Author: kannadanewsnow05

ಜತ್ತ : ನಿನ್ನೆ ಬೆಂಗಳೂರಿನ ನೆಲಮಂಗಲದ ಬಳಿ ಭೀಕರವಾದಂತಹ ಅಪಘಾತ ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಕಂಟೆನರ್ ಬಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ IAST ಕಂಪನಿ ಮಾಲೀಕ ಚಂದ್ರಮ್ ಏಗಪ್ಪಗೋಳ್ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳು ಸೇರಿ ಆರು ಜನರು ಅಪ್ಪಚ್ಚಿಯಾಗಿ ಸಾವನಪ್ಪಿರುವ ಘಟನೆ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತಿತ್ತು. ಇದೀಗ ಮೃತಪಟ್ಟ 6 ಜನರ ಮೃತ ದೇಹಗಳು ಮಹಾರಾಷ್ಟ್ರದ ಜತ್ತ ತಾಲೂಕಿನ ಮೊರಬಗಿ ಗ್ರಾಮಕ್ಕೆ ತಲುಪಿ, ಒಂದೇ ಸ್ಥಳದಲ್ಲಿ 6 ಜನರ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿತು. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮಕ್ಕೆ ಮೂರು ಆಂಬುಲೆನ್ಸ್ಗಳಲ್ಲಿ 6 ಜನರ ಮೃತ ದೇಹ ತಲುಪಿದೆ.ಒಂದೇ ಕುಟುಂಬದ ಆರು ಜನರು ಮೃತ ಪಟ್ಟಿದ್ದಕ್ಕೆ ಇಡೀ ಗ್ರಾಮಸ್ಥರು ಇದೀಗ ಕಣ್ಣೀರಿಟ್ಟಿದ್ದಾರೆ.ಇದೀಗ ಗ್ರಾಮದ ಜನರ ಸಮ್ಮುಖದಲ್ಲಿ ಲಿಂಗಾಯತ ಸಮುದಾಯದಂತೆ ಈ ಒಂದು ಅಂತ್ಯಕ್ರಿಯೆ ನಡೆದಿದ್ದು, ಚಂದ್ರಮ್ ಏಗಪ್ಪಗೋಳ್ ಅವರ ಸಹೋದರ ಮಲ್ಲಿನಾಥ್ ಅಗ್ನಿ ಸ್ಪರ್ಶಿಸಿದ್ದಾರೆ. ಬಡತನದಲ್ಲಿ ಬೆಳೆದು ಚಂದ್ರನ್ ಏಗಪ್ಪಗೋಳ್…

Read More

ಬೆಂಗಳೂರು : ನಿನ್ನೆ ಬೆಂಗಳೂರಿನ ನೆಲಮಂಗಲದ ಬಳಿ ಭೀಕರವಾದಂತಹ ಅಪಘಾತ ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಕಂಟೆನರ್ ಬಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ IAST ಕಂಪನಿ ಮಾಲೀಕ ಚಂದ್ರಮ್ ಏಗಪ್ಪಗೋಳ್ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳು ಸೇರಿ ಆರು ಜನರು ಅಪ್ಪಚ್ಚಿಯಾಗಿ ಸಾವನಪ್ಪಿರುವ ಘಟನೆ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತಿತ್ತು. ಇದೀಗ ಮೃತಪಟ್ಟ 6 ಜನರ ಮೃತ ದೇಹಗಳು ಮಹಾರಾಷ್ಟ್ರದ ಜತ್ತ ತಾಲೂಕಿನ ಮೊರಬಗಿ ಗ್ರಾಮಕ್ಕೆ ತಲುಪಿವೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮಕ್ಕೆ ಮೂರು ಆಂಬುಲೆನ್ಸ್ಗಳಲ್ಲಿ 6 ಜನರ ಮೃತ ದೇಹ ತಲುಪಿದೆ.ಒಂದೇ ಕುಟುಂಬದ ಆರು ಜನರು ಮೃತ ಪಟ್ಟಿದ್ದಕ್ಕೆ ಇಡೀ ಗ್ರಾಮಸ್ಥರು ಇದೀಗ ಕಣ್ಣೀರಿಟ್ಟಿದ್ದಾರೆ. ಬಡತನದಲ್ಲಿ ಬೆಳೆದು ಚಂದ್ರನ್ ಏಗಪ್ಪಗೋಳ್ ಅತಿ ದೊಡ್ಡ ಸಾಧನೆ ಮಾಡಿದ್ದರು. ತನ್ನ ಗ್ರಾಮದ ನೂರಾರು ಯುವಕರಿಗೆ ಚಂದ್ರಮ್ ಅವರು ಕೆಲಸ ಕೊಟ್ಟಿದ್ದರು. ಐಎಎಸ್‌ಟಿ ಕಂಪನಿಯ ಮಾಲೀಕರಾಗಿದ್ದರು. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿ ಐಎಎಸ್‌ಟಿ ಸಾಫ್ಟ್ವೇರ್ ಕಂಪನಿ ಮಾಲೀಕರಾಗಿದ್ದರು…

