ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನ ಪರಿಷತ್ತಿನ 7 ಸ್ಥಾನಗಳ ದ್ವೈವಾರ್ಷಿಕ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಅಧಿಕೃತವಾಗಿ ಆರಂಭಗೊಂಡಿದೆ.
ಆದರೆ, ಮತ ಎಣಿಕೆಯ ಆರಂಭದಲ್ಲೇ ದೊಡ್ಡದೊಂದು ತಿರುವು ಸಿಕ್ಕಿದ್ದು, ಚಲಾವಣೆಯಾಗಿದ್ದ ಒಟ್ಟು 222 ಮತಗಳ ಪೈಕಿ ಒಂದು ಮತ ಅಸಿಂಧು (ರದ್ದು) ಗೊಂಡಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಚುನಾವಣಾಧಿಕಾರಿಗಳು ಸದ್ಯ 221 ಮತಗಳನ್ನು ಮಾತ್ರವೇ ಪರಿಗಣಿಸಿ ಎಣಿಕೆ ಕಾರ್ಯವನ್ನು ಮುಂದುವರಿಸಿದ್ದಾರೆ.
ಪ್ರಾಶಸ್ತ್ಯದ ಮತಗಳನ್ನು ಸರಿಯಾದ ಕ್ರಮದಲ್ಲಿ ಚಲಾಯಿಸದ ಹಿನ್ನೆಲೆಯಲ್ಲಿ ಈ ಒಂದು ಮತ ರದ್ದಾಗಿದೆ ಎನ್ನಲಾಗುತ್ತಿದ್ದು, ಈ ಅಸಿಂಧುಗೊಂಡ ಮತ ಯಾರದ್ದು ಹಾಗೂ ಇದು ಯಾವ ಪಕ್ಷಕ್ಕೆ ನಷ್ಟ ಉಂಟುಮಾಡಲಿದೆ ಎಂಬುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಎಣಿಕೆ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಇನ್ನು ಕೆಲವೇ ಗಂಟೆಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.








