ಹಾಸನ: ಕೇಂದ್ರ ರೈಲ್ವೆ ಇಲಾಖೆಯಿಂದ ( Ministry of Railway ) ಟಿಪ್ಪು ರೈಲಿನ ( Tippu Express Train ) ಹೆಸರನ್ನು ಬದಲಾವಣೆ ಮಾಡಿ, ನಿನ್ನೆ ಆದೇಶಿಸಲಾಗಿತ್ತು. ಆದ್ರೇ ಟಿಪ್ಪು ಹೆಸರು ಬದಲಾಯಿಸಿ ಒಡೆಯರ್ ಹೆಸರಿಟ್ಟಿದ್ದಕ್ಕೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ( Farmer Minister HD Revanna ) ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ದುಡ್ಡು ಹೊಡೆಯೋದು, ಸಮಾಜವನ್ನು ಗುರಿಯಾಗಿಟ್ಟು ಕೆಲಸ ಮಾಡೋದನ್ನು ಮಾಡುತ್ತಿದೆ. ಇಟ್ಟು ವರ್ಷ ಟಿಪ್ಪು ಹೆಸರನ್ನು ರೈಲಿಗೆ ಇಡಲಾಗಿತ್ತು. ಯಾರಾದ್ರೂ ಆಕ್ಷೇಪ ವ್ಯಕ್ತ ಪಡಿಸಿದ್ದರಾ.? ಇದು ಕೇವಲ ಚುನಾವಣೆ ಗಿಮಿಕ್ಸ್ ಎಂದು ಕಿಡಿಕಾರಿದರು.
ಒಡೆಯರ ಹೆಸರು ಇಡಲಿ ನಾವು ಬೇಡ ಅನ್ನುವುದಿಲ್ಲ. ಆದ್ರೇ ಯಾರೋ ಈ ಹಿಂದೆ ಪುಣ್ಯಾತ್ಮರು ಟಿಪ್ಪು ಹೆಸರು ಇಟ್ಟಿದ್ದರು, ಆ ಹೆಸರು ಹಾಗೇ ಬಿಟ್ಟು, ಮೈಸೂರಿಗೆ ಎಷ್ಟೊಂದು ರೈಲು ಓಡಾಡುತ್ತವೆ. ಆ ಯಾವುದಾದರೂ ರೈಲಿಗೆ ಒಡೆಯರ್ ಹೆಸರು ಇಡಬಹುದಾಗಿತ್ತು ಎಂದು ಹೇಳಿದರು.