Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೇಸಿಗೆಯಲ್ಲಿ ಸರ್ಕಾರಿ ನೌಕರರಿಗೆ, ಸಾರ್ವಜನಿಕರಿಗೆ ರಿಲೀಫ್ : ಈ 4 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ

31/03/2026 9:30 PM

ಹೆಚ್ಚುತ್ತಿದೆ ನಕಲಿ ಫೋನ್’ಗಳ ಮಾರಾಟ ; ನಿಮ್ಮ ‘ಸ್ಮಾರ್ಟ್ ಫೋನ್’ ಅಸಲಿಯೇ.? ಒಂದೇ ಒಂದು SMS ಮೂಲಕ ತಿಳಿಯಿರಿ!

31/03/2026 9:30 PM

BIG NEWS : ನಾಳೆ ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ!

31/03/2026 9:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾರ್ವಜನಿಕರಿಗೆ ಮಹತ್ವದ ಮಾಹಿತಿ: ನಿಮ್ಮ ‘ಇ-ಖಾತಾ ಸಮಸ್ಯೆ’ಗಳಿಗೆ ಇಲ್ಲಿದೆ ‘ರಾಜ್ಯ ಸರ್ಕಾರ’ದ ಉತ್ತರ
KARNATAKA

ಸಾರ್ವಜನಿಕರಿಗೆ ಮಹತ್ವದ ಮಾಹಿತಿ: ನಿಮ್ಮ ‘ಇ-ಖಾತಾ ಸಮಸ್ಯೆ’ಗಳಿಗೆ ಇಲ್ಲಿದೆ ‘ರಾಜ್ಯ ಸರ್ಕಾರ’ದ ಉತ್ತರ

By kannadanewsnow0918/02/2025 3:50 PM

ಬೆಂಗಳೂರು: ರಾಜ್ಯದಲ್ಲಿ ಆಸ್ತಿಗಳಿಗೆ ಇ-ಖಾತಾ ಕಡ್ಡಾಯಗೊಳಿಸಲಾಗಿದೆ. ಆ ಮೂಲಕ ಅನಧಿಕೃತ ನಿವೇಶನಗಳಿಗೆ ಬ್ರೇಕ್ ಹಾಕಲಾಗಿದೆ. ಇದೇ ಕಾರಣಕ್ಕಾಗಿ ಕರ್ನಾಟಕ ಮುನಿಸಿಪಲ್ ಕಾಯ್ದೆ ಮತ್ತು ನಿಯಮಗಳಿಗೆ ಫೆಬ್ರವರಿ 2025ರಲ್ಲಿ ತಿದ್ದುಪಡಿಯನ್ನು ತರಲಾಗಿದೆ. ಹಾಗಾದ್ರೆ ನಿಮ್ಮ ಇ-ಖಾತಾ ಸಮಸ್ಯೆಗಳಿಗೆ ಸಂಬಂಧಿಸಿದಂತ ಪ್ರಶ್ನೆಗಳಿಗೆ ಪೌರಾಡಳಿತ ಇಲಾಖೆಯ ಉತ್ತರ ಏನು ಅಂತ ಮುಂದೆ ಓದಿ.

ರಾಜ್ಯ ಪೌರಾಡಳಿತ ಇಲಾಖೆಯಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕರ ಇ-ಖಾತಾ ಕುರಿತಂತ ಸಮಸ್ಯೆಗಳ ಪ್ರಶ್ನೆಗಳಿಗೆ ಉತ್ತರವನ್ನು ನೀಡಲಾಗಿದೆ. ನಿಮ್ಮ ಪ್ರಶ್ನೆಗಳು ಹಾಗೂ ಅದಕ್ಕೆ ಸಂಬಂಧಿಸಿದಂತ ಉತ್ತರ ಈ ಕೆಳಗಿನಂತಿವೆ.

1. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಯಾವೆಲ್ಲಾ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು?
· ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಪ್ರಕರಣ 94 ಮತ್ತು ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ಪ್ರಕರಣ
ವಿನಾಯಿತಿಗೊಳಪಟ್ಟ ಆಸ್ತಿಗಳನ್ನು ಹೊರತುಪಡಿಸಿ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು.

