Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೆಹಲಿ ಕೆಂಪುಕೋಟೆ ದಾಳಿ ಚಾರ್ಜ್‌ಶೀಟ್‌ನಲ್ಲಿ ಶಾಕಿಂಗ್ ಸತ್ಯ ಬಹಿರಂಗ: ದಕ್ಷಿಣ ಏಷ್ಯಾದ ಶಾಂತಿ ಕದಡಲು ಪಾಕಿಸ್ತಾನದ ‘ಬೃಹತ್ ಸಂಚು’!

ಕೇಂದ್ರದ ವೈಫಲ್ಯಕ್ಕೆ ಜನಸಾಮಾನ್ಯರೇ ಬಲಿ: ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರುದ್ಧ ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ

Shocking: ವಿಶ್ವದ ಟಾಪ್ 10 ಅತ್ಯಂತ ಕಲುಷಿತ ವಿಮಾನ ನಿಲ್ದಾಣಗಳ ಪಟ್ಟಿ ಬಿಡುಗಡೆ; 7ನೇ ಸ್ಥಾನದಲ್ಲಿ ಭಾರತ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಜನತೆಗೆ ಕೇಂದ್ರದಿಂದ ಬಿಗ್ ಶಾಕ್: ಅನ್ನಭಾಗ್ಯ ಯೋಜನೆಯಿಂದ 21.63 ಲಕ್ಷ ಫಲಾನುಭವಿಗಳು ಔಟ್!
KARNATAKA

BIG NEWS : ರಾಜ್ಯದ ಜನತೆಗೆ ಕೇಂದ್ರದಿಂದ ಬಿಗ್ ಶಾಕ್: ಅನ್ನಭಾಗ್ಯ ಯೋಜನೆಯಿಂದ 21.63 ಲಕ್ಷ ಫಲಾನುಭವಿಗಳು ಔಟ್!

By ಸುರೇಶ್‌

ಬೆಂಗಳೂರು : ರಾಜ್ಯದಲ್ಲಿ ಬರೋಬ್ಬರಿ 7.76 ಲಕ್ಷ ಅನರ್ಹ ಬಿಪಿಎಲ್ ಫಲಾನುಭವಿಗಳನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಜತೆಗೆ ರಾಜ್ಯದ ‘ಕುಟುಂಬ’ ತಂತ್ರಾಂಶದಡಿ 13.87 ಲಕ್ಷ ಶಂಕಾಸ್ಪದ ಫಲಾನುಭವಿಗಳು ಕಂಡು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಒಟ್ಟಾರೆ ‘ಅನ್ನಭಾಗ್ಯ’ ಯೋಜನೆಯ 4.54 ಕೋಟಿ ಫಲಾನುಭವಿಗಳ ಪೈಕಿ 21.63 ಲಕ್ಷ ಫಲಾನುಭವಿಗಳು ಹೊರಗುಳಿಯುವ ಸಾಧ್ಯತೆಗಳಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಮಾಸಿಕ 25 ಕೋಟಿ ರೂ. ಉಳಿತಾಯ ಆಗುವ ಅಂದಾಜಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಕೇಂದ್ರ ಸರ್ಕಾರ ಗುರುತಿಸಿದ್ದ 7.76 ಲಕ್ಷ ಸಂಶಯಾಸ್ಪದ ಅನರ್ಹ ಫಲಾನುಭವಿಗಳ ಪೈಕಿ 4.72 ಲಕ್ಷ ಫಲಾನುಭವಿಗಳ ಕಾರ್ಡ್‌ಗಳನ್ನು ಅಮಾನತು ಅಥವಾ ರದ್ದು ಮಾಡಲಾಗಿದೆ. ಇನ್ನುಳಿದ 3.03 ಲಕ್ಷ ಫಲಾನುಭವಿಗಳ ವಿಚಾರದಲ್ಲಿ ಪರಿಶೀಲನಾ ಕ್ರಮ ಚಾಲ್ತಿಯಲ್ಲಿದೆ. ಇಷ್ಟು 4.72 ಲಕ್ಷ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯಿಂದ ಹೊರಗುಳಿದಿರುವುದರಿಂದ 8 ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ಉಳಿತಾಯ ಆದಂತಾಗಿದೆ.

ರಾಜ್ಯದಲ್ಲಿ ಒಟ್ಟು 4.54 ಕೋಟಿ ‘ಅನ್ನಭಾಗ್ಯ’ ಫಲಾನುಭವಿಗಳಿದ್ದು ಈ ಪೈಕಿ ಕೇಂದ್ರ ಸರ್ಕಾರ ಗುರುತಿಸಿರುವ 4.72 ಲಕ್ಷ ಹಾಗೂ 13.74 ಲಕ್ಷ ಅನರ್ಹ ಫಲಾನುಭವಿಗಳಿಂದಾಗಿ ಅರ್ಹ ಫಲಾನುಭವಿಗಳ ಸಂಖ್ಯೆಯು 4.35 ಕೋಟಿಗೆ ಇಳಿದಂತಾಗಿದೆ. ಹೀಗಾಗಿ ಸರ್ಕಾರಕ್ಕೂ ಒಟ್ಟು 28 ಕೋಟಿ ರೂ. ಉಳಿತಾಯ ಆದಂತಾಗಿದೆ.

ಪ್ರಸ್ತುತ ಬಿಪಿಎಲ್ ಕಾರ್ಡ್ ಪಡೆಯಲು ಇರುವ ವಾರ್ಷಿಕ ಆದಾಯ ಮಿತಿಯನ್ನು 1.20 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗೆ ಏರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು ಇದಕ್ಕೆ ಕೇಂದ್ರ ಸರ್ಕಾರದ ಅನುಮೋದನೆಯೂ ಬೇಕಾಗುತ್ತದೆ. ಇಲ್ಲದಿದ್ದರೆ, ರಾಜ್ಯ ಸರ್ಕಾರ ನೀಡಿರುವ ಕೆಲವೇ ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಗುವ ಆತಂಕವಿದ್ದು, ಇನ್ನಷ್ಟು ಫಲಾನುಭವಿಗಳು ಅನ್ನಭಾಗ್ಯ ಯೋಜನೆಯಿಂದ ಹೊರಗುಳಿಯುವ ಸಾಧ್ಯತೆಗಳನ್ನೂ ತಳಿ ಹಾಕುವಂತಿಲ್ಲ.

ಪ್ರಮುಖ ಕಾರಣಗಳು ಏನು?

1. ಇ-ಕೆವೈಸಿ (e-KYC) ಅಪ್‌ಡೇಟ್ ಮಾಡದಿರುವುದು:
ಅನ್ನಭಾಗ್ಯ ಮತ್ತು ಪಡಿತರ ಚೀಟಿ ಹೊಂದಿರುವವರು ನಿಯಮಿತವಾಗಿ ತಮ್ಮ ಇ-ಕೆವೈಸಿ ಮಾಡಿಸುವುದು ಕಡ್ಡಾಯ. ಹಲವು ಬಾರಿ ಗಡುವು ನೀಡಿದರೂ ಸುಮಾರು 21.63 ಲಕ್ಷ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ ವಿವರಗಳನ್ನು ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಿಲ್ಲ ಅಥವಾ ಇ-ಕೆವೈಸಿ ಪೂರ್ಣಗೊಳಿಸಿಲ್ಲ. ಇವರನ್ನು ‘ನಿಷ್ಕ್ರಿಯ’ ಫಲಾನುಭವಿಗಳು ಎಂದು ಗುರುತಿಸಿ ಪಟ್ಟಿಯಿಂದ ಹೊರಗಿಡಲಾಗಿದೆ.

2. ಅನರ್ಹ ಪಡಿತರ ಚೀಟಿದಾರರ ಪತ್ತೆ:
ಸರ್ಕಾರದ ಅಂಕಿಅಂಶಗಳ ಪ್ರಕಾರ, ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಮತ್ತು ಐಷಾರಾಮಿ ವಾಹನ ಹೊಂದಿರುವವರು ಕೂಡ ‘ಬಿಪಿಎಲ್’ (BPL) ಕಾರ್ಡ್ ಪಡೆದುಕೊಂಡಿರುವುದು ಪತ್ತೆಯಾಗಿದೆ. ಇಂತಹ ಅನರ್ಹರನ್ನು ಗುರುತಿಸಿ ಯೋಜನೆಯಿಂದ ಕೈಬಿಡುವುದು ಕೇಂದ್ರದ ಉದ್ದೇಶವಾಗಿದೆ.

