Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘MMIWG2SLGBTQQIA+’ ಎಂದರೆ ಏನು? ಕೆನಡಾ ಸಂಸದೆಯ ಹೇಳಿಕೆಗೆ ಎಲೋನ್ ಮಸ್ಕ್ ವ್ಯಂಗ್ಯ.!

10/04/2026 11:18 AM

SHOCKING : ಬಾಲ ಆಧ್ಯಾತ್ಮಿಕ ಭಾಷಣಕಾರ `ಅಭಿನವ್ ಅರೋರಾ’ ಕಾರಿನ ಮೇಲೆ ಕಿಡಿಗೇಡಿಗಳಿಂದ ದಾಳಿ: ವಿಡಿಯೋ ವೈರಲ್ |WATCH VIDEO

10/04/2026 11:09 AM

SHOCKING : ರಾಜ್ಯದಲ್ಲಿ ಘೋರ ಕೃತ್ಯ : 16 ವರ್ಷದ ಬಾಲಕಿ ಮೇಲೆ ರೇಪ್ ಮಾಡಿ, ಗರ್ಭಪಾತ ಮಾಡಿಸಿದ ಪಾಪಿ ಶಿಕ್ಷಕ!

10/04/2026 11:00 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮುಡಾ ಹಗರಣ: ಮುಖ್ಯಮಂತ್ರಿ ಸಿದ್ಧರಾಮಯ್ಯ ಸತ್ಯಾಂಶ ಮುಚ್ಚಿಟ್ಟಿದ್ದಾರೆ- ಛಲವಾದಿ ನಾರಾಯಣಸ್ವಾಮಿ
KARNATAKA

ಮುಡಾ ಹಗರಣ: ಮುಖ್ಯಮಂತ್ರಿ ಸಿದ್ಧರಾಮಯ್ಯ ಸತ್ಯಾಂಶ ಮುಚ್ಚಿಟ್ಟಿದ್ದಾರೆ- ಛಲವಾದಿ ನಾರಾಯಣಸ್ವಾಮಿ

By kannadanewsnow0910/10/2024 8:26 PM

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಹಗರಣಗಳಲ್ಲಿ ಕ್ಲೀನ್ ಚಿಟ್ ಪಡೆಯಲು ಎಸ್‍ಐಟಿ, ಸಿಐಡಿಯನ್ನು ನೇಮಿಸುತ್ತದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇ.ಡಿ. ಬರದೆ ಇದ್ದಲ್ಲಿ ವಾಲ್ಮೀಕಿ ನಿಗಮದ ಹಗರಣ ಮುಚ್ಚಿ ಹೋಗುತ್ತಿತ್ತು. ಸಿಬಿಐಗೆ ಹೋದಾಗ, ಅದರಲ್ಲಿ ಹಣಕಾಸು ಅವ್ಯವಹಾರ (ಮನಿ ಲಾಂಡರಿಂಗ್) ಇದೆ ಎಂದು ಗೊತ್ತಾದಾಗ ಇ.ಡಿ. ತನಿಖೆ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.

