Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

UGCET-2026: ಕೆಇಎಯಿಂದ ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ; ಇಂದಿನಿಂದಲೇ ಆಪ್ಷನ್ ಎಂಟ್ರಿ ಆರಂಭ

ರಾಜ್ಯಾಧ್ಯಕ್ಷರ ವಾದ ಸರಿಲ್ಲ, ಜನ ಸಂಘಟನೆ ಪೂರಕವಾಗಿಲ್ಲ: ಬಿವೈವಿ ವಿರುದ್ಧ ಕುಮಾರ್ ಬಂಗಾರಪ್ಪ ಕಿಡಿ!

​ಭಾರತಕ್ಕೆ ಐತಿಹಾಸಿಕ ಜಯ: ಜಾಗತಿಕ ಉಗ್ರರ ನಿಧಿ ನಿಯಂತ್ರಣ ಸಂಸ್ಥೆ ‘FATF’ ಉಪಾಧ್ಯಕ್ಷರಾಗಿ ಹಿರಿಯ ಐಎಎಸ್ ಅಧಿಕಾರಿ ವಿವೇಕ್ ಅಗರ್ವಾಲ್ ಆಯ್ಕೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯಾಧ್ಯಕ್ಷರ ವಾದ ಸರಿಲ್ಲ, ಜನ ಸಂಘಟನೆ ಪೂರಕವಾಗಿಲ್ಲ: ಬಿವೈವಿ ವಿರುದ್ಧ ಕುಮಾರ್ ಬಂಗಾರಪ್ಪ ಕಿಡಿ!
KARNATAKA

ರಾಜ್ಯಾಧ್ಯಕ್ಷರ ವಾದ ಸರಿಲ್ಲ, ಜನ ಸಂಘಟನೆ ಪೂರಕವಾಗಿಲ್ಲ: ಬಿವೈವಿ ವಿರುದ್ಧ ಕುಮಾರ್ ಬಂಗಾರಪ್ಪ ಕಿಡಿ!

By ವಸಂತ ಬಿ ಈಶ್ವರಗೆರೆ

ಮಂಡ್ಯ: ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಹಾಗೂ ನಾಯಕತ್ವದ ಬಗೆಗಿನ ಅಸಮಾಧಾನಗಳು ಮತ್ತೊಮ್ಮೆ ಬಹಿರಂಗಗೊಂಡಿವೆ. ಬಿಜೆಪಿ ರಾಜ್ಯಾಧ್ಯಕ್ಷರ ನಡೆ ಹಾಗೂ ವಾದಗಳ ವಿರುದ್ಧ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ಮಂಡ್ಯದಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. “ರಾಜ್ಯಾಧ್ಯಕ್ಷರ ವಾದಗಳು ಸರಿ ಇಲ್ಲ, ಸದ್ಯದ ಪರಿಸ್ಥಿತಿಯಲ್ಲಿ ಜನ ಸಂಘಟನೆ ಹಾಗೂ ಪಕ್ಷ ಸಂಘಟನೆಗೆ ಪೂರಕ ವಾತಾವರಣ ಕಾಣಿಸುತ್ತಿಲ್ಲ” ಎಂದು ಅವರು ನೇರವಾಗಿಯೇ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಮಾತನಾಡಿದ ಅವರು, “ಅಧ್ಯಕ್ಷರನ್ನಾಗಿ ರಾಷ್ಟ್ರೀಯ ನಾಯಕರು ಆಯ್ಕೆ ಮಾಡಿದ್ದಾರೆ ನಿಜ, ಆದರೆ ಅವರ ಅವಧಿ ನವೆಂಬರ್‌ಗೆ ಮುಕ್ತಾಯಗೊಳ್ಳಲಿದೆ. ಆ ಬಳಿಕ ರಾಜ್ಯಾಧ್ಯಕ್ಷರ ಬದಲಾವಣೆ ಖಂಡಿತ ಆಗುತ್ತದೆ. ಇಲ್ಲಿಯವರೆಗೆ ಅಧಿಕೃತವಾಗಿ ಯಾರೂ ನಾಮಿನೇಷನ್ ಹಾಕಿ ಎಂಬ ಮಾಹಿತಿ ನೀಡಿಲ್ಲ. ಆದರೆ ನಮಗೆ ಧ್ವನಿ ಇದೆ, ನಾವು ನಮ್ಮ ವಾದವನ್ನು ಮಂಡಿಸುತ್ತಿದ್ದೇವೆ” ಎಂದರು.

