Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಜಾಗತಿಕ ವೇದಿಕೆಯಲ್ಲಿ ಭಾರತದ ಕೀರ್ತಿ ಪತಾಕೆ: ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಇನ್ನು ಮುಂದೆ ಪ್ರತಿ ವರ್ಷ ‘ದಿಲ್ಜಿತ್ ದೋಸಾಂಜ್ ಡೇ’ ಸಂಭ್ರಮ!

​ಲೆಬನಾನ್ ಅನ್ನು ಸುಟ್ಟುಹಾಕುವ ಇಸ್ರೇಲ್ ಸಚಿವರ ಬೆದರಿಕೆಗೆ ಮೋದಿ ಸರ್ಕಾರ ಮೌನ: ಕೇಂದ್ರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ!

​ಇಂಗ್ಲೆಂಡ್ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಬಿಗ್ ಬೂಸ್ಟ್: ಬುಮ್ರಾ, ರಿಷಭ್ ಪಂತ್ ಫಿಟ್‌ನೆಸ್ ಅಪ್‌ಡೇಟ್ ಇಲ್ಲಿದೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ​ಲೆಬನಾನ್ ಅನ್ನು ಸುಟ್ಟುಹಾಕುವ ಇಸ್ರೇಲ್ ಸಚಿವರ ಬೆದರಿಕೆಗೆ ಮೋದಿ ಸರ್ಕಾರ ಮೌನ: ಕೇಂದ್ರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ!
INDIA

​ಲೆಬನಾನ್ ಅನ್ನು ಸುಟ್ಟುಹಾಕುವ ಇಸ್ರೇಲ್ ಸಚಿವರ ಬೆದರಿಕೆಗೆ ಮೋದಿ ಸರ್ಕಾರ ಮೌನ: ಕೇಂದ್ರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ!

By ಗೋಪಾಲ್‌ ಎನ್‌

ನವದೆಹಲಿ: ಇಡೀ ಲೆಬನಾನ್ ದೇಶವನ್ನು ಸುಟ್ಟುಹಾಕುವುದಾಗಿ ಇಸ್ರೇಲ್‌ನ ಪ್ರಮುಖ ಸಚಿವರೊಬ್ಬರು ನೀಡಿರುವ ಉಗ್ರ ಪ್ರಚೋದನಾಕಾರಿ ಹೇಳಿಕೆಗೆ ಭಾರತ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿರುವುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಈ ನಿಲುವು ಭಾರತದ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಶನಿವಾರ (ಜೂನ್ 20) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವ ಇತಾಮರ್ ಬೆನ್-ಗ್ವಿರ್ ಸಾಮಾಜಿಕ ಜಾಲತಾಣ ‘X’ ನಲ್ಲಿ ಅತ್ಯಂತ ವಿವಾದಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. “ಇಸ್ರೇಲಿ ತಾಯಿಯ ಪ್ರತಿಯೊಂದು ಕಣ್ಣೀರಿನ ಹನಿಗೂ ಸಾವಿರಾರು ಲೆಬನಾನ್ ತಾಯಂದಿರು ಕಣ್ಣೀರು ಹಾಕಬೇಕು. ಇಡೀ ಲೆಬನಾನ್ ದೇಶ ಬೂದಿಯಾಗಬೇಕು. ಅಮೆರಿಕನ್ನರ ಮೇಲಿನ ಗೌರವದೊಂದಿಗೇ ಹೇಳುತ್ತಿದ್ದೇನೆ, ನಮ್ಮ ಮಕ್ಕಳ ರಕ್ತ ಮತ್ತು ಸುರಕ್ಷತೆಯ ವಿಷಯದಲ್ಲಿ ನಾವು ರಾಜಜಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಇಸ್ರೇಲ್ ಜಗತ್ತಿಗೆ ಸ್ಪಷ್ಟಪಡಿಸಬೇಕಿದೆ” ಎಂದು ಅವರು ಬರೆದುಕೊಂಡಿದ್ದರು. ಜಾಗತಿಕ ಮಟ್ಟದಲ್ಲಿ ಈ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಇಸ್ರೇಲ್ ಸಚಿವರ ಈ ಉದ್ಧಟತನದ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಮೋದಿ ಸರ್ಕಾರದ ವಿದೇಶಾಂಗ ನೀತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ:

​ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದವನ್ನು ವಿಶ್ವದಾದ್ಯಂತ ಜಾಗರೂಕತೆಯಿಂದ ಸ್ವಾಗತಿಸಲಾಗುತ್ತಿದೆ. ಆದರೆ ಇಸ್ರೇಲ್‌ನ ಇಂತಹ ನಾಯಕರ ಹೇಳಿಕೆಗಳು ಜಾಗತಿಕ ಶಾಂತಿ ಮತ್ತು ಭದ್ರತೆಗೆ ದೊಡ್ಡ ಕಂಟಕವಾಗಿ ಪರಿಣಮಿಸಿವೆ.
​ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ, ಎಂದಿನಂತೆ ಮೋದಿ ಸರ್ಕಾರ ಈ ವಿಷಯದಲ್ಲಿ ಸಂಪೂರ್ಣ ಮೌನಕ್ಕೆ ಶರಣಾಗಿದೆ.
​ಇಸ್ರೇಲ್ ಮೇಲಿನ ಪ್ರಧಾನ ಮಂತ್ರಿಯವರ ಕುರುಡು ಭಕ್ತಿ ಮತ್ತು ‘ಮೋದಾನಿ’ (ಮೋದಿ-ಅದಾನಿ) ಸಾಮ್ರಾಜ್ಯದ ಹಿತಾಸಕ್ತಿಗಳನ್ನು ರಕ್ಷಿಸುವ ಹಪಾಹಪಿತನ ದೇಶದ ಒಟ್ಟಾರೆ ಹಿತಾಸಕ್ತಿಗೆ ದೊಡ್ಡ ಮಟ್ಟದ ಹಾನಿ ಉಂಟುಮಾಡುತ್ತಿದೆ.

