Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ಅವರ ಅಪರಾಧಗಳಲ್ಲಿ ಭಾಗಿಯಾಗಲು ನನಗಿಷ್ಟವಿರಲಿಲ್ಲ’: ಆಮ್ ಆದ್ಮಿ ಪಾರ್ಟಿ ತೊರೆದಿದ್ದಕ್ಕೆ ರಾಘವ್ ಚಡ್ಡಾ ನೀಡಿದ್ರು ಶಾಕಿಂಗ್ ಕಾರಣ!

24/04/2026 7:42 PM

ಅಣ್ಣಾವ್ರ ನೆನಪಿನಲ್ಲಿ ನಳನಳಿಸುವ ನಂದನವನ: ‘ಡಾ.ರಾಜ್ ಉದ್ಯಾನ’ ಲೋಕಾರ್ಪಣೆಗೊಳಿಸಿದ ಸಚಿವ ಕೆ.ಜೆ. ಜಾರ್ಜ್

24/04/2026 7:41 PM

​’ವೈರಿಗಳು ವಿಚಲಿತರಾಗಿದ್ದಾರೆ’: ಮೊಜ್ತಬಾ ಖಮೇನಿ ಗಾಯಗೊಂಡಿದ್ದಾರೆ ಎಂಬ ವದಂತಿಗಳ ಮಧ್ಯೆಯೇ ಅಮೆರಿಕಕ್ಕೆ ಇರಾನ್‌ನಿಂದ ಏಕತೆಯ ಎಚ್ಚರಿಕೆ!

24/04/2026 7:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಣ್ಣಾವ್ರ ನೆನಪಿನಲ್ಲಿ ನಳನಳಿಸುವ ನಂದನವನ: ‘ಡಾ.ರಾಜ್ ಉದ್ಯಾನ’ ಲೋಕಾರ್ಪಣೆಗೊಳಿಸಿದ ಸಚಿವ ಕೆ.ಜೆ. ಜಾರ್ಜ್
KARNATAKA

ಅಣ್ಣಾವ್ರ ನೆನಪಿನಲ್ಲಿ ನಳನಳಿಸುವ ನಂದನವನ: ‘ಡಾ.ರಾಜ್ ಉದ್ಯಾನ’ ಲೋಕಾರ್ಪಣೆಗೊಳಿಸಿದ ಸಚಿವ ಕೆ.ಜೆ. ಜಾರ್ಜ್

By kannadanewsnow0924/04/2026 7:41 PM

ಬೆಂಗಳೂರು:  ಕನ್ನಡದ ಕಣ್ಮಣಿ ಡಾ.ರಾಜ್‌ಕುಮಾರ್ ಅವರು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಹಸಿರಾಗಿ, ಜನರ ಉಸಿರಾಗಿದ್ದಾರೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಡಾ.ರಾಜ್ ಕುಮಾರ್ ಜನ್ಮದಿನದ ಪ್ರಯುಕ್ತ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಕಮ್ಮನಹಳ್ಳಿಯಲ್ಲಿ ನವೀಕರಣಗೊಂಡ ಡಾ.ರಾಜ್‌ಕುಮಾರ್ ಉದ್ಯಾನವನ್ನು ಉದ್ಘಾಟಿಸಿ, ನೂತನವಾಗಿ ನಿರ್ಮಿಸಿರುವ ಬಯಲು ರಂಗಮಂದಿರವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಸಚಿವರು ಮಾತನಾಡಿದರು.

“ನಮ್ಮ ಕ್ಷೇತ್ರದಲ್ಲಿ ಡಾ.ರಾಜ್‌ಕುಮಾರ್ ಹೆಸರಿನಲ್ಲಿ ಉದ್ಯಾನ ನಿರ್ಮಿಸಿ, ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ. ಈಗ ಹೊಸದಾಗಿ ನಿರ್ಮಿಸಿರುವ ಬಯಲು ರಂಗಮಂದಿರವು ಸಾಮುದಾಯದ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ವೇದಿಕೆಯಾಗಲಿದೆ. ಕ್ಷೇತ್ರದ ಇತರ ಉದ್ಯಾನಗಳನ್ನೂ ನವೀಕರಿಸಿ ಮತ್ತಷ್ಟು ಸುಂದರಗೊಳಿಸಲಾಗುವುದು,” ಎಂದರು.

ಉದ್ಯಾನದಲ್ಲಿ ಒಂದು ಸುತ್ತು ಹಾಕಿದ ಸಚಿವರು, ಶುಚಿತ್ವ, ಉದ್ಯಾನ ಬಳಕೆದಾರರಿಗೆ ಒದಗಿಸಿರುವ ಸೌಕರ್ಯಗಳನ್ನು ಪರಿಶೀಲಿಸದರಲ್ಲದೆ, ವಿಕಲಚೇತನರಿಗೆ ವ್ಹೀಲ್‌ಚೇರ್ ಹಾಗೂ ಕ್ರೀಡಾಪಟುಗಳಿಗೆ ಕ್ರೀಡಾಸಾಮಾಗ್ರಿಗಳನ್ನು ವಿತರಿಸಿದರು.