ಒಳಜಗಳ ಸರಿಪಡಿಸಿ 2028ಕ್ಕೆ ಕಮ್ ಬ್ಯಾಕ್

ಪಕ್ಷದ ಪ್ರಸ್ತುತ ಸ್ಥಿತಿಗತಿಯನ್ನು ಅವಲೋಕಿಸಿದ ಕುಮಾರ್ ಬಂಗಾರಪ್ಪ, “ನಾವು ಎಂಪಿ ಚುನಾವಣೆ ಹಾಗೂ ಬೈ ಎಲೆಕ್ಷನ್‌ಗಳನ್ನು ಕಳೆದುಕೊಂಡಿದ್ದೇವೆ. ಇನ್ನು ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ (ಕ್ರಾಸ್ ವೋಟಿಂಗ್) ನಡೆದಿದೆ. ಇದರಿಂದಾಗಿ ಪಕ್ಷದ ಮೇಲೆ ಹಿಡಿತ ಇಲ್ಲವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಈ ಅಡ್ಡ ಮತದಾನದ ಬಗ್ಗೆ ತನಿಖೆಯೂ ನಡೆಯಲಿದೆ. ಸದ್ಯ ಬಿಜೆಪಿಯ ಒಳಜಗಳವನ್ನು ಸರಿಪಡಿಸುವ ಕೆಲಸ ನಡೆಯುತ್ತಿದ್ದು, ಹಿರಿಯ ನಾಯಕ ಬಿ.ಪಿ. ಯತ್ನಾಳ್ ಅವರು ನಮ್ಮ ಜೊತೆಯೇ ಇದ್ದಾರೆ. ಪ್ರತಿಪಕ್ಷಗಳ ಕೆಲಸವನ್ನು ನೋಡಿಕೊಂಡು ನಾವು ಮುಂದಿನ ಕಾರ್ಯತಂತ್ರ ರೂಪಿಸಬೇಕಿದೆ. ನಾನು ಸದಾ ಬಿಜೆಪಿ ಟೀಮ್‌ನಲ್ಲೇ ಇರುತ್ತೇನೆ” ಎಂದು ಸ್ಪಷ್ಟಪಡಿಸಿದರು.

2028ಕ್ಕೆ ರಾಷ್ಟ್ರ-ರಾಜ್ಯದಲ್ಲಿ ಒಂದೇ ಆಡಳಿತ

ಬಿಜೆಪಿಯ ಭವಿಷ್ಯದ ರಾಜಕಾರಣದ ಬಗ್ಗೆ ಮಾತನಾಡಿದ ಅವರು, “ಇಷ್ಟು ದಿನಗಳ ಕಾಲ ರಾಜ್ಯದಲ್ಲಿ ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ, ಮೈತ್ರಿ ಮೂಲಕವೇ ಅಧಿಕಾರ ಹಿಡಿದಿದೆ. ಒಮ್ಮೆ 104 ಸ್ಥಾನಗಳವರೆಗೆ ಹೋಗಿ ಮತ್ತೆ ಕೆಳಗೆ ಬಂದಿದ್ದೇವೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಪೂರ್ಣ ಪ್ರಮಾಣದ ಯಶಸ್ಸು ಸಿಕ್ಕಿಲ್ಲ. ಆದರೆ 2028ರ ವಿಧಾನಸಭಾ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ. ಬಿಜೆಪಿಯ ಒಳಜಗಳವನ್ನು ಶಮನಗೊಳಿಸಿ 2028ಕ್ಕೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಲದೆ, “ಈ ಬಾರಿ 2028ಕ್ಕೆ ರಾಷ್ಟ್ರ ಹಾಗೂ ರಾಜ್ಯದಲ್ಲಿ ಒಂದೇ ಆಡಳಿತ (ಡಬಲ್ ಇಂಜಿನ್ ಸರ್ಕಾರ) ಇರಬೇಕು ಎನ್ನುವುದು ನಮ್ಮ ಆಶಯ. ಆ ನಿಟ್ಟಿನಲ್ಲಿ ಕರ್ನಾಟಕದಲ್ಲಿ 2028ಕ್ಕೆ ಬಿಜೆಪಿ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಲಿದೆ. ನಮ್ಮ ಹೋರಾಟವನ್ನು ಯಾರೂ ಪ್ರಶ್ನೆ ಮಾಡಿಲ್ಲ” ಎಂದು ಕುಮಾರ್ ಬಂಗಾರಪ್ಪ ದೃಢವಾಗಿ ನುಡಿದರು.