187 ಕೋಟಿ ಅವ್ಯವಹಾರ ನಡೆದುದು ನಿಜ. ಆದರೆ, ಕೇವಲ 87 ಕೋಟಿ ಅವ್ಯವಹಾರ ಆಗಿದೆ ಎಂದು ಮುಖ್ಯಮಂತ್ರಿಯವರು ಅವತ್ತೇ ಹೇಳಿದ್ದರು. ಸತ್ಯ ಒಪ್ಪಿಕೊಂಡ ಮೇಲೆ ಕ್ರಮ ಆಗಿರಲಿಲ್ಲ. ಕದ್ದ ಮಾಲು ವಾಪಸ್ ಕೊಟ್ಟರೆ ಕೇಸ್ ಖುಲಾಸೆ ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಇದರಲ್ಲಿ 20 ಕೋಟಿ ಹಣವನ್ನು ತುಕಾರಾಂ ಅವರ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಿದ್ದಾರೆ. ನಾಗೇಂದ್ರರ ವೈಯಕ್ತಿಕ ವೆಚ್ಚವಾಗಿ ಹಣ ಖರ್ಚಾದುದರ ಕುರಿತು ಇ.ಡಿ. ವರದಿಯಲ್ಲಿ ಉಲ್ಲೇಖವಿದೆ ಎಂದು ತಿಳಿಸಿದರು. ಈಗ ಸಿಎಂ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗೆ ಕಿಂಚಿತ್ತಾದರೂ ಆತ್ಮಗೌರವ ಇದ್ದರೆ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ, ಸಂವಿಧಾನದ ಬಗ್ಗೆ ಗೌರವ ಇದ್ದರೆ ಇಷ್ಟೊತ್ತಿಗಾಗಲೇ ಅವರು ರಾಜೀನಾಮೆ ಕೊಡಬೇಕಿತ್ತು. ಮುಡಾ ಮಾದರಿಯಲ್ಲೇ ವಾಲ್ಮೀಕಿ ನಿಗಮದ ಹಗರಣದ ಸತ್ಯಾಂಶವನ್ನು ಮುಚ್ಚಿಡುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಒಂದು ಕೋರ್ಟ್ 14 ಸೈಟ್ ಪಡೆದುದೇ ತಪ್ಪು ಎಂದಿದೆ. ಅಲ್ಲಿ ಜಮೀನೇ ಇಲ್ಲ; ನೀವು ಹೇಗೆ ಸೈಟ್ ಪಡೆದಿರಿ ಎಂದು ಇನ್ನೊಂದು ಕೋರ್ಟ್ ಹೇಳಿದೆ. ಶೇ 50- 50 ಅನುಪಾತದಲ್ಲಿ ಪಡೆಯಲು ಸಾಧ್ಯವಿಲ್ಲ; ಇದೆಲ್ಲವೂ ಬೋಗಸ್ ಎಂದಿದೆ. ಇಷ್ಟೆಲ್ಲ ಆಗಲು, ನಿಮ್ಮ ಹೆಸರಷ್ಟೇ ಸಾಕು. ನಿಮ್ಮ ಕುಟುಂಬಕ್ಕೆ ಪ್ರಭಾವ ಬಳಸಲು ನಿಮ್ಮ ಹುದ್ದೆಯೇ ಸಾಕು ಎಂದು ವಿಶ್ಲೇಷಿಸಿದರು. ಈ ಎರಡೂ ಕೇಸ್‍ಗಳು ರಾಜ್ಯದ ಮುಖ್ಯಮಂತ್ರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ರುಜುವಾತು ಮಾಡುತ್ತವೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳು ತಮ್ಮ ತಪ್ಪನ್ನು ಅರ್ಥ ಮಾಡಿಕೊಂಡು ರಾಜೀನಾಮೆ ಕೊಟ್ಟು ಹೋಗಲಿ ಎಂದು ಆಗ್ರಹಿಸಿದರು.

ಜಾರಿ ನಿರ್ದೇಶನಾಲಯವು (ಇ.ಡಿ) ನಿನ್ನೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವರದಿ ಒಪ್ಪಿಸಿದೆ. ಈ ವರದಿಯಲ್ಲಿ ವಾಲ್ಮೀಕಿ ನಿಗಮದ ಹಣಕಾಸು ಹಗರಣದಲ್ಲಿ ಬಿ.ನಾಗೇಂದ್ರ ಮಾಸ್ಟರ್ ಮೈಂಡ್ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಯಾರೋ ಅಧಿಕಾರಿಗಳು ಇದನ್ನು ಮಾಡಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದರು ಎಂದು ನುಡಿದರು.

