karnataka news – Kannada News Now


India

ನವದೆಹಲಿ : ಲಂಡನ್ ನಲ್ಲಿನ ಯೆಸ್ ಬ್ಯಾಂಕ್ ಸಹ ಪ್ರವರ್ತಕ ರಾಣಾ ಕಪೂರ್ ಅವರ ₹127 ಕೋಟಿ ಮೌಲ್ಯದ ಫ್ಲ್ಯಾಟ್ ಅನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ. ಈ ಆಸ್ತಿಯನ್ನು (ಅಪಾರ್ಟ್ ಮೆಂಟ್ 1, 77 ಸೌತ್ ಆಡ್ಲೆ ಸ್ಟ್ರೀಟ್, ಲಂಡನ್) ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ ಎ) ಅಡಿ ಜಪ್ತಿ ಮಾಡಲು ತಾತ್ಕಾಲಿಕ ಆದೇಶ ನೀಡಿದೆ.

“ಫ್ಲ್ಯಾಟ್ ನ ಮಾರುಕಟ್ಟೆ ಮೌಲ್ಯವು 13.5 ಮಿಲಿಯನ್ ಪೌಂಡ್ (ಸುಮಾರು ₹127 ಕೋಟಿ). 2017ರಲ್ಲಿ ರಾಣಾ ಕಪೂರ್ ಅವರು DOIT ಕ್ರಿಯೇಷನ್ಸ್ ಜರ್ಸಿ ಲಿಮಿಟೆಡ್ ಹೆಸರಿನಲ್ಲಿ 9.9 ಮಿಲಿಯನ್ ಪೌಂಡ್ ಗೆ ಈ ಆಸ್ತಿಯನ್ನು ಖರೀದಿಸಿದ್ದು, ಅವರು ಲಾಭದಾಯಕ ಮಾಲೀಕರೂ ಆಗಿದ್ದಾನೆ’ ಎಂದು ಇ.ಡಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

BREAKING : ಮೇಘಾಲಯದಲ್ಲಿ ಭೂ ಕುಸಿತ : ಮಹಿಳಾ ಕ್ರಿಕೇಟರ್ ಸಾವು, ಐವರು ನಾಪತ್ತೆ

“ಲಂಡನ್ ನಲ್ಲಿ ಈ ಆಸ್ತಿಯನ್ನು ಪರಭಾರೆ ಮಾಡಲು ಕಪೂರ್ ಪ್ರಯತ್ನಿಸುತ್ತಿದ್ದಾರೆ ಮತ್ತು ಅವರು ಪ್ರತಿಷ್ಠಿತ ಪ್ರಾಪರ್ಟಿ ಕನ್ಸಲ್ಟೆಂಟ್ ಅನ್ನು ನೇಮಿಸಿಕೊಂಡಿದ್ದಾರೆ” ಎಂದು ಸಂಸ್ಥೆ ವಿಶ್ವಾಸಾರ್ಹ ಮೂಲದಿಂದ ಮಾಹಿತಿ ಪಡೆದಿದೆ ಎಂದು ಅದು ಹೇಳಿದೆ.

‘ಹಲವು ಮೂಲಗಳಿಂದ ಬಂದ ವಿಚಾರದಂತೆ ಈ ಆಸ್ತಿಯನ್ನು ಹಲವು ವೆಬ್ ಸೈಟ್ ಗಳಲ್ಲಿ ಮಾರಾಟಕ್ಕೆ ಪಟ್ಟಿ ಮಾಡಿರುವುದೆಂದು ಖಚಿತಪಡಿಸಲಾಗಿತ್ತು’ ಎಂದು ಅದು ಹೇಳಿದೆ.

ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಪ್ರತಿಭಟನೆ ಹಿಂಪಡೆದಿಲ್ಲ – ಸಂಘದ ರಾಜ್ಯಾಧ್ಯಕ್ಷ ವಿಶ್ವರಾಧ್ಯ ಸ್ಪಷ್ಟನೆ

ಪಿಎಂಎಲ್ ಎ ಅಡಿಯಲ್ಲಿ ಇತರ ತನಿಖೆಗಳ ಭಾಗವಾಗಿ, ಈ ಹಿಂದೆ ಅಮೆರಿಕ, ದುಬೈ ಮತ್ತು ಆಸ್ಟ್ರೇಲಿಯಾಗಳಲ್ಲಿ ಇದೇ ರೀತಿ ಆಸ್ತಿಗಳನ್ನು ಇಡಿ ಜಪ್ತಿ ಮಾಡಿದೆ.

