ಧಾರವಾಡ : ಗಾಂಜಾ ಸೇವಿಸದಿದ್ದರೂ ಕೂಡ ಕೇಸ್ ಹಾಕುವುದಾಗಿ ಪೊಲೀಸರು ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದ್ದು, ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರ ವಿರುದ್ಧ ಈ ಒಂದು ಗಂಭೀರ ಆರೋಪ ಕೇಳಿಬಂದಿದೆ. ಹಾಗಾಗಿ ಮರ್ಯಾದೆಗೆ ಹೆದ್ದಾರಿ ವಿದ್ಯಾರ್ಥಿ ಒಬ್ಬ ಆತ್ಮಹತ್ಯೆ ಶರಣಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಆದಿತ್ಯ ಮ್ಯಾಗೇರಿ (20) ಎಂದು ತಿಳಿದು ಬಂದಿದೆ.
ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಹಲವಾರು ಯುವಕರನ್ನು ಠಾಣೆಗೆ ಕರೆದೊಯ್ಯುತ್ತಾರೆ. ಅದರಲ್ಲಿ ಆದಿತ್ಯ ಎನ್ನುವ ವಿದ್ಯಾರ್ಥಿ ಕೊಡ ಒಬ್ಬ. ಆತ ಗಾಂಜಾ ಸೇವನೆ ಮಾಡಿರಲಿಲ್ಲ ಆದರೂ ಕೂಡ ಅದರ ಮೇಲೆ ಪೊಲೀಸರು ಕೇಸ್ ಹಾಕಿರುತ್ತಾರೆ. ಅದಾದ ಮೇಲೆ ರಿಪೋರ್ಟ್ ನಲ್ಲಿ ನೆಗೆಟಿವ್ ಎಂದು ಬರುತ್ತದೆ. ಬಳಿಕ ಆತನನ್ನು ಬಿಟ್ಟು ಕಳುಹಿಸುತ್ತಾರೆ. ಆದರೆ ಆತ ಮನೆಗೆ ಬಂದು ನೇಣು ಹಾಕಿಕೊಳ್ಳುತ್ತಾನೆ. ಎಲ್ಲಿ ಮತ್ತೆ ಪೊಲೀಸರು ನನ್ನನ್ನು ಪೊಲೀಸ್ ಠಾಣೆಗೆ ಕರೆಯುತ್ತಾರೆ ಎಂದು ಹೆದರಿ ನೇಣು ಬಿಗಿದುಕೊಂಡು ಆದಿತ್ಯ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ಆದಿತ್ಯ ಮ್ಯಾಗೇರಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರಿನ ನಿವಾಸಿ ಎಂದು ತಿಳಿದುಬಂದಿದೆ. ಈತ ಧಾರವಾಡದಲ್ಲಿ ಬಿ ಎಸ್ ಸಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಧಾರವಾಡದಲ್ಲಿ ಗಾಂಜಾ ಡ್ರೈವ್ ನಡೆಸಿದ ಪೊಲೀಸರು ಈ ವೇಳೆ 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದರು. ಅದರಲ್ಲಿ ಆದಿತ್ಯ ಕೂಡ ಒಬ್ಬ ಇದರಿಂದ ಹೆದರಿಕೊಂಡು ಎಲ್ಲಿ ಪೊಲೀಸರು ಮತ್ತೆ ನನ್ನನ್ನು ಕರೆಯುತ್ತಾರೆ ಎಂದು ಆದಿತ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.








