Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಗಿಲ್ಗಿಟ್-ಬಾಲ್ತಿಸ್ತಾನ್‌ನಲ್ಲಿ ಚುನಾವಣೆ: ಪಾಕಿಸ್ತಾನಕ್ಕೆ ಭಾರತದ ತೀವ್ರ ವಿರೋಧ !

BREAKING: ಪಾಕ್ ಉಗ್ರನೊಂದಿಗೆ ಸಂಪರ್ಕ ಆರೋಪ :ತುಮಕೂರು-ದಾವಣಗೆರೆಯಲ್ಲಿ ಇಬ್ಬರು ಯುವಕರು ಅರೆಸ್ಟ್.!

​ಅಭಿಜಿತ್ ದಿಪ್ಕೆ ಅಮೆರಿಕದಿಂದ ಗಡೀಪಾರು? ದೆಹಲಿ ಪ್ರತಿಭಟನೆಗೂ ಮುನ್ನ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವ್ಯಾಜ್ಯ ಬಾಕಿ ಇರೋರಿಗೆ ಗುಡ್ ನ್ಯೂಸ್: ಮಾ.8ರಂದು ರಾಷ್ಟ್ರೀಯ ಲೋಕ ಅದಾಲತ್
KARNATAKA

ವ್ಯಾಜ್ಯ ಬಾಕಿ ಇರೋರಿಗೆ ಗುಡ್ ನ್ಯೂಸ್: ಮಾ.8ರಂದು ರಾಷ್ಟ್ರೀಯ ಲೋಕ ಅದಾಲತ್

By ವಸಂತ ಬಿ ಈಶ್ವರಗೆರೆ

ಚಿತ್ರದುರ್ಗ: ಕಳೆದ ಡಿ.14 ರಂದು ಜರುಗಿದ ರಾಷ್ಟಿçÃಯ ಲೋಕ ಅದಾಲತ್‌ನಲ್ಲಿ ಜಿಲ್ಲೆಯಲ್ಲಿ ಬಾಕಿ ಇದ್ದ 4,777 ವ್ಯಾಜ್ಯ ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 11 ಜೋಡಿಗಳ ಮನ ಒಲಿಸಿ ಪುನಃ ಒಂದು ಮಾಡಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ ಹೇಳಿದರು.

ಶುಕ್ರವಾರ ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ರಾಷ್ಟಿçಯ ಲೋಕ ಅದಾಲತ್ ಆಯೋಜನೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

ಇದುವರೆಗೂ ಬಾಕಿ ಇದ್ದ 98,452 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ವಿಲೆ ಮಾಡಲಾಗಿದೆ. ಜಿಲ್ಲೆಯಾದ್ಯಂತ 44,632 ಪ್ರಕರಣಗಳು ಬಾಕಿಯಿವೆ. ಮುಂಬರುವ ಮಾರ್ಚ್ 8 ರಂದು ರಾಷ್ಟಿçಯ ಲೋಕ ಅದಲಾತ್ ಜರುಗಲಿದ್ದು, ಈಗಾಗಲೇ 3707 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಗುರುತಿಸಲಾಗಿದೆ. 15 ಪ್ರಕರಣಗಳಲ್ಲಿ ಪಕ್ಷಗಾರರ ಮನ ಒಲಿಸಿ ರಾಜಿ ಸಂಧಾನಕ್ಕೆ ಒಪ್ಪಿಸಲಾಗಿದೆ. ಕಳೆದ ಅದಾಲತ್‌ಗಿಂತಲೂ ಹೆಚ್ಚಿನ ಪ್ರಕರಣಗಳನ್ನು ಈ ಬಾರಿ ಇತ್ಯರ್ಥ ಪಡಿಸಲು ಗುರಿ ಹೊಂದಲಾಗಿದೆ ಎಂದು ನ್ಯಾಯಾಧೀಶ ರೋಣ ವಾಸುದೇವ ತಿಳಿಸಿದರು.

