ಬೆಳಗಾವಿ: ಜಿಲ್ಲೆಯ ಸುಳೇಬಾವಿಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಇಬ್ಬರು ಯುವಕರ ಹತ್ಯೆಯಾಗಿತ್ತು. ಈ ಘಟನೆ ಸಂಬಂಧ ಕರ್ತವ್ಯ ಲೋಪದ ಆರೋಪದಲ್ಲಿ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಈ ಸಂಬಂಧ ಬೆಳಗಾವಿಯ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಆದೇಶಿಸಿದ್ದು, ಅಕ್ಟೋಬರ್ 6ರಂದು ರಾತ್ರಿ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ಸುಳೇಬಾವಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ಮಹೇಶ್ ಮತ್ತು ಪ್ರಕಾಶ್ ಎಂಬ ಯುವಕರ ಹತ್ಯೆಯಾಗಿತ್ತು ಎಂದಿದ್ದಾರೆ.
ಸುಳೇಬಾವಿಯಲ್ಲಿನ ಪ್ರಕರಣ ಸಂಬಂಧ ಸಮಗ್ರ ವರದಿಯನ್ನು ತರಿಸಿಕೊಳ್ಳಲಾಗಿತ್ತು. ಈ ವರದಿಯ ಆಧಾರದ ಮೇಲೆ ಅಂದು ಗ್ಯಾಂಗ್ ವಾರ್ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದರೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೇ, ನಿರ್ಲಕ್ಷ್ಯ ವಹಿಸಿರೋದ ತಿಳಿದು ಬಂದಿತ್ತು. ಹೀಗಾಗಿ ಕರ್ತವ್ಯ ಲೋಪದ ಆಧಾರದ ಮೇಲೆ ಮಾರಿಹಾಳ ಠಾಣೆಯ ಹೆಡ್ ಕಾನ್ ಸ್ಟೇಬಲ್ ಬಿ.ಎಸ್ ಬಳಗಣ್ಣನವರ್ ಹಾಗೂ ಪೊಲೀಸ್ ಸಿಬ್ಬಂದಿ ಎಸ್ ಆರ್ ತಳೇವಾಡೆ ಅಮಾನತುಗೊಳಿಸಿ ಆದೇಶಿಸಿದ್ದಾರೆ.
9 ಜನರನ್ನು ಬಲಿ ಪಡೆದ ‘ನರಭಕ್ಷಕ ಹುಲಿ’ : ಕಂಡಲ್ಲಿ ಗುಂಡಿಕ್ಕಲು ಬಿಹಾರ ಸರ್ಕಾರ ಆದೇಶ