ಹೆಣ್ಣೂರು ಜೀವವೈವಿದ್ಯ ಉದ್ಯಾನಕ್ಕೂ ಭೇಟಿ ನೀಡಿದ ಸಚಿವ ಕೆ.ಜೆ. ಜಾರ್ಜ್‌, ಸುಸ್ಥಿರ ಅಭಿವೃದ್ದಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಹಸಿರು ಹೊದಿಕೆ ಹೆಚ್ಚಿಸಲು ಸೂಕ್ತ ಹನಿ ನೀರಾವರಿ ವ್ಯವಸ್ಥೆ ಮಾಡಲು ವಲಯ ಅರಣ್ಯ ಅಧಿಕಾರಿ ಹಾಗೂ ಉಪ ಅರಣ್ಯಸಂರಕ್ಷಣಾಧಿಕಾರಿಗೆ ಸೂಚಿಸಿದರು. ಧೀಮಂತ ನಾಯಕ ಬಿ.ಬಸವಲಿಂಗಪ್ಪನವರ ಹೆಸರಿನಲ್ಲಿ ಉದ್ಯಾನ ಅಭಿವೃದ್ದಿ ಮಾಡಲಾಗುತ್ತಿದೆ. ಅವರ ಹೆಸರಿನ ನಾಮಫಲಕ ಹಾಕುವಂತೆಯೂ ಸಲಹೆ ನೀಡಿದರು.

ಗುಣಮಟ್ಟದ ಕಾಮಗಾರಿಗೆ ಸೂಚನೆ

ಉದ್ಯಾನಗಳ ಅಭಿವೃದ್ದಿಯಲ್ಲದೆ ಬಡಾವಣೆಗಳಲ್ಲಿ ರಸ್ತೆ, ಬೀದಿ ದೀಪ, ಚರಂಡಿ ಹಾಗೂ ಕುಡಿಯುವ ನೀರು ಯೋಜನೆಗಳಿಗೆ ಕಮ್ಮನಹಳ್ಳಿ, ಹೆಚ್‌ಬಿಆರ್‌ ಬಡಾವಣೆ, ಕಾಡುಗೊಂಡನಹಳ್ಳಿಯ ಪಿಳ್ಳಣ್ಣ ಗಾರ್ಡನ್, ವಿನೋಭ ನಗರ, ನಾಗವಾರದ ಉಮದ್ ನಗರ, ರಶದ್ ನಗರ ಹಾಗೂ ಹೆಣ್ಣೂರಿನ ವೀರಣ್ಣಪಾಳ್ಯ ಮತ್ತು ಬಸಪ್ಪ ಬಡಾವಣೆಯಲ್ಲಿ ಸಚಿವ ಕೆ.ಜೆ.ಜಾರ್ಜ್ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳ ಕುರಿತು ಮುಖಂಡರು ಮತ್ತು ಗುತ್ತಿಗೆದಾರರ ಜತೆಗೆ ಮಾತನಾಡಿದ ಸಚಿವರು, ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಬೇಕು. ನಿಗದಿತ ಸಮಯದೊಳಗೆ ಕೆಲಸ ಪೂರ್ಣಗೊಳಿಸಬೇಕು ಎಂದು ಖಡಕ್ ಸೂಚನೆ ನೀಡಿದರು.

ವಿವಿದ ಬಡಾವಣೆಗಳಲ್ಲಿ ಕುಡಿಯುವ ನೀರಿನ ಬಗ್ಗೆ ಪ್ರಶ್ನಿಸಿದ ಜನರಿಗೆ ಸಮಾಧಾನದಿಂದಲೇ ಉತ್ತರಿಸಿದ ಸಚಿವರು, ಕೈಗೊಂಡಿರುವ ಯೋಜನೆಗಳು ಮತ್ತು ಅನುಕೂಲತೆಗಳನ್ನು ವಿವರಿಸಿದರು. ಸದ್ಯಕ್ಕೆ ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗುವುದು ಎಂದರು.

ಸಚಿವರೊಂದಿಗೆ ಮೋಹನ್‌ ಮೆನನ್, ಹೆಣ್ಣೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್‌.ಎ. ಪುಲಕೇಶಿ, ಚಲುವೇಗೌಡ, ಕಲ್ಯಾಣ ನಗರ ವಾರ್ಡ್‌ ಅಧ್ಯಕ್ಷೆ ಪ್ರೇಮಾವತಿ, ಬಾಬು, ಕೆ.ಜೆ.ಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸುಮಿತ್ರ ಮುನಿರಾಜು, ಹೆಚ್‌ಬಿಆರ್‌ ವಾರ್ಡ್‌ ಮುಖಂಡರಾದ ಸಯ್ಯದ್ ಕಲೀಂ, ಅಕ್ರಂ ಹಾಗೂ ಬೆಸ್ಕಾಂ, ಜಿಬಿಎ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

BREAKING: ‘ಪೇಟಿಎಂ ಪೇಮೆಂಟ್ಸ್ ಬ್ಯಾಂಕ್’ ಪರವಾನಗಿ ರದ್ದುಗೊಳಿಸಿದ RBI | Paytm Payments Bank

SHOCKING: ರಾಜ್ಯದಲ್ಲಿ ಘೋರ ದುರಂತ: ಜೋಕಾಲಿ ಕುತ್ತಿಗೆಗೆ ಬಿಗಿದು 9 ವರ್ಷದ ಬಾಲಕಿ ಸಾವು

Share. Facebook Twitter LinkedIn WhatsApp Email

Related Posts

ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಪರೀಕ್ಷಾ ಪ್ರವೇಶ ಪತ್ರ ತೋರಿಸಿ ‘BMTC ಬಸ್‌’ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ!

