ಶ್ರೀಧರ ಸ್ವಾಮಿಗಳ ಸೇವೆಯಿಂದ ಉದ್ಧಾರವಾದ ರಾಘವೇಂದ್ರ ಸ್ವಾಮಿಗಳ ಭಕ್ತ. ಶ್ರೀಧರರು ತೋರಿದ ಬಾಲ್ಯ ಲೀಲೆಗಳು:-
ಪದಕಿ ಮನೆತನದ ನಾರಾಯಣರಾಯರು ಮತ್ತು ಕಮಲಾ ದಂಪತಿ ಇವರ ಕುಟುಂಬದಲ್ಲಿ ನಾಗದೋಷವಿದ್ದು ಅನೇಕ ತೊಂದರೆಗಳು ಭಾದಿಸಿತ್ತು. ಮನೆಯಲ್ಲಿ ಅಶಾಂತಿ, ಹುಟ್ಟಿದ ಮಕ್ಕಳು ಅಲ್ಪಾಯುಷಿಗಳು. ಇದೇ ಚಿಂತೆಯಲ್ಲಿದ್ದಾಗ, ಅಂದು ಕುಲಪುರೋಹಿತರು ಮನೆಗೆ ಬಂದು, ನಾರಾಯಣ ಇನ್ನು ನಿಮ್ಮ ಕಷ್ಟಗಳಿಗೆಲ್ಲ ಮುಕ್ತಿ ಸಿಗುವ ಸಮಯ ಬಂದಿದೆ. ಸರ್ಪದೋಷ ನಿವಾರಣೆಗೆ ಹಾಗೂ ಉತ್ತಮ ಸಂತಾನಕ್ಕಾಗಿ ಶ್ರೀ ಗುರು ದತ್ತಾತ್ರೇಯರ ಪುಣ್ಯಕ್ಷೇತ್ರವಾದ ಗಾಣಿಗಾಪು ರಕ್ಕೆ ಹೋಗಿ ದತ್ತಾರಾಧನೆಯನ್ನು ಮಾಡಿರಿ ಎಂದರು . ಅವರ ಮಾತಿನಂತೆ ನಾರಾಯಣರು ಪತ್ನಿ ಜೊತೆ ಗಾಣಿಗಾಪರಕ್ಕೆ ಬಂದು ಭೀಮ- ಅಮರಜಾ ಸಂಗಮದಲ್ಲಿ ಸ್ನಾನ ಮಾಡಿ, ಔದಂಬರ ವೃಕ್ಷಕ್ಕೆ ಪ್ರದಕ್ಷಿಣೆ ನಮಸ್ಕಾರ ಮಾಡಿ, ಗುರು ಚರಿತ್ರೆ ಪಠಿಸಿ ದತ್ತೋಪಾಸನೆ ಮಾಡುತ್ತಾ ಕೆಲವು ದಿನಗಳ ಕಳೆದರು. ಒಂದು ಬೆಳಿಗ್ಗೆ ಸಂಗಮದಲ್ಲಿ ಕುಳಿತು ಅನನ್ಯ ಭಕ್ತಿಯಿಂದ ದತ್ತ ಗುರುವನ್ನು ಪ್ರಾರ್ಥಿಸಿ ಒಮ್ಮೆ ದರ್ಶನ ಕೊಡು ತಂದೆ ಎನ್ನುತ್ತಲೇ ಭಾವಪರವಶರಾಗಿ ದೇಹ ಭಾವ ಮರೆತರು. ಅವರ ಅನನ್ಯ ಭಕ್ತಿಗೆ ದತ್ತಾತ್ರೇಯರು ಒಲಿದು ದಂಪತಿಗಳಿಗೆ ಸಂಗಮದ ನೀರಿನಲ್ಲಿ ದರ್ಶನ ಕೊಟ್ಟು ಅನುಗ್ರಹಿಸಿದರು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ದತ್ತಾತ್ರೇಯರ ಅನುಗ್ರಹದಿಂದ ಕೆಲವೇ ತಿಂಗಳಲ್ಲಿ ಕಮಲಾ ಮಾತೆ ಗರ್ಭ ಧರಿಸಿದರು. ಕಮಲಾ ಮಾತೆ ಬಾಣಂತನಕ್ಕೆ ತಾಯಿ ಮನೆ ಚಿಂಚೋಳಿಗೆ ಬಂದಿದ್ದರು. ಅಂದು ದತ್ತ ಜಯಂತಿ ಊರ ತುಂಬ ಸಂಭ್ರಮ. ಅಲಂಕರಿಸಿದ ಪಲ್ಲಕ್ಕಿಯಲ್ಲಿ ಶೋಭಾಯಮಾನವಾದ ದತ್ತಮೂರ್ತಿ ಉತ್ಸವ ನಡೆಯುತ್ತಿದೆ. ಊರಿನ ಮನೆಗಳ ಮುಂದೆ ಪಲ್ಲಕ್ಕಿ ನಿಂತು ದತ್ತಮೂರ್ತಿಗೆ ಪೂಜೆ- ಆರತಿ ಸೇವೆಯಾಗಿ ಉತ್ಸವ ಮುಂದೆ ಮುಂದೆ ಸಾಗುತ್ತಿತ್ತು. ನಾರಾಯಣ ದಂಪತಿಗಳಿ ರುವ ಮನೆಗೆ ದತ್ತ ಉತ್ಸವ ಪಲ್ಲಕ್ಕಿ ಬಂದಿತು. ಭಕ್ತರು ಭಜೆಸುತ್ತಿದ್ದರು, ವಿಪ್ರರ ಸ್ವಸ್ತಿಘೋಷ ಮೊಳಗುತ್ತಿತ್ತು. ಮಹಿಳೆಯರು ಹಾಡುತ್ತಿದ್ದರು. ದತ್ತ ಉತ್ಸವ ಮನೆ ಮುಂದೆ ಬಂದ ಸಮಯ ಮಾರ್ಗಶಿರ ಮಾಸ ಶುಕ್ಲ ಪಕ್ಷ ಹುಣ್ಣಿಮೆ ದಿನ ಗೋಧೂಳಿ (19೦7) ಸಮಯದಲ್ಲಿ ತುಂಬು ಗರ್ಭಿಣಿ ಕಮಲಾಬಾಯಿಗೆ ಶ್ರೀಧರ ರೂಪದಲ್ಲಿ ದತ್ತಾತ್ರೇಯರು ಭೂಮಿಯಲ್ಲಿ ಅವತರಿಸಿದರು.
ದಂಪತಿಗಳ ಆನಂದಕ್ಕೆ ಮಿತಿಯೇ ಇಲ್ಲ. ನಾರಾಯಣರಾಯರು ದತ್ತಾತ್ರೇಯ ಉತ್ಸವ ಮೂರ್ತಿಗೆ ವಿಶೇಷವಾಗಿ ಪೂಜೆ ಸಲ್ಲಿಸಿದರು. ದತ್ತರ ವರಪ್ರಸಾದದಿಂದ ಜನಿಸಿದ ತಮ್ಮ ಮಗುವನ್ನು ಕಣ್ತುಂಬ ನೋಡುತ್ತಿದ್ದರು. ಮಗುವಿನ ಶಿರದ ಭಾಗದಲ್ಲಿ ಬಾಲ ಚಂದ್ರರೇಖೆ ನೋಡಿದರು. ಪಾದದಲ್ಲಿ ಪದ್ಮಚಿಹ್ನೆ ಮೂಡಿತ್ತು. ಪುಟ್ಟ ಮಗುವಿನ ಹಣೆಯಲ್ಲಿ ತ್ರಿಪುಂಡ್ರ ಭಸ್ಮ, ಕೊರಳಲ್ಲಿ ತುಳಸಿ ಮಾಲೆ, ಕರದಲ್ಲಿ ಜಪಮಾಲೆ ಇರುವುದನ್ನು ನೋಡಿ ಆಶ್ಚರ್ಯ ಚಕಿತರಾದರು. ಶಿಶುವಿನ ದಿವ್ಯ ತೇಜಸ್ಸನ್ನು ಕಂಡ ತಂದೆ ತನ್ನ ಕಂದ ಎನ್ನುವುದನ್ನು ಮರೆತು ಮಗುವಿಗೆ ನಮಸ್ಕರಿಸಿದರು. ಹುಟ್ಟಿದ ಮಗು” ಓಂ ಕಾರ” ಪ್ರಣವ ಹೇಳಿತು. ಮಗುವನ್ನು ನೋಡಲು ಬಂದ ಊರಿನ ಜನರು ಮಗುವಿನ ತೇಜಸ್ಸನ್ನು ಕಂಡು ಬೆರಗಾದರು. ಮಗುವಿಗೆ ಆಶೀರ್ವದಿಸಿ ಹಲವಾರು ಉಡುಗೊರೆಗಳನ್ನು ಕೊಟ್ಟರು.
