ಬೆಂಗಳೂರು ಗ್ರಾಮಾಂತರ: ಜಮೀನು ಖಾತೆ ಸಂಬಂಧ ರೈತನಿಂದ 20,000 ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬೇಗೂರು ಗ್ರಾಮ ಪಂಚಾಯ್ತಿ ಪಿಡಿಓ ಬಿದ್ದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಬೇಗೂರು ಗ್ರಾಮ ಪಂಚಾಯ್ತಿ ಪಿಡಿಓ ಶೋಭಾರಾಣಿ ಎಂಬುವರು ಜಮೀನು ಖಾತೆ ಮಾಡಿಕೊಡಲು ರಮೇಶ್ ಎಂಬುವರಿಂದ 20,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ರಮೇಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು 20,000 ಲಂಚದ ಹಣವನ್ನು ಬ್ರೋಕರ್ ರುದ್ರಪ್ಪ ಮೂಲಕ ಪಿಡಿಓ ಶೋಭಾರಾಣಿ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿಯೇ ಹಿಡಿದಿದ್ದಾರೆ. ಇದೀಗ ವಶಕ್ಕೆ ಪಡೆದಿರುವಂತ ಲೋಕಾಯುಕ್ತ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ.
ಶಿವಮೊಗ್ಗದ ‘ಮೌಂಟ್ ಕಾರ್ಮೆಲ್ ಶಾಲೆ’ಗೆ ‘CBSE ಮಾನ್ಯತೆ’: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಅನುಮತಿ
ಟ್ರಂಪ್ ಅಧಿಕಾರ ಸ್ವೀಕರಿಸಿದ ಬಳಿಕ ಅಮೆರಿಕಾದಿಂದ 500ಕ್ಕೂ ಹೆಚ್ಚು ‘ಅಕ್ರಮ ವಲಸಿಗರ’ ಬಂಧನ