Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಾಸಕರಾದ ಎಸ್ ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಜೊತೆಗೆ ಇದ್ದಾರೆ : ವಿಪಕ್ಷ ನಾಯಕ ಆರ್.ಅಶೋಕ್

BIG NEWS : ನಟ ದರ್ಶನ್ ಬಳಿಕ ಜೈಲಲ್ಲಿ ಪವಿತ್ರಾಗೌಡಗೆ ರಾಜಾತಿಥ್ಯ ಆರೋಪ : ಸಂಧ್ಯಾ ನಾಗರಾಜ್ ವಿರುದ್ಧ ‘FIR’ ದಾಖಲು!

ವಿಚ್ಛೇದನವಾದ ಪತಿ ಮೃತಪಟ್ಟರೂ ಮಾಜಿ ಪತ್ನಿಗೆ ಜೀವನಾಂಶ ಸಿಗುತ್ತಾ? ಹೈಕೋರ್ಟ್ ಮಹತ್ವದ ತೀರ್ಪು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ನಟ ದರ್ಶನ್ ಬಳಿಕ ಜೈಲಲ್ಲಿ ಪವಿತ್ರಾಗೌಡಗೆ ರಾಜಾತಿಥ್ಯ ಆರೋಪ : ಸಂಧ್ಯಾ ನಾಗರಾಜ್ ವಿರುದ್ಧ ‘FIR’ ದಾಖಲು!
KARNATAKA

BIG NEWS : ನಟ ದರ್ಶನ್ ಬಳಿಕ ಜೈಲಲ್ಲಿ ಪವಿತ್ರಾಗೌಡಗೆ ರಾಜಾತಿಥ್ಯ ಆರೋಪ : ಸಂಧ್ಯಾ ನಾಗರಾಜ್ ವಿರುದ್ಧ ‘FIR’ ದಾಖಲು!

By ಸುರೇಶ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಎ1 ಆರೋಪಿ ಪವಿತ್ರಾಗೌಡ ಅವರಿಗೆ ಜೈಲಿನಲ್ಲಿ ‘ರಾಜಾತಿಥ್ಯ’ ಸಿಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಈಗ ಹೊಸದೊಂದು ಕಾನೂನು ಸಮರ ಆರಂಭವಾಗಿದ್ದು, ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಸಂಧ್ಯಾ ನಾಗರಾಜ್‌ ಎಂಬುವವರ ವಿರುದ್ಧ ಪವಿತ್ರಾಗೌಡ ಜೈಲಿನಿಂದಲೇ ದೂರು ದಾಖಲಿಸಿದ್ದಾರೆ.

ಇತ್ತೀಚೆಗೆ ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ಸಂಧ್ಯಾ ನಾಗರಾಜ್‌, ಜೈಲಿನಲ್ಲಿ ಪವಿತ್ರಾಗೌಡ ಅವರಿಗೆ ಅಧಿಕಾರಿಗಳು ವಿಶೇಷ ಸಹಕಾರ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. “ಪವಿತ್ರಾಗೌಡ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ, ಪ್ರತಿದಿನ ಹೊರಗಿನಿಂದ ಬಾಕ್ಸ್‌ನಲ್ಲಿ ಊಟ ತಂದುಕೊಡಲಾಗುತ್ತಿದೆ” ಎಂದು ಅವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಭೇಟಿಯಾಗಿದ್ದಾಗಿ ಹೇಳಿದ್ದ ಸಂಧ್ಯಾ ನಾಗರಾಜ್

ಹಿಂದೆ ಯಾವುದೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಸಂಧ್ಯಾ ನಾಗರಾಜ್‌, ತಾವು ಕಾರಾಗೃಹದಲ್ಲಿದ್ದಾಗ ಪವಿತ್ರಾಗೌಡ ಅವರನ್ನು ಭೇಟಿಯಾಗಿದ್ದಾಗಿ ಹಕ್ಕು ಸಾಧಿಸಿದ್ದರು. ಆ ಸಮಯದಲ್ಲಿ ಪವಿತ್ರಾಗೌಡ ಅವರಿಗೆ ಜೈಲಿನ ನಿಯಮಗಳನ್ನು ಮೀರಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿತ್ತು ಎಂಬುದನ್ನು ತಾವು ಕಣ್ಣಾರೆ ನೋಡಿರುವುದಾಗಿ ಅವರು ಮಾಧ್ಯಮಗಳ ಮುಂದೆ ವಾದಿಸಿದ್ದರು. ಈ ಹೇಳಿಕೆಯು ಜೈಲು ಆಡಳಿತ ಮಂಡಳಿಯ ಮೇಲೆಯೂ ಅನುಮಾನದ ಹುತ್ತ ಬೆಳೆಯುವಂತೆ ಮಾಡಿತ್ತು.

