Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಭಯೋತ್ಪಾದನೆ, ಸೈಬರ್ ಕ್ರೈಂ ಮತ್ತು ಡ್ರಗ್ಸ್ ದಂಧೆಗೆ ಟೆಲಿಗ್ರಾಂ ಆಪ್ ದುರುಪಯೋಗ: ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ!

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ’14 IAS ಅಧಿಕಾರಿ’ಗಳನ್ನು ವರ್ಗಾವಣೆ | IAS Officer Transfer

​ಬಿಸಿಲಿನ ಬೇಗೆಯಿಂದ ಬಚಾವಾಗಲು ಐಪಿಎಲ್ ಮುಂಚಿತವಾಗಿಯೇ ಆರಂಭ? 2027ರ ಟೂರ್ನಿಯಲ್ಲಿ ಹೊಸ ತಂಡಗಳ ಸೇರ್ಪಡೆ ಸದ್ಯಕ್ಕಿಲ್ಲ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಚಿವ ಕೆ.ಜೆ. ಜಾರ್ಜ್ ಅವರ ನಿರ್ದೇಶನ: ಜುಲೈ.1𝟱ರೊಳಗಾಗಿ ಮಂಗಳೂರಿನ ಕಡಂದಲೆ ಉಪಕೇಂದ್ರ ಕಾಮಗಾರಿ ಪೂರ್ಣ
KARNATAKA

ಸಚಿವ ಕೆ.ಜೆ. ಜಾರ್ಜ್ ಅವರ ನಿರ್ದೇಶನ: ಜುಲೈ.1𝟱ರೊಳಗಾಗಿ ಮಂಗಳೂರಿನ ಕಡಂದಲೆ ಉಪಕೇಂದ್ರ ಕಾಮಗಾರಿ ಪೂರ್ಣ

By ವಸಂತ ಬಿ ಈಶ್ವರಗೆರೆ

ಮಂಗಳೂರು: ಇಂಧನ ಸಚಿವರಾದ ಕೆ.ಜೆ. ಜಾರ್ಜ್‌ ಅವರ ನಿರ್ದೇಶನದಂತೆ, ದಕ್ಷಿಣ ಕನ್ನಡ ಹಾಗೂ ಉಡುಪಿ ಸೇರಿದಂತೆ ಕರಾವಳಿ ಭಾಗದ ಜಿಲ್ಲೆಗಳಿಗೆ ತಡೆರಹಿತ, ಉತ್ತಮ ಗುಣಮಟ್ಟದ ವಿದ್ಯುತ್‌ ಸೌಲಭ್ಯ ಒದಗಿಸುವ ‘ಕಡಂದಲೆ 𝟰𝟬𝟬ಕೆವಿ ವಿದ್ಯುತ್ ಉಪಕೇಂದ್ರ’ ಕಾಮಗಾರಿಯನ್ನು ಜುಲೈ 𝟭𝟱 ರ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರಾಮ್‌ ಪ್ರಸಾತ್‌ ಮನೋಹರ್ ತಿಳಿಸಿದ್ದಾರೆ.

ಭೂವ್ಯಾಜ್ಯದ ಕಾರಣದಿಂದಾಗಿ ಕಳೆದ ಮೂರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ತಾಲ್ಲೂಕಿನ ಕಡಂದಲೆ ಗ್ರಾಮದಲ್ಲಿ 𝟰𝟬𝟬 ಕೆವಿ ಲೈನ್‌ ಕಾಮಗಾರಿ ಸ್ಥಗಿತಗೊಂಡಿತ್ತು. ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಹಾಗೂ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರ ಸತತ ಪ್ರಯತ್ನದಿಂದಾಗಿ ಈ ಎಲ್ಲಾ ಅಡೆತಡೆಗಳನ್ನು ಯಶಸ್ವಿಯಾಗಿ ನಿವಾರಿಸಲಾಗಿದೆ. ಸಚಿವರ ನಿರ್ದೇಶನದ ಮೇರೆಗೆ ಇಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್‌ ಪ್ರಸಾತ್‌ ಮನೋಹರ್‌ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿ ಮತನಾಡಿದರು.