Read More

ಮಂಡ್ಯ : ದರೋಡೆ ಮಾಡಲು ಬಂದ ದುರುಳ ವೃದ್ಧರೊಬ್ಬರನ್ನು ಮರ ಕತ್ತರಿಸುವ ಯಂತ್ರದಿಂದ ವೃದ್ಧನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ ತೋಟದ ಮನೆಯಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ. ಮರ ಕತ್ತರಿಸುವ ಯಂತ್ರದಿಂದ 60 ವರ್ಷದ ರಮೇಶ್ ಎನ್ನುವ ವೃದ್ಧನನ್ನು ದುಷ್ಕರ್ಮಿಯೊಬ್ಬ ಭೀಕರವಾಗಿ ಕೊಲೆ ಮಾಡಿದ್ದಾನೆ. ನಿನ್ನೆ ಸಂಜೆ 7 ಗಂಟೆಗೆ ತೋಟದ ಮನೆಗೆ ವ್ಯಕ್ತಿ ಆಗಮಿಸಿ, ಮರ ಕತ್ತರಿಸುವ ಯಂತ್ರದಿಂದ ರಮೇಶ್ ಅವರನ್ನು ಭೀಕರ ಮವಾಗಿ ಹತ್ಯೆ ಮಾಡಿದ್ದಾನೆ. ದರೋಡೆಗೆ ಎಂದು ಬಂದಿದ್ದ ಆರೋಪಿಯು ಈ ವೇಳೆ ರಮೇಶ್ ಪತ್ನಿ ಯಶೋಧಮ್ಮಗೆ ಮರ ಕತ್ತರಿಸುವ ಯಂತ್ರ ಬಂದಿದೆ. ಆರ್ಡರ್ ಮಾಡಿದ್ದೀರಿ ಅಂತ ಹೇಳಿದಾಗ ನಾವು ಯಾವುದೇ ಯಂತ್ರ ಆರ್ಡರ್ ಮಾಡಿಲ್ಲ ಎಂದಿದ್ದಾರೆ. ಈ ವೇಳೆ ಅವರ ಕುತ್ತಿಗೆಗೆ ಯಂತ್ರ ಹಿಡಿದು ತಳ್ಳಿದ್ದಾನೆ. ಈ ವೇಳೆ ಯಶೋದಮ್ಮ ಪ್ರಜ್ಞೆ ತಪ್ಪಿ…

