Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ನಟ ದರ್ಶನ್ ಬಳಿಕ ಜೈಲಲ್ಲಿ ಪವಿತ್ರಾಗೌಡಗೆ ರಾಜಾತಿಥ್ಯ ಆರೋಪ : ಸಂಧ್ಯಾ ನಾಗರಾಜ್ ವಿರುದ್ಧ ‘FIR’ ದಾಖಲು!

ವಿಚ್ಛೇದನವಾದ ಪತಿ ಮೃತಪಟ್ಟರೂ ಮಾಜಿ ಪತ್ನಿಗೆ ಜೀವನಾಂಶ ಸಿಗುತ್ತಾ? ಹೈಕೋರ್ಟ್ ಮಹತ್ವದ ತೀರ್ಪು!

ಕಾರ್ಮಿಕರ ಹಣ ದುರುಪಯೋಗ ನಿಲ್ಲಲಿ, ನೈಜ ಫಲಾನುಭವಿಗಳಿಗೆ ಸೌಲಭ್ಯ ಸಿಗಲಿ: ಸಾಗರದಲ್ಲಿ ಕೆ.ಸಂಜಯ್ ಕುಮಾರ್ ಆಗ್ರಹ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಹಿಳೆಯರಿಗೆ ಕೇಂದ್ರ ಸರ್ಕಾರದ ಬಂಫರ್ ಗಿಫ್ಟ್: ಪ್ರತಿ ತಿಂಗಳು ಖಾತೆಗೆ ಸೇರಲಿದೆ ₹7,000 ಸ್ಟೈಫಂಡ್! ಅರ್ಜಿ ಸಲ್ಲಿಸುವುದು ಹೇಗೆ?
KARNATAKA

ಮಹಿಳೆಯರಿಗೆ ಕೇಂದ್ರ ಸರ್ಕಾರದ ಬಂಫರ್ ಗಿಫ್ಟ್: ಪ್ರತಿ ತಿಂಗಳು ಖಾತೆಗೆ ಸೇರಲಿದೆ ₹7,000 ಸ್ಟೈಫಂಡ್! ಅರ್ಜಿ ಸಲ್ಲಿಸುವುದು ಹೇಗೆ?

By kannadanewsnow57

ನವದೆಹಲಿ: ದೇಶದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಮತ್ತು ಭಾರತೀಯ ಜೀವ ವಿಮಾ ನಿಗಮ (LIC) ಜಂಟಿಯಾಗಿ ಅತ್ಯಾಕರ್ಷಕ ಯೋಜನೆಯೊಂದನ್ನು ಪರಿಚಯಿಸಿವೆ. ಅದೇ ‘ಬೀಮಾ ಸಖಿ ಯೋಜನೆ’ (Bima Sakhi Yojana). ಈ ಯೋಜನೆಯಡಿ ಮಹಿಳೆಯರು ಮನೆಯಲ್ಲೇ ಕುಳಿತು ಪ್ರತಿ ತಿಂಗಳು 7,000 ರೂಪಾಯಿಗಳವರೆಗೆ ಸ್ಥಿರ ಆದಾಯ ಗಳಿಸುವ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ.

ಮಹಿಳೆಯರನ್ನು ಎಲ್‌ಐಸಿ ಏಜೆಂಟರನ್ನಾಗಿ ಮಾಡುವ ಮೂಲಕ ಅವರಿಗೆ ಉದ್ಯೋಗಾವಕಾಶ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಆಯ್ಕೆಯಾಗುವ ಮಹಿಳೆಯರಿಗೆ ಇನ್ಶೂರೆನ್ಸ್ ಉತ್ಪನ್ನಗಳು, ವಿಮಾ ಸೇವೆಗಳು ಮತ್ತು ಆರ್ಥಿಕ ಸಾಕ್ಷರತೆಯ ಬಗ್ಗೆ ಉಚಿತ ತರಬೇತಿ ನೀಡಲಾಗುತ್ತದೆ.

ಮೂರು ವರ್ಷಗಳ ಕಾಲ ಕೈತುಂಬಾ ಸ್ಟೈಫಂಡ್!
ಈ ಯೋಜನೆಯಡಿ ಆಯ್ಕೆಯಾಗುವ ಮಹಿಳೆಯರಿಗೆ ತರಬೇತಿಯ ನಂತರ ಎಲ್‌ಐಸಿ ಏಜೆಂಟ್ ಆಗಿ ಕೆಲಸ ಮಾಡಲು ಅವಕಾಶ ನೀಡಲಾಗುತ್ತದೆ. ಜೊತೆಗೆ ಮೊದಲ ಮೂರು ವರ್ಷಗಳ ಕಾಲ ಮಾಸಿಕ ಸ್ಟೈಫಂಡ್ (Stipend) ಸಿಗಲಿದೆ:

ಮೊದಲ ವರ್ಷ: ಪ್ರತಿ ತಿಂಗಳು ₹7,000 ಸ್ಟೈಫಂಡ್.