2. “ಎ” ರಿಜಿಸ್ಟರ್ ನಲ್ಲಿ ನಮೂದಿಸಬೇಕಾದ ಆಸ್ತಿಗಳು ಯಾವುವು?
110ರಲ್ಲಿ ಉಳಿದಂತಹ ಕೆಳಕಂಡ ಆಸ್ತಿಗಳನ್ನು ಅಧಿಕೃತ ಪರಿಗಣಿಸಿದ್ದು, ಸದರಿ ಆಸ್ತಿಗಳನ್ನು “ಎ” ರಿಜಿಸ್ಟರ್ ನಲ್ಲಿ ನಮೂದಿಸಬೇಕಾಗಿದೆ;
a) ಗ್ರಾಮಠಾಣಾ,
b) ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು,
c) ಕಂದಾಯ ಇಲಾಖೆಯಿಂದ 94 cc ಅಡಿ ನೀಡಲಾದ ಹಕ್ಕು ಪತ್ರ.
d) ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ಬಡಾವಣೆಯಲ್ಲಿನ ಸ್ವತ್ತುಗಳು.

3. “ಬಿ” ರಿಜಿಸ್ಟರ್ ನಲ್ಲಿ ನಮೂದಿಬೇಕಾದ ಆಸ್ತಿಗಳು ಯಾವುವು?

ಕೆಳಕಂಡ ಆಸ್ತಿಗಳನ್ನು ಅನಧಿಕೃತ ಆಸ್ತಿಗಳೆಂದು ಪರಿಗಣಿಸಿದ್ದು ಸದರಿ ಆಸ್ತಿಗಳನ್ನು “ಬಿ” ರಿಜಿಸ್ಟರ್‌ನಲ್ಲಿ ನಮೂದಿಸಬೇಕಾಗಿರುತ್ತದೆ.
a) ಭೂ ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದ ಬಡಾವಣೆಗಳಲ್ಲಿನ ನಿವೇಶನಗಳು/ಕಟ್ಟಡಗಳು.
b) ಭೂ ಪರಿವರ್ತನೆಯಾಗದೇ ಉಪವಿಭಜನೆ ಮಾಡಿ ನಿವೇಶನಗಳಾಗಿ ಮಾರಾಟ ಮಾಡಿರುವ ನಿವೇಶನ/ಕಟ್ಟಡಗಳು.

4. “ಬಿ” ರಿಜಿಸ್ಟರ್ ನಲ್ಲಿ ದಾಖಲಿಸಲಾದ ಆಸ್ತಿಗಳಿಗೆ ತೆರಿಗೆ ವಿಧಿಸಬೇಕೇ ಆಥವಾ ದಂಡ ವಿಧಿಸಬೇಕೇ?

“ಬಿ” ರಿಜಿಸ್ಟರ್ ನಲ್ಲಿ ದಾಖಲಿಸಲಾಗುವ ಆಸ್ತಿಗಳಿಗೆ ಮೂದಲ ಬಾರಿಗೆ ಸ್ವತ್ತು ತೆರಿಗೆಯ 2ರಷ್ಟು ತೆರಿಗೆಯನ್ನು ನಂತರ ವರ್ಷಗಳಲ್ಲಿ ಸ್ವತ್ತು ತೆರಿಗೆಯನ್ನು ಮಾತ್ರ ವಿಧಿಸುವುದು.

5. ಯಾವ ದಿನಾಂಕದವರೆಗೆ ಸೃಜನೆಯಾದ ಆಸ್ತಿಗಳನ್ನು “29” ರಿಜಿಸ್ಟರ್ ನಲ್ಲಿ ದಾಖಲಿಸಬೇಕು?
· ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಪ್ರಕರಣ 106 ಮತ್ತು ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ಪ್ರಕರಣ 112 (ಬಿ) ಗೆ ದಿನಾಂಕ:10-09- 2024ರಲ್ಲಿ ತಿದ್ದುಪಡಿ ತರಲಾಗಿದ್ದು ಸದರಿ ತಿದ್ದುಪಡಿಯ ಪೂರ್ವದಲ್ಲಿ ಸೃಜಿಸಲಾದ ಅನಧಿಕೃತ ಆಸ್ತಿಗಳಲ್ಲಿ “ಬಿ” ರಿಜಿಸ್ಟರ್‌ನಲ್ಲಿ ದಾಖಲಿಸಬೇಕು.