3. ಮರಣ ಹೊಂದಿದವರು ಮತ್ತು ವಲಸೆ ಹೋದವರು:
ಹಲವು ವರ್ಷಗಳಿಂದ ಪಡಿತರ ಪಡೆಯದವರು, ಮರಣ ಹೊಂದಿದವರು ಅಥವಾ ಬೇರೆ ರಾಜ್ಯಗಳಿಗೆ ವಲಸೆ ಹೋಗಿ ಅಲ್ಲಿಯೂ ಪಡಿತರ ಚೀಟಿ ಹೊಂದಿರುವವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆ ಇದಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆಗುವ ಅನಗತ್ಯ ಹೊರೆ ತಪ್ಪಲಿದೆ.

4. ಕೇಂದ್ರದ ಹೊಸ ಮಾನದಂಡಗಳು:
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ (NFSA) ಕೇಂದ್ರ ಸರ್ಕಾರವು ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸುತ್ತಿದೆ. ಹೊಸ ತಂತ್ರಜ್ಞಾನ ಬಳಸಿ ಪಡಿತರ ಚೀಟಿಗಳ ನೈಜತೆಯನ್ನು ಪರಿಶೀಲಿಸಿದಾಗ ಲಕ್ಷಾಂತರ ಕಾರ್ಡ್‌ಗಳು ಮಾನದಂಡಕ್ಕೆ ಮೀರಿರುವುದು ಕಂಡುಬಂದಿದೆ.

Share. Facebook Twitter LinkedIn WhatsApp Email

Related Posts

ಕೇಂದ್ರದ ವೈಫಲ್ಯಕ್ಕೆ ಜನಸಾಮಾನ್ಯರೇ ಬಲಿ: ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರುದ್ಧ ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ

2 Mins Read

ರಾಜ್ಯದ SC, ST ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಬೆಂಗಳೂರಿನಲ್ಲಿ ಉಚಿತ ವಿಶೇಷ ತರಬೇತಿಗೆ ಅರ್ಜಿ ಆಹ್ವಾನ

2 Mins Read

ಕಾರ್ಮಿಕರ ಕನಿಷ್ಠ ವೇತನ ನಿಗದಿ ಕುರಿತು ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಮಹತ್ವದ ಸಭೆ

1 Min Read
Recent News

ದೆಹಲಿ ಕೆಂಪುಕೋಟೆ ದಾಳಿ ಚಾರ್ಜ್‌ಶೀಟ್‌ನಲ್ಲಿ ಶಾಕಿಂಗ್ ಸತ್ಯ ಬಹಿರಂಗ: ದಕ್ಷಿಣ ಏಷ್ಯಾದ ಶಾಂತಿ ಕದಡಲು ಪಾಕಿಸ್ತಾನದ ‘ಬೃಹತ್ ಸಂಚು’!

ಕೇಂದ್ರದ ವೈಫಲ್ಯಕ್ಕೆ ಜನಸಾಮಾನ್ಯರೇ ಬಲಿ: ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರುದ್ಧ ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ

Shocking: ವಿಶ್ವದ ಟಾಪ್ 10 ಅತ್ಯಂತ ಕಲುಷಿತ ವಿಮಾನ ನಿಲ್ದಾಣಗಳ ಪಟ್ಟಿ ಬಿಡುಗಡೆ; 7ನೇ ಸ್ಥಾನದಲ್ಲಿ ಭಾರತ!

ನಿಮ್ಮ ಮನೆಯ ಮಿಕ್ಶ್ಚರ್ ಅಸಲಿಯೇ ಅಥವಾ ನಕಲಿಯೇ? ಹೀಗೆ ಪತ್ತೆಹಚ್ಚಿ!

State News
KARNATAKA

ಕೇಂದ್ರದ ವೈಫಲ್ಯಕ್ಕೆ ಜನಸಾಮಾನ್ಯರೇ ಬಲಿ: ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರುದ್ಧ ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಲಾ 3 ರೂಪಾಯಿ ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕರ್ನಾಟಕದ…

ರಾಜ್ಯದ SC, ST ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಬೆಂಗಳೂರಿನಲ್ಲಿ ಉಚಿತ ವಿಶೇಷ ತರಬೇತಿಗೆ ಅರ್ಜಿ ಆಹ್ವಾನ

ಕಾರ್ಮಿಕರ ಕನಿಷ್ಠ ವೇತನ ನಿಗದಿ ಕುರಿತು ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಮಹತ್ವದ ಸಭೆ

Namma Metro: ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಮೇ.17ರಂದು ನೇರಳೆ ಮಾರ್ಗದಲ್ಲಿ 2 ಗಂಟೆ ಅವಧಿಗೆ ತಾತ್ಕಾಲಿಕವಾಗಿ ರೈಲು ಸ್ಥಗಿತ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.