11ನೇ ದಿನ ಮಗುವಿನ ಜಾತಕ ಬರೆಸಿ ಪರಿಶೀಲಿಸಿದ ಜೋಯಿಸರು, ನಾರಾಯಣ ರಾಯ- ಕಮಲಾ ದಂಪತಿ ಹೇಳಿದರು. ಸಾಕ್ಷಾತ್ ದತ್ತ ಮಹಾರಾಜನೇ ನಿಮ್ಮ ಮಗನಾಗಿ ಬಂದಿರುವನು. ಮಗುವಿಗೆ ನಾಮಕರಣದ ಹೆಸರನ್ನು ಸೂಚಿಸುತ್ತಾ ಅ ‘ಶ್ರೀ’ ಎಂದರೆ ಮಂಗಳ ‘ಮೋಕ್ಷ’ ದಾಯಕ. ಮುಂದೆ ಈ ಮಗು, ಮುಂದೆ ತನ್ನ ಅನನ್ಯ ಭಕ್ತರಿಗೆ ಮೋಕ್ಷ ಪ್ರಾಪ್ತಿ ಮಾಡಲು ಸಮರ್ಥನಾಗಿದ್ದಾನೆ ಎಂದು ಹೇಳಿ ಮಗುವಿಗೆ “ಶ್ರೀಧರ” ಎಂಬ ಹೆಸರನ್ನು ನಾಮಕರಣ ಮಾಡಿದರು. ತಂದೆ ತಾಯಿ ಯರ ಮಮತೆ ಜೊತೆಗೆ ನೆರೆಹೊರೆಯವರು ಮಗು ಶ್ರೀಧರನನ್ನು ಕಂಡರೆ ಬಹಳ ಅಕ್ಕರೆಯಿಂದ ಎತ್ತಿ ಮುದ್ದಾಡುತ್ತಿದ್ದರು. ಮಗುವಿಗೆ ಮೂರು ವರ್ಷ ತುಂಬಿದಾಗ ನಾರಾಯಣ ರಾಯರು ಸ್ವರ್ಗಸ್ಥರಾದರು. ತಾಯಿ ಕಮಲ ಮಾತೆಗೆ ಇದು ಅತ್ಯಂತ ದುಃಖದ ಸಂಗತಿಯಾದರೂ. ಮುದ್ದು ಮಗು ಶ್ರೀಧರನ ಬಾಲ ಲೀಲೆಗಳನ್ನು ನೋಡುತ್ತಾ ಬಾಲಕನ ಲಾಲನೆ ಪಾಲನೆಯಲ್ಲಿ ಮರೆತರು.
