ಬೆಂಗಳೂರು : ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದ್ದು ಇದೀಗ, ಕೊನೆಯ ಕ್ಷಣದಲ್ಲಿ ತಂತ್ರಗಾರಿಕೆ ಬದಲಿಸಿದ ಬಿಜೆಪಿ, ಇಬ್ಬರು ಅಭ್ಯರ್ಥಿಗಳಿಗೆ ತಲಾ 30 ಮತಗಳ ಚಲಾವಣೆ ಆಗಿರುವುದರಿಂದ ಜೆಡಿಎಸ್ ಗೆ ಬಿಗ್ ಶಾಕ್ ಎದುರಾಗಿದೆ.
ಜೆಡಿಎಸ್ ಗೆ ಹೆಚ್ಚುವರಿಯಾಗಿ ಎರಡು ಮತಗಳನ್ನು ಮಾತ್ರ ಬಿಜೆಪಿ ಬಿಟ್ಟು ಕೊಟ್ಟಿದೆ. ಬಿಜೆಪಿಯ ಎರಡನೇ ಪ್ರಶಾಸ್ತ್ಯದ ಮತಗಳು ಜೆಡಿಎಸ್ ಗೆ ಹೋಗಿದೆ. ಅಡ್ಡ ಮತದಾನದ ಭೀತಿಯಿಂದ ಬಿಜೆಪಿ ಕೊನೆಯಲ್ಲಿ ತಂತ್ರ ರೂಪಿಸಿ ಜೆಡಿಎಸ್ ಗೆ ಕೇವಲ ಎರಡು ಮತ ಬಿಟ್ಟು ಕೊಟ್ಟಿದೆ. ಹಿತ ಜೆಡಿಎಸ್ ಗು ಕೂಡ ಒಂದು ನಿರೀಕ್ಷೆ ಇತ್ತು, ಈ ಬಾರಿ ಹೇಗಾದರೂ ಮಾಡಿ ಒಂದು ಸ್ಥಾನವನ್ನು ಆದರೂ ಗೆಲ್ಲಿಸಲು ಹಠ ತೊಟ್ಟಿತ್ತು. ಆದರೆ ಇದೀಗ ಬಿಜೆಪಿ ಜೆಡಿಎಸ್ ಗೆ ಶಾಕ್ ನೀಡಿದೆ.








