Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇವು ಶ್ರೀಧರ ಸ್ವಾಮೀಜಿ ತೋರಿದ ಬಾಲ್ಯದ ಲೀಲೆಗಳು: ತಪ್ಪದೇ ಓದಿ, ನಿಮ್ಮ ಕಷ್ಟ, ಆರ್ಥಿಕ ಸಮಸ್ಯೆಗಳು ದೂರ

POCSO ಪ್ರಕರಣ: ಕೇಂದ್ರ ಸಚಿವ ಬಂಡಿ ಸಂಜಯ್ ಪುತ್ರ ಭಗೀರತ್‌ಗೆ ತೆಲಂಗಾಣ ಕೋರ್ಟ್‌ನಿಂದ 7 ದಿನಗಳ ಮಧ್ಯಂತರ ಜಾಮೀನು ಮುಂಜೂರು!

​ಪಾಕಿಸ್ತಾನದಲ್ಲಿ ಭೀಕರ ಅವಳಿ ಬಾಂಬ್ ಸ್ಫೋಟ: ಕನಿಷ್ಠ 7 ಜನರ ಸಾವು, ರಕ್ಷಣೆಗೆ ಧಾವಿಸಿದವರ ಮೇಲೂ ಕಿಡಿಗೇಡಿಗಳ ಅಟ್ಯಾಕ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » POCSO ಪ್ರಕರಣ: ಕೇಂದ್ರ ಸಚಿವ ಬಂಡಿ ಸಂಜಯ್ ಪುತ್ರ ಭಗೀರತ್‌ಗೆ ತೆಲಂಗಾಣ ಕೋರ್ಟ್‌ನಿಂದ 7 ದಿನಗಳ ಮಧ್ಯಂತರ ಜಾಮೀನು ಮುಂಜೂರು!
INDIA

POCSO ಪ್ರಕರಣ: ಕೇಂದ್ರ ಸಚಿವ ಬಂಡಿ ಸಂಜಯ್ ಪುತ್ರ ಭಗೀರತ್‌ಗೆ ತೆಲಂಗಾಣ ಕೋರ್ಟ್‌ನಿಂದ 7 ದಿನಗಳ ಮಧ್ಯಂತರ ಜಾಮೀನು ಮುಂಜೂರು!

By ಗೋಪಾಲ್‌ ಎನ್‌

​ಹೈದರಾಬಾದ್: ಅಪ್ರಾಪ್ತೆಯ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪೋಕ್ಸೋ (POCSO) ಕಾಯ್ದೆಯಡಿ ನ್ಯಾಯಾಂಗ ಬಂಧನದಲ್ಲಿದ್ದ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಬಂಡಿ ಸಾಯಿ ಭಗೀರತ್‌ಗೆ ಹೈದರಾಬಾದ್‌ನ ಮಲ್ಕಾಜ್‌ಗಿರಿ ವಿಶೇಷ ನ್ಯಾಯಾಲಯವು ಶನಿವಾರ (ಜೂನ್ 20) 7 ದಿನಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಸದ್ಯ ಚೇರ್ಲಪಲ್ಲಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಭಗೀರತ್, ತಮ್ಮ ಅಂತಿಮ ಪದವಿ ಪರೀಕ್ಷೆಗಳಿಗೆ ಹಾಜರಾಗಬೇಕಿರುವುದರಿಂದ ತಮಗೆ ತಾತ್ಕಾಲಿಕ ರಿಲೀಫ್ ನೀಡಬೇಕೆಂದು ಕೋರಿ ಅವರ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿದ್ಯಾರ್ಥಿಯ ಭವಿಷ್ಯದ ಹಿತದೃಷ್ಟಿಯಿಂದ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಕೋರ್ಟ್ ಕೇವಲ 7 ದಿನಗಳ ಅವಧಿಗೆ ಕೆಲವು ಕಠಿಣ ಷರತ್ತುಗಳೊಂದಿಗೆ ಈ ಮಧ್ಯಂತರ ಜಾಮೀನನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.