ಶ್ರೀಧರ ಸ್ವಾಮಿಗಳ ಮಂತ್ರ
ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೇ
ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ
ಬಾಲಕನಾದ ಶ್ರೀಧರ ತನ್ನ ಮೃದು- ಮಧುರ ನುಡಿಯಿಂದ ಊರವರಿಗೆಲ್ಲ ಪ್ರಿಯ ನಾಗಿದ್ದನು. ತಾಯಿ ಮಗನ ಮೇಲಿನ ಮುದ್ದಿನಿಂದ ನನ್ನ “ಮುದ್ದು ರಾಜ” ಎಂದೇ ಕರೆಯುತ್ತಿದ್ದರು. ಬಾಲಕನಾದ ಶ್ರೀಧರ ಅದಾಗಲೆ ಅದೆಷ್ಟೋ ಲೀಲೆಗಳಿಂದ ಜನರ ಕಷ್ಟವನ್ನು ಪರಿಹರಿಸಿದ್ದು ಜನಗಳಿಗೆ ತಿಳಿಯುತ್ತಿತ್ತು.
ಒಮ್ಮೆ ಒಬ್ಬ ವೃದ್ಧೆ ಬಾಲಕ ಶ್ರೀಧರನ ಬಳಿ ಬಂದು, ಶ್ರೀಧರ ನೀನು ಈಗಾಗಲೇ ನಿನ್ನ ಮಹಿಮೆಯಿಂದ ಹಲವರ ಕಷ್ಟಗಳನ್ನು ಪರಿಹರಿಸುತ್ತಾ, ಎಲ್ಲರನ್ನೂ ಕಷ್ಟದಿಂದ ಮುಕ್ತರನ್ನಾಗಿಸಲು ನೀನು ಜಗತ್ತಿಗೆ ಬಂದಿರುವೆ. ಈಗ ನನಗೆ ಒಂದು ಕಷ್ಟ ಬಂದಿದೆ. ನಾನು ನಿತ್ಯ ನೀರು ತರಲು ಬಾವಿಗೆ ಹೋದರೆ, ಭಾವಿಯ ಸಮೀಪ ಕಣಜದ ಹುಳಗಳು ಗೂಡು ಕಟ್ಟಿವೆ.
ಅವು ಬಂದು ನನಗೆ ಕಚ್ಚಿ ತೊಂದರೆ ಕೊಡುತ್ತಿವೆ. ನನಗೆ ತೊಂದರೆ ಕೊಡುತ್ತಿರುವ ಕಣಜ ಹುಳಗಳಿಂದ ನನ್ನನ್ನು ಪಾರು ಮಾಡು ಎಂದು ಕೇಳಿದಳು. ಬಾಲಕ ಶ್ರೀಧರ ಬಾವಿ ಬಳಿ ಹೋಗಿ “ಶ್ರೀ ರಾಮ ನಾಮ” ಉಚ್ಛರಿಸುತ್ತಾ ಕಣಜದ ಹುಳದ ಗೂಡನ್ನು ಕಿತ್ತು ಕೆಳಗೆ ಹಾಕಿ ಕಾಲಿನಿಂದ ತುಳಿಯತೊಡಗಿದ. ಊರ ಜನರೆಲ್ಲ ಆಶ್ಚರ್ಯದಿಂದ ನೋಡುತ್ತಿದ್ದಾರೆ. ಶ್ರೀಧರ ಕಾಲಿನಿಂದ ತುಳಿಯುತ್ತಿದ್ದರೂ
ಕಣಜಗಳು ಶ್ರೀಧರರಿಗೆ ಕಚ್ಚಲಿಲ್ಲ. ಕಚ್ಚುವ ಬದಲು ಮತ್ತಷ್ಟು ಹುಳಗಳು ಅವಾಗೆ ಬಂದು ಅವನ ಕಾಲಡಿಯಲ್ಲಿ ಸಿಕ್ಕು ಸತ್ತು ಶ್ರೀಧರನಿಂದ ಅವು ಮುಕ್ತಿ ಪಡೆದವು. ಅಲ್ಲಿ ಸೇರಿದ ಜನರೆಲ್ಲರೂ ಶ್ರೀಧರನ ಮಹಿಮೆಯನ್ನು ಕೊಂಡಾಡಿದರು.