Read More

ಬೆಳಗಾವಿ : ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಆಸ್ತಿ ಭಾಗ ಮಾಡಿದ್ದರಲ್ಲಿ ತನ್ನ ಪಾಲಿಗೆ ಬಂದಿದ್ದ ಟ್ರ್ಯಾಕ್ಟರ್ ಅನ್ನು ತೆಗೆದುಕೊಂಡು ಹೋಗಿದ್ದಕ್ಕೆ, ಅಣ್ಣ-ತಮ್ಮನ ನಡುವೆ ಗಲಾಟಿ ನಡೆದಿದೆ. ಈ ವೇಳೆ ಸಿಟ್ಟಿಗೆದಂತಹ ಅಣ್ಣ ತಮ್ಮನ ಮೇಲೆ ಅದೇ ಟ್ರ್ಯಾಕ್ಟರ್ ಹರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಎರಗಟ್ಟಿ ತಾಲೂಕಿನಲ್ಲಿ ನಡೆದಿದೆ ಹೌದು ತನ್ನ ಪಾಲಿಗೆ ಬಂದಿದ್ದ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದಕ್ಕೆ ಭೀಕರ ಕೊಲೆ ನಡೆದಿದ್ದು, ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ಅಣ್ಣನಿಂದಲೇ ತಮ್ಮನ ಬರ್ಬರ ಹತ್ಯೆ ನಡೆದಿದೆ. ಮಾರುತಿ ಬಾವಿಹಾಳ (30) ಎನ್ನುವವನಿಂದ ತನ್ನ ತಮ್ಮ ಗೋಪಾಲ್ (27) ನನ್ನು ಟ್ರಾಕ್ಟರ್ ಹರಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ. ವರ್ಷದ ಹಿಂದೆ ಆಸ್ತಿ, ಟ್ರ್ಯಾಕ್ಟರ್ ಹಾಗೂ ಮನೆಯನ್ನು ಭಾಗ ಮಾಡಿಕೊಂಡಿದ್ದರು. ತನ್ನ ಪಾಲಿಗೆ ಬಂದಿದ್ದ ಟ್ರ್ಯಾಕ್ಟರ್ ಅನ್ನು ತಮ್ಮ ಗೋಪಾಲ ತನ್ನ ಹೆಂಡತಿ ಮನೆಯಲ್ಲಿ ಇಟ್ಟಿದ್ದ. ಇದರಿಂದ ಹಲವು ಬಾರಿ ತಮ್ಮನ ಜೊತೆಗೆ ಅಣ್ಣ ಮಾರುತಿ ಜಗಳ ತೆಗೆದಿದ್ದಾನೆ. ನಿನ್ನೆ…

Read More

ಬೆಂಗಳೂರು : ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾಗಿದೆ. ತನ್ನ ಕಂಪನಿಯ ಉದ್ಯೋಗಿಗಳಿಗೆ ಪಿಎಫ್ (ಭವಿಷ್ಯ ನಿಧಿ) ವಿಚಾರದಲ್ಲಿ ವಂಚಿಸಿರುವ ಆರೋಪ ಉತ್ತಪ್ಪ ವಿರುದ್ಧ ಕೇಳಿಬಂದಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಉತ್ತಪ್ಪ ಡಿ.೨೭ರ ಒಳಗಾಗಿ ೨೪ ಲಕ್ಷ ರೂ.ಹಣ ಪಾವತಿಸಬೇಕಾಗಿದೆ. ಇಲ್ಲವೆ ಬಂಧನಕ್ಕೊಳಗಾಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ.ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಬಿನ್ ಉತ್ತಪ್ಪ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಈ ಕುರಿತು ಆರೋಪ ಹೊತ್ತ ಕಂಪನಿಗೆ ಕೆಲವು ವರ್ಷಗಳ ಹಿಂದೆಯೇ ರಾಜೀನಾಮೆ ನೀಡಿದ್ದೇನೆ. ಎಂದು ಮಾಧ್ಯಮ ಪ್ರಕಟಣೆ ಮೂಲಕ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಸ್ಪಷ್ಟಣೆ ನೀಡಿದ್ದಾರೆ ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ರಾಬಿನ್ ಉತ್ತಪ್ಪ ತಿಳಿಸಿದ್ದಾರೆ. ನನ್ನ ವಿರುದ್ಧದ PF ಪ್ರಕರಣದ ಇತ್ತೀಚಿನ ಸುದ್ದಿಗಳ ಬೆಳಕಿನಲ್ಲಿ, ನಾನು ಸ್ಟ್ರಾಬೆರಿ ಲೆನ್ಸೆರಿಯಾ ಪ್ರೈ.ಲಿ ಜೊತೆಗಿನ ನನ್ನ ಒಳಗೊಳ್ಳುವಿಕೆಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟೀಕರಣವನ್ನು ನೀಡಲು…

