Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಭಾರತಕ್ಕೆ ಐತಿಹಾಸಿಕ ಜಯ: ಜಾಗತಿಕ ಉಗ್ರರ ನಿಧಿ ನಿಯಂತ್ರಣ ಸಂಸ್ಥೆ ‘FATF’ ಉಪಾಧ್ಯಕ್ಷರಾಗಿ ಹಿರಿಯ ಐಎಎಸ್ ಅಧಿಕಾರಿ ವಿವೇಕ್ ಅಗರ್ವಾಲ್ ಆಯ್ಕೆ!

ಸಾಗರದಲ್ಲಿ ‘ವಿದ್ಯುತ್ ವಿತರಣೆ ಪರವಾನಗಿ’ ಖಾಸಗಿಯವರಿಗೆ ನೀಡದಂತೆ ಎಸಿ ಮೂಲಕ ಸರ್ಕಾರಕ್ಕೆ ‘ಕನ್ನಡ ಸೇನೆ’ ಮನವಿ

ಇವು ಶ್ರೀಧರ ಸ್ವಾಮೀಜಿ ತೋರಿದ ಬಾಲ್ಯದ ಲೀಲೆಗಳು: ತಪ್ಪದೇ ಓದಿ, ನಿಮ್ಮ ಕಷ್ಟ, ಆರ್ಥಿಕ ಸಮಸ್ಯೆಗಳು ದೂರ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದಲ್ಲಿ ‘ವಿದ್ಯುತ್ ವಿತರಣೆ ಪರವಾನಗಿ’ ಖಾಸಗಿಯವರಿಗೆ ನೀಡದಂತೆ ಎಸಿ ಮೂಲಕ ಸರ್ಕಾರಕ್ಕೆ ‘ಕನ್ನಡ ಸೇನೆ’ ಮನವಿ
KARNATAKA

ಸಾಗರದಲ್ಲಿ ‘ವಿದ್ಯುತ್ ವಿತರಣೆ ಪರವಾನಗಿ’ ಖಾಸಗಿಯವರಿಗೆ ನೀಡದಂತೆ ಎಸಿ ಮೂಲಕ ಸರ್ಕಾರಕ್ಕೆ ‘ಕನ್ನಡ ಸೇನೆ’ ಮನವಿ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ರಾಜ್ಯದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ತರಾತುರಿಯ ನಡೆಗಳ ವಿರುದ್ಧ ಜನವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ, “ಕನ್ನಡ ಸೇನೆ” ಸಂಘಟನೆಯ ಶಿವಮೊಗ್ಗ ಜಿಲ್ಲಾ ಘಟಕದ ಸಾಗರ ತಾಲ್ಲೂಕು ಘಟಕದಿಂದ ಮುಖ್ಯಮಂತ್ರಿಗಳಿಗೆ ಸಾಗರದ ಉಪವಿಭಾಗಾಧಿಕಾರಿಗಳ ಮೂಲಕ ಮಹತ್ವದ ಜಿಲ್ಲಾಧ್ಯಕ್ಷ ಟಿಪ್ ಟಾಪ್ ಬಷೀರ್ ನಿರ್ದೇಶನದಂತೆ ಫ್ರಾನ್ಸಿಸ್ ಗೋಮ್ಸ್(ಮುನ್ನಾ) ಮನವಿಯನ್ನು ಮಾಡಲಾಯಿತು.

​ಮುನ್ನೆಲೆಗೆ ಬಂದ ಖಾಸಗಿ ಕಂಪನಿಯ ಪರವಾನಗಿ ವಿವಾದ

​’ಟಾಟಾ ಪವರ್ ಕಂಪನಿ ಲಿಮಿಟೆಡ್’ ಸಂಸ್ಥೆಯು ಕರ್ನಾಟಕ ಸರ್ಕಾರದ ಸರ್ಕಾರಿ ಸ್ವಾಮ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಮೆಸ್ಕಾಂ, ಜೆಸ್ಕಾಮ್ ಹಾಗೂ ಹೆಸ್ಕಾಂ ವ್ಯಾಪ್ತಿಯ ಅತಿ ಹೆಚ್ಚು ಆದಾಯ ತರುವ 19 ಜಿಲ್ಲೆಗಳಲ್ಲಿ ಸಮನಾಂತರವಾಗಿ ಖಾಸಗಿ ಸಂಸ್ಥೆಯಾಗಿ ‘ಮುಂದುವರೆಯುವ ದತ್ತಾಂಶ ಪವರ್ ಕಂಪನಿ ಲಿಮಿಟೆಡ್’ ಗ್ರಾಹಕರಿಗೆ ವಿದ್ಯುತ್ ವಿತರಣೆ ಮಾಡಲು ಪರವಾನಗಿ (Licence) ಕೋರಿ ಕರ್ನಾಟಕ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (KERC) ಅರ್ಜಿ ಸಲ್ಲಿಸಿದೆ. ಈ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