ಮುಖ್ಯಮಂತ್ರಿಗಳು ಹಣಕಾಸು ಇಲಾಖೆಯನ್ನೂ ಹೊಂದಿದ್ದು ಅವರಿಗೆ ಗೊತ್ತಿಲ್ಲದೇ ಇದೆಲ್ಲ ಆಗಲು ಸಾಧ್ಯವಿಲ್ಲ ಎಂದ ಅವರು, ಇ.ಡಿ.ವರದಿಯಲ್ಲಿ 24 ಜನರ ಹೆಸರುಗಳಿವೆ. ಸತ್ಯನಾರಾಯಣ ವರ್ಮ, ಸತ್ಯನಾರಾಯಣ, ಜೆಪಿ ಪದ್ಮನಾಭ, ನಾಗೇಶ್ವರ ರಾವ್, ನೆಕ್ಕುಂಟಿ ನಾಗರಾಜ್, ವಿಜಯಕುಮಾರ್ ಗೌಡ ಮೊದಲಾದವರ ಹೆಸರುಗಳಿವೆ ಎಂದರು. ಮುಖ್ಯಮಂತ್ರಿಗಳಿವೆ ಇವೆಲ್ಲವೂ ಗೊತ್ತಿದ್ದರೂ ಹಗರಣ ಮುಚ್ಚಿ ಹಾಕಲು ಎಸ್‍ಐಟಿಗೆ ಕೊಟ್ಟು ಅಲ್ಲಿ ನಾಗೇಂದ್ರರ ಹೆಸರು ಪ್ರಸ್ತಾಪ ಆಗದಂತೆ ನೋಡಿಕೊಂಡಿದ್ದರು ಎಂದು ಆರೋಪಿಸಿದರು.

ಗ್ರಾಮ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿ ಬೀದಿಯಲ್ಲಿ ಇದ್ದಷ್ಟು ಜನರಿಗೆ ತೊಂದರೆ ಆಗಲಿದೆ. ಒಂದೇ ದಿನದಲ್ಲಿ ಇದನ್ನು ಬಗೆಹರಿಸಬೇಕಿತ್ತು. ಯಾರು ಇವರನ್ನು ತಡೆದಿದ್ದರು ಎಂದು ಪ್ರಶ್ನಿಸಿದರು. ಈ ಸರಕಾರ ನಡೆಸುವುದರಲ್ಲಿ ನಿಮಗೆ ಕಾಳಜಿ ಇಲ್ಲ ಎಂದು ಆಕ್ಷೇಪಿಸಿದರು. ಉದ್ಧಟತನ ಬಿಡಿ; ಸರಕಾರ ನಿಮ್ಮ ಆಸ್ತಿ ಅಲ್ಲ. ದಯವಿಟ್ಟು ಸಮಸ್ಯೆಯನ್ನು ಬೇಗ ಪರಿಹರಿಸಿ ಎಂದು ಒತ್ತಾಯಿಸಿದರು.

ಮೋದಿಜೀ ಅವರ ನಾಯಕತ್ವ ಈ ದೇಶಕ್ಕೆ ಮತ್ತೆ ಅವರೇ ಬೇಕೆಂದು ಜನರು ಹರಿಯಾಣ ಮತ್ತು ಜಮ್ಮು-ಕಾಶ್ಮೀರದ ಚುನಾವಣೆ ಮೂಲಕ ತೋರಿಸಿಕೊಟ್ಟಿದ್ದಾರೆ. ಇವೆರಡು ರಾಜ್ಯಗಳಲ್ಲಿ ಈಚೆಗಷ್ಟೇ ಚುನಾವಣೆ ನಡೆದಿದೆ. ಹರಿಯಾಣದ ಜಿಲೇಬಿ ಕಾಂಗ್ರೆಸ್ ತಟ್ಟೆಗೆ ಬೀಳಲಿದೆ ಎಂಬ ಆಶಾಭಾವದಲ್ಲಿದ್ದರು. ಆದರೆ, ಅಲ್ಲಿ ಸೋತದ್ದು ಮಾತ್ರವಲ್ಲದೆ ಅಧಿಕಾರ ಪಡೆಯುವ ನಿರೀಕ್ಷೆ ಇದ್ದ ಜಮ್ಮು- ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಆರು ಸೀಟಿಗೆ ಇಳಿದಿದೆ ಎಂದು ವಿಶ್ಲೇಷಿಸಿದರು. ಹೀಗೆ ಕಾಂಗ್ರೆಸ್ಸಿನ ಸ್ಥಿತಿ ಇವತ್ತು ಚಿಂತಾಜನಕವಾಗಿದೆ ಎಂದು ತಿಳಿಸಿದರು.