Read More

ಕೊಪ್ಪಳ : ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಬಾವಿಯಲ್ಲಿ ಬಿದ್ದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗಾಣದಾಳ ಶಾಲೆಯ ಮುಖ್ಯೋಪಾಧ್ಯಾಯ ಸೇರಿದಂತೆ ಆರು ಜನರನ್ನು ಕೊಪ್ಪಳದ ಡಿಡಿಪಿಐ ಶ್ರೀಶೈಲ್ ಬಿರಾದಾರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿ ಸಾವನ್ನಪ್ಪಿದ. ಹಾಗಾಗಿ ಕರ್ತವ್ಯ ಲೋಪ ವ್ಯಸಗಿದ ಆರೋಪದ ಹಿನ್ನೆಲೆ 6 ಸರಕಾರಿ ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಗಾಣದಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಇದೀಗ ಅಮಾನತು ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗಾಣದಾಳ ಗ್ರಾಮದ ಪ್ರಭಾರಿ ಮುಖ್ಯೋಪಾಧ್ಯಾಯ ಸೇರಿದಂತೆ ಆರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಪ್ರವಾಸಕ್ಕೆ ಹೋಗಿದ್ದಾಗ ಬಾವಿಯಲ್ಲಿ ಬಿದ್ದು ನಿರುಪಾದಿ ಹರಿಜನ ಎನ್ನುವ ವಿದ್ಯಾರ್ಥಿ ಸಾವನ್ನಪ್ಪಿದ್ದ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದ. ಶಿಕ್ಷಕರ ನಿರ್ಲಕ್ಷದಿಂದ ವಿದ್ಯಾರ್ಥಿ ಸಾವನಪ್ಪಿದ್ದಾನೆ ಎಂದು ಆರೋಪದ ಅಡಿ ಇದೀಗ 6 ಶಿಕ್ಷಕರು ಅಮಾನತು ಮಾಡಲಾಗಿದೆ. ಅಮಾನತುಗೊಳಿಸಿ ಕೊಪ್ಪಳದ ಡಿಡಿಪಿಐ ಶ್ರೀಶೈಲ್…

