ಮೈಸೂರು : ಮೈಸೂರಲ್ಲಿ ಘೋರ ಘಟನೆ ಒಂದು ಸಂಭವಿಸಿದ್ದು ಕಂಪಲಾಪುರ ಗ್ರಾಮದಲ್ಲಿ ಹಾವು ಕಡಿದು 14 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಹಸುವಿಗೆ ಹುಲ್ಲು ಹಾಕುವಾಗ ಬಾಲಕ ವೆಂಕಟೇಶ್ (14) ಗೆ ಹಾವು ಕಡಿದಿತ್ತು. ಬಲಗೈ ಬೆರಳಿಗೆ ಹಾವು ಕಚ್ಚಿದ್ದರು ಕೂಡ ಮನೆಯವರಿಗೆ ಬಾಲಕ ತಿಳಿಸಿಲ್ಲ. ಅಂಗಡಿಯಿಂದ ಪ್ಲಾಸ್ಟರ್ ತಂದು ವೆಂಕಟೇಶ್ ಬೆರಳಿಗೆ ಸುತ್ತಿಕೊಂಡಿದ್ದ. ಬಳಿಕ ಅಸ್ವಸ್ಥಗೊಂಡು ಬಾಲಕ ವೆಂಕಟೇಶ್ ಪ್ರಜ್ಞೆತಪ್ಪಿ ಬಿದ್ದಿದ್ದಾನೆ.
ತಕ್ಷಣ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ವೆಂಕಟೇಶನನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ವೆಂಕಟೇಶ ಮೃತಪಟ್ಟಿದ್ದಾನೆ. ಘಟನೆ ಕುರಿತಂತೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