ಒಂದು ದಿನ ಕಮಲಾಬಾಯಿ ಮಗನಿಗೆ, ಶ್ರೀಧರ ನೀನು ಈ ಸಲ ಶಾಲೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾದರೆ ನಿನಗೆ ಉಪನಯನ ಮಾಡಿ ಚಿನ್ನದ ಜರಿಯ ಟೋಪಿ ಹಾಕಿ ಕುದುರೆ ಮೇಲೆ ಕೂರಿಸಿ ಮೆರವಣಿಗೆ ಮಾಡಿಸುವೆ ಎಂದರು. ಶ್ರೀಧರ ಹೇಳಿದ, ಅಮ್ಮ ಯೋಚಿಸಬೇಡ ಎಲ್ಲಾ ‘ರಾಮನ ದಯೆ’ ಎಲ್ಲಾ ರಾಮನೇ ಮಾಡಿಸುತ್ತಾನೆ ಚಿಂತೆ ಮಾಡಬೇಡ ಎಂದನು. ಅದರಂತೆ ಆ ವರ್ಷದ ಪರೀಕ್ಷೆಯಲ್ಲಿ ಶ್ರೀಧರ ಶಾಲೆಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾದನು. ತಾಯಿ ಸಂಭ್ರಮದಿಂದ ಉಪನಯನ ಮಾಡಿಸಿ, ಹೊನ್ನ ಬಣ್ಣದ ಜರಿಯ ಟೋಪಿ ಹಾಕಿ ಕುದುರೆ ಮೇಲೆ ಕೂರಿಸಿ ಮೆರವಣಿಗೆ ಮಾಡಿಸಿದರು.
ಉಪನಯನವಾದ ಮೇಲೆ ಶ್ರೀಧರನಲ್ಲಿ ಬಹಳಷ್ಟು ಬದಲಾವಣೆ ಆಯಿತು. ಶ್ರೀಧರನ ಮನೆಯ ಸಮೀಪವೇ ಸಮರ್ಥ ಸಂಪ್ರದಾಯದ “ಶ್ರೀ ನಾರಾಯ
ಮಹಾರಾಜರ” ಮಠವಿತ್ತು. ಆಗಾಗ ತಾಯಿಯ ಜೊತೆ ಮಠಕ್ಕೆ ಬರುತ್ತಿದ್ದನು.
ಹಾಗೆ ಎಲ್ಲೆಲ್ಲಿ ಪ್ರವಚನ- ಹರಿಕಥೆ ನಡೆಯುವುದೋ ಅಲ್ಲಿಗೆಲ್ಲ ಹೋಗುತ್ತಿದ್ದರು. ಪುರಾಣ, ಪ್ರವಚನ, ಹರಿಕಥೆಯನ್ನು ಕೇಳುತ್ತಾ, ಶ್ರೀಧರ ಅದೇ ರೀತಿ ಕೀರ್ತನೆಗಳನ್ನು ಹಾಡಿ, ಕಥೆಗಳನ್ನು ಹೇಳಿ ಹರಿಕಥೆಯಂತೆ ಅಭಿನಯಿಸಿ ತೋರಿಸುತ್ತಿದ್ದನು. ಪ್ರತಿದಿನ ಮಠಕ್ಕೆ ಬರುತ್ತಿದ್ದ ಶ್ರೀಧರನ ಕಣ್ಣಿಗೆ ಒಂದು ದಿನ ಸಮರ್ಥ ರಾಮದಾಸರ ಚಿತ್ರಪಟ