17 ವರ್ಷದ ಅಪ್ರಾಪ್ತ ಬಾಲಕಿಗೆ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮೇ ತಿಂಗಳಲ್ಲಿ ಭಗೀರತ್ ವಿರುದ್ಧ ಹೈದರಾಬಾದ್‌ನ ಪೆಟ್‌ಬಶೀರ್‌ಬಾಗ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಕಠಿಣ ಮೊಕದ್ದಮೆ ದಾಖಲಾಗಿತ್ತು. ತೆಲಂಗಾಣ ಹೈಕೋರ್ಟ್ ಮುಂಜಾಗ್ರತಾ ಜಾಮೀನು ನೀಡಲು ನಿರಾಕರಿಸಿದ ಬೆನ್ನಲ್ಲೇ, ಮೇ 16 ರಂದು ಭಗೀರತ್ ಪೊಲೀಸರ ಮುಂದೆ ಶರಣಾಗಿದ್ದರು. ಆ ಬಳಿಕ ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಪ್ರಕರಣದ ತನಿಖೆಗೆ ತಮ್ಮ ಮಗ ಸಂಪೂರ್ಣ ಸಹಕಾರ ನೀಡುತ್ತಿದ್ದಾನೆ ಎಂದು ತಿಳಿಸಿರುವ ಕೇಂದ್ರ ಸಚಿವ ಬಂಡಿ ಸಂಜಯ್, “ಕಾನೂನಿನ ಮುಂದೆ ನನ್ನ ಮಗನಾಗಲಿ ಅಥವಾ ಸಾಮಾನ್ಯ ಪ್ರಜೆಯಾಗಲಿ ಎಲ್ಲರೂ ಸಮಾನರು. ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ ಎಂಬ ನಂಬಿಕೆ ನನಗಿದೆ. ನ್ಯಾಯಾಂಗದ ಮೇಲೆ ನಮಗೆ ಪೂರ್ಣ ಗೌರವ ಹಾಗೂ ಭರವಸೆಯಿದೆ” ಎಂದು ಈ ಹಿಂದೆ ಹೇಳಿಕೆ ನೀಡಿದ್ದರು. ಸದ್ಯ ಪರೀಕ್ಷೆ ಮುಗಿದ ನಂತರ ಭಗೀರತ್ ಮತ್ತೆ ಜೈಲಿಗೆ ಮರಳಬೇಕಾಗಬಹುದು ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.

bandi sanjay son bail
Share. Facebook Twitter LinkedIn WhatsApp Email

Related Posts

​ಪಾಕಿಸ್ತಾನದಲ್ಲಿ ಭೀಕರ ಅವಳಿ ಬಾಂಬ್ ಸ್ಫೋಟ: ಕನಿಷ್ಠ 7 ಜನರ ಸಾವು, ರಕ್ಷಣೆಗೆ ಧಾವಿಸಿದವರ ಮೇಲೂ ಕಿಡಿಗೇಡಿಗಳ ಅಟ್ಯಾಕ್!

1 Min Read

ಅಲೋವೆರಾ ಆಧರಿತ ಕ್ರೀಮ್‌ಗಳು ಸೇರಿ 16 ಸಂಯೋಜಿತ ಔಷಧಿಗಳ ಉತ್ಪಾದನೆ ಮತ್ತು ಮಾರಾಟ ತಕ್ಷಣದಿಂದಲೇ ನಿಷೇಧಿಸಿದ ಕೇಂದ್ರ ಸರ್ಕಾರ!

2 Mins Read

​ಬಾಂಗ್ಲಾದೇಶದಲ್ಲಿ ಶ್ರೀರಾಮನ ಮೂರ್ತಿ ವಿರೂಪಕ್ಕೆ ಆಕ್ರೋಶ: ಹಿಂದೂಗಳಿಂದ ಬೃಹತ್ ಪಂಜಿನ ಮೆರವಣಿಗೆ, ಸರ್ಕಾರಕ್ಕೆ 72 ಗಂಟೆಗಳ ಗಡುವು!