ಕಪೂರ್ ಕುಟುಂಬಕ್ಕೆ ನೀಡಿದ ಕಿಕ್ ಬ್ಯಾಕ್ ಗೆ ಪ್ರತಿಯಾಗಿ ಯೆಸ್ ಬ್ಯಾಂಕ್ ವಿವಿಧ ಸಂಸ್ಥೆಗಳಿಗೆ ಬಹುಕೋಟಿ ಸಾಲ ನೀಡಿದೆ ಎಂದು ಸಿಬಿಐ ಎಫ್ ಐಆರ್ ನಲ್ಲಿ ಸಿಬಿಐ ತನಿಖೆ ನಡೆಸಿದ ನಂತರ ಕಪೂರ್, ಅವರ ಕುಟುಂಬ ಸದಸ್ಯರು ಮತ್ತು ಇತರರ ವಿರುದ್ಧ ಇಡಿ ಪ್ರಕರಣ ದಾಖಲಿಸಿತ್ತು.

2018ರ ಏಪ್ರಿಲ್-ಜೂನ್ ಅವಧಿಯಲ್ಲಿ ಯೇಸ್ ಬ್ಯಾಂಕ್ ಲಿಮಿಟೆಡ್ ಡಿಎಚ್ ಎಫ್ ಎಲ್ ನ ಅಲ್ಪಾವಧಿ ಸಾಲಪತ್ರಗಳಲ್ಲಿ ₹3,700 ಕೋಟಿ ಹೂಡಿಕೆ ಮಾಡಿದೆ ಎಂದು ಸಿಬಿಐ ಎಫ್ ಐಆರ್ ನಲ್ಲಿ ಹೇಳಲಾಗಿದೆ.

BREAKING : ಕೇಂದ್ರ ಸರ್ಕಾರದಿಂದ ‘ಅಂತರ್ಜಲ ಬಳಕೆ’ ಬಗ್ಗೆ ಹೊಸ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ

“ಇದೇ ವೇಳೆ, ಡಿಎಚ್ ಎಫ್ ಎಲ್ ನ ಕಪಿಲ್ ಧವನ್ ಅವರು ರಾಣಾ ಕಪೂರ್ ಮತ್ತು ಅವರ ಕುಟುಂಬ ಸದಸ್ಯರಿಗೆ ₹600 ಕೋಟಿ ಕಿಕ್ ಬ್ಯಾಕ್ (600 ಕೋಟಿ) ಮೊತ್ತದ ಕಿಕ್ ಬ್ಯಾಕ್ ಅನ್ನು ಡಿಒಐಟಿ ಅರ್ಬನ್ ವೆಂಚರ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಗೆ (ರಾಣಾ ಕಪೂರ್ ಸಮೂಹ ಕಂಪನಿ) ₹600 ಕೋಟಿ (ಡಿಎಚ್ ಎಫ್ ಎಲ್ ನಿಂದ ನೀಡಲಾಗಿದೆ) ನೀಡಿದ್ದಾರೆ.

“ಈ ಮೇಲಿನವುಗಳ ಜೊತೆಗೆ, ಕಪಿಲ್ ವಧವನ್, ಧೀರಜ್ ವಧವನ್ ಮತ್ತು ಅವರ ಕುಟುಂಬ ಸದಸ್ಯರ ಒಡೆತನದ ಡಿಎಚ್ ಎಫ್ ಎಲ್ ನ ಸಮೂಹ ಕಂಪನಿಯಾದ RKW ಡೆವಲಪರ್ಸ್ ಗೆ 750 ಕೋಟಿ ರೂಪಾಯಿಗಳ ಸಾಲವನ್ನು ಯಸ್ ಬ್ಯಾಂಕ್ ಲಿಮಿಟೆಡ್ ಮಂಜೂರು ಮಾಡಿತ್ತು” ಎಂದು ಇ.ಡಿ ಆರೋಪಿಸಿದೆ.

BIG BREAKING : ಖ್ಯಾತ ಗಾಯಕ ‘ಎಸ್ ಪಿ ಬಾಲಸುಬ್ರಹ್ಮಣ್ಯಂ’ ವಿಧಿವಶ

ಈ ಸಾಲವನ್ನು ಮುಂಬೈನ ಬಾಂದ್ರಾ ರಿಕ್ಲಮೇಷನ್ ಪ್ರಾಜೆಕ್ಟ್ ಗಾಗಿ ಅವರಿಗೆ ಮಂಜೂರು ಮಾಡಲಾಗಿದೆ, ಆದರೆ ಸಂಪೂರ್ಣ ಮೊತ್ತವನ್ನು ಕಪಿಲ್ ವಧವನ್ ಮತ್ತು ಧೀರಜ್ ವಧವನ್ ಅವರು ತಮ್ಮ ಶೆಲ್ ಕಂಪನಿಗಳ ಮೂಲಕ ತೆಗೆದು ಹಾಕಿದರು ಎಂದು ಅದು ತಿಳಿಸಿದೆ.

ಈ ಪ್ರಕರಣದಲ್ಲಿ ರಾಣಾ ಕಪೂರ್, ಕಪಿಲ್ ವಧವನ್ ಮತ್ತು ಧೀರಜ್ ವಧವನ್ ಅವರನ್ನು ಇಡಿ ಬಂಧಿಸಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನೂ ಸಂಸ್ಥೆ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಈ ಹಿಂದೆ ಇಡಿ ಯು ಆಸ್ತಿಗಳನ್ನು ಲಗತ್ತಿಸಿತ್ತು ಮತ್ತು ಈ ಆದೇಶದ ೊಂದಿಗೆ, ಈ ತನಿಖೆಯಲ್ಲಿ ಒಟ್ಟು ಮೊತ್ತ ₹2,011 ಕೋಟಿ ಗಳಷ್ಟಿದೆ.

India

ಹೊಸದಿಲ್ಲಿ : ಅಂತರ್ಜಲ ಬಳಕೆ ಕುರಿತು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅನುಮತಿ ಇಲ್ಲದೆ ಬೋರ್ ಕೊರೆದು ನೀರು ತೆಗೆಯೋದಕ್ಕೆ ದಂಡ ವಿಧಿಸುವುದು ಸೇರಿದಂತೆ ಹೊಸ ಮಾರ್ಗಸೂಚಿಯಲ್ಲಿ, ಅಪರಾಧಗಳಿಗೆ ದಂಡ ವಿಧಿಸುವಂತ ಕಾನೂನು ರೂಪಿಸಿ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿಟಿ) ಅಧಿಸೂಚನೆ ಹೊರಡಿಸಿದೆ.

ಜಲಶಕ್ತಿ ಸಚಿವಾಲಯದ ಅಡಿಯಲ್ಲಿ ಕೇಂದ್ರ ಅಂತರ್ಜಲ ಪ್ರಾಧಿಕಾರ (ಸಿಜಿವಿಎ) ಅಧಿಸೂಚನೆ ನೀಡಿರುವ ಮಾರ್ಗಸೂಚಿಯಲ್ಲಿ, ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ (ಎನ್.ಇ.ಸಿ) ಇಲ್ಲದೆ ಅಂತರ್ಜಲವನ್ನು ಹೊರತೆಗೆಯಲು ಕೈಗಾರಿಕೆ, ಗಣಿಗಾರಿಕೆ ಮತ್ತು ಮೂಲಸೌಕರ್ಯ ಬಳಕೆದಾರರಿಗೆ ಕನಿಷ್ಠ ₹1 ಲಕ್ಷ ಪರಿಸರ ಪರಿಹಾರವನ್ನು ನಿಗದಿಪಡಿಸಲಾಗುತ್ತದೆ. ಹೊರತೆಗೆಯಲಾದ ನೀರಿನ ಪ್ರಮಾಣ ಮತ್ತು ಉಲ್ಲಂಘನೆಯ ಅವಧಿಯನ್ನು ಅವಲಂಬಿಸಿ, ದಂಡದ ಮೊತ್ತದಲ್ಲಿ ಏರಿಸಬಹುದಾಗಿ ಎಂಬುದಾಗಿ ತಿಳಿಸಿದೆ.

ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಪ್ರತಿಭಟನೆ ಹಿಂಪಡೆದಿಲ್ಲ – ಸಂಘದ ರಾಜ್ಯಾಧ್ಯಕ್ಷ ವಿಶ್ವರಾಧ್ಯ ಸ್ಪಷ್ಟನೆ

ಅಧಿಸೂಚನೆಯು ಗೃಹ ಬಳಕೆ, ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳು, ಸಶಸ್ತ್ರ ಪಡೆಗಳು, ರೈತರು ಮತ್ತು ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳಿಗೆ ಸಿಜಿಡಬ್ಯೂಎ ನಿಂದ ನಿರಾಕ್ಷೇಪಣಾ ಪತ್ರದಿಂದ ಒಂದು ಮಿತಿಯವರೆಗಿನ ನೀರನ್ನು ಪಡೆಯುವುದರಿಂದ ವಿನಾಯಿತಿಯನ್ನು ನೀಡಿದೆ. ಈ ಹಿಂದೆ 2019ರ ಜನವರಿಯಲ್ಲಿ ಎನ್ ಜಿಟಿ ನೀಡಿದ್ದ ಮಾರ್ಗಸೂಚಿಯಂತೆ ಅಂತರ್ಜಲ ಬಳಕೆಗೆ ನಿರಾಕ್ಷೇಪಣಾ ಪತ್ರ ನೀಡಲು ಹೊಸ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.

ಹೊಸ ನಿಯಮಗಳು ರೈತರಿಗೆ CGWAದಿಂದ ಒಂದು NOC ಯನ್ನು ಪಡೆಯುವ ಅಗತ್ಯವನ್ನು ವಿನಾಯಿತಿ ನೀಡಿದರೂ, ಕೃಷಿ ವಲಯದಲ್ಲಿ ಅತಿಯಾದ ಅಂತರ್ಜಲ ಹೊರತೆಗೆಯುವಿಕೆ- ರೈತರಿಗೆ ಉಚಿತ ವಿದ್ಯುತ್ ಪೂರೈಕೆಯ ಒಂದು ಪ್ರಮುಖ ಅಂಶವನ್ನು ಇದು ಎತ್ತಿ ತೋರಿಸುತ್ತದೆ.

BIG BREAKING : ಖ್ಯಾತ ಗಾಯಕ ‘ಎಸ್ ಪಿ ಬಾಲಸುಬ್ರಹ್ಮಣ್ಯಂ’ ವಿಧಿವಶ

ಕೃಷಿ ಕ್ಷೇತ್ರದಲ್ಲಿ ಸುಸ್ಥಿರ ಅಂತರ್ಜಲ ನಿರ್ವಹಣೆಯನ್ನು ಖಾತರಿಪಡಿಸಲು ಒಂದು ಭಾಗೀದಾರಿತ ವಿಧಾನವು ಉತ್ತಮವಾಗಿರುತ್ತದೆ ಎಂದು ಹೊಸ ನಿಯಮಾವಳಿಗಳು ತಿಳಿಸಿದೆ.

“ರೈತರಿಗೆ ತಮ್ಮ ಉಚಿತ/ಸಬ್ಸಿಡಿ ವಿದ್ಯುತ್ ನೀತಿಯನ್ನು ಪರಾಮರ್ಶಿಸಲು, ಸೂಕ್ತ ನೀರಿನ ಬೆಲೆ ನೀತಿಯನ್ನು ತರಲು ಮತ್ತು ಅಂತರ್ಜಲದ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡಲು ಬೆಳೆ ತಿರುಗಣೆ/ವೈವಿಧ್ಯೀಕರಣ/ಇತರ ಉಪಕ್ರಮಗಳಿಗೆ ಹೆಚ್ಚು ಕೆಲಸ ಮಾಡಲು ರಾಜ್ಯಗಳಿಗೆ/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ” ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

India

ಶಿಲ್ಲಾಂಗ್: ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತದಲ್ಲಿ ಮಹಿಳಾ ಕ್ರಿಕೆಟಿಗ ರಜಿಯಾ ಅಹ್ಮದ್ ಮೃತಪಟ್ಟಿದ್ದು, ಇತರ ಐವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಪ್ರತಿಭಟನೆ ಹಿಂಪಡೆದಿಲ್ಲ – ಸಂಘದ ರಾಜ್ಯಾಧ್ಯಕ್ಷ ವಿಶ್ವರಾಧ್ಯ ಸ್ಪಷ್ಟನೆ

ಜಿಲ್ಲೆಯ ಮಾವ್ನಿ ಪ್ರದೇಶದಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಹಲವು ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಿಗಳಲ್ಲಿ ಮೇಘಾಲಯ ಪರ ಆಡಿದ್ದ ರಜಿಯಾ ಅವರ ಮೃತದೇಹವನ್ನು ಅವಶೇಷಗಳಡಿಯಿಂದ ಪತ್ತೆ ಹಚ್ಚಲಾಗಿದೆ. ಇನ್ನೂ ಐವರು ನಾಪತ್ತೆಯಾಗಿದ್ದಾರೆ’ ಎಂದು ಮವ್ನಿ ಪ್ರದೇಶದ ಮುಖ್ಯಸ್ಥ ಬಾಹ್ ಬಡ್ ತಿಳಿಸಿದ್ದಾರೆ.

BIG BREAKING : ಖ್ಯಾತ ಗಾಯಕ ‘ಎಸ್ ಪಿ ಬಾಲಸುಬ್ರಹ್ಮಣ್ಯಂ’ ವಿಧಿವಶ

ಈ ದುರ್ಘಟನೆಯ ಬಗ್ಗೆ ಮಾಹಿತಿ ನೀಡಿದ ತಕ್ಷಣ ಪೊಲೀಸ್ ತಂಡ ಮತ್ತು ಗೃಹ ರಕ್ಷಕ ದಳಗಳು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗುತ್ತವೆ ಎಂದು ಪೂರ್ವ ಖಾಸಿ ಹಿಲ್ಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಲ್ವೆಸ್ಟರ್ ನೊಂಗ್ಟಿಂಗರ್ ತಿಳಿಸಿದ್ದಾರೆ.

BIG BREAKING : EDಯಿಂದ ‘ಕಣ್ವ ಕೋ ಆಪರೇಟಿವ್ ಸೊಸೈಟಿ’ ಎಂಡಿ ಕೋಟ್ಯಾಂತರ ಆಸ್ತಿ ವಶಕ್ಕೆ

State

ಕಲಬುರಗಿ : ಕಲಬುರಗಿ ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ವೈರಾಣುವಿನಿಂದ ಚರ್ಮಗಂಟು ರೋಗ (ಎಲ್.ಎಸ್.ಡಿ.) ಹರಡುತ್ತಿದ್ದು. ಈ ರೋಗದ ಹತೋಟಿಗಾಗಿ ಜಿಲ್ಲೆಯ ರೈತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಲಬುರಗಿ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗುರುಶಾಂತಗೌಡ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೋಗವು ಬಹುಮುಖ್ಯವಾಗಿ ದನಗಳ ಮೈಮೇಲೆ ಗುಳ್ಳೆಗಳು ಮತ್ತು ಬಾವು ಬರುತ್ತದೆ. ಇದಲ್ಲದೆ ಸ್ವಲ್ಪ ಮಟ್ಟಿಗೆ ಜ್ವರ ಹಾಗೂ ಮೇವು ನೀರು ಸೇವಿಸುವುದನ್ನು ಕಾಣಬಹುದಾಗಿದೆ. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ರೈತರು ತಕ್ಷಣ ಸಮೀಪದ ಪಶು ವೈದ್ಯಕೀಯ ಸಂಸ್ಥೆಯ ಸಿಬ್ಬಂದಿಗಳನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ನೀಡಿ, ಉಪಚಾರ ಮಾಡುವುದರ ಮೂಲಕ ಈ ರೋಗದ ಹತೋಟಿ ಮಾಡಬಹುದಾಗಿದೆ.

BIG BREAKING : EDಯಿಂದ ‘ಕಣ್ವ ಕೋ ಆಪರೇಟಿವ್ ಸೊಸೈಟಿ’ ಎಂಡಿ ಕೋಟ್ಯಾಂತರ ಆಸ್ತಿ ವಶಕ್ಕೆ

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ|| ವಿ.ಹೆಚ್. ಹನುಮಂತಪ್ಪ ಈ ರೋಗ ಕುರಿತು ರೈತರು ಭಯಪಡದೇ ಮುಂಜಾಗ್ರತಾ ಕ್ರಮಗಳಾದ ಜಾನುವಾರುಗಳ ಸ್ಥಳದಲ್ಲಿ ಸೊಳ್ಳೆ ಪರದೆಗಳನ್ನು ಅಳವಡಿಸುವುದು, ಸ್ವಚ್ಛತೆ ಕಾಪಾಡುವುದು, ಸುತ್ತ-ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ರಾತ್ರಿ ಸಮಯದಲ್ಲಿ ಬೇವಿನ ಸೊಪ್ಪಿನ ಹೊಗೆ ಹಾಕಬೇಕು ಮತ್ತು ಜಾನುವಾರುಗಳಿಗೆ ಉಣ್ಣೆ, ಸೊಳ್ಳೆಗಳ ಬಾದೆಯಿಂದ ರಕ್ಷಿಸಿದ್ದಲ್ಲಿ ಈ ರೋಗ ಒಂದು ಜಾನುವಾರುದಿಂದ ಮತ್ತೊಂದು ಜಾನುವಾರಿಗೆ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.

ಈ ರೋಗದ ಲಕ್ಷಣ ಕಂಡುಬಂದಲ್ಲಿ ರೈತರು ಕೂಡಲೇ ತಮ್ಮ ಸಮೀಪದ ಪಶು ವೈದ್ಯಕೀಯ ಸಂಸ್ಥೆಯ ಸಿಬ್ಬಂದಿಯವರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಕೊಡಿಸಬೇಕು.

ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಪ್ರತಿಭಟನೆ ಹಿಂಪಡೆದಿಲ್ಲ – ಸಂಘದ ರಾಜ್ಯಾಧ್ಯಕ್ಷ ವಿಶ್ವರಾಧ್ಯ ಸ್ಪಷ್ಟನೆ

State

ಬೆಂಗಳೂರು: ಕಣ್ವ ಸೌಹಾರ್ದ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಂಸ್ಥಾಪಕ ಎನ್‌.ನಂಜುಂಡಯ್ಯ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಈಗಾಲೇ ಬಂಧಿಸಿದ್ದು, ಈ ನಡುವೆ ಪ್ರಕರಣ ಸಂಬಂಧ ಕಣ್ವ ಕೋ ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕನ ಆಸ್ತಿಯನ್ನು ಇಡಿ ವಶಕ್ಕೆ ಪಡೆದುಕೊಂಡಿದೆ.

ಇ.ಡಿ ಅಧಿಕಾರಿಗಳು, ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಟ್ವಿಟರ್‌ ಅಕೌಂಟ್‌ನಲ್ಲಿ ಖಚಿತಪಡಿಸಿದೆ.

 

State

ಸಿನಿಮಾಡೆಸ್ಕ್‌: ಖ್ಯಾತ ಸಂಗೀತ ದಿಗ್ಗಜ, ಗಾಯಕರಾದ ಎಸ್.ಪಿ.ಬಾಲಸುಬ್ರಹ್ಮಣ್ಯಂ ವಿಧಿವಶರಾಗಿದ್ದಾರೆ. ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ ಹಾಗೂ ಇನ್ನಿತರ ಪ್ರಶಸ್ತಿ ಗೌರವಗಳನ್ನು ಪಡೆದ ಸುಪ್ರಸಿದ್ಧ ಗಾಯಕರಾಗಿದ್ದ ಅವರು ಕನ್ನಡವನ್ನು ತಮ್ಮ ಎರಡನೇ ತಾಯಿ ಮನೆ ಅಂತನೇ ಕರೆಯುತ್ತಿದ್ದರು.  ಅಂದ ಹಾಗೇ 1946 ರಿಂದ 2020 ರ ವರೆಗಿನ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಅಪರೂಪದ ಚಿತ್ರಗಳು ಇಲ್ಲಿದೆ.

 

 

 

State

ಮೈಸೂರು :  ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ 31 ಮಾರ್ಚ 2019 ಕ್ಕಿಂತ ಮೊದಲು ಬಿಡುಗಡೆಯಾದ ಹವಾಲ್ದಾರ್ ಅಥವಾ ತತ್ಸಮಾನ ರ್ಯಾಂಕ್‍ವರೆಗಿನ ಮಾಜಿ ಸೈನಿಕರುಗಳು ಕೇಂದ್ರೀಯ ಸೈನಿಕ್ ಬೋರ್ಡನಿಂದ 2019-20ನೇ ಶೈಕ್ಷಣಿಕ ಸಾಲಿನಲ್ಲಿ ವಿತರಿಸಲಾಗುವ ಮಕ್ಕಳ ವಿದ್ಯಾಭ್ಯಾಸದ ಅನುದಾನವನ್ನು ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಪ್ರತಿಭಟನೆ ಹಿಂಪಡೆದಿಲ್ಲ – ಸಂಘದ ರಾಜ್ಯಾಧ್ಯಕ್ಷ ವಿಶ್ವರಾಧ್ಯ ಸ್ಪಷ್ಟನೆ

ಒಂದನೇ ತರಗತಿಯಿಂದ ಒಂಬತ್ತನೇ ತರಗತಿವರೆಗೆ ಹಾಗೂ ಹನ್ನೊಂದನೆ ತರಗತಿಗಳ ವಿದ್ಯಾಭ್ಯಾಸದ ಅನುದಾನ ಪಡೆಯಲು ಸೆಪ್ಟೆಂಬರ್ 30 ರೊಳಗೆ, ಹತ್ತನೆ ತರಗತಿ ಮತ್ತು ಹನ್ನೆರಡನೆ ತರಗತಿಗಳ ವಿದ್ಯಾಭ್ಯಾಸಕ್ಕಾಗಿ ಅನುದಾನ ಪಡೆಯಲು ಅಕ್ಟೋಬರ್ 30 ರೊಳಗೆ ಹಾಗೂ ಪದವಿ ಕೋರ್ಸ್‍ಗಳ ವಿದ್ಯಾಭ್ಯಾಸದ ಅನುದಾನಕ್ಕಾಗಿ ನವೆಂಬರ್ 30 ರೊಳಗೆ ಅರ್ಜಿ ಸಲ್ಲಿಸಬಹುದು.

ಗರಿಗೆದರಿಗೆ ರಾಜ್ಯದ ‘ಗ್ರಾಮ ಪಂಚಾಯ್ತಿ’ ಚುನಾವಣೆ : ಚು.ಆಯೋಗದಿಂದ ಪೊಲೀಸ್ ಬಂದೋಬಸ್ತ್ ಅನುದಾನ ಪ್ರಸ್ತಾವನೆಗೆ ಸೂಚನೆ

ಹೆಚ್ಚಿನ ಮಾಹಿತಿಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 0821-2425240 ಅನ್ನು ಸಂಪರ್ಕಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

State

ಬೆಂಗಳೂರು : ರಾಜ್ಯದ 5800 ಗ್ರಾಮ ಪಂಚಾಯ್ತಿ ಚುನಾವಣೆ 2020ರ ಅಕ್ಟೋಬರ್ ಇಲ್ಲವೇ ನವೆಂಬರ್ ತಿಂಗಳಲ್ಲಿ ನಡೆಯಲಿದೆ. ಇಂತಹ ಗ್ರಾಮ ಪಂಚಾಯ್ತಿ ಚುನಾವಣೆಗೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗಾಗಿ ಅನುದಾನ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಚುನಾವಣಾ ಆಯೋಗ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದೆ. ಈ ಮೂಲಕ ಗ್ರಾಮ ಪಂಚಾಯ್ತಿ ಚುನಾವಣೆ ಪ್ರಕ್ರಿಯೆ ಗರಿಗೆದರಿದೆ.

ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಪ್ರತಿಭಟನೆ ಹಿಂಪಡೆದಿಲ್ಲ – ಸಂಘದ ರಾಜ್ಯಾಧ್ಯಕ್ಷ ವಿಶ್ವರಾಧ್ಯ ಸ್ಪಷ್ಟನೆ

ಈ ಕುರಿತಂತೆ ಪೊಲೀಸ್ ಮಹಾನಿರ್ದೇಶಕರು, ಆರಕ್ಷಕ ಮಹಾನಿರೀಕ್ಷಕರಿಗೆ ಪತ್ರ ಬರೆದಿರುವ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಯವರು, ರಾಜ್ಯಾಧ್ಯಂತ 5800 ಗ್ರಾಮಪಂಚಾಯ್ತಿಗಳಿಗೆ 2020ರ ಅಕ್ಟೋಬರ್ – ನವೆಂಬರ್ ತಿಂಗಳಿನಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ಉದ್ದೇಶಿಸಿದೆ. ಸದರಿ ಚುನಾವಣೆಗೆ ತಮ್ಮ ಇಲಾಖೆಯ ಸಹಕಾರ ಅಗತ್ಯವಾಗಿರುತ್ತದೆ.

ಇದು ಗಾನ ಗಂಧರ್ವ ‘ಎಸ್.ಪಿ.ಬಾಲಸುಬ್ರಹ್ಮಣ್ಯಂ’ ಜೀವನ ‘ಗಾಯನ ಯಾತ್ರೆ’

ರಾಜ್ಯಾದ್ಯಂತ ಶಾಂತಿ ಮತ್ತು ಸುವ್ಯವಸ್ಥೆಗಾಗಿ ಚುನಾವಣೆಗಳನ್ನು ನಡೆಸುವ ಉದ್ದೇಶದಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ಹಾಗೂ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರ್ತಿಸಿಕೊಂಡು ಪೊಲೀಸ್ ಸಿಬ್ಬಂದಿಗಳ ನಿರ್ವಹಣೆ ಇತ್ಯಾದಿಗಳ ಬಗ್ಗೆ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಾಗಿರುತ್ತದೆ.

BIG BREAKING : ಖ್ಯಾತ ಗಾಯಕ ‘ಎಸ್ ಪಿ ಬಾಲಸುಬ್ರಹ್ಮಣ್ಯಂ’ ವಿಧಿವಶ

ಪೊಲೀಸ್ ಇಲಾಖೆಯ ವಾಹನ, ಸಿಬ್ಬಂದಿಗಳಿಗೆ ದಿನಭತ್ಯೆ ಮತ್ತು ಪ್ರಯಾಣ ಭತ್ಯೆ ಇತ್ಯಾದಿಗಾಗಿ ಹೆಚ್ಚುವರಿ ಅನುದಾನದ ಬಿಡುಗಡೆ ಕುರಿತು ಪ್ರಸ್ತಾವನೆಯನ್ನು ನೇರವಾಗಿ ಸರ್ಕಾರಕ್ಕೆ ಸಲ್ಲಿಸುವ ಬಗ್ಗೆ ಸೂಕ್ತ ಕ್ರಮ ವಹಿಸಲು ಪತ್ರದಲ್ಲಿ ನಿರ್ದೇಶಿಸಿದ್ದಾರೆ.

Jobs State

ಮೈಸೂರು : ಕೋವಿಡ್-19 ಸೋಂಕು ತಡೆಗಟ್ಟುವ ಉದ್ದೇಶದಿಂದ ಕೋವಿಡ್ ಸೋಂಕು ಸಂಬಂಧಪಟ್ಟಂತೆ ಪರೀಕ್ಷೆಗಳನ್ನು ಹೆಚ್ಚುಗೊಳಿಸುವ ಅಗತ್ಯತೆ ಇರುವುದರಿಂದ ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಹಿನ್ನೆಲೆ ಖಾಸಗಿ ಪ್ರಯೋಗ ಶಾಲಾ ತಂತ್ರಜ್ಞರು ಹಾಗೂ ದತ್ತಾಂಶ ನಮೂದಕರನ್ನು (Data Entry Operators) ನೇಮಿಸಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಪ್ರತಿಭಟನೆ ಹಿಂಪಡೆದಿಲ್ಲ – ಸಂಘದ ರಾಜ್ಯಾಧ್ಯಕ್ಷ ವಿಶ್ವರಾಧ್ಯ ಸ್ಪಷ್ಟನೆ

ಪ್ರಯೋಗ ಶಾಲಾ ತಂತ್ರಜ್ಞರು ಲಭ್ಯವಿಲ್ಲದಿದ್ದಲ್ಲಿ Nursing and Paramedical personnel, Diploma Holders, ವಿಜ್ಞಾನ ಪದವೀಧರರನ್ನು ನಿಯೋಜಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಕೊರೋನಾ ಪರೀಕ್ಷೆಗೆ ನೇಮಕ ಮಾಡಿಕೊಳ್ಳಲಾಗುವವರಿಗೆ ಸರ್ಕಾರವು ನಿಗದಿಪಡಿಸಿರುವ ದರದಲ್ಲಿ ಪ್ರಯೋಗ ಶಾಲಾ ತಂತ್ರಜ್ಞರಿಗೆ 10,000 ರೂ. ಜೊತೆಗೆ ಪ್ರತಿ ಗಂಟಲುದ್ರವ ತೆಗೆಯುವಿಕೆಗೆ 15 ರೂ, ಹಾಗೂ ದತ್ತಾಂಶ ನಮೂದಕರಿಗೆ 14,000 ರೂ. ಸಂಭಾವನೆಯನ್ನು ಮಾಸಿಕವಾಗಿ ನೀಡಲಾಗುವುದು.

BIG BREAKING : ಖ್ಯಾತ ಗಾಯಕ ‘ಎಸ್ ಪಿ ಬಾಲಸುಬ್ರಹ್ಮಣ್ಯಂ’ ವಿಧಿವಶ

ಆಸಕ್ತರು ಸೆಪ್ಟೆಂಬರ್ 30 ರೊಳಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಅಥವಾ ಸಂಬಂಧಪಟ್ಟ ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಮನವಿಯನ್ನು ಸಲ್ಲಿಸಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಶರತ್ ಬಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

State

ಬೆಂಗಳೂರು : ರಾಜ್ಯ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿನ ಗುತ್ತಿಗೆ, ಹೊರಗುತ್ತಿಗೆ ನೌಕರರು ಬೇಡಿಕೆ ಈಡೇರಿಸುವವರೆಗೆ ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರಿಸುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ. ನಾವು ಪ್ರತಿಭಟನೆಯನ್ನು ಹಿಂಪಡೆದಿಲ್ಲ ಎಂಬುದಾಗಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರ ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ  ವಿಶ್ವರಾಧ್ಯ ಎಚ್. ವೈ ಸ್ಪಷ್ಟ ಪಡಿಸಿದ್ದಾರೆ.

ಇದು ಗಾನ ಗಂಧರ್ವ ‘ಎಸ್.ಪಿ.ಬಾಲಸುಬ್ರಹ್ಮಣ್ಯಂ’ ಜೀವನ ‘ಗಾಯನ ಯಾತ್ರೆ’

ಈ ಕುರಿತಂತೆ ನಮ್ಮ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದ ಅವರು, ಸಮಾನ ಕೆಲಸಕ್ಕೆ ಸಮಾನ ವೇತನ, ಗುತ್ತಿಗೆ ಹೊರ ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು. ಸೇವಾ ಭದ್ರತೆಯನ್ನು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಕಳೆದ ನಿನ್ನೆಯಿಂದ ಕರ್ತವ್ಯಕ್ಕೆ ಗೈರಾಗಿ ಮುಷ್ಕರದಲ್ಲಿ ನಿರತರಾಗಿರುವುದಾಗಿ ತಿಳಿಸಿದರು.

BIG BREAKING : ಖ್ಯಾತ ಗಾಯಕ ‘ಎಸ್ ಪಿ ಬಾಲಸುಬ್ರಹ್ಮಣ್ಯಂ’ ವಿಧಿವಶ

ಇನ್ನೂ ಮುಂದುವರೆದು ಮಾತನಾಡಿದ ಅವರು, ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ, ಹೊರಗುತ್ತಿಗೆ ನೌಕರರು ಪ್ರತಿಭಟನೆಯನ್ನು ಮುಂದುವರೆಸಿದ್ದೇವೆ. ನಾವು ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂಬುದು ಸುಳ್ಳು. ನಮ್ಮ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸುವವರೆಗೆ ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ ಎಂಬುದಾಗಿ ಸ್ಪಷ್ಟ ಪಡಿಸಿದರು.

ವರದಿ : ವಸಂತ ಬಿ ಈಶ್ವರಗೆರೆ