ಜಮ್ಮು- ಕಾಶ್ಮೀರದಲ್ಲಿ ಶಾಂತಿಯುತ ಮತದಾನ ನಡೆದಿದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ 77 ವರ್ಷಗಳಿಂದ ವಂಚಿತವಾಗಿದ್ದ ಮೀಸಲಾತಿ ಲಭಿಸಿ ಅಲ್ಲಿ ನೆಮ್ಮದಿ ಲಭಿಸಿದೆ ಎಂದು ವಿವರಿಸಿದರು. ಅದಕ್ಕೆ ಮೋದಿಜೀ ಅವರಿಗೆ ಧನ್ಯವಾದ ಹೇಳಬೇಕು ಎಂದು ತಿಳಿಸಿದರು.

ರತನ್ ಟಾಟಾ ಅವರು ಅಸ್ತಂಗತರಾಗಿದ್ದು ಇಡೀ ರಾಷ್ಟ್ರ ಒಬ್ಬ ಮೇರುಪುರುಷನನ್ನು ಕಳೆದುಕೊಂಡಿದೆ ಎಂದು ತಿಳಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ. ಮುನಿರಾಜು, ರಾಜ್ಯ ವಕ್ತಾರ ಅಶೋಕ್ ಗೌಡ ಮತ್ತು ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಮಾಧ್ಯಮ ಗೋಷ್ಠಿಯಲ್ಲಿ ಹಾಜರಿದ್ದರು.

ಬೆಳಗಾವಿ ಚಳಿಗಾಲದ ಅಧಿವೇಶನದ ಒಳಗೆ ನೂತನ ಸಿಎಂ: ಮತ್ತೊಂದು ಭವಿಷ್ಯ ನುಡಿದ ಬಿ.ವೈ.ವಿಜಯೇಂದ್ರ

KIRDL ಕಾಮಗಾರಿಯಲ್ಲಿ ಅವ್ಯವಹಾರ, ತೆಲಂಗಾಣ ಚುನಾವಣೆಗೆ ಹಣ: ಛಲವಾದಿ ನಾರಾಯಣಸ್ವಾಮಿ ಆರೋಪ

BREAKING: ಕನ್ನಡ ಚಲನಚಿತ್ರ ನಿರ್ಮಾಪಕ, ಉದಯ ಟಿವಿ ಅಧ್ಯಕ್ಷ ಸೆಲ್ವಂ ಇನ್ನಿಲ್ಲ

Share. Facebook Twitter LinkedIn WhatsApp Email

Related Posts

SHOCKING : ರಾಜ್ಯದಲ್ಲಿ ಘೋರ ಕೃತ್ಯ : 16 ವರ್ಷದ ಬಾಲಕಿ ಮೇಲೆ ರೇಪ್ ಮಾಡಿ, ಗರ್ಭಪಾತ ಮಾಡಿಸಿದ ಪಾಪಿ ಶಿಕ್ಷಕ!

10/04/2026 11:00 AM1 Min Read

BIG NEWS : ಸರ್ಕಾರಿ ಕೋಟಾದಲ್ಲಿ ಅಧ್ಯಯನ ನಡೆಸಿದ ವೈದ್ಯರಿಗೆ 1 ವರ್ಷ ಸೇವೆ ಕಡ್ಡಾಯ : ಹೈಕೋರ್ಟ್ ಮಹತ್ವದ ತೀರ್ಪು