ಜೈಲಿನಿಂದಲೇ ದೂರು ನೀಡಿದ ಪವಿತ್ರಾಗೌಡ

ತಮ್ಮ ವಿರುದ್ಧ ಕೇಳಿಬಂದಿರುವ ಈ ಎಲ್ಲಾ ಆರೋಪಗಳನ್ನು ಪವಿತ್ರಾಗೌಡ ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಜೈಲಿನಲ್ಲಿ ತಮಗೆ ಯಾವುದೇ ವಿಶೇಷ ಸೌಲಭ್ಯ ಸಿಗುತ್ತಿಲ್ಲ ಮತ್ತು ನಿಯಮಾನುಸಾರವೇ ತಾವಿರುವುದಾಗಿ ತಿಳಿಸಿದ್ದಾರೆ. ಮಾಧ್ಯಮಗಳಲ್ಲಿ ಬಂದಿರುವ ಹೇಳಿಕೆಯಿಂದ ತಮಗೆ ತೇಜೋವಧೆಯಾಗಿದೆ ಎಂದು ಆರೋಪಿಸಿರುವ ಅವರು, ಜೈಲಿನಲ್ಲಿದ್ದೇ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಸಂಧ್ಯಾ ನಾಗರಾಜ್‌ ವಿರುದ್ಧ ಲಿಖಿತ ದೂರು ನೀಡಿದ್ದಾರೆ. ಪವಿತ್ರಾಗೌಡ ಅವರ ಜೊತೆಗೆ ರಶ್ಮಿ ಎಂಬ ಮತ್ತೊಬ್ಬ ಸಹ-ಆರೋಪಿಯೂ ಕೂಡ ಸಂಧ್ಯಾ ವಿರುದ್ಧ ದೂರು ದಾಖಲಿಸಿದ್ದಾರೆ.

ಜೈಲಿನಲ್ಲಿ ಆತ್ಮಚರಿತ್ರೆ ಬರವಣಿಗೆ!

ಈ ಎಲ್ಲಾ ವಿವಾದಗಳ ನಡುವೆ ಪವಿತ್ರಾಗೌಡ ಅವರಿಗೆ ಸಂಬಂಧಿಸಿದಂತೆ ಮತ್ತೊಂದು ಆಸಕ್ತಿದಾಯಕ ಮಾಹಿತಿ ಹೊರಬಿದ್ದಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ದೂಡುತ್ತಿರುವ ಪವಿತ್ರಾಗೌಡ ಅವರು ತಮ್ಮ ‘ಆತ್ಮಚರಿತ್ರೆ’ (Autobiography) ಬರೆಯಲು ಆರಂಭಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತಮ್ಮ ಜೀವನದ ಏಳುಬೀಳುಗಳು, ಸಿನಿಮಾ ರಂಗದ ಅನುಭವ ಹಾಗೂ ರೇಣುಕಾಸ್ವಾಮಿ ಪ್ರಕರಣದ ಸುತ್ತಲಿನ ಘಟನೆಗಳ ಬಗ್ಗೆ ಅವರು ಪುಸ್ತಕದಲ್ಲಿ ದಾಖಲಿಸುತ್ತಿದ್ದಾರೆ ಎನ್ನಲಾಗಿದೆ.