2 Mins Read
Recent News

ಇವು ಶ್ರೀಧರ ಸ್ವಾಮೀಜಿ ತೋರಿದ ಬಾಲ್ಯದ ಲೀಲೆಗಳು: ತಪ್ಪದೇ ಓದಿ, ನಿಮ್ಮ ಕಷ್ಟ, ಆರ್ಥಿಕ ಸಮಸ್ಯೆಗಳು ದೂರ

POCSO ಪ್ರಕರಣ: ಕೇಂದ್ರ ಸಚಿವ ಬಂಡಿ ಸಂಜಯ್ ಪುತ್ರ ಭಗೀರತ್‌ಗೆ ತೆಲಂಗಾಣ ಕೋರ್ಟ್‌ನಿಂದ 7 ದಿನಗಳ ಮಧ್ಯಂತರ ಜಾಮೀನು ಮುಂಜೂರು!

​ಪಾಕಿಸ್ತಾನದಲ್ಲಿ ಭೀಕರ ಅವಳಿ ಬಾಂಬ್ ಸ್ಫೋಟ: ಕನಿಷ್ಠ 7 ಜನರ ಸಾವು, ರಕ್ಷಣೆಗೆ ಧಾವಿಸಿದವರ ಮೇಲೂ ಕಿಡಿಗೇಡಿಗಳ ಅಟ್ಯಾಕ್!

ಅಲೋವೆರಾ ಆಧರಿತ ಕ್ರೀಮ್‌ಗಳು ಸೇರಿ 16 ಸಂಯೋಜಿತ ಔಷಧಿಗಳ ಉತ್ಪಾದನೆ ಮತ್ತು ಮಾರಾಟ ತಕ್ಷಣದಿಂದಲೇ ನಿಷೇಧಿಸಿದ ಕೇಂದ್ರ ಸರ್ಕಾರ!

State News
KARNATAKA

ಇವು ಶ್ರೀಧರ ಸ್ವಾಮೀಜಿ ತೋರಿದ ಬಾಲ್ಯದ ಲೀಲೆಗಳು: ತಪ್ಪದೇ ಓದಿ, ನಿಮ್ಮ ಕಷ್ಟ, ಆರ್ಥಿಕ ಸಮಸ್ಯೆಗಳು ದೂರ

By ವಸಂತ ಬಿ ಈಶ್ವರಗೆರೆ KARNATAKA 6 Mins Read

ಶ್ರೀಧರ ಸ್ವಾಮಿಗಳ ಸೇವೆಯಿಂದ ಉದ್ಧಾರವಾದ ರಾಘವೇಂದ್ರ ಸ್ವಾಮಿಗಳ ಭಕ್ತ. ಶ್ರೀಧರರು ತೋರಿದ ಬಾಲ್ಯ ಲೀಲೆಗಳು:- ಪದಕಿ ಮನೆತನದ ನಾರಾಯಣರಾಯರು ಮತ್ತು ಕಮಲಾ…

ಸೂರ್ಯನ ಸುತ್ತ `ಉಂಗುರಾಕಾರ’ದ ಮನಮೋಹಕ ದೃಶ್ಯ : ಅಪರೂಪದ ಖಗೋಳ ವಿಸ್ಮಯ ಕಂಡು ಬೆರಗಾದ ವಿದ್ಯಾರ್ಥಿಗಳು.!

ಬಡವರು, ರೈತರಿಗೆ ಮಾರಕವಾದ ವಿದ್ಯುತ್ ಖಾಸಗೀಕರಣ ನಿರ್ಧಾರ ಕೈಬಿಡಿ: ಸಾಗರದಲ್ಲಿ ಹೆಚ್.ಎಲ್.ಶ್ರೀಧರ್ ಆಗ್ರಹ

BREAKING : ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಅಪ್ರಚಾರ: ‘ಕುಮಾರಸ್ವಾಮಿ ಫಾರ್ ಸಿಎಂ’ ಜಾಲತಾಣದ ವಿರುದ್ಧ `FIR’ ದಾಖಲು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.