ಕಣ್ಣಿಗೆ ಕಂಡಿತು ತದೇಕಚಿತ್ತನಾಗಿ ಪಠವನ್ನೇ ನೋಡುತ್ತಾ, “ಶ್ರೀ ರಾಮ ಜಯ ರಾಮ, ಜಯ ಜಯ ರಾಮ ರಾಮ” ಎಂದು ಸ್ಮರಣೆ ಮಾಡುತ್ತಾ ಬಹಳ ಹೊತ್ತು ಮೈ ಮರೆತು ಅಲ್ಲೇ ಕುಳಿತಿದ್ದನು. ಮನೆಗೆ ಬಂದಮೇಲೆ ತಾಯಿಯ ಬಳಿ ತನಗೂ ಒಂದು ತುಳಸಿ ಮಣಿಮಾಲೆ ಮತ್ತು ಕೃಷ್ಣಾ ಜಿನ ಬೇಕೆಂದು ಹಠ ಮಾಡಿ ತರಿಸಿ ಕೊಂಡನು. ಪ್ರತಿನಿತ್ಯ ಕೃಷ್ಣಾಜಿನದ ಮೇಲೆ ಕುಳಿತು ರಾಮನಾಮ ಸ್ಮರಣೆ ಮಾಡುತ್ತಿದ್ದನು. ಆಗಲೇ ಸ್ಮೃತಿ ಪಠಲದಲ್ಲಿ ಬಂದಿತು. ಮುಂದಿನ ತಮ್ಮ ಗುರು “ಸಮರ್ಥ ರಾಮದಾಸರೇ” ಎಂಬುದು ಶ್ರೀಧರನ ಮನಸ್ಸಿನಲ್ಲಿ ದೃಢವಾಯಿತು.
ಶಾಂತ ಸ್ವಭಾವದ ಮೃದು ಮಧುರ ಮಾತಿನ ಶ್ರೀಧರ ಸ್ವಾಮಿಗಳು ಜನಿಸಿದ್ದು ಮಹಾರಾಷ್ಟ್ರ. ಆದರೆ ಅವರ ಕಾರ್ಯ ಕ್ಷೇತ್ರ ಕರ್ನಾಟಕದ ಸಾಗರದ ಸಮೀಪ ವರದಹಳ್ಳಿ. ಇಲ್ಲಿಂದಲೇ ಅವರ ಕಾರ್ಯ ದೇಶದ ತುಂಬೆಲ್ಲಾ ಹರಡಿತು. ಮಹಾರಾ ಷ್ಟ್ರದೆಲ್ಲೆಡೆ ಶ್ರೀಧರ ಸ್ವಾಮಿಗಳ ಭಕ್ತರು ತುಂಬಿದ್ದರು. ಬಡವರ ಮೇಲೆ ಅಪಾರ ಕರುಣೆ ಕಷ್ಟದಲ್ಲಿರುವವರಿಗೆ ಸಹಾಯ, ಆಶ್ರಮದಲ್ಲಿ ಯಾರೇ ಬಂದರೂ ಸಂತೃಪ್ತ ಭೋಜನ, ದಿನಂಪ್ರತಿ ಪ್ರವಚನ, ಎಲ್ಲಾ ಕಡೆ ಸಂಚಾರ, ದೇಶ ಸಂಚಾರದೊಂದಿಗೆ ಧರ್ಮ ಪ್ರಚಾರ. ಅವರು ಯಾವುದೇ ಊರಿಗೆ ಹೋಗಲಿ ಮೊದಲು ಊರಿನ ದೇವಸ್ಥಾನಕ್ಕೆ ಹೋಗಿ ದೇವರನ್ನು ಪ್ರಾರ್ಥಿಸಿ, ಊರಿನಲ್ಲಿಯಾವುದೇ ಸಮಸ್ಯೆ ಇದ್ದರೂ ತಿಳಿದುಕೊಂಡು ಅದನ್ನು ಪರಿಹರಿಸುತಿದ್ದರು. ಶ್ರೀಧರರು ಯಾವುದೋ ಒಂದು ಊರಿಗೆ ಬಂದರು ಎಂದರೆ ಆ ಊರಿನ ಕಷ್ಟ ಬಗೆಹರಿಯಿತು ಎಂದು ಜನ ಮಾತನಾಡುತ್ತಿದ್ದರು. ಹೀಗೆ ದೇಶ ಸೇವೆ, ಸಮಾಜ ಸೇವೆ, ಬಡ ಜನರ ಸೇವೆ, ಕಷ್ಟ ಪರಿಹಾರ, ಕೇಳಿಕೊಂಡು ಬಂದ ಜನರ ಸಮಸ್ಯೆಗೆ ಪರಿಹಾರ ಅವರ ಕಾರ್ಯವಾಗಿತ್ತು.