10/04/2026 10:53 AM1 Min Read

BREAKING : ಹಿರಿಯ ಪತ್ರಕರ್ತ, ಖ್ಯಾತ ಸಾಹಿತಿ ನಾಡೋಜ ಡಾ.ಎಸ್.ಆರ್ ರಾಮಸ್ವಾಮಿ ಇನ್ನಿಲ್ಲ | SR Ramaswami No More

10/04/2026 10:35 AM1 Min Read
Recent News

‘MMIWG2SLGBTQQIA+’ ಎಂದರೆ ಏನು? ಕೆನಡಾ ಸಂಸದೆಯ ಹೇಳಿಕೆಗೆ ಎಲೋನ್ ಮಸ್ಕ್ ವ್ಯಂಗ್ಯ.!

10/04/2026 11:18 AM

SHOCKING : ಬಾಲ ಆಧ್ಯಾತ್ಮಿಕ ಭಾಷಣಕಾರ `ಅಭಿನವ್ ಅರೋರಾ’ ಕಾರಿನ ಮೇಲೆ ಕಿಡಿಗೇಡಿಗಳಿಂದ ದಾಳಿ: ವಿಡಿಯೋ ವೈರಲ್ |WATCH VIDEO

10/04/2026 11:09 AM

SHOCKING : ರಾಜ್ಯದಲ್ಲಿ ಘೋರ ಕೃತ್ಯ : 16 ವರ್ಷದ ಬಾಲಕಿ ಮೇಲೆ ರೇಪ್ ಮಾಡಿ, ಗರ್ಭಪಾತ ಮಾಡಿಸಿದ ಪಾಪಿ ಶಿಕ್ಷಕ!

10/04/2026 11:00 AM

BIG NEWS : ಸರ್ಕಾರಿ ಕೋಟಾದಲ್ಲಿ ಅಧ್ಯಯನ ನಡೆಸಿದ ವೈದ್ಯರಿಗೆ 1 ವರ್ಷ ಸೇವೆ ಕಡ್ಡಾಯ : ಹೈಕೋರ್ಟ್ ಮಹತ್ವದ ತೀರ್ಪು

10/04/2026 10:53 AM
State News
KARNATAKA

SHOCKING : ರಾಜ್ಯದಲ್ಲಿ ಘೋರ ಕೃತ್ಯ : 16 ವರ್ಷದ ಬಾಲಕಿ ಮೇಲೆ ರೇಪ್ ಮಾಡಿ, ಗರ್ಭಪಾತ ಮಾಡಿಸಿದ ಪಾಪಿ ಶಿಕ್ಷಕ!

By kannadanewsnow0510/04/2026 11:00 AM KARNATAKA 1 Min Read

ಚಿತ್ರದುರ್ಗ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, 16 ವರ್ಷದ ಬಾಲಕಿಯ ಮೇಲೆ ಶಿಕ್ಷಕನಿಂದಲೇ ಅತ್ಯಾಚಾರ ಎಸಗಿರುವ ಆರೋಪ…

BIG NEWS : ಸರ್ಕಾರಿ ಕೋಟಾದಲ್ಲಿ ಅಧ್ಯಯನ ನಡೆಸಿದ ವೈದ್ಯರಿಗೆ 1 ವರ್ಷ ಸೇವೆ ಕಡ್ಡಾಯ : ಹೈಕೋರ್ಟ್ ಮಹತ್ವದ ತೀರ್ಪು

10/04/2026 10:53 AM

BREAKING : ಹಿರಿಯ ಪತ್ರಕರ್ತ, ಖ್ಯಾತ ಸಾಹಿತಿ ನಾಡೋಜ ಡಾ.ಎಸ್.ಆರ್ ರಾಮಸ್ವಾಮಿ ಇನ್ನಿಲ್ಲ | SR Ramaswami No More

10/04/2026 10:35 AM

2nd ಪಿಯು ಪರೀಕ್ಷೆ ರಿಸಲ್ಟ್ : ಕೊಲೆ ಕೇಸ್​ನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗೆ ಶೇ 80.1ರಷ್ಟು ಅಂಕ!

10/04/2026 10:32 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.