Share. Facebook Twitter LinkedIn WhatsApp Email

Related Posts

UGCET-2026: ಕೆಇಎಯಿಂದ ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ; ಇಂದಿನಿಂದಲೇ ಆಪ್ಷನ್ ಎಂಟ್ರಿ ಆರಂಭ

2 Mins Read

ಸಾಗರದಲ್ಲಿ ‘ವಿದ್ಯುತ್ ವಿತರಣೆ ಪರವಾನಗಿ’ ಖಾಸಗಿಯವರಿಗೆ ನೀಡದಂತೆ ಎಸಿ ಮೂಲಕ ಸರ್ಕಾರಕ್ಕೆ ‘ಕನ್ನಡ ಸೇನೆ’ ಮನವಿ

2 Mins Read

ಇವು ಶ್ರೀಧರ ಸ್ವಾಮೀಜಿ ತೋರಿದ ಬಾಲ್ಯದ ಲೀಲೆಗಳು: ತಪ್ಪದೇ ಓದಿ, ನಿಮ್ಮ ಕಷ್ಟ, ಆರ್ಥಿಕ ಸಮಸ್ಯೆಗಳು ದೂರ

6 Mins Read
Recent News

UGCET-2026: ಕೆಇಎಯಿಂದ ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ; ಇಂದಿನಿಂದಲೇ ಆಪ್ಷನ್ ಎಂಟ್ರಿ ಆರಂಭ

ರಾಜ್ಯಾಧ್ಯಕ್ಷರ ವಾದ ಸರಿಲ್ಲ, ಜನ ಸಂಘಟನೆ ಪೂರಕವಾಗಿಲ್ಲ: ಬಿವೈವಿ ವಿರುದ್ಧ ಕುಮಾರ್ ಬಂಗಾರಪ್ಪ ಕಿಡಿ!

​ಭಾರತಕ್ಕೆ ಐತಿಹಾಸಿಕ ಜಯ: ಜಾಗತಿಕ ಉಗ್ರರ ನಿಧಿ ನಿಯಂತ್ರಣ ಸಂಸ್ಥೆ ‘FATF’ ಉಪಾಧ್ಯಕ್ಷರಾಗಿ ಹಿರಿಯ ಐಎಎಸ್ ಅಧಿಕಾರಿ ವಿವೇಕ್ ಅಗರ್ವಾಲ್ ಆಯ್ಕೆ!

ಸಾಗರದಲ್ಲಿ ‘ವಿದ್ಯುತ್ ವಿತರಣೆ ಪರವಾನಗಿ’ ಖಾಸಗಿಯವರಿಗೆ ನೀಡದಂತೆ ಎಸಿ ಮೂಲಕ ಸರ್ಕಾರಕ್ಕೆ ‘ಕನ್ನಡ ಸೇನೆ’ ಮನವಿ

State News
KARNATAKA

UGCET-2026: ಕೆಇಎಯಿಂದ ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ; ಇಂದಿನಿಂದಲೇ ಆಪ್ಷನ್ ಎಂಟ್ರಿ ಆರಂಭ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿಯೊಂದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಯುಜಿಸಿಇಟಿ-2026ರ (UGCET-2026) ಮೊದಲ…

ರಾಜ್ಯಾಧ್ಯಕ್ಷರ ವಾದ ಸರಿಲ್ಲ, ಜನ ಸಂಘಟನೆ ಪೂರಕವಾಗಿಲ್ಲ: ಬಿವೈವಿ ವಿರುದ್ಧ ಕುಮಾರ್ ಬಂಗಾರಪ್ಪ ಕಿಡಿ!

ಸಾಗರದಲ್ಲಿ ‘ವಿದ್ಯುತ್ ವಿತರಣೆ ಪರವಾನಗಿ’ ಖಾಸಗಿಯವರಿಗೆ ನೀಡದಂತೆ ಎಸಿ ಮೂಲಕ ಸರ್ಕಾರಕ್ಕೆ ‘ಕನ್ನಡ ಸೇನೆ’ ಮನವಿ

ಇವು ಶ್ರೀಧರ ಸ್ವಾಮೀಜಿ ತೋರಿದ ಬಾಲ್ಯದ ಲೀಲೆಗಳು: ತಪ್ಪದೇ ಓದಿ, ನಿಮ್ಮ ಕಷ್ಟ, ಆರ್ಥಿಕ ಸಮಸ್ಯೆಗಳು ದೂರ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.