ಪುಣೆ : ಮಹಾರಾಷ್ಟ್ರದಲ್ಲಿ ಹೃದಯಸ್ಪರ್ಶಿ ಘಟನೆ ಒಂದು ನಡೆದಿದ್ದು, ಇಡೀ ದೇಶದ ಜನತೆಯ ಗಮನ ಸೆಳೆದಿದೆ. ಹೌದು ಪುಣೆ ರಸ್ತೆಯಲ್ಲಿ ಅಚ್ಚರಿ ಘಟನೆ ನಡೆದಿದ್ದು, ರಸ್ತೆಯಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿ ಡಾಕ್ಟರ್ ಸಮಯಕ್ಕೆ ಬಂದು ತಾಯಿ-ಮಗುವಿನ ಜೀವ ಉಳಿಸಿರುವ ಘಟನೆ ವರದಿಯಾಗಿದೆ.
ಹೌದು ಪುಣೆಯೊಂದರ ರಸ್ತೆಯಲ್ಲಿ ನಡೆದ ಈ ಘಟನೆ ಎಲ್ಲರ ಮನಸೂರೆಗೊಂಡಿದೆ, ಅಕಸ್ಮಿಕವಾಗಿ ಒಬ್ಬ ಮಹಿಳೆಗೆ ಹೆರಿಗೆ ನೋವು ಆರಂಭವಾಗಿದ್ದು, ಸುತ್ತಮುತ್ತಲಿದ್ದ ಜನರು ತಕ್ಷಣ ಸಹಾಯಕ್ಕೆ ಧಾವಿಸಿದರು. ಅದೇ ವೇಳೆ ಒಬ್ಬ ವೈದ್ಯರು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಬಂದು, ಸುರಕ್ಷಿತ ವಾತಾವರಣ ನಿರ್ಮಿಸಿ ಶಾಂತವಾಗಿ ಹೆರಿಗೆ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಿದರು.
ಜನರ ಸಹಕಾರ, ವೈದ್ಯರ ತಕ್ಷಣದ ಸ್ಪಂದನೆ ಮತ್ತು ಮಾನವೀಯತೆ ಸೇರಿ ತಾಯಿ ಹಾಗೂ ಮಗುವಿನ ಜೀವವನ್ನು ಸುರಕ್ಷಿತವಾಗಿಟ್ಟವು. ಈ ಹೃದಯಸ್ಪರ್ಶಿ ಘಟನೆ ಸಂಕಷ್ಟದ ಕ್ಷಣದಲ್ಲಿ ಮಾನವೀಯತೆ ಎಷ್ಟು ದೊಡ್ಡ ಶಕ್ತಿ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದೆ. ಸಮಯೋಚಿತ ಸಹಾಯ ಮತ್ತು ಒಗ್ಗಟ್ಟು ಇದ್ದರೆ ಯಾವುದೇ ಸಂಕಷ್ಟವನ್ನೂ ಜಯಿಸಬಹುದು ಎಂಬ ಸಂದೇಶವನ್ನು ಈ ಘಟನೆ ತೋರಿಸಿಕೊಟ್ಟಿದೆ.








