ಬೆಂಗಳೂರು: ಇತ್ತೀಚೆಗೆ ಮಾಜಿ ಪರಿಷತ್ ಸದಸ್ಯ ಪಿ.ರಾಮಯ್ಯ ಅವರು ನಿಧನರಾಗಿದ್ದರು. ಅವರ ನಿಧವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು. ಇದೀಗ ಆ ಬಳಿಕ ಅಂತ್ಯಕ್ರಿಯೆಯ ವೇಳೆಯಲ್ಲಿ ಪೊಲೀಸ್ ಬ್ಯಾರಿಕೇಡ್ ಹಾಕಿದ್ದಕ್ಕೆ ಬಿಲ್ ಪಾವತಿಸುವಂತೆ ಬಿಲ್ ನೀಡಿ ರಾಜ್ಯ ಸರ್ಕಾರ ಮತ್ತೊಂದು ಎಡವಟ್ಟು ಮಾಡಿದೆ. ಈ ಎಡವಟ್ಟನ್ನು ಕೆಯುಡಬ್ಲ್ಯೂಜೆ ತೀವ್ರವಾಗಿ ಖಂಡಿಸಿದೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿರುವಂತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು, ಹಿರಿಯ ಪತ್ರಕರ್ತರು & ವಿಧಾನ ಪರಿಷತ್ ಮಾಜಿ ಸದಸ್ಯರಾದ ಪಿ.ರಾಮಯ್ಯ ಅವರಿಗೆ ಸರ್ಕಾರಿ ಗೌರವ ಮೂಲಕ ಅಂತ್ಯಸಂಸ್ಕಾರ ಮಾಡಿದ ಕ್ರಮ ಸ್ವಾಗತಾರ್ಹ. ಆದರೆ ಪೊಲೀಸ್ ಬ್ಯಾರಿಕೆಡ್ ಹಾಕಿದ ಬಿಲ್ ನ್ನು ರಾಮಯ್ಯ ಅವರ ಮನೆಗೆ ಕಳುಹಿಸಿದ್ದು ಅವಮಾನವೀಯ ಮತ್ತು ಖಂಡನೀಯ ಹಾಗೂ ಹಿರಿಯ ಜೀವಕ್ಕೆ ಮಾಡಿದ ಅವಮಾನ. ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿದೆ.
ಹಿರಿಯ ಪತ್ರಕರ್ತರು&ವಿಧಾನ ಪರಿಷತ್ ಮಾಜಿ ಸದಸ್ಯರಾದ ಪಿ.ರಾಮಯ್ಯ ಅವರಿಗೆ ಸರ್ಕಾರಿ ಗೌರವ ಮೂಲಕ ಅಂತ್ಯಸಂಸ್ಕಾರ ಮಾಡಿದ ಕ್ರಮ ಸ್ವಾಗತಾರ್ಹ.ಆದರೆ ಪೊಲೀಸ್ ಬ್ಯಾರಿಕೆಡ್ ಹಾಕಿದ ಬಿಲ್ ನ್ನು ರಾಮಯ್ಯ ಅವರ ಮನೆಗೆ ಕಳುಹಿಸಿದ್ದು ಅವಮಾನವೀಯ ಮತ್ತು ಖಂಡನೀಯ ಹಾಗೂ ಹಿರಿಯ ಜೀವಕ್ಕೆ ಮಾಡಿದ ಅವಮಾನ. ತಪ್ಪಿತಸ್ಥರ ಮೇಲೆ ಕ್ರಮಕ್ಕೆ KUWJ ಆಗ್ರಹಿಸುತ್ತದೆ. pic.twitter.com/cCgeHdK3MB
— Karnataka Union of Working Journalists (R) (@KUWJ_R) February 14, 2026
BIG NEWS: ರಾಜ್ಯ ಸರ್ಕಾರದಿಂದ ಮತ್ತೊಂದು ಮಹಾ ಎಡವಟ್ಟು: ಸರ್ಕಾರಿ ಗೌರವದ ಖರ್ಚು-ವೆಚ್ಚ ಪಾವತಿಸುವಂತೆ ಬಿಲ್!