​ಖಾಸಗೀಕರಣದಿಂದ ಆಗುವ ನಷ್ಟಗಳು ಮತ್ತು ಆತಂಕಗಳು

​ಕನ್ನಡ ಸೇನೆ ಸಂಘಟನೆಯು ತನ್ನ ಮನವಿಯಲ್ಲಿ ಖಾಸಗೀಕರಣದಿಂದ ಉಂಟಾಗಬಹುದಾದ ಹಲವು ಗಂಭೀರ ಪರಿಣಾಮಗಳನ್ನು ಎತ್ತಿ ತೋರಿಸಿದೆ:

  • ​ಸರ್ಕಾರದ ಹಿಡಿತ ತಪ್ಪುವ ಭೀತಿ: ಲಾಭದಾಯಕ ಜಿಲ್ಲೆಗಳಲ್ಲಿ ಖಾಸಗಿ ಕಂಪನಿಗಳಿಗೆ ವಿದ್ಯುತ್ ವಿತರಣೆಗೆ ಮುಕ್ತ ಅವಕಾಶ ನೀಡಿದರೆ, ಸರ್ಕಾರಿ ಸ್ವಾಮ್ಯದ ವಿದ್ಯುತ್ ಕಂಪನಿಗಳ ಮೇಲಿನ ಹಿಡಿತವನ್ನು ಸರ್ಕಾರ ಕಳೆದುಕೊಳ್ಳಬೇಕಾಗುತ್ತದೆ.
  • ​ದರ ತಾರತಮ್ಯ: ಗ್ರಾಹಕರ ನಡುವೆ ದರ ನಿಗದಿ ವಿಚಾರದಲ್ಲಿ ಅಸಮಾನತೆ ಸೃಷ್ಟಿಯಾಗಲಿದ್ದು, ಸಾಮಾನ್ಯ ಗ್ರಾಹಕರಿಗೆ ಹೊರೆಯಾಗುವ ಸಾಧ್ಯತೆ ದಟ್ಟವಾಗಿದೆ.
  • ​ಸಂವಿಧಾನ ಶಿಲ್ಪಿಯ ಆಶಯಕ್ಕೆ ಧಕ್ಕೆ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು “ದೇಶದ ಸಂಪತ್ತನ್ನು ವೃದ್ಧಿಸುವಲ್ಲಿ ಜನರ ದೈನಂದಿನ ಚಟುವಟಿಕೆಗಳಲ್ಲಿ ಅವಿಭಾಜ್ಯ ಹಾಗೂ ದೇಶದ ಕೈಗಾರಿಕಾಭಿವೃದ್ಧಿ ಮತ್ತು ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ವಿದ್ಯುಚ್ಛಕ್ತಿಯ ಪಾತ್ರ ಅಮೂಲ್ಯವಾದದ್ದು. ವಿದ್ಯುತ್ ಕ್ಷೇತ್ರ ಸರ್ಕಾರದ ನಿಯಂತ್ರಣದಲ್ಲೇ ಇರಬೇಕಲ್ಲದೆ, ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ವಹಿಸುವುದು ಪ್ರಗತಿಪರ ನಿರ್ಧಾರವೆನಿಸುವುದಿಲ್ಲ” ಎಂದು ತಿಳಿಸಿದ್ದರು. ಖಾಸಗೀಕರಣದ ನಿರ್ಧಾರವು ಈ ಆಶಯಕ್ಕೆ ವಿರುದ್ಧವಾಗಿದೆ.
  • ​ಮೀಸಲಾತಿ ಮತ್ತು ಉದ್ಯೋಗಕ್ಕೆ ಕುತ್ತು: ಖಾಸಗಿ ಸಂಸ್ಥೆಗಳು ಲಾಭಕೋರ ಉದ್ದೇಶ ಹೊಂದಿದ್ದರಿಂದ ಅವು ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ನಿರೀಕ್ಷಿತ ಫಲ ನೀಡಲಾರವು. ಅಲ್ಲದೆ, ನೇಮಕಾತಿಯಲ್ಲಿ ಖಾಸಗಿ ಸಂಸ್ಥೆಗಳು ಸರ್ಕಾರದ ಮೀಸಲಾತಿ ನೀತಿಯನ್ನು ಪಾಲಿಸುವುದಿಲ್ಲ. ಇದರಿಂದ ಶೋಷಿತ, ಕೆಳ ಸಮುದಾಯದ ವರ್ಗಕ್ಕೆ ಉದ್ಯೋಗಾವಕಾಶಗಳು ಕೈತಪ್ಪಲಿವೆ.
  • ​ಉದ್ಯೋಗಿಗಳ ಭವಿಷ್ಯಕ್ಕೆ ಅಪಾಯ: ವಿದ್ಯುತ್ ಇಲಾಖೆಯಲ್ಲಿ ಈಗಾಗಲೇ ಸಾವಿರಾರು ಹುದ್ದೆಗಳು ಖಾಲಿಯಿದ್ದು, ಕೆಲಸದ ಒತ್ತಡದ ನಡುವೆಯೂ ಹಗಲಿರುಳು ದುಡಿಯುತ್ತಿರುವ ನುರಿತ ಉದ್ಯೋಗಿಗಳ ಭವಿಷ್ಯ ಮತ್ತು ಭದ್ರತೆಗೆ ಇದು ದೊಡ್ಡ ಆಪತ್ತನ್ನು ತಂದೊಡ್ಡಲಿದೆ.