ಅವರು ನೆಲೆಸಿದ ಕಾರ್ಯಕ್ಷೇತ್ರ “ವರದಹಳ್ಳಿ” ಇಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿ ರಾರಾಜಿಸುತ್ತಿದೆ. ಶ್ರೀಧರ ಸ್ವಾಮಿಗಳ ದರ್ಶನ, ತೀರ್ಥ ಮಹಿಮೆ, ಗೋಶಾಲೆ, ದಿನಂಪ್ರತಿ ನಡೆಯುವ ಅನ್ನದಾನ, ಅಲ್ಲಿಗೆ ಹೋಗುವ ಭಕ್ತರಿಗೆ ಯಾವುದೇ ಒತ್ತಡವಿರುವುದಿಲ್ಲ. ಅದಕ್ಕೆ ಹಣ ಬೇಕು, ಇದಕ್ಕೆ ಹಣ ಬೇಕು ಎಂಬ ಗೊಂದಲವೂ ಇಲ್ಲ. ಅವರಿಷ್ಟ ಬಂದಾಗ ಹೋಗಿ ದರ್ಶನ ಮಾಡಿ ಹೊಟ್ಟೆ ತುಂಬಾ ಊಟ ಮಾಡಿ ಬರಬಹುದು. ಪ್ರಕೃತಿ ಸೌಂದರ್ಯದ ನಡುವೆ ನಿಂತಿದೆ ವರದಹಳ್ಳಿ ಶ್ರೀಧರಾಶ್ರಮ
ಅದೊಂದು ಪವಾಡವೇ ಸರಿ:-
ಅಂದು ಶ್ರೀಧರರು ಸಮಾಧಿಸ್ಥರಾದ ಸುದ್ದಿ ಕಾಡ್ಗಿಚ್ಚಿ ನಂತೆ ಎಲ್ಲಾ ಕಡೆ ಹರಡಿ ಲಕ್ಷಾಂತರ ಭಕ್ತರು ತುಂಬಿದರು. ಶ್ರೀಧರರ ನಿಕಟ ಭಕ್ತಳಾದ ಮುಂಬೈಯ ಮಹಿಳೆ ವರ್ಷಕ್ಕೊಮ್ಮೆ ಬಂದು ಶ್ರೀಧರ ಸ್ವಾಮಿಗಳ ದರ್ಶನ, ಆಶೀರ್ವಾದ ಪಡೆದು ಅವರ ಸಮಸ್ಯೆಗಳಿಗೆ ಪರಿಹಾರ ಪಡೆದು ಹೋಗುತ್ತಿದ್ದರು. ಇವರು ಖಾಯಂ ಭಕ್ತರ ಪಟ್ಟಿಯಲ್ಲಿ ಸೇರಿದ್ದರು. ಶ್ರೀಧರರು ಸಮಾಧಿ ಹೊಂದಿದ ಸುದ್ದಿ ಇವರಿಗೆ ತಿಳಿಯಿತು. ಅಂತಿಮ ದರ್ಶನ ಪಡೆಯುವ ಆಸೆ ಇತ್ತು. ಆದರೆ ಬರಲು ಆಗಲಿಲ್ಲ. ಅವರ ದುಃಖ ಹೇಳತಿರದು ವಿಷಯ ತಿಳಿದಾಗಿನಿಂದ ಅಳುತ್ತಲೇ, ಸ್ವಾಮಿ ನಿಮ್ಮ ದರ್ಶನ ಮಾಡಲು ಬರಲಾಗುತ್ತಿಲ್ಲ. ನಾನು ನಿಮ್ಮ ದರ್ಶನ ಮಾಡದೆ ನೀರು