“ಮಂಗಳೂರು ರಾಜ್ಯದ ಪ್ರಮುಖ ಕೈಗಾರಿಕಾ ಕೇಂದ್ರವಾಗಿದ್ದು, ತಡೆರಹಿತ ವಿದ್ಯುತ್ ಪೂರೈಕೆ ಅತ್ಯಗತ್ಯವಾಗಿದೆ. ಸಚಿವರ ನಿರ್ದೇಶನದಂತೆ ಮುಂಬರುವ ಮುಂಗಾರಿನೊಳಗೆ ಈ ಯೋಜನೆಯನ್ನು ಮುಕ್ತಾಯಗೊಳಿಸಿ ವಿದ್ಯುತ್ ಪ್ರಸರಣ ಕಾರ್ಯ ಆರಂಭಿಸಲಾಗುವುದು” ಎಂದು ತಿಳಿಸಿದರು.

ವಿದ್ಯುತ್ ಸಮಸ್ಯೆಗೆ ಸಂಜೀವಿನಿ:

“ಪ್ರಮುಖ ಕೈಗಾರಿಕಾ ಹಬ್‌ಗಳಾಗಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ನಿರಂತರ ವಿದ್ಯುತ್‌ ಒದಗಿಸುವ ಪ್ರಮುಖ ಯೋಜನೆ ಇದಾಗಿದೆ. ಮಳೆಗಾಲದಲ್ಲಿ ಎದುರಾಗುತ್ತಿದ್ದ ವೋಲ್ಟೇಜ್‌ ವ್ಯತ್ಯಯ (𝗩𝗼𝗹𝘁𝗮𝗴𝗲 𝗙𝗹𝘂𝗰𝘁𝘂𝗮𝘁𝗶𝗼𝗻) ಮತ್ತು ಕಡಿಮೆ ವೋಲ್ಟೇಜ್ ಸಮಸ್ಯೆಗೆ ಈ 𝟰𝟬𝟬 ಕೆವಿ ಉಪಕೇಂದ್ರ ಶಾಶ್ವತ ಮುಕ್ತಿ ನೀಡಲಿದೆ. ಅಲ್ಲದೆ, ಯಾವುದೇ ಒಂದು ಸ್ಟೇಷನ್‌ ವ್ಯಾಪ್ತಿಯಲ್ಲಿ ತಾಂತ್ರಿಕ ದೋಷ ಉಂಟಾದಾಗ, ಈ ಉಪಕೇಂದ್ರದ ಮೂಲಕ ಪರ್ಯಾಯವಾಗಿ ಲೋಡ್‌ ತೆಗೆದುಕೊಂಡು ತಕ್ಷಣವೇ ವಿದ್ಯುತ್‌ ಮರುಸಂಪರ್ಕ ಕಲ್ಪಿಸುವುದು ಸುಲಭವಾಗಲಿದೆ. ಇದರಿಂದ ಕರಾವಳಿಯ ಪ್ರಮುಖ ಜಿಲ್ಲೆಗಳಿಗೆ ಗುಣಮಟ್ಟದ ವಿದ್ಯುತ್‌ ಲಭ್ಯವಾಗಲಿದೆ”, ಎಂದು ಹೇಳಿದರು.

ಲೈನ್‌ ಕ್ಲೀಯರ್‌ ಮತ್ತು ಸಾರ್ವಜನಿಕರ ಸಹಕಾರಕ್ಕೆ ಮನವಿ:

“ಈ ಕಾಮಗಾರಿಯನ್ನು ತ್ವರಿತವಾಗಿ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ, ಹಾಲಿ ಇರುವ 𝟰𝟬𝟬 ಕೆವಿ ಯುಪಿಸಿಎಲ್-ಹೆಬ್ಬನಹಳ್ಳಿ (𝗨𝗣𝗖𝗟-𝗛𝗲𝗯𝗯𝗮𝗻𝗮𝗵𝗮𝗹𝗹𝗶) ಪ್ರಸರಣ ಮಾರ್ಗದ ಮೇಲೆ ದಿನಾಂಕ 𝟬𝟲.𝟬𝟱.𝟮𝟬𝟮𝟲 ರಿಂದ 𝟮𝟰.𝟬𝟱.𝟮𝟬𝟮𝟲 ರವರೆಗೆ ಮಾರ್ಗ ಮುಕ್ತತೆಯನ್ನು (𝗟𝗶𝗻𝗲 𝗖𝗹𝗲𝗮𝗿) ಪಡೆಯಲು ನಿಗಮವು ನಿರ್ಧರಿಸಿದೆ. ಈ ಮಾರ್ಗ ಮುಕ್ತತೆಯ ಅವಧಿಯಲ್ಲಿ, ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಪ್ರಸರಣ ಮಾರ್ಗದ ಮೇಲಿನ ಒತ್ತಡ ನಿಭಾಯಿಸಿ ಪರ್ಯಾಯ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಆದಾಗ್ಯೂ, ತಾಂತ್ರಿಕವಾಗಿ ಅನಿವಾರ್ಯವಾದರೆ ಮಾತ್ರ ಸೀಮಿತ ಅವಧಿಗೆ (𝗦𝗵𝗼𝗿𝘁 𝗣𝗲𝗿𝗶𝗼𝗱) ವಿದ್ಯುತ್ ಕಡಿತ (𝗟𝗼𝗮𝗱 𝗦𝗵𝗲𝗱𝗱𝗶𝗻𝗴) ಮಾಡಬೇಕಾದ ಸನ್ನಿವೇಶ ಉಂಟಾಗಬಹುದು. ಮಂಗಳೂರಿನ ದೀರ್ಘಕಾಲೀನ ವಿದ್ಯುತ್ ಭದ್ರತೆಯ ಹಿತದೃಷ್ಟಿಯಿಂದ ನಡೆಯುತ್ತಿರುವ ಈ ಅಭಿವೃದ್ಧಿ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಗ್ರಾಹಕರು ಎಂದಿನಂತೆ ಸಹಕಾರ ನೀಡಬೇಕು” ಎಂದು ಡಾ. ರಾಮ್‌ ಪ್ರಸಾತ್‌ ಮನೋಹರ್‌ ಮನವಿ ಮಾಡಿದ್ದಾರೆ.

ಕರಾವಳಿ ಭಾಗದ ಕೈಗಾರಿಕಾ ಬೆಳವಣಿಗೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ನಿರಂತರ ವಿದ್ಯುತ್ ಪೂರೈಕೆ ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಕೆಲವು ಕಾನೂನು ತೊಡಕುಗಳಿಂದ 400 ಕೆ.ವಿ ಲೈನ್‌ ಎಳೆಯುವ ಕಾರ್ಯದಲ್ಲಿ ವಿಳಂಬವಾಗಿತ್ತು. ಈ ಯೋಜನೆಯ ಅಡೆತಡೆಗಳನ್ನು ನಿವಾರಿಸಲು ಇಲಾಖೆ ವಿಶೇಷ ಮುತುವರ್ಜಿ ವಹಿಸಿದೆ. ಕಡಂದಲೆ ಉಪಕೇಂದ್ರವು ಮಂಗಳೂರು ಮತ್ತು ಉಡುಪಿ ಭಾಗಕ್ಕೆ ಅತ್ಯುತ್ತಮ ಗುಣಮಟ್ಟದ ವಿದ್ಯುತ್ ಸೌಲಭ್ಯವನ್ನು ಖಚಿತಪಡಿಸಲಿದೆ.- – ಕೆ.ಜೆ. ಜಾರ್ಜ್, ಮಾನ್ಯ ಇಂಧನ ಸಚಿವರು

ಯೋಜನೆಗೆ ಎದುರಾಗಿದ್ದ ಭೂವ್ಯಾಜ್ಯಗಳನ್ನು ಪರಿಹರಿಸಲು ಇಲಾಖಾ ಮಟ್ಟದಲ್ಲಿ ನಿರಂತರ ಪರಿಶೀಲನೆ ನಡೆಸಿ, ಶೀಘ್ರ ಹಾಗೂ ಸೂಕ್ತ ಪರಿಹಾರ ಕಂಡುಕೊಳ್ಳಲಾಗಿದೆ. ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಲು ಕೆಪಿಟಿಸಿಎಲ್ ಗೆ ಸೂಚನೆ ನೀಡಲಾಗಿದೆ.- – ಗೌರವ್ ಗುಪ್ತ, ಅಪರ ಮುಖ್ಯ ಕಾರ್ಯದರ್ಶಿಗಳು, ಇಂಧನ ಇಲಾಖೆ