24/04/2026 7:11 PM2 Mins Read

ಬಿಎಂಟಿಸಿ ‘ಕ್ರೀಡಾ-ಸಾಂಸ್ಕೃತಿಕ ಉತ್ಸವ 2026’: ನೌಕರರ ಕಲ್ಯಾಣಕ್ಕೆ ಸಂಸ್ಥೆ ಸದಾ ಬದ್ಧ ಎಂದ ಸಚಿವ ರಾಮಲಿಂಗಾರೆಡ್ಡಿ

24/04/2026 7:08 PM3 Mins Read

ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಯುವನಿಧಿ’ ನೋಂದಣಿ ಜಾಗೃತಿ ಅಭಿಯಾನಕ್ಕೆ ಚಾಲನೆ

24/04/2026 6:56 PM1 Min Read
Recent News

​’ಅವರ ಅಪರಾಧಗಳಲ್ಲಿ ಭಾಗಿಯಾಗಲು ನನಗಿಷ್ಟವಿರಲಿಲ್ಲ’: ಆಮ್ ಆದ್ಮಿ ಪಾರ್ಟಿ ತೊರೆದಿದ್ದಕ್ಕೆ ರಾಘವ್ ಚಡ್ಡಾ ನೀಡಿದ್ರು ಶಾಕಿಂಗ್ ಕಾರಣ!

24/04/2026 7:42 PM

ಅಣ್ಣಾವ್ರ ನೆನಪಿನಲ್ಲಿ ನಳನಳಿಸುವ ನಂದನವನ: ‘ಡಾ.ರಾಜ್ ಉದ್ಯಾನ’ ಲೋಕಾರ್ಪಣೆಗೊಳಿಸಿದ ಸಚಿವ ಕೆ.ಜೆ. ಜಾರ್ಜ್

24/04/2026 7:41 PM

​’ವೈರಿಗಳು ವಿಚಲಿತರಾಗಿದ್ದಾರೆ’: ಮೊಜ್ತಬಾ ಖಮೇನಿ ಗಾಯಗೊಂಡಿದ್ದಾರೆ ಎಂಬ ವದಂತಿಗಳ ಮಧ್ಯೆಯೇ ಅಮೆರಿಕಕ್ಕೆ ಇರಾನ್‌ನಿಂದ ಏಕತೆಯ ಎಚ್ಚರಿಕೆ!

24/04/2026 7:36 PM

BREAKING: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಆರ್‌ಬಿಐ ಶಾಕ್: ಬ್ಯಾಂಕಿಂಗ್ ಪರವಾನಗಿ ರದ್ದು, ಇಂದಿನಿಂದಲೇ ಜಾರಿ!

24/04/2026 7:29 PM
State News
KARNATAKA

ಅಣ್ಣಾವ್ರ ನೆನಪಿನಲ್ಲಿ ನಳನಳಿಸುವ ನಂದನವನ: ‘ಡಾ.ರಾಜ್ ಉದ್ಯಾನ’ ಲೋಕಾರ್ಪಣೆಗೊಳಿಸಿದ ಸಚಿವ ಕೆ.ಜೆ. ಜಾರ್ಜ್

By kannadanewsnow0924/04/2026 7:41 PM KARNATAKA 2 Mins Read

ಬೆಂಗಳೂರು:  ಕನ್ನಡದ ಕಣ್ಮಣಿ ಡಾ.ರಾಜ್‌ಕುಮಾರ್ ಅವರು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಹಸಿರಾಗಿ, ಜನರ ಉಸಿರಾಗಿದ್ದಾರೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್…

ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಪರೀಕ್ಷಾ ಪ್ರವೇಶ ಪತ್ರ ತೋರಿಸಿ ‘BMTC ಬಸ್‌’ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ!

24/04/2026 7:11 PM

ಬಿಎಂಟಿಸಿ ‘ಕ್ರೀಡಾ-ಸಾಂಸ್ಕೃತಿಕ ಉತ್ಸವ 2026’: ನೌಕರರ ಕಲ್ಯಾಣಕ್ಕೆ ಸಂಸ್ಥೆ ಸದಾ ಬದ್ಧ ಎಂದ ಸಚಿವ ರಾಮಲಿಂಗಾರೆಡ್ಡಿ

24/04/2026 7:08 PM

ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಯುವನಿಧಿ’ ನೋಂದಣಿ ಜಾಗೃತಿ ಅಭಿಯಾನಕ್ಕೆ ಚಾಲನೆ

24/04/2026 6:56 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.