Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಸರ್ಕಾರ `ಭೂಸ್ವಾಧೀನ’ ಪ್ರಕರಣಗಳಲ್ಲಿ ಭೂಮಿಯ ಬೆಲೆ ನಿಗದಿಪಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

BREAKING: `ನಮ್ಮ ಮೆಟ್ರೋ’ದಲ್ಲಿ ಪ್ರಯಾಣಿಸಿದ ಸಿಎಂ ಡಿ.ಕೆ.ಶಿವಕುಮಾರ್ : ವಿಡಿಯೋ ವೈರಲ್ | WATCH VIDEO

ನಿಮ್ಮ ಮನೆಯ `ಅಡುಗೆ ಎಣ್ಣೆ’ ಬಳಕೆಗೆ ಯೋಗ್ಯವಾಗಿದೆಯೇ? ಇಲ್ಲಿದೆ ಪತ್ತೆ ಹಚ್ಚುವ 6 ಸುಲಭ ವಿಧಾನಗಳು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮಕ್ಕೆ ಬ್ರೇಕ್ : ಇನ್ಮುಂದೆ ಕೂಲಿಕಾರರ ಹಾಜರಾತಿಗೆ `ಫೇಸ್ ಅಥೆಂಟಿಕೇಷನ್’ ಕಡ್ಡಾಯ.!
KARNATAKA

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮಕ್ಕೆ ಬ್ರೇಕ್ : ಇನ್ಮುಂದೆ ಕೂಲಿಕಾರರ ಹಾಜರಾತಿಗೆ `ಫೇಸ್ ಅಥೆಂಟಿಕೇಷನ್’ ಕಡ್ಡಾಯ.!

By kannadanewsnow57

ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರ ಹಾಜರಾತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಯೋಜನೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಮತ್ತು ಅಕ್ರಮಗಳಿಗೆ ಕಡಿವಾಣ ಹಾಕಲು ಈಗ ‘ಎನ್‌ಎಂಎಂಎಸ್’ (NMMS) ಆಪ್ ಮೂಲಕ ‘ಮುಖ ಗುರುತಿಸುವಿಕೆ’ (Face Authentication) ಹಾಜರಾತಿಯನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ಇ-ಕೆವೈಸಿ ಕಡ್ಡಾಯ:

ಹಾಜರಾತಿ ದಾಖಲಿಸುವ ಮುನ್ನ ಪ್ರತಿಯೊಬ್ಬ ಕಾರ್ಮಿಕರ ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಂಡಿರುವುದು ಅತ್ಯಗತ್ಯ. ಇದರಿಂದ ಅರ್ಹ ಫಲಾನುಭವಿಗಳಿಗೆ ನೇರವಾಗಿ ಮತ್ತು ಸುಗಮವಾಗಿ ವೇತನ ಪಾವತಿಯಾಗಲು ಅನುಕೂಲವಾಗಲಿದೆ.

ಆಪ್ ಬಳಕೆಯ ಪ್ರಯೋಜನಗಳು:

ರಿಯಲ್ ಟೈಮ್ ಹಾಜರಾತಿ: ಕೆಲಸದ ಸ್ಥಳದಲ್ಲಿಯೇ ಕಾರ್ಮಿಕರ ಹಾಜರಾತಿಯನ್ನು ನೈಜ ಸಮಯದಲ್ಲಿ ದಾಖಲಿಸಬಹುದು.

ಅಕ್ರಮ ತಡೆ: ನಕಲಿ ಹಾಜರಾತಿ ಮತ್ತು ಭ್ರಷ್ಟಾಚಾರಕ್ಕೆ ಈ ತಂತ್ರಜ್ಞಾನದಿಂದ ಬ್ರೇಕ್ ಬೀಳಲಿದೆ.

ತ್ವರಿತ ವೇತನ: ಹಾಜರಾತಿ ವಿವರಗಳು ತಕ್ಷಣವೇ ಅಪ್‌ಲೋಡ್ ಆಗುವುದರಿಂದ ಕೂಲಿಕಾರರ ಬ್ಯಾಂಕ್ ಖಾತೆಗೆ ವೇತನ ಪಾವತಿ ಪ್ರಕ್ರಿಯೆ ವೇಗವಾಗಲಿದೆ.

ಡಿಜಿಟಲೀಕರಣ: ಕಾಗದ ರಹಿತ ದಾಖಲಾತಿ ನಿರ್ವಹಣೆಯಿಂದ ಸಮಯ ಉಳಿತಾಯವಾಗಲಿದ್ದು, ಉತ್ತರದಾಯಿತ್ವ ಹೆಚ್ಚಲಿದೆ.

ಫೋಟೋ ತೆಗೆಯುವಾಗ ಪಾಲಿಸಬೇಕಾದ ನಿಯಮಗಳು:

ಮುಖ ಗುರುತಿಸುವಿಕೆ ಯಶಸ್ವಿಯಾಗಲು ಕೆಲವು ಪ್ರಮುಖ ನಿಯಮಗಳನ್ನು ಅನುಸರಿಸಬೇಕೆಂದು ಇಲಾಖೆ ತಿಳಿಸಿದೆ:

ಮುಖವು ಸ್ಪಷ್ಟವಾಗಿ ಕಾಣುವಂತೆ ಸಾಕಷ್ಟು ಬೆಳಕಿರಬೇಕು.

ಮಾಸ್ಕ್, ಕನ್ನಡಕ ಅಥವಾ ಮುಖಗವಸು ಧರಿಸಿರಬಾರದು.

ಫೋಟೋದಲ್ಲಿ ಒಬ್ಬ ಕಾರ್ಮಿಕರ ಮುಖ ಮಾತ್ರ ಇರಬೇಕು.

ಸ್ಕ್ರೀನ್ ಮೇಲೆ ವೃತ್ತವು ಹಸಿರು ಬಣ್ಣಕ್ಕೆ ತಿರುಗಿದಾಗ ಮಾತ್ರ ಕಣ್ಣು ಮಿಟುಕಿಸಬೇಕು.

ತಾಂತ್ರಿಕ ದೋಷಗಳಿಗೆ ಪರಿಹಾರ:

ಒಂದು ವೇಳೆ ಆಧಾರ ಕೇಂದ್ರದಲ್ಲಿ ಫೋಟೋ ಅಪ್‌ಡೇಟ್ ಆಗದಿದ್ದರೆ (Error