6. “ಬಿ” ರಿಜಿಸ್ಟರ್ ನಲ್ಲಿ ದಾಖಲಿಸಲು ಪಡೆಯಬೇಕಾದ ದಾಖಲೆಗಳು ಯಾವುವು?

ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು/ದಾನಪತ್ರ/ವಿಭಾಗ ಪತ್ರಗಳು.

7. ಯಾವ ವರ್ಷದಿಂದ “ಬಿ” ರಿಜಿಸ್ಟರ್ ನಲ್ಲಿ ದಾಖಲಿಸುವ ಆಸ್ತಿಗಳಿಗೆ ಆಸ್ತಿ ತೆರಿಗೆ ವಿಧಿಸಬೇಕಾಗಿರುತ್ತದೆ.?

• ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಪ್ರಕರಣ 106 ಮತ್ತು ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ಪ್ರಕರಣ 112 (ಬಿ) ಗೆ ತಿದ್ದುಪಡಿ ದಿನಾಂಕ:10-09-2024ರಿಂದ ಜಾರಿಗೆ ಬಂದಿದ್ದು 2024-25ನೇ ಸಾಲಿನಿಂದ ಆಸ್ತಿ ತೆರಿಗೆ ವಿಧಿಸಬೇಕಾಗಿರುತ್ತದೆ.

8. “ಬಿ” ರಿಜಿಸ್ಟರ್ ನಲ್ಲಿ ನಮೂದಿಸಲು ಅವಕಾಶವಿಲ್ಲದಿರುವ ಸ್ವತ್ತುಗಳು ಯಾವುವು?
ಸರ್ಕಾರಿ ಜಾಗದಲ್ಲಿರುವ ಸ್ವತ್ತುಗಳು
ಸರ್ಕಾರದ ನಿಗಮ ಮಂಡಳಿಗಳ ಜಾಗಗಳು.
ನಗರ ಸ್ಥಳೀಯ ಸಂಸ್ಥೆಗಳ ಜಾಗದಲ್ಲಿನ ಸ್ವತ್ತುಗಳು.

9. “ಬಿ” ರಿಜಿಸ್ಟರ್ ನಲ್ಲಿ ದಾಖಲಿರುವ ಆಸ್ತಿಗಳಿಗೆ ಉದ್ಯತಾ/ಖಾತಾ ನೀಡಬಹುದೇ.?
• “ಬಿ” ರಿಜಿಸ್ಟರ್ ನಲ್ಲಿ ದಾಖಲಿರುವ ಆಸ್ತಿಗಳಿಗೆ ಇ-ಆಸ್ತಿ ತಂತ್ರಾಂಶದಲ್ಲಿ ನಮೂನೆ 2ಎ/3ಎ ಸೃಜಿಸಿ ನೀಡಬಹುದಾಗಿದೆ.

10. ಅನಧಿಕೃತ ಸ್ವತ್ತುಗಳಿಗೆ ನಮೂನೆ 2ಎ/3ಎ ನೀಡಿದ್ದಲ್ಲಿ ಸಕ್ರಮಗೊಳಿಸಿದಂತಾಗುವುದೇ?.
• ಇಲ್ಲ. ಆಸ್ತಿ ತೆರಿಗೆ ವಿಧಿಸುವ ಉದ್ದೇಶಕ್ಕಾಗಿ ಪ್ರತ್ಯೇಕ ವಹಿಯಲ್ಲಿ ಅನಧಿಕೃತ ಸ್ವತ್ತುಗಳನ್ನು ದಾಖಲಿಸಿ ನಿರ್ವಹಿಸಲಾಗುತ್ತಿದೆ.

11. ಇ-ಖಾತಾ ಪಡೆಯಲು ಸಮಸ್ಯೆಗಳಿದ್ದಲ್ಲಿ ಯಾರನ್ನು ಸಂಪರ್ಕಿಸಬೇಕು?
• ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಯಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿಯನ್ನು ಸಂಪರ್ಕಿಸುವುದು.

