ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮುಂಜಾನೆ ಕೋಲ್ಕತ್ತಾದ ಹೂಗ್ಲಿ ನದಿಯಲ್ಲಿ ದೋಣಿ ವಿಹಾರ (Boat Ride) ನಡೆಸುವ ಮೂಲಕ ಗಮನ ಸೆಳೆದರು. ಈ ಸಂದರ್ಭದಲ್ಲಿ ಬಂಗಾಳದ ಜನರ ಸಮೃದ್ಧಿ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಅವರು ಶುಭ ಹಾರೈಸಿದರು.
ದೋಣಿ ವಿಹಾರದ ಸಮಯದಲ್ಲಿ ಪ್ರಧಾನಿ ಮೋದಿ ಅವರು ಕೈಯಲ್ಲಿ ಕ್ಯಾಮೆರಾ ಹಿಡಿದು ಹೂಗ್ಲಿ ನದಿಯ ಸೌಂದರ್ಯವನ್ನು ಸೆರೆಹಿಡಿಯುತ್ತಿರುವುದು ಕಂಡುಬಂದಿತು. ಐತಿಹಾಸಿಕ ಹೌರಾ ಸೇತುವೆ ಮತ್ತು ವಿದ್ಯಾಸಾಗರ ಸೇತು ಹಿನ್ನೆಲೆಯಲ್ಲಿರುವ ಸುಂದರ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
“ಪ್ರತಿಯೊಬ್ಬ ಬಂಗಾಳಿಗೂ ಗಂಗಾ ನದಿಯು ಅತ್ಯಂತ ಪವಿತ್ರವಾದುದು. ಗಂಗಾ ನದಿಯು ಬಂಗಾಳದ ಆತ್ಮದಲ್ಲಿ ಹರಿಯುತ್ತದೆ,” ಎಂದು ಹೇಳಿದ ಪ್ರಧಾನಿ, ಗಂಗಾ ಮಾತೆಗೆ ತಮ್ಮ ಕೃತಜ್ಞತೆ ಸಲ್ಲಿಸಿದರು.
ವಿಹಾರದ ವೇಳೆ ನದಿಯ ದಡದಲ್ಲಿದ್ದ ಮಾರ್ನಿಂಗ್ ವಾಕರ್ಸ್ ಮತ್ತು ದೋಣಿ ಚಾಲಕರತ್ತ ಕೈಬೀಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಅವರ ಈ ಸರಳತೆ ಅಲ್ಲಿ ನೆರೆದಿದ್ದವರ ಗಮನ ಸೆಳೆಯಿತು.ಪಶ್ಚಿಮ ಬಂಗಾಳದ ಸರ್ವತೋಮುಖ ಅಭಿವೃದ್ಧಿ ಮತ್ತು ಬಂಗಾಳದ ಜನರ ಸಮೃದ್ಧಿಗಾಗಿ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಇದೇ ಸಂದರ್ಭದಲ್ಲಿ ಮೋದಿ ಪುನರುಚ್ಚರಿಸಿದರು.
হুগলি নদীর ওপর কাটানো কিছু বিশেষ মুহূর্ত… কলকাতায় এক অবিস্মরণীয় সকাল। pic.twitter.com/VRpkwdcjwl
— Narendra Modi (@narendramodi) April 24, 2026