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ಮೂವರು IPS ಅಧಿಕಾರಿಗಳನ್ನು ವರ್ಗಾವಣೆ

BIG BREAKING: ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರ ರಚನೆಗೆ ರಾಜ್ಯಪಾಲರನ್ನು ಭೇಟಿಯಾಗಿ ದಳಪತಿ ವಿಜಯ್ ಹಕ್ಕು ಮಂಡನೆ

Share. Facebook Twitter LinkedIn WhatsApp Email

Related Posts

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ’14 IAS ಅಧಿಕಾರಿ’ಗಳನ್ನು ವರ್ಗಾವಣೆ | IAS Officer Transfer

2 Mins Read

BIG BREAKING: ಕರ್ನಾಟಕ ವಿಧಾನ ಪರಿಷತ್ ಚುನಾವಣೆ; ಕಾಂಗ್ರೆಸ್ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಭರ್ಜರಿ ಗೆಲುವು

1 Min Read

BIG BREAKING: ಕರ್ನಾಟಕ ವಿಧಾನ ಪರಿಷತ್ ಚುನಾವಣೆ: 222 ಮತಗಳ ಪೈಕಿ ಒಂದು ಮತ ಅಸಿಂಧು

1 Min Read
Recent News

​ಭಯೋತ್ಪಾದನೆ, ಸೈಬರ್ ಕ್ರೈಂ ಮತ್ತು ಡ್ರಗ್ಸ್ ದಂಧೆಗೆ ಟೆಲಿಗ್ರಾಂ ಆಪ್ ದುರುಪಯೋಗ: ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ!

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ’14 IAS ಅಧಿಕಾರಿ’ಗಳನ್ನು ವರ್ಗಾವಣೆ | IAS Officer Transfer

​ಬಿಸಿಲಿನ ಬೇಗೆಯಿಂದ ಬಚಾವಾಗಲು ಐಪಿಎಲ್ ಮುಂಚಿತವಾಗಿಯೇ ಆರಂಭ? 2027ರ ಟೂರ್ನಿಯಲ್ಲಿ ಹೊಸ ತಂಡಗಳ ಸೇರ್ಪಡೆ ಸದ್ಯಕ್ಕಿಲ್ಲ!

​ಗ್ರಾಹಕರಿಗೆ ಸಿಗಲ್ಲ ಕೇವಲ ಕಾಲಿಂಗ್ ಪ್ಲಾನ್! ಕಡಿಮೆ ಬೆಲೆಯ ‘ವಾಯ್ಸ್-ಓನ್ಲಿ’ ಯೋಜನೆಗಳಿಗೆ ಜಿಯೋ, ಏರ್‌ಟೆಲ್, ವಿರೋಧ

State News
KARNATAKA

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ’14 IAS ಅಧಿಕಾರಿ’ಗಳನ್ನು ವರ್ಗಾವಣೆ | IAS Officer Transfer

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಗುರುವಾರ (ಜೂನ್ 18) ಭಾರಿ ಪ್ರಮಾಣದಲ್ಲಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ…

BIG BREAKING: ಕರ್ನಾಟಕ ವಿಧಾನ ಪರಿಷತ್ ಚುನಾವಣೆ; ಕಾಂಗ್ರೆಸ್ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಭರ್ಜರಿ ಗೆಲುವು

BIG BREAKING: ಕರ್ನಾಟಕ ವಿಧಾನ ಪರಿಷತ್ ಚುನಾವಣೆ: 222 ಮತಗಳ ಪೈಕಿ ಒಂದು ಮತ ಅಸಿಂಧು

BREAKING: ಮಂಡ್ಯದಲ್ಲಿ ಸ್ಥಳ ಮಹಜರ್ ವೇಳೆಯಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರ ಗುಂಡೇಟು, ಅರೆಸ್ಟ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.