ಕುಡಿಯುವುದಿಲ್ಲ ನಿಮ್ಮ ಪಾದ ಸ್ಪರ್ಶ ಮಾಡಲೇಬೇಕು, ಎಂದು ಹಣೆ ಹಣೆ ಚಚ್ಚಿಕೊಂಡು ಅಳುತ್ತಿದ್ದರಂತೆ ಅವರ ದುಃಖ ತಡೆಯಲು ಮನೆಯವರಿಂದ ಸಾಧ್ಯವಾಗಲಿಲ್ಲ. ದಿನ ರಾತ್ರಿ ಅತ್ತು ಅತ್ತು ಹಾಗೆ ನಿದ್ದೆ ಬಂದಿತು. ಅವರ ಕನಸಿನಲ್ಲಿ ಶ್ರೀಧರ ಸ್ವಾಮಿಗಳು ದರ್ಶನ ಕೊಟ್ಟು, ತಂಗಿ ಪಾದ ಸ್ಪರ್ಶ ಮಾಡಲು ಆಗಲಿಲ್ಲವೆಂದು ದುಃಖಿಸಬೇಡ ನನ್ನ ಪಾದ ದರ್ಶನ ನೀನು ಮನೆಯಲ್ಲೆ ಮಾಡುವಿಯಂತೆ ನಾನು ಇಲ್ಲೇ ನೆಲೆಸಿರುವೆ ಎಂದರಂತೆ. ಎಚ್ಚರವಾಗಿ ಕಣ್ಣು ಬಿಟ್ಟು ನೋಡಿದಾಗ ದೇವರ ಗೂಡಿನ ಕೆಳಗೆ ಎರಡು ಪಾದದ ಚಿಹ್ನೆ ಗುರುತು ಮೂಡಿತ್ತು. ಆ ಮಹಿಳೆ ಪಾದದ ಮೇಲೆ ತಲೆ ಇಟ್ಟು ಗುರುದೇವ ನಂಬಿದ ಭಕ್ತರ ಕೈ ಬಿಡುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ ಎನ್ನುವ ಅವರ ದುಃಖದ ಸ್ಥಿತಿಯಲ್ಲೂ, ಮುಖದಲ್ಲಿ ಸಂತೋಷ ತುಂಬಿತು. ಮುಂದೆ ಬಹಳ ಕಾಲ ಪಾದಪೂಜೆ ಮಾಡುತ್ತಿದ್ದು, ಅವರ ಅಂತ್ಯಕಾಲದಲ್ಲಿ ಶ್ರೀಧರ ನಾಮ ಸ್ಮರಣೆಯ ಲ್ಲಿಯೇ ಕೊನೆ ಉಸಿರೆಳೆದರು. ಎಂದು ಮನೆಯಲ್ಲಿ ಹೇಳುತ್ತಿದ್ದ ಶ್ರೀಧರ ಸ್ವಾಮಿಗಳ ಮಹಿಮೆ.
ವಂದಾರು ಜನ ಮಂದಾರಂ
ಯತಿವೃಂದ ಶಿಖಾಮಣಿಂ!
ಬ್ರಹ್ಮ ವಿಷ್ಣು ಶಿವಾಭಿನಂ
ಗುರುರಾಜಂ ನಮಾಮ್ಯಹಂ!!
ಸಚ್ಚಿದಾನಂದ ದುಗ್ಧಾಬ್ಧಿಂ
ನಿಜ ಸತ್ಯ ಹಿತೋಕ್ತಿಭಿ:!
ಲೋಪಯಂತಂ ಹೃದಜ್ಞಾನಂ
ಗುರುರಾಜಂ ನಮಾಮ್ಯ