​ಕನ್ನಡ ಸೇನೆಯ ಆಗ್ರಹ

​ರಾಜ್ಯದ ತೆರಿಗೆದಾರರ ಹಣದಿಂದ ದಶಕಗಳ ಕಾಲ ಶ್ರಮವಹಿಸಿ ನಿರ್ಮಿಸಲಾದ ಬೃಹತ್ ಮೂಲಸೌಕರ್ಯಗಳನ್ನು ಲಾಭಕೋರ ಖಾಸಗಿ ಸಂಸ್ಥೆಗೆ ಒಪ್ಪಿಸುವುದು ಜನವಿರೋಧಿ ನೀತಿಯಾಗಿದೆ.

​ಆದ್ದರಿಂದ, ಇಂಧನ ಸಚಿವರು ಮತ್ತು ಮುಖ್ಯಮಂತ್ರಿಗಳು ತಕ್ಷಣವೇ ಈ ವಿಷಯದ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಬೇಕು. ವಿದ್ಯುತ್ ಕಾಯ್ದೆ 2003ರ ಸೆಕ್ಷನ್ 108 ರನ್ವಯ ಅಧಿಕಾರ ಚಲಾಯಿಸಿ “ರಾಜ್ಯದ ಗ್ರಾಹಕರ, ಕೈಗಾರಿಕೆಗಳ, ರೈತರ ಮತ್ತು ನೌಕರರ ಹಿತದೃಷ್ಟಿಯಿಂದ ‘ಟಾಟಾ ಪವರ್ ಕಂಪನಿ’ಗೆ ಪರವಾನಗಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸದೆ ತಿರಸ್ಕರಿಸುವಂತೆ” ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ರಾಜ್ಯ ಸರ್ಕಾರವು ಕಟ್ಟುನಿಟ್ಟಿನ ಒತ್ತಡ ತರಬೇಕು ಎಂದು ಕನ್ನಡ ಸೇನೆ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಟಿಪ್ ಟಾಪ್ ಬಷೀರ್ ಅವರು ಸೂಚನೆಯಂತೆ ಮಾಜಿ ನಗರಸಭಾ ಸದಸ್ಯರಾದಂತ ಫ್ರಾನ್ಸಿಸ್ ಗೋಮ್ಸ್(ಮುನ್ನಾ) ಅವರು ಎಸಿಗೆ ಸಲ್ಲಿಸಿದಂತ ಮನವಿಯಲ್ಲಿ ಬಲವಾಗಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಸಾಗರ ತಾಲ್ಲೂಕು ಕನ್ನಡ ಸೇನೆ ಸಂಘಟನೆಯ ಪ್ರಮುಖರು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಬಡವರು, ರೈತರಿಗೆ ಮಾರಕವಾದ ವಿದ್ಯುತ್ ಖಾಸಗೀಕರಣ ನಿರ್ಧಾರ ಕೈಬಿಡಿ: ಸಾಗರದಲ್ಲಿ ಹೆಚ್.ಎಲ್.ಶ್ರೀಧರ್ ಆಗ್ರಹ

Share. Facebook Twitter LinkedIn WhatsApp Email

Related Posts

ಇವು ಶ್ರೀಧರ ಸ್ವಾಮೀಜಿ ತೋರಿದ ಬಾಲ್ಯದ ಲೀಲೆಗಳು: ತಪ್ಪದೇ ಓದಿ, ನಿಮ್ಮ ಕಷ್ಟ, ಆರ್ಥಿಕ ಸಮಸ್ಯೆಗಳು ದೂರ

6 Mins Read

ಸೂರ್ಯನ ಸುತ್ತ `ಉಂಗುರಾಕಾರ’ದ ಮನಮೋಹಕ ದೃಶ್ಯ : ಅಪರೂಪದ ಖಗೋಳ ವಿಸ್ಮಯ ಕಂಡು ಬೆರಗಾದ ವಿದ್ಯಾರ್ಥಿಗಳು.!