Share. Facebook Twitter LinkedIn WhatsApp Email

Related Posts

ಶಾಸಕರಾದ ಎಸ್ ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಜೊತೆಗೆ ಇದ್ದಾರೆ : ವಿಪಕ್ಷ ನಾಯಕ ಆರ್.ಅಶೋಕ್

2 Mins Read

ಕಾರ್ಮಿಕರ ಹಣ ದುರುಪಯೋಗ ನಿಲ್ಲಲಿ, ನೈಜ ಫಲಾನುಭವಿಗಳಿಗೆ ಸೌಲಭ್ಯ ಸಿಗಲಿ: ಸಾಗರದಲ್ಲಿ ಕೆ.ಸಂಜಯ್ ಕುಮಾರ್ ಆಗ್ರಹ

4 Mins Read

BIG NEWS : ಕೊನೆ ಕ್ಷಣದಲ್ಲಿ ತಂತ್ರ ಬದಲಾಯಿಸಿದ ಬಿಜೆಪಿ : ಜೆಡಿಎಸ್ ಗೆ ಕೇವಲ 2 ಮತ ಬಿಟ್ಟುಕೊಟ್ಟ ಬಿಜೆಪಿ!

1 Min Read
Recent News

ಶಾಸಕರಾದ ಎಸ್ ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಜೊತೆಗೆ ಇದ್ದಾರೆ : ವಿಪಕ್ಷ ನಾಯಕ ಆರ್.ಅಶೋಕ್

BIG NEWS : ನಟ ದರ್ಶನ್ ಬಳಿಕ ಜೈಲಲ್ಲಿ ಪವಿತ್ರಾಗೌಡಗೆ ರಾಜಾತಿಥ್ಯ ಆರೋಪ : ಸಂಧ್ಯಾ ನಾಗರಾಜ್ ವಿರುದ್ಧ ‘FIR’ ದಾಖಲು!

ವಿಚ್ಛೇದನವಾದ ಪತಿ ಮೃತಪಟ್ಟರೂ ಮಾಜಿ ಪತ್ನಿಗೆ ಜೀವನಾಂಶ ಸಿಗುತ್ತಾ? ಹೈಕೋರ್ಟ್ ಮಹತ್ವದ ತೀರ್ಪು!

ಕಾರ್ಮಿಕರ ಹಣ ದುರುಪಯೋಗ ನಿಲ್ಲಲಿ, ನೈಜ ಫಲಾನುಭವಿಗಳಿಗೆ ಸೌಲಭ್ಯ ಸಿಗಲಿ: ಸಾಗರದಲ್ಲಿ ಕೆ.ಸಂಜಯ್ ಕುಮಾರ್ ಆಗ್ರಹ

State News
KARNATAKA

ಶಾಸಕರಾದ ಎಸ್ ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಜೊತೆಗೆ ಇದ್ದಾರೆ : ವಿಪಕ್ಷ ನಾಯಕ ಆರ್.ಅಶೋಕ್

By ಸುರೇಶ್‌ KARNATAKA 2 Mins Read

ಬೆಂಗಳೂರು: ಕರ್ನಾಟಕ ರಾಜಕಾರಣದ ಕುತೂಹಲದ ಕೇಂದ್ರಬಿಂದುವಾಗಿರುವ ವಿಧಾನಪರಿಷತ್ ಚುನಾವಣೆ ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಬಿರುಸಿನಿಂದ ಆರಂಭಗೊಂಡಿದೆ. ಆಡಳಿತರೂಢ ಕಾಂಗ್ರೆಸ್‌ನ ಐದು,…

BIG NEWS : ನಟ ದರ್ಶನ್ ಬಳಿಕ ಜೈಲಲ್ಲಿ ಪವಿತ್ರಾಗೌಡಗೆ ರಾಜಾತಿಥ್ಯ ಆರೋಪ : ಸಂಧ್ಯಾ ನಾಗರಾಜ್ ವಿರುದ್ಧ ‘FIR’ ದಾಖಲು!

ಕಾರ್ಮಿಕರ ಹಣ ದುರುಪಯೋಗ ನಿಲ್ಲಲಿ, ನೈಜ ಫಲಾನುಭವಿಗಳಿಗೆ ಸೌಲಭ್ಯ ಸಿಗಲಿ: ಸಾಗರದಲ್ಲಿ ಕೆ.ಸಂಜಯ್ ಕುಮಾರ್ ಆಗ್ರಹ

BIG NEWS : ಕೊನೆ ಕ್ಷಣದಲ್ಲಿ ತಂತ್ರ ಬದಲಾಯಿಸಿದ ಬಿಜೆಪಿ : ಜೆಡಿಎಸ್ ಗೆ ಕೇವಲ 2 ಮತ ಬಿಟ್ಟುಕೊಟ್ಟ ಬಿಜೆಪಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.