Read More

ಬೆಂಗಳೂರು : ಬೆಂಗಳೂರಿನಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಲೇ ಇವೆ. ಇದೀಗ ಬೆಂಗಳೂರಿನ ಯಶವಂತಪುರ ಫ್ಲೈವರ್ ಮೇಲೆ ಮತ್ತೊಂದು ಅಪಘಾತ ಸಂಭವಿಸಿದೆ. ಟೈರ್ ಬ್ಲಾಸ್ಟ್ ಆಗಿ ಫ್ಲೈ ಓವರ್ ಮೇಲೆ ತಡೆಗೋಡೆ ಹತ್ತಿ ಬೊಲೆರೋ ವಾಹನ ಪಲ್ಟಿ ಆಗಿದೆ. ಹೌದು ಬೊಲೆರೋ ವಾಹನದಲ್ಲಿ ಹುಬ್ಬಳ್ಳಿಯಿಂದ ತಮಿಳುನಾಡಿನ ಕೃಷ್ಣಗಿರಿಗೆ ವಾಹನದಲ್ಲಿ ಗೆಣಸು ಸಾಗಿಸಲಾಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ, ಬೆಳಿಗ್ಗೆ 5:30ಕ್ಕೆ ಈ ಒಂದು ಅಪಘಾತ ಸಂಭವಿಸಿದೆ. ಫ್ಲೈಓವರ್ ತಡೆಗೋಡೆ ಹತ್ತಿ ಗೆಣಸು ಸಾಗಿಸುತ್ತಿದ್ದ ಬೋಲೆರು ವಾಹನ ಪಲ್ಟಿಯಾಗಿದೆ. ಬುಲೆರೋ ವಾಹನದಲ್ಲಿ ತೆರಳುತ್ತಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಪಘಾತದ ರಭಸಕ್ಕೆ ರಸ್ತೆ ತುಂಬಿಲ್ಲ ಗೆಣಸಿನ ಚೀಲಗಳು ಚೆಲ್ಲಿವೆ. ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕಲಬುರ್ಗಿ : ಕಲ್ಬುರ್ಗಿಯಲ್ಲಿ ಇಂದು ಜಯದೇವ ಆಸ್ಪತ್ರೆಯ ಲೋಕಾರ್ಪಣೆ ಆಗಲಿದೆ. ಕಲಬುರ್ಗಿ ನಗರದ ಎಸ್.ಪಂಡಿತ ರಂಗಮಂದಿರದ ಎದುರುಗಡೆ ಇರುವಂತಹ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಕೆಕೆಆರ್‌ಡಿಬಿ ಸಹಯೋಗದಲ್ಲಿ ಈ ಒಂದು ಆಸ್ಪತ್ರೆ ನಿರ್ಮಿಸಲಾಗಿದ್ದು, 371 ಹಾಸಿಗೆ ಸಾಮರ್ಥ್ಯದ ನೂತನ ಹೃದ್ರೋಗ ಆಸ್ಪತ್ರೆಯಾಗಿದೆ. ಸುಮಾರು 327.17 ಕೋಟಿ ವೆಚ್ಚದಲ್ಲಿ ಈ ಒಂದು ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಈಗಿರುವ 10 ವೈದ್ಯರ ಜೊತೆಗೆ ಹೆಚ್ಚುವರಿ ವೈದ್ಯರನ್ನು ನೇಮಕ ಮಾಡಲಾಗಿದೆ. ಹೆಚ್ಚುರಿಯಾಗಿ 21 ವೈದ್ಯರು 120 ಸ್ಟಾಫ್ ನರ್ಸ್ ಗಳು ಸೇರಿದಂತೆ ಇತರೆ ಸಿಬ್ಬಂದಿ ನೇಮಕಕ್ಕೆ ಹಣಕಾಸು ಇಲಾಖೆ ಕೂಡ ಒಪ್ಪಿಗೆ ಸೂಚಿಸಿದೆ. ನೂತನ ಜಯದೇವ ಆಸ್ಪತ್ರೆಯಲ್ಲಿ ಮೂರು ಕ್ಯಾತ ಲ್ಯಾಬ್ ಸೇರಿದಂತೆ ಇದರ ಅನೇಕ ವಿಶೇಷ ಸೌಲಭ್ಯಗಳನ್ನು ಕೂಡ ಒಳಗೊಂಡಿದೆ. ಆಸ್ಪತ್ರೆಯ ವಿಶೇಷ ಸೌಲಭ್ಯಗಳು ಕಲಬುರಗಿಯಲ್ಲಿ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಳ್ಳುತ್ತಿರುವ ಜಯದೇವ ಆಸ್ಪತ್ರೆಯ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.ಕಲ್ಯಾಣ ಕರ್ನಾಟಕದ ಕೇಂದ್ರ ಕಲಬುರಗಿಯಲ್ಲಿ ಕೆ.ಕೆ.ಆರ್.ಡಿ.ಬಿ.ಯ…

Read More

ಬೆಂಗಳೂರು : ನಿನ್ನೆ ಬೆಂಗಳೂರಿನ ನೆಲಮಂಗಲದ ಬಳಿ ಕಂಟೇನರ್ ಬಿದ್ದು 6 ಜನರು ದಾರುಣವಾಗಿ ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ಬೆಂಗಳೂರಿನ ಸಿಂಗಸಂದ್ರ ಬಳಿ ಫ್ಲೈ ಓವರ್ ತಡೆಗೋಡೆಗೆ ಕಾರು ಡಿಕ್ಕಿಯಾಗಿ ಇಬ್ಬರಿಗೆ ಗಂಭೀರವಾದ ಗಾಯಗಳಾಗಿವೆ ಬೆಂಗಳೂರಿನ ಸಿಂಗಸಂದ್ರ ಸಮೀಪ ಈ ಒಂದು ಅಪಘಾತ ಸಂಭವಿಸಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಸಿಲ್ಕ್ ಬೋರ್ಡ್ ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿ ತೆರಳುತ್ತಿದ್ದ ಇಬ್ಬರಿಗೆ ಗಂಭೀರವಾದ ಗಾಯಗಳಾಗಿವೆ. ಎಲೆಕ್ಟ್ರಾನಿಕ್ ಸಿಟಿ ಖಾಸಗಿ ಆಸ್ಪತ್ರೆಯಲ್ಲಿ ಸದ್ಯ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಹೆಚ್ಚಿನ ಚಿಕಿತ್ಸೆಗಾಗಿ ಸಂಜಯ್ ಗಾಂಧಿ ಆಸ್ಪತ್ರೆಗೆ ಗಾಯಾಳುಗಳನ್ನು ಶಿಫ್ಟ್ ಮಾಡಲಾಯಿತು. ಓವರ್ ಸ್ವೀಟ್ ನಿಂದ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಕಾರುಡಿಕ್ಕಿ ಹೊಡೆದಿದೆ. ನಾಲ್ವರು ಯುವಕರು ಹಾಗೂ ಓರ್ವ ಯುವತಿ ಟ್ರಿಪ್ ಮುಗಿಸಿ ವಾಪಸ್ ಆಗುತ್ತಿದ್ದರು, ಯುವತಿ ತಂಜಿ, ಮೊಹಮ್ಮದ್, ಸಾಹಿಲ್, ಅಬ್ದುಲ್ ಹಾಗೂ ಸಿದ್ದರ್ ಎಂದು ತಿಳಿದುಬಂದಿದೆ.