1 Min Read

ಬಡವರು, ರೈತರಿಗೆ ಮಾರಕವಾದ ವಿದ್ಯುತ್ ಖಾಸಗೀಕರಣ ನಿರ್ಧಾರ ಕೈಬಿಡಿ: ಸಾಗರದಲ್ಲಿ ಹೆಚ್.ಎಲ್.ಶ್ರೀಧರ್ ಆಗ್ರಹ

2 Mins Read
Recent News

​ಭಾರತಕ್ಕೆ ಐತಿಹಾಸಿಕ ಜಯ: ಜಾಗತಿಕ ಉಗ್ರರ ನಿಧಿ ನಿಯಂತ್ರಣ ಸಂಸ್ಥೆ ‘FATF’ ಉಪಾಧ್ಯಕ್ಷರಾಗಿ ಹಿರಿಯ ಐಎಎಸ್ ಅಧಿಕಾರಿ ವಿವೇಕ್ ಅಗರ್ವಾಲ್ ಆಯ್ಕೆ!

ಸಾಗರದಲ್ಲಿ ‘ವಿದ್ಯುತ್ ವಿತರಣೆ ಪರವಾನಗಿ’ ಖಾಸಗಿಯವರಿಗೆ ನೀಡದಂತೆ ಎಸಿ ಮೂಲಕ ಸರ್ಕಾರಕ್ಕೆ ‘ಕನ್ನಡ ಸೇನೆ’ ಮನವಿ

ಇವು ಶ್ರೀಧರ ಸ್ವಾಮೀಜಿ ತೋರಿದ ಬಾಲ್ಯದ ಲೀಲೆಗಳು: ತಪ್ಪದೇ ಓದಿ, ನಿಮ್ಮ ಕಷ್ಟ, ಆರ್ಥಿಕ ಸಮಸ್ಯೆಗಳು ದೂರ

POCSO ಪ್ರಕರಣ: ಕೇಂದ್ರ ಸಚಿವ ಬಂಡಿ ಸಂಜಯ್ ಪುತ್ರ ಭಗೀರತ್‌ಗೆ ತೆಲಂಗಾಣ ಕೋರ್ಟ್‌ನಿಂದ 7 ದಿನಗಳ ಮಧ್ಯಂತರ ಜಾಮೀನು ಮುಂಜೂರು!

State News
KARNATAKA

ಸಾಗರದಲ್ಲಿ ‘ವಿದ್ಯುತ್ ವಿತರಣೆ ಪರವಾನಗಿ’ ಖಾಸಗಿಯವರಿಗೆ ನೀಡದಂತೆ ಎಸಿ ಮೂಲಕ ಸರ್ಕಾರಕ್ಕೆ ‘ಕನ್ನಡ ಸೇನೆ’ ಮನವಿ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ರಾಜ್ಯದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ತರಾತುರಿಯ ನಡೆಗಳ ವಿರುದ್ಧ ಜನವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ, “ಕನ್ನಡ…

ಇವು ಶ್ರೀಧರ ಸ್ವಾಮೀಜಿ ತೋರಿದ ಬಾಲ್ಯದ ಲೀಲೆಗಳು: ತಪ್ಪದೇ ಓದಿ, ನಿಮ್ಮ ಕಷ್ಟ, ಆರ್ಥಿಕ ಸಮಸ್ಯೆಗಳು ದೂರ

ಸೂರ್ಯನ ಸುತ್ತ `ಉಂಗುರಾಕಾರ’ದ ಮನಮೋಹಕ ದೃಶ್ಯ : ಅಪರೂಪದ ಖಗೋಳ ವಿಸ್ಮಯ ಕಂಡು ಬೆರಗಾದ ವಿದ್ಯಾರ್ಥಿಗಳು.!

ಬಡವರು, ರೈತರಿಗೆ ಮಾರಕವಾದ ವಿದ್ಯುತ್ ಖಾಸಗೀಕರಣ ನಿರ್ಧಾರ ಕೈಬಿಡಿ: ಸಾಗರದಲ್ಲಿ ಹೆಚ್.ಎಲ್.ಶ್ರೀಧರ್ ಆಗ್ರಹ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.