12. ಇ-ಖಾತಾ ಪಡೆಯಲು ಸಮಸ್ಯೆಗಳಿದ್ದಲ್ಲಿ ರಾಜ್ಯ ಮಟ್ಟದಲ್ಲಿ ಯಾರನ್ನು ಸಂಪರ್ಕಿಸಬೇಕು?

· ರಾಜ್ಯ ಮಟ್ಟದಲ್ಲಿ ಸ್ಥಾಪಿಸಲಾದ ಸಹಾಯವಾಣಿ: 6366674001 ಸಂಪರ್ಕಿಸಬಹುದಾಗಿದೆ.

ಶಿವಮೊಗ್ಗ: ಫೆ.20ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

BREAKING : ಬೆಂಗಳೂರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಭೀಕರ ಅಗ್ನಿ ದುರಂತ : 6 ಜನರಿಗೆ ಗಂಭೀರ ಗಾಯ!

Share. Facebook Twitter LinkedIn WhatsApp Email

Related Posts

BREAKING : ಬೇಸಿಗೆಯಲ್ಲಿ ಸರ್ಕಾರಿ ನೌಕರರಿಗೆ, ಸಾರ್ವಜನಿಕರಿಗೆ ರಿಲೀಫ್ : ಈ 4 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ

31/03/2026 9:30 PM1 Min Read

BIG NEWS : ನಾಳೆ ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ!

31/03/2026 9:10 PM1 Min Read

BREAKING : ಸಚಿವ ಡಿ. ಸುಧಾಕರ್ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು, ICU ನಲ್ಲಿ ಮುಂದುವರೆದ ಚಿಕಿತ್ಸೆ!

31/03/2026 8:29 PM1 Min Read
Recent News

BREAKING : ಬೇಸಿಗೆಯಲ್ಲಿ ಸರ್ಕಾರಿ ನೌಕರರಿಗೆ, ಸಾರ್ವಜನಿಕರಿಗೆ ರಿಲೀಫ್ : ಈ 4 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ

31/03/2026 9:30 PM

ಹೆಚ್ಚುತ್ತಿದೆ ನಕಲಿ ಫೋನ್’ಗಳ ಮಾರಾಟ ; ನಿಮ್ಮ ‘ಸ್ಮಾರ್ಟ್ ಫೋನ್’ ಅಸಲಿಯೇ.? ಒಂದೇ ಒಂದು SMS ಮೂಲಕ ತಿಳಿಯಿರಿ!

31/03/2026 9:30 PM

BIG NEWS : ನಾಳೆ ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ!

31/03/2026 9:10 PM

BREAKING : ಆಪಲ್, ಮೈಕ್ರೋಸಾಫ್ಟ್ ಸೇರಿ ಅಮೆರಿಕದ 18 ತಂತ್ರಜ್ಞಾನ ಸಂಸ್ಥೆಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಎಚ್ಚರಿಕೆ!

31/03/2026 9:08 PM
State News
KARNATAKA

BREAKING : ಬೇಸಿಗೆಯಲ್ಲಿ ಸರ್ಕಾರಿ ನೌಕರರಿಗೆ, ಸಾರ್ವಜನಿಕರಿಗೆ ರಿಲೀಫ್ : ಈ 4 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ

By kannadanewsnow0531/03/2026 9:30 PM KARNATAKA 1 Min Read

ಬೆಂಗಳೂರು : ಬಿಸಿಲಿನ ತಾಪಮಾನ ಹೆಚ್ಚಾಗಿರುವುದಿಂದ ಉತ್ತರ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯದಲ್ಲಿ ಬದಲಾವಣೆ ಮಾಡಿ…

BIG NEWS : ನಾಳೆ ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ!

31/03/2026 9:10 PM

BREAKING : ಸಚಿವ ಡಿ. ಸುಧಾಕರ್ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು, ICU ನಲ್ಲಿ ಮುಂದುವರೆದ ಚಿಕಿತ್ಸೆ!

31/03/2026 8:29 PM

ಕನ್ನಡದಲ್ಲಿ ಹನುಮಾನ್ ಚಾಲೀಸಾ ಪ್ರತಿಯೊಂದು ವಾಕ್ಯದ ಅರ್ಥ ಪೂರ್ಣ ಓದಿ

31/03/2026 8:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.