ಶಿವಮೊಗ್ಗ: ನಿನ್ನೆ ಇಲ್ಲಿನ ಸಿಟಿ ಸೆಂಟರ್ ಮಾಲ್ ನಲ್ಲಿ ಸ್ವಾತಂತ್ರ್ಯೋತ್ಸವದ ಕಾರಣ, ಸ್ವಾತಂತ್ರ್ಯ ಹೋರಾಟಗಾರರ ಪೋಟೋಗಳನ್ನು ಹಾಕಲಾಗಿತ್ತು. ಈ ಸಾಲಿನಲ್ಲಿ ವೀರ್ ಸಾವರ್ಕರ್ ಪೋಟೋ ಹಾಕಿದ್ದಕ್ಕೆ ಎಂ.ಡಿ ಷರೀಫ್ ಆಲಿಯಾಸ್ ಆಸೀಫ್ ಎಂಬುವರು ಆಕ್ಷೇಪ ವ್ಯಕ್ತ ಪಡಿಸಿದ್ದರು. ಹೀಗಾಗಿಯೇ ಸ್ಥಳದಲ್ಲಿ ಬಿಗಿ ವಾತಾವರಣ ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದಂತ ದೊಡ್ಡಪೇಟೆ ಠಾಣೆಯ ಪೊಲೀಸರು, ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದಂತ ಶಿವಮೊಗ್ಗದ 2ನೇ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು, ಆಗಸ್ಟ್ 26ರವರೆಗೆ ಆಸೀಫ್ ಅನ್ನು ನ್ಯಾಯಾಂಗ ಬಂಧನಕ್ಕೆ ವಿಧಿಸಿ ಆದೇಶಿಸಿದ್ದಾರೆ.
Shocking News: ‘ಗೂಗಲ್ ಮ್ಯಾಪ್’ ಮೂಲಕವೂ ಶುರುವಾಗಿದೆ ಆನ್ ಲೈನ್ ವಂಚನೆ: ಈಕೆ ಕಳೆದುಕೊಂಡಿದ್ದು ಎಷ್ಟುಗೊತ್ತಾ.?
ಅಂದಹಾಗೇ ಬಂಧಿತ ಎಂ.ಡಿ ಷರೀಫ್ ಶಿವಮೊಗ್ಗದ ವಾರ್ಡ್ ನಂ.25ರ ಪಾಲಿಕೆ ಸದಸ್ಯೆಯ ಪತಿಯಾಗಿದ್ದಾರೆ. ಅಲ್ಲದೇ ಕನ್ನಡ ಜನಪರ ವೇದಿಕೆಯ ಸಂಘಟನೆಯ ಪ್ರಮುಖರಾಗಿದ್ದಾರೆ.