BREAKING: ಪೊಲೀಸ್ ಠಾಣೆಯಿಂದಲೇ ಕೊಲೆ ಆರೋಪಿ ಎಸ್ಕೇಪ್

ಹುಬ್ಬಳ್ಳಿ: ಕೊಲೆ ಆರೋಪಿಯೊಬ್ಬ ಪೊಲೀಸ್ ಠಾಣೆಯಿಂದಲೇ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿರುವಂತ ಘಟನೆ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯಲ್ಲಿ ನಡೆದಿದೆ. ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದಂತ ಪ್ರಜ್ವಲ್ ಎಂಬಾತನನ್ನು ವಶಕ್ಕೆ ಪಡೆದು, ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಗೆ ಪೊಲೀಸರು ಕರೆತಂದಿದ್ದರು. ಆದರೇ ಕೊಲೆ ಆರೋಪಿ ಪ್ರಜ್ವಲ್ ಪೊಲೀಸರ ಕಣ್ತಪ್ಪಿಸಿ ಠಾಣೆಯಿಂದಲೇ ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಹುಬ್ಬಳ್ಳಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, ಆದಷ್ಟು ಬೇಗ ಠಾಣೆಯಿಂದ ಪರಾರಿಯಾಗಿರುವಂತ ಕೊಲೆ ಆರೋಪಿಯನ್ನು ಹಿಡಿಯುತ್ತೇವೆ. ಪೊಲೀಸರ ನಿರ್ಲಕ್ಷ್ಯದಿಂದ ಈ ಘಟನೆ … Continue reading BREAKING: ಪೊಲೀಸ್ ಠಾಣೆಯಿಂದಲೇ ಕೊಲೆ ಆರೋಪಿ ಎಸ್ಕೇಪ್