ಶಿವಮೊಗ್ಗ: ಘನ ತ್ಯಾಜ್ಯ ನಿರ್ವಹಣೆ ಮಾಡುವ ಸಂಬಂಧ ಪ್ರಾತ್ಯಕ್ಷಿತ ಜ್ಞಾನ ಪಡೆಯಲು ಕ್ಷೇತ್ರ ಭೇಟಿಯ ಅಧ್ಯಯನ ಪ್ರವಾಸವನ್ನು ಕೋಡೂರು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಮತ್ತು ಪಿಡಿಒ ರವರುಗಳನ್ನೊಳಗೊಂಡ ತಂಡ ಕೈಗೊಂಡು ಗುರುವಾರ ಉಡುಪಿ ಜಿಲ್ಲೆಯ ಹೆಬ್ರಿ ಮತ್ತು ನಿಟ್ಟೆ ಗ್ರಾಪಂಗಳ ವ್ಯಾಪ್ತಿಯ ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಘಟಕಗಳಿಗೆ ಭೇಟಿ ನೀಡಿತು.
ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಂ.ಆರ್.ಎಫ್ ಘಟಕದ ಕಾರ್ಯಾವೈಖರಿಯ ಬಗ್ಗೆ ಹಾಗೂ ಹೆಬ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಘಟಕಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಸಂಕೀರ್ಣ, ಹಸಿಕಸ, ಒಣಕಸ ನಿರ್ವಹಣೆ, ನರ್ಸರಿ ತೋಟ ವೀಕ್ಷಣೆ ಮಾಡಿ ಇವುಗಳ ಅನುಸರಣೆ ಮತ್ತು ಅನುಕರಣೆ ಮಾಡಲು ಸಾಧಕ ಮತ್ತು ಬಾಧಕಗಳ ಬಗ್ಗೆ ಹೆಬ್ರಿ ತಾಪಂ ಇಒ, ಪಿಡಿಒ ಮತ್ತು ಗ್ರಾಪಂ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಕೋಡೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಸುನಂದ, ಉಪಾಧ್ಯಕ್ಷ ಜಯಪ್ರಕಾಶ್, ಸದಸ್ಯರುಗಳಾದ ಸವಿತಾ, ಪ್ರೀತಿ, ಶ್ಯಾಮಲಾ, ಅನ್ನಪೂರ್ಣ, ಚಂದ್ರಕಲಾ, ಉಮೇಶ್, ಶೇಖರಪ್ಪ, ಯೋಗೇಂದ್ರಪ್ಪ, ಪಿಡಿಒ ನಾಗರಾಜ್ ಇದ್ದರು.