ಕೋಲಾರ : ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಕಲ್ಲಿನಿಂದ ಜಜ್ಜಿ ಯುವಕನನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೋಲಾರದ ಎಪಿಎಂಸಿ ಮಾರುಕಟ್ಟೆಯ ಲಕ್ಷ್ಮಿ ಬಾರ್ ಬಳಿ ಈ ಘಟನೆ ನಡೆದಿದೆ.ಬಿಡಿ ಕಾಲೋನಿಯ ನಿವಾಸಿ ಸಲ್ಮಾನ್ ಪಾಷಾ (25)ಎನ್ನುವ ಯುವಕನನ್ನು ಕೊಲೆ ಮಾಡಲಾಗಿದೆ.
ಆಟೋ ಚಾಲಕ ಅಬ್ದುಲ್ ರಶೀದ್ ಎಂಬಾತನಿಂದ ಸಲ್ಮಾನ್ ಪಾಷಾ ಕೊಲೆ ಆಗಿದೆ. ಕೊಲೆಯಾದ ಸಲ್ಮಾನ್ ಪಾಷಾ ಸೋಫಾ ರಿಪೇರಿ ಕೆಲಸ ಮಾಡಿಕೊಂಡಿದ್ದ. ಅಬ್ದುಲ್ ರಶೀದ್ ಕೊಲೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಕೊಲೆ ಮಾಡಿದ ಆಟೋ ಚಾಲಕ ಅಬ್ದುಲ್ ರಶೀದ್ದನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.








