅಂಜಲಿ ಕೊಲೆಯಾದ ದುರ್ದೈವಿ ಪತ್ನಿ. ದಂಪತಿಗಳ ನಡುವೆ ನಡೆದ ತೀವ್ರ ಜಗಳವು ವಿಕೋಪಕ್ಕೆ ತಿರುಗಿದ್ದು, ಆವೇಶಕ್ಕೊಳಗಾದ ಪತಿ ಕೊಡಲಿಯಿಂದ ಪತ್ನಿಯ ಮೇಲೆ ಮನಬಂದಂತೆ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ. ಮಗುವಿನ ಅದೃಷ್ಟದ ಬದುಕು: ಪತ್ನಿಯನ್ನು ಹತ್ಯೆಗೈದ ನಂತರ ಆರೋಪಿ ಪತಿಯು, ತನ್ನ ಪುಟ್ಟ ಮಗುವನ್ನು ಎತ್ತಿಕೊಂಡು ಗ್ರಾಮದ ಸಮೀಪದ ಲಕ್ಷ್ಮೀಪುರ ಎಂಬಲ್ಲಿರುವ ಬಾವಿಗೆ ಹಾರಿದ್ದಾನೆ. ಈ ವೇಳೆ ಪತಿಯು ನೀರಿನಲ್ಲಿ ಮುಳುಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಸಮಯಪ್ರಜ್ಞೆ ಮೆರೆದು ಮಗುವನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಪೊಲೀಸ್ ಭೇಟಿ: ಘಟನಾ ಸ್ಥಳಕ್ಕೆ…
ಧಾರವಾಡ : ಗಾಂಜಾ ಸೇವಿಸದಿದ್ದರೂ ಕೂಡ ಕೇಸ್ ಹಾಕುವುದಾಗಿ ಪೊಲೀಸರು ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದ್ದು, ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರ ವಿರುದ್ಧ ಈ ಒಂದು ಗಂಭೀರ ಆರೋಪ ಕೇಳಿಬಂದಿದೆ. ಹಾಗಾಗಿ ಮರ್ಯಾದೆಗೆ ಹೆದ್ದಾರಿ ವಿದ್ಯಾರ್ಥಿ ಒಬ್ಬ ಆತ್ಮಹತ್ಯೆ ಶರಣಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಆದಿತ್ಯ ಮ್ಯಾಗೇರಿ (20) ಎಂದು ತಿಳಿದು ಬಂದಿದೆ. ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಹಲವಾರು ಯುವಕರನ್ನು ಠಾಣೆಗೆ ಕರೆದೊಯ್ಯುತ್ತಾರೆ. ಅದರಲ್ಲಿ ಆದಿತ್ಯ ಎನ್ನುವ ವಿದ್ಯಾರ್ಥಿ ಕೊಡ ಒಬ್ಬ. ಆತ ಗಾಂಜಾ ಸೇವನೆ ಮಾಡಿರಲಿಲ್ಲ ಆದರೂ ಕೂಡ ಅದರ ಮೇಲೆ ಪೊಲೀಸರು ಕೇಸ್ ಹಾಕಿರುತ್ತಾರೆ. ಅದಾದ ಮೇಲೆ ರಿಪೋರ್ಟ್ ನಲ್ಲಿ ನೆಗೆಟಿವ್ ಎಂದು ಬರುತ್ತದೆ. ಬಳಿಕ ಆತನನ್ನು ಬಿಟ್ಟು ಕಳುಹಿಸುತ್ತಾರೆ. ಆದರೆ ಆತ ಮನೆಗೆ ಬಂದು ನೇಣು ಹಾಕಿಕೊಳ್ಳುತ್ತಾನೆ. ಎಲ್ಲಿ ಮತ್ತೆ ಪೊಲೀಸರು ನನ್ನನ್ನು ಪೊಲೀಸ್ ಠಾಣೆಗೆ ಕರೆಯುತ್ತಾರೆ ಎಂದು ಹೆದರಿ ನೇಣು ಬಿಗಿದುಕೊಂಡು ಆದಿತ್ಯ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಆದಿತ್ಯ…
ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಜಟಾಪಟಿ ತೀವ್ರವಾಗಿ ನಡೆಯುತ್ತಿದ್ದು, ಇದರ ನಡುವೆ ಕೆಪಿಸಿಸಿ ಪಟ್ಟದ ಅಧ್ಯಕ್ಷ ಸ್ಥಾನಕ್ಕೂ ಅಹಿಂದ ನಾಯಕರ ಪೈಪೋಟಿ ನಡೆಯುತ್ತಿದೆ. ಇದೀಗ ಇಕ್ಬಾಲ್ ಹುಸೇನ್ ಅವರು ಡಿಕೆ ಶಿವಕುಮಾರ್ ಸಿಎಂ ಆಗುವ ಎಲ್ಲ ಲಕ್ಷಣ ಕಾಣುತ್ತಿದೆ ಎಂದು ಮತ್ತೆ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಇನ್ನು ಈ ವಿಚಾರವಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಮಾತನಾಡಿದ ಇಕ್ಬಾಲ್ ಹುಸೇನ್ ಒಳ್ಳೆಯ ರೀತಿಯಲ್ಲಿ ನಾವು ಜನಗಳಿಗೆ ಕೆಲಸ ಮಾಡಿಕೊಡಬೇಕಾಗುತ್ತದೆ. ಬದಲಾವಣೆ ಬೇಕು ಅಂತ ಜನ ಬಯಸುತ್ತಿದ್ದು ಅದರಲ್ಲಿ ನಾನು ಕೂಡ ಒಬ್ಬ ಹಾಗಾಗಿ ಮೇ ತಿಂಗಳಲ್ಲಿ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಸಿಗುತ್ತೆ ಎನ್ನುವ ಭರವಸೆ ಇದೆ ಎಂದು ಇಕ್ಬಾಲ್ ಹುಸೇನ್ ಹೇಳಿಕೆ ನೀಡಿದರು. ಕಾಲ ಬಹಳ ಸನ್ನೀಹಿತವಾಗಿದೆ ಅವರಿಗೆ ಅಧಿಕಾರ ಸಿಗುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ನಾನು ಮತ್ತು ಎಲ್ಲಾ ಸಾಕಷ್ಟು ಶಾಸಕರು ಕೂಡ ಇದನ್ನೇ ಬಯಸುತ್ತಿದ್ದೇವೆ. ಜನ ಕಾರ್ಯಕರ್ತರು ಮುಖಂಡರು ಕೂಡ ಡಿಸಿಎಂ ಡಿಕೆ ಶಿವಕುಮಾರ್…
ಕೋಲಾರ : ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಕಲ್ಲಿನಿಂದ ಜಜ್ಜಿ ಯುವಕನನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೋಲಾರದ ಎಪಿಎಂಸಿ ಮಾರುಕಟ್ಟೆಯ ಲಕ್ಷ್ಮಿ ಬಾರ್ ಬಳಿ ಈ ಘಟನೆ ನಡೆದಿದೆ.ಬಿಡಿ ಕಾಲೋನಿಯ ನಿವಾಸಿ ಸಲ್ಮಾನ್ ಪಾಷಾ (25)ಎನ್ನುವ ಯುವಕನನ್ನು ಕೊಲೆ ಮಾಡಲಾಗಿದೆ. ಆಟೋ ಚಾಲಕ ಅಬ್ದುಲ್ ರಶೀದ್ ಎಂಬಾತನಿಂದ ಸಲ್ಮಾನ್ ಪಾಷಾ ಕೊಲೆ ಆಗಿದೆ. ಕೊಲೆಯಾದ ಸಲ್ಮಾನ್ ಪಾಷಾ ಸೋಫಾ ರಿಪೇರಿ ಕೆಲಸ ಮಾಡಿಕೊಂಡಿದ್ದ. ಅಬ್ದುಲ್ ರಶೀದ್ ಕೊಲೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಕೊಲೆ ಮಾಡಿದ ಆಟೋ ಚಾಲಕ ಅಬ್ದುಲ್ ರಶೀದ್ದನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು : ಧಾರವಾಡದ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ಮಹತ್ವದ ತೀರ್ಪು ನೀಡಿತು. ಇದೀಗ ಈ ಒಂದು ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಶಾಸಕ ವಿನಯ್ ಕುಲಕರ್ಣಿ ಕಳೆದ ಎರಡು ದಿನಗಳ ಹಿಂದೆ ಹೈಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇಂದು ಹೈಕೋರ್ಟ್ ವಿಭಾಗಿಯ ಪೀಠದಲ್ಲಿ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ ಮೇಲ್ಮನವಿಯ ಅರ್ಜಿ ವಿಚಾರಣೆ ನಡೆಯಿತು. ಕುಲಕರ್ಣಿ ಪರವಾಗಿ ಸುಪ್ರೀಂ ಕೋರ್ಟ್ ವಕೀಲ ಎಸ್ ನಾಗಮುತ್ತು ಅವರು ವಾದ ಮಂಡಿಸಿದರು. ಕೋರ್ಟ್ನಲ್ಲಿ ಸಾಕ್ಷಿ ವಿಚಾರಣೆ ನಡೆಯುವಾಗ ಜಾಮೀನಿನ ಮೇಲೆ ಇದ್ದರು 7 ಸಾಕ್ಷಿಗಳಿದ್ದಾರೆ, ಎಲ್ಲರೂ ಪ್ರತಿಕೂಲ ಸಾಕ್ಷಿಗಳಾಗಿದ್ದಾರೆ ಎಂದು ವಿನಯ್ ಕುಲಕರ್ಣಿ ಪರ ಹಿರಿಯ ವಕೀಲ ಸಿವಿ ನಾಗೇಶ್ ಅವರು ವಾದ ಮಾಡಿಸಿದರು. ಇದೆ ಮೊದಲ ಬಾರಿಗೆ ವಿಚಾರಣೆಗೆ ಬರುತ್ತಿದೆಯಲ್ಲವೇ ಎಂದು ಹೈಕೋರ್ಟ್ ಪ್ರಶ್ನೆ ಮಾಡಿತು. ಪ್ರತಿವಾದಿ ಸಿಬಿಐ…
ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಅಷ್ಟೇ, ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಫ್ಲೆಕ್ಸ್ ಬ್ಯಾನರ್ ಗಳಿದ್ದ ಅಂಗಡಿಗೆ ಬೆಂಕಿ ತಗುಲಿ ಭಾರಿ ಪ್ರಮಾಣದ ಅಗ್ನಿ ಅವಘಡ ಸಂಭವಿಸಿತ್ತು.ಇದೀಗ ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಗಡ ಸಂಭವಿಸಿದ್ದು, ಕಾರ್ಮಿಕರು ವಾಸವಿದ್ದ 12 ಶೆಡ್ ಗಳಿಗೆ ಬೆಂಕಿ ಬಿದ್ದಿದೆ. ತಡರಾತ್ರಿ 2:00 ಸುಮಾರಿಗೆ ಬೆಂಗಳೂರಿನ ಸೋಮಸುಂದರ ಪಾಳ್ಯದಲ್ಲಿ ಈ ಒಂದು ಘಟನೆ ನಡೆದಿದೆ. ಚುನಾವಣೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳಕ್ಕೆ ಕಾರ್ಮಿಕರು ಹೋಗಿದ್ದಾರೆ. ಹಾಗಾಗಿ ಆ ಒಂದು ಶೆಡ್ ಗಳಲ್ಲಿ ಯಾರು ಇಲ್ಲದ ಕಾರಣ ಬಹುದೊಡ್ಡ ಅನಾಹುತ ತಪ್ಪಿದೆ. ಘಟನಾ ಸ್ಥಳಕ್ಕೆ ಬಂಡೆಪಾಳ್ಯ ಠಾಣೆ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿಗಳು ಬಂದು ಬೆಂಕಿ ನಂದಿಸಿದ್ದಾರೆ.