"Modi government completely silent...": Congress questions Centre on Israeli minister's threat against Lebanon
Share. Facebook Twitter LinkedIn WhatsApp Email

Related Posts

​ಜಾಗತಿಕ ವೇದಿಕೆಯಲ್ಲಿ ಭಾರತದ ಕೀರ್ತಿ ಪತಾಕೆ: ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಇನ್ನು ಮುಂದೆ ಪ್ರತಿ ವರ್ಷ ‘ದಿಲ್ಜಿತ್ ದೋಸಾಂಜ್ ಡೇ’ ಸಂಭ್ರಮ!

2 Mins Read

​ಇಂಗ್ಲೆಂಡ್ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಬಿಗ್ ಬೂಸ್ಟ್: ಬುಮ್ರಾ, ರಿಷಭ್ ಪಂತ್ ಫಿಟ್‌ನೆಸ್ ಅಪ್‌ಡೇಟ್ ಇಲ್ಲಿದೆ!

1 Min Read

​ಭಾರತಕ್ಕೆ ಐತಿಹಾಸಿಕ ಜಯ: ಜಾಗತಿಕ ಉಗ್ರರ ನಿಧಿ ನಿಯಂತ್ರಣ ಸಂಸ್ಥೆ ‘FATF’ ಉಪಾಧ್ಯಕ್ಷರಾಗಿ ಹಿರಿಯ ಐಎಎಸ್ ಅಧಿಕಾರಿ ವಿವೇಕ್ ಅಗರ್ವಾಲ್ ಆಯ್ಕೆ!

2 Mins Read
Recent News

​ಜಾಗತಿಕ ವೇದಿಕೆಯಲ್ಲಿ ಭಾರತದ ಕೀರ್ತಿ ಪತಾಕೆ: ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಇನ್ನು ಮುಂದೆ ಪ್ರತಿ ವರ್ಷ ‘ದಿಲ್ಜಿತ್ ದೋಸಾಂಜ್ ಡೇ’ ಸಂಭ್ರಮ!

​ಲೆಬನಾನ್ ಅನ್ನು ಸುಟ್ಟುಹಾಕುವ ಇಸ್ರೇಲ್ ಸಚಿವರ ಬೆದರಿಕೆಗೆ ಮೋದಿ ಸರ್ಕಾರ ಮೌನ: ಕೇಂದ್ರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ!

​ಇಂಗ್ಲೆಂಡ್ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಬಿಗ್ ಬೂಸ್ಟ್: ಬುಮ್ರಾ, ರಿಷಭ್ ಪಂತ್ ಫಿಟ್‌ನೆಸ್ ಅಪ್‌ಡೇಟ್ ಇಲ್ಲಿದೆ!

UGCET-2026: ಕೆಇಎಯಿಂದ ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ; ಇಂದಿನಿಂದಲೇ ಆಪ್ಷನ್ ಎಂಟ್ರಿ ಆರಂಭ

State News
KARNATAKA

UGCET-2026: ಕೆಇಎಯಿಂದ ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ; ಇಂದಿನಿಂದಲೇ ಆಪ್ಷನ್ ಎಂಟ್ರಿ ಆರಂಭ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿಯೊಂದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಯುಜಿಸಿಇಟಿ-2026ರ (UGCET-2026) ಮೊದಲ…

ರಾಜ್ಯಾಧ್ಯಕ್ಷರ ವಾದ ಸರಿಲ್ಲ, ಜನ ಸಂಘಟನೆ ಪೂರಕವಾಗಿಲ್ಲ: ಬಿವೈವಿ ವಿರುದ್ಧ ಕುಮಾರ್ ಬಂಗಾರಪ್ಪ ಕಿಡಿ!

ಸಾಗರದಲ್ಲಿ ‘ವಿದ್ಯುತ್ ವಿತರಣೆ ಪರವಾನಗಿ’ ಖಾಸಗಿಯವರಿಗೆ ನೀಡದಂತೆ ಎಸಿ ಮೂಲಕ ಸರ್ಕಾರಕ್ಕೆ ‘ಕನ್ನಡ ಸೇನೆ’ ಮನವಿ

ಇವು ಶ್ರೀಧರ ಸ್ವಾಮೀಜಿ ತೋರಿದ ಬಾಲ್ಯದ ಲೀಲೆಗಳು: ತಪ್ಪದೇ ಓದಿ, ನಿಮ್ಮ ಕಷ್ಟ, ಆರ್ಥಿಕ ಸಮಸ್ಯೆಗಳು ದೂರ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.