Read More

ಬಾಗಲಕೋಟೆ : ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕುರಿತು ಆಕ್ಷೇಪಾರ್ಹ ಪದ ಬಳಸಿದ ಆರೋಪದ ಹಿನ್ನೆಲೆಯಲ್ಲಿ ಎಂಎಲ್ಸಿ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಮೂರು ಜಿಲ್ಲೆಗಳನ್ನು ಸುತ್ತಾಡಿಸಿಕೊಂಡು ಬಂದಿದ್ದಾರೆ ಈ ಸಂದರ್ಭದಲ್ಲಿ ಸಿಟಿ ರವಿ ಅವರನ್ನು ಫೇಕ್ ಎನ್ಕೌಂಟರ್ ಮೂಲಕ ಮುಗಿಸುವ ಉದ್ದೇಶ ಪೊಲೀಸರು ಹೊಂದಿದ್ದರೋ ಏನೋ ಎಂದು ಕೇಂದ್ರ ಸಚಿವ ಪ್ರವಾಹ ಜೋಶಿ ಗಂಭೀರವಾದ ಆರೋಪ ಮಾಡಿದ್ದಾರೆ. ಅವಕಾಶ ಸಿಕ್ಕರೆ ಸಿಟಿ ರವಿ ಮುಗಿಸಬೇಕು ಎಂಬ ಉದ್ದೇಶವಿತ್ತು. ಆದರೆ ಸರಿಯಾದ ಅವಕಾಶ ಸಿಕ್ಕಿಲ್ಲ ಎಂದು ಬಾಗಲಕೋಟೆಯಲ್ಲಿ ಕೇಂದ್ರ ಸಚಿವರು ಗಂಭೀರವಾದ ಆರೋಪ ಮಾಡಿದರು. ನಮ್ಮ ಎಂಎಲ್ಸಿ ಕೇಶವ ಪ್ರಸಾದ್ ಕೂಡ ಅವರ ಹಿಂದೆ ಇದ್ದರೂ ನಮಗೆ ಸಿಟಿ ರವಿ ಅವರ ಲೈವ್ ಲೊಕೇಶನ್ ಸಿಗುತ್ತಿತ್ತು ಎಂದು ಹೇಳಿದರು. ಕೆಲವು ಮಾಧ್ಯಮದವರು ಕೂಡ ಅವರ ಬೆನ್ನು ಹತ್ತಿದ್ದರು. ಇಲ್ಲದಿದ್ದರೆ ಸಿಟಿ ರವಿ ಅವರನ್ನು ಫೇಕ್ ಎನ್ಕೌಂಟರ್ ಮಾಡುತ್ತಿದ್ದರು ಏನು ಫೇಕ್ ಎನ್ಕೌಂಟ ಮಾಡುವ ವಿಚಾರ ಪೊಲೀಸರಿಗೆ ಇತ್ತು ಅನಿಸುತ್ತದೆ. ಈ ಬಗ್ಗೆ…

Read More