ಎರಡನೇ ವರ್ಷ: ಪ್ರತಿ ತಿಂಗಳು ₹6,000 ಸ್ಟೈಫಂಡ್.

ಮೂರನೇ ವರ್ಷ: ಪ್ರತಿ ತಿಂಗಳು ₹5,000 ಸ್ಟೈಫಂಡ್.

ವಿಶೇಷ ಸೂಚನೆ: ಈ ಮಾಸಿಕ ಸ್ಟೈಫಂಡ್ ಮಾತ್ರವಲ್ಲದೆ, ನೀವು ಮಾರಾಟ ಮಾಡುವ ಪ್ರತಿ ಎಲ್‌ಐಸಿ ಪಾಲಿಸಿಗಳ ಮೇಲೆಯೂ ಆಕರ್ಷಕ ಕಮಿಷನ್ ಪಡೆಯಬಹುದು. ಮೂರು ವರ್ಷಗಳ ನಂತರವೂ ಸ್ಟೈಫಂಡ್ ಮುಂದುವರಿಯಬೇಕಾದರೆ, ಎಲ್‌ಐಸಿ ನಿಗದಿಪಡಿಸುವ ಕೆಲವು ಬಿಸಿನೆಸ್ ಟಾರ್ಗೆಟ್‌ಗಳನ್ನು ತಲುಪಬೇಕಾಗುತ್ತದೆ.

ಅರ್ಹತಾ ಮಾನದಂಡಗಳು ಏನೇನು?
ಈ ಯೋಜನೆಯ ಲಾಭ ಪಡೆಯಲು ಮಹಿಳೆಯರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

ವಯೋಮಿತಿ: 18 ರಿಂದ 70 ವರ್ಷಗಳ ನಡುವೆ ಇರಬೇಕು.

ವಿದ್ಯಾಹರತೆ: ಕನಿಷ್ಠ 10ನೇ ತರಗತಿ (SSLC) ಪಾಸಾಗಿರಬೇಕು.

ಷರತ್ತುಗಳು: ಅರ್ಜಿದಾರರು ಈ ಹಿಂದೆ ಎಲ್‌ಐಸಿ ಏಜೆಂಟ್ ಆಗಿ ಕೆಲಸ ಮಾಡಿರಬಾರದು. ಅಲ್ಲದೆ, ಪ್ರಸ್ತುತ ಎಲ್‌ಐಸಿ ನೌಕರರು ಅಥವಾ ಏಜೆಂಟರ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರಿಗೆ ಈ ಯೋಜನೆಯಡಿ ಅವಕಾಶವಿರುವುದಿಲ್ಲ.

ಪರೀಕ್ಷೆ: ಏಜೆಂಟ್ ಆಗಿ ನೇಮಕಗೊಳ್ಳುವ ಮುನ್ನ IRDAI ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ.

ಅರ್ಜಿ ಸಲ್ಲಿಸುವುದು ಹೇಗೆ? ಮತ್ತು ಬೇಕಾಗುವ ದಾಖಲೆಗಳು:
ಆಸಕ್ತ ಮಹಿಳೆಯರು ಎಲ್‌ಐಸಿ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಗತ್ಯವಿರುವ ದಾಖಲೆಗಳು:

ಆಧಾರ್ ಕಾರ್ಡ್ (Aadhaar Card)

ವಿದ್ಯಾಹರತೆ ಪ್ರಮಾಣಪತ್ರ (10th Marks Card)

ವಿಳಾಸದ ಪುರಾವೆ (Address Proof)

ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ

ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರಗಳು

ಆಯ್ಕೆ ಪ್ರಕ್ರಿಯೆ:
ನೀವು ಸಲ್ಲಿಸಿದ ಅರ್ಜಿಯನ್ನು ಎಲ್‌ಐಸಿ ಅಧಿಕಾರಿಗಳು ಪರಿಶೀಲಿಸುತ್ತಾರೆ. ನೀವು ಅರ್ಹರಾಗಿದ್ದರೆ, ಫೋನ್ ಅಥವಾ ಇಮೇಲ್ ಮೂಲಕ ನಿಮಗೆ ಮಾಹಿತಿ ನೀಡಲಾಗುತ್ತದೆ. ತದನಂತರ ತರಬೇತಿ ನೀಡಿ, ಪರೀಕ್ಷೆಯ ಬಳಿಕ ಅಧಿಕೃತ ಎಲ್‌ಐಸಿ ಏಜೆಂಟ್ ಆಗಿ ನೇಮಕ ಮಾಡಿಕೊಳ್ಳಲಾಗುತ್ತದೆ.

Central government's bumper gift for women: ₹7000 stipend will be credited to the account every month! How to apply?
Share. Facebook Twitter LinkedIn WhatsApp Email

Related Posts

BIG NEWS : ನಟ ದರ್ಶನ್ ಬಳಿಕ ಜೈಲಲ್ಲಿ ಪವಿತ್ರಾಗೌಡಗೆ ರಾಜಾತಿಥ್ಯ ಆರೋಪ : ಸಂಧ್ಯಾ ನಾಗರಾಜ್ ವಿರುದ್ಧ ‘FIR’ ದಾಖಲು!

2 Mins Read

ಕಾರ್ಮಿಕರ ಹಣ ದುರುಪಯೋಗ ನಿಲ್ಲಲಿ, ನೈಜ ಫಲಾನುಭವಿಗಳಿಗೆ ಸೌಲಭ್ಯ ಸಿಗಲಿ: ಸಾಗರದಲ್ಲಿ ಕೆ.ಸಂಜಯ್ ಕುಮಾರ್ ಆಗ್ರಹ

4 Mins Read

BIG NEWS : ಕೊನೆ ಕ್ಷಣದಲ್ಲಿ ತಂತ್ರ ಬದಲಾಯಿಸಿದ ಬಿಜೆಪಿ : ಜೆಡಿಎಸ್ ಗೆ ಕೇವಲ 2 ಮತ ಬಿಟ್ಟುಕೊಟ್ಟ ಬಿಜೆಪಿ!

1 Min Read
Recent News

BIG NEWS : ನಟ ದರ್ಶನ್ ಬಳಿಕ ಜೈಲಲ್ಲಿ ಪವಿತ್ರಾಗೌಡಗೆ ರಾಜಾತಿಥ್ಯ ಆರೋಪ : ಸಂಧ್ಯಾ ನಾಗರಾಜ್ ವಿರುದ್ಧ ‘FIR’ ದಾಖಲು!

ವಿಚ್ಛೇದನವಾದ ಪತಿ ಮೃತಪಟ್ಟರೂ ಮಾಜಿ ಪತ್ನಿಗೆ ಜೀವನಾಂಶ ಸಿಗುತ್ತಾ? ಹೈಕೋರ್ಟ್ ಮಹತ್ವದ ತೀರ್ಪು!

ಕಾರ್ಮಿಕರ ಹಣ ದುರುಪಯೋಗ ನಿಲ್ಲಲಿ, ನೈಜ ಫಲಾನುಭವಿಗಳಿಗೆ ಸೌಲಭ್ಯ ಸಿಗಲಿ: ಸಾಗರದಲ್ಲಿ ಕೆ.ಸಂಜಯ್ ಕುಮಾರ್ ಆಗ್ರಹ

SHOCKING : ವಾಸನೆ-ರುಚಿಯ ಸಾಮರ್ಥ್ಯ ಕಳೆದುಕೊಳ್ಳುವುದು `ಸ್ಟ್ರೋಕ್‌’ ನಷ್ಟೇ ಗಂಭೀರ : ವರದಿ

State News
KARNATAKA

BIG NEWS : ನಟ ದರ್ಶನ್ ಬಳಿಕ ಜೈಲಲ್ಲಿ ಪವಿತ್ರಾಗೌಡಗೆ ರಾಜಾತಿಥ್ಯ ಆರೋಪ : ಸಂಧ್ಯಾ ನಾಗರಾಜ್ ವಿರುದ್ಧ ‘FIR’ ದಾಖಲು!

By ಸುರೇಶ್‌ KARNATAKA 2 Mins Read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಎ1 ಆರೋಪಿ ಪವಿತ್ರಾಗೌಡ ಅವರಿಗೆ ಜೈಲಿನಲ್ಲಿ…

ಕಾರ್ಮಿಕರ ಹಣ ದುರುಪಯೋಗ ನಿಲ್ಲಲಿ, ನೈಜ ಫಲಾನುಭವಿಗಳಿಗೆ ಸೌಲಭ್ಯ ಸಿಗಲಿ: ಸಾಗರದಲ್ಲಿ ಕೆ.ಸಂಜಯ್ ಕುಮಾರ್ ಆಗ್ರಹ

BIG NEWS : ಕೊನೆ ಕ್ಷಣದಲ್ಲಿ ತಂತ್ರ ಬದಲಾಯಿಸಿದ ಬಿಜೆಪಿ : ಜೆಡಿಎಸ್ ಗೆ ಕೇವಲ 2 ಮತ ಬಿಟ್ಟುಕೊಟ್ಟ ಬಿಜೆಪಿ!

BREAKING : ಇಂದು ವಿಧಾನ ಪರಿಷತ್ ಚುನಾವಣೆ : ಈವರೆಗೆ ಶೇ. 34.78ರಷ್ಟು ಮತದಾನ, 77 ಮತ ಚಲಾವಣೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.