ಜಿಲ್ಲೆಯ ನ್ಯಾಯಾಲಯಗಳಲ್ಲಿ ಪ್ರಸ್ತುತ 4,821 ಚಕ್ ಅಮಾನ್ಯ, 827 ವಿವಾಹ, 347 ಕೌಟುಂಬಿಕ ವ್ಯಾಜ್ಯ, 3,801 ಆಸ್ತಿ ವಿಭಾಗ ಹಾಗೂ ಜೀವನಾಂಶ ಕೋರಿ ಸಲ್ಲಿಸಿದ 641 ಪ್ರಕರಣಗಳು ಇವೆ. ಈ ಎಲ್ಲಾ ಸಿವಿಲ್ ವ್ಯಾಜ್ಯಗಳನ್ನು ಸುಲಭವಾಗಿ ಪಕ್ಷಗಾರರು ಬಗೆ ಹರಿಸಿಕೊಳ್ಳಬಹುದು. ಈ ಎಲ್ಲಾ ಪ್ರಕರಣಗಳಿಂದ ಸುಮಾರು 25,000 ಹೆಚ್ಚು ಜನರು ವಿನಾ ಕಾರಣ ನ್ಯಾಯಾಲಯಕ್ಕೆ ಅಲೆದಾಡುವುದು ತಪ್ಪುತ್ತದೆ. ಪ್ರಕರಣಗಳು ಸೌಹಾರ್ಧಯುತವಾಗಿ ಬಗೆಹರಿದರೆ, ಮೇಲಿನ ನ್ಯಾಯಾಲಯಗಳಿಗೆ ಮೇಲ್ಮನವಿ ಹೋಗುವುದು ತಪ್ಪುತ್ತದೆ ಎಂದರು.

ಸಿವಿಲ್ ನ್ಯಾಯಾಲಯದಲ್ಲಿ ಆಸ್ತಿ ವಿಭಾಗದ ಪ್ರಕರಣ ಒಂದು ವ್ಯಾಜ್ಯ ಮೂಲಕವೇ ಇತ್ಯರ್ಥವಾಗಬೇಕಾದ 3 ಬಾರಿ ಆದೇಶಗಳನ್ನು ನ್ಯಾಯಾಲಯ ಹೊರಡಿಸಬೇಕಾಗತ್ತದೆ. ನ್ಯಾಯಾಲಯ ಹೊರಡಿಸುವ ಡಿಕ್ರಿ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದರೆ, ಮೇಲಿನ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ನ್ಯಾಯಾಲಯ ಮುಂದಿನ ಆದೇಶ ಹೊರಡಿಸಲು ಸಾಧ್ಯವಿಲ್ಲ. ಇದರಿಂದ ಪ್ರಕರಣ ವಿಲೆವಾರಿ ತಲೆಮಾರುಗಳ ಕಾಲ ಮುಂದೆ ಹೋಗುತ್ತದೆ. ಇದರ ಬದಲಾಗಿ ಹೊಂದಾಣಿಯಿAದ ಪಕ್ಷಗಾರರು ಪ್ರಕರಣ ಇತ್ಯರ್ಥ ಪಡಿಸಿಕೊಂಡರೆ ಬೇಗನೆ ತೀರ್ಪು ನೀಡಬಹುದು. ಪತಿ-ಪತ್ನಿ ಪ್ರಕರಣಗಳಲ್ಲಿ ಅಹಂ ಭಾವದಿಂದ ವರ್ತಿಸದೇ ಸೋತು ಗೆದ್ದರೆ ವಿಚ್ಚೇಧನ ಪ್ರಮಾಣ ಕಡಿಮೆಯಾಗುತ್ತದೆ ಎಂದು ನ್ಯಾಯಾಧೀಶ ಅಧ್ಯಕ್ಷ ರೋಣ ವಾಸುದೇವ ಅಭಿಪ್ರಾಯಪಟ್ಟರು.

ನೂತನ ಜಿಲ್ಲಾ ನ್ಯಾಯಾಲಯ ಸಂಕಿರ್ಣ ನಿರ್ಮಾಣಕ್ಕೆ ನಗರದ ಹೊರ ವಲಯದಲ್ಲಿ 9.25 ಎಕರೆ ಜಮೀನು ಗುರುತಿಸಿ ಸ್ವಾಧೀನಕ್ಕೆ ಪಡೆಯಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು. ಈಗಿರುವ ಜಿಲ್ಲಾ ನ್ಯಾಯಾಲಯವನ್ನು 1965ರಲ್ಲಿ ನಿರ್ಮಿಸಲಾಗಿದೆ. ಇಂದು ಜನಸಂಖ್ಯೆ ಹೆಚ್ಚಳವಾಗಿದ್ದು, ನೂತನ ನ್ಯಾಯಾಲಯದ ಅವಶ್ಯಕತೆ ಇದೆ. ಮೊಳಕಾಲ್ಮೂರು ಪಟ್ಟಣದಲ್ಲೂ ನೂತನ ತಾಲ್ಲೂಕು ನ್ಯಾಯಾಲಯ ಸ್ಥಾಪಿಸಲು ಜಾಗ ಗುರುತಿಸಲಾಗಿದೆ ಎಂದು ನ್ಯಾಯಾಧೀಶ ಅಧ್ಯಕ್ಷ ರೋಣ ವಾಸುದೇವ ಮಾಹಿತಿ ನೀಡಿದರು.

ರಾಷ್ಟ್ರೀಯ ಲೋಕ ಅದಾಲತ್ ಸದುಪಯೋಗ ಪಡಿಸಿಕೊಂಡು ಪಕ್ಷಗಾರರು ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭ ಹಾಗೂ ಶೀಘ್ರವಾಗಿ ಯಾವುದೇ ಶುಲ್ಕ, ಖರ್ಚು ವೆಚ್ಚವಿಲ್ಲದೇ ತೀರ್ಮಾನ ಮಾಡಿಕೊಳ್ಳಬಹುದು. ಲೋಕ ಅದಾಲತ್‌ನಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳಾದ ಚೆಕ್ ಅಮಾನ್ಯ, ಬ್ಯಾಂಕ್ ವಸೂಲಾತಿ, ಉದ್ಯೋಗ, ಕಾರ್ಮಿಕ, ವೇತನ, ವಿದ್ಯುತ್,ನೀರು ಇತರೆ ಸೇವಾ ಶುಲ್ಕದ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಅವಕಾಶವಿದೆ. ಇದರರೊಂದಿಗೆ ನ್ಯಾಯಾಲಯದ ವ್ಯಾಜ್ಯದಲ್ಲಿರುವ ನಾನ್ ಕಾಂಪೌಡಬಲ್ ಹಾಗೂ ಗಂಭೀರ ತರದ ಅಪರಾಧಿಕ ಪ್ರಕರಣಗಳನ್ನು ಹೊರತು ಪಡಿಸಿ, ಇತರೆ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಬಹುದು. ಕಕ್ಷಿದಾರರು ನೇರವಾಗಿ ಅಥವಾ ವಕೀಲರ ಮೂಲಕ ಲೋಕ ಅದಾಲತ್‌ನಲ್ಲಿ ಭಾಗವಹಿಸಬಹುದು. ಸಾರ್ವಜನಿಕರು ಲೋಕ ಅದಾಲತ್ ಕುರಿತು ಹೆಚ್ಚಿನ ಪ್ರಶ್ನೆ ಮತ್ತು ಮಾಹಿತಿಗಾಗಿ ಬೇಕಾದಲ್ಲಿ ಇ-ಮೇಲ್ dlsachitradurga3@gmail.com ಹಾಗೂ ಸದಸ್ಯ ಕಾರ್ಯದರ್ಶಿಯವರ ಕಚೇರಿ ಮೊಬೈಲ್ ಸಂಖ್ಯೆ 9141193935 ಹಾಗೂ ದೂರವಾಣಿ ಸಂಖ್ಯೆ 08194- 222322 ಕ್ಕೆ ಸಹ ಸಂಪರ್ಕಿಸಬಹುದು ಎಂದು ನ್ಯಾಯಾಧೀಶ ರೋಣ ವಾಸುದೇವ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಉಪಸ್ಥಿತರಿದ್ದರು.

ಪ್ರತಿ ತಿಂಗಳು 2000 ಪ್ರೋತ್ಸಾಹಧನ ನೀಡಲು ‘ಕಾನೂನು ಪದವೀಧರ’ರಿಂದ ಅರ್ಜಿ ಆಹ್ವಾನ

BREAKING : ನಟ ದರ್ಶನ್ ಗೆ ರಿಲೀಫ್ : ಫೆ.10 ರವರೆಗೆ ಮೈಸೂರಿನಲ್ಲಿರಲು ಅನುಮತಿ ನೀಡಿ ಕೋರ್ಟ್ ಆದೇಶ.!

BREAKING: ನಾಳೆಯ ‘KMF ನೌಕರ’ರ ಮುಷ್ಕರ ಮುಂದೂಡಿಕೆ: ‘ನಂದಿನಿ ಉತ್ಪನ್ನ’ಗಳ ಮಾರಾಟದಲ್ಲಿ ವ್ಯತ್ಯಯವಿಲ್ಲ

Share. Facebook Twitter LinkedIn WhatsApp Email

Related Posts

BREAKING: ಪಾಕ್ ಉಗ್ರನೊಂದಿಗೆ ಸಂಪರ್ಕ ಆರೋಪ :ತುಮಕೂರು-ದಾವಣಗೆರೆಯಲ್ಲಿ ಇಬ್ಬರು ಯುವಕರು ಅರೆಸ್ಟ್.!

1 Min Read

ವಾಹನ ಸವಾರರಿಗೆ ಗುಡ್ ನ್ಯೂಸ್ : ಶೇ.50 ರ ರಿಯಾಯಿತಿಯೊಂದಿಗೆ ‘ಟ್ರಾಫಿಕ್ ದಂಡ’ ಪಾವತಿಗೆ ಮತ್ತೆ ಅವಕಾಶ

1 Min Read

Income Tax Saving Tips : ಲಕ್ಷಗಟ್ಟಲೆ ಸಂಪಾದಿಸಿದರೂ ಶೂನ್ಯ ತೆರಿಗೆ : ಇವರಿಗೆ ಒಂದೂ ರೂಪಾಯಿ ತೆರಿಗೆ ಇರಲ್ಲ.!

3 Mins Read
Recent News

​ಗಿಲ್ಗಿಟ್-ಬಾಲ್ತಿಸ್ತಾನ್‌ನಲ್ಲಿ ಚುನಾವಣೆ: ಪಾಕಿಸ್ತಾನಕ್ಕೆ ಭಾರತದ ತೀವ್ರ ವಿರೋಧ !

BREAKING: ಪಾಕ್ ಉಗ್ರನೊಂದಿಗೆ ಸಂಪರ್ಕ ಆರೋಪ :ತುಮಕೂರು-ದಾವಣಗೆರೆಯಲ್ಲಿ ಇಬ್ಬರು ಯುವಕರು ಅರೆಸ್ಟ್.!

​ಅಭಿಜಿತ್ ದಿಪ್ಕೆ ಅಮೆರಿಕದಿಂದ ಗಡೀಪಾರು? ದೆಹಲಿ ಪ್ರತಿಭಟನೆಗೂ ಮುನ್ನ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ!

​ವಿಶ್ವದಲ್ಲಿ ಚಿಕನ್ ಪ್ರಿಯರ ಸಂಖ್ಯೆ ಏರಿಕೆ: 71ರಿಂದ 361 ಮಿಲಿಯನ್ ಟನ್‌ಗೆ ಜಿಗಿತ!

State News
KARNATAKA

BREAKING: ಪಾಕ್ ಉಗ್ರನೊಂದಿಗೆ ಸಂಪರ್ಕ ಆರೋಪ :ತುಮಕೂರು-ದಾವಣಗೆರೆಯಲ್ಲಿ ಇಬ್ಬರು ಯುವಕರು ಅರೆಸ್ಟ್.!

By kannadanewsnow57 KARNATAKA 1 Min Read

ತುಮಕೂರು: ಪಾಕಿಸ್ತಾನ ಮೂಲದ ಉಗ್ರನೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ತುಮಕೂರು ಹಾಗೂ ದಾವಣಗೆರೆಯಲ್ಲಿ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿರುವ…

ವಾಹನ ಸವಾರರಿಗೆ ಗುಡ್ ನ್ಯೂಸ್ : ಶೇ.50 ರ ರಿಯಾಯಿತಿಯೊಂದಿಗೆ ‘ಟ್ರಾಫಿಕ್ ದಂಡ’ ಪಾವತಿಗೆ ಮತ್ತೆ ಅವಕಾಶ

Income Tax Saving Tips : ಲಕ್ಷಗಟ್ಟಲೆ ಸಂಪಾದಿಸಿದರೂ ಶೂನ್ಯ ತೆರಿಗೆ : ಇವರಿಗೆ ಒಂದೂ ರೂಪಾಯಿ ತೆರಿಗೆ ಇರಲ್ಲ.!

BIG NEWS : ರಾಜ್ಯದ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : `ಮುಂಬಡ್ತಿ’ ಪ್ರಕ್ರಿಯೆಗೆ ಸರ್ಕಾರ ಮಹತ್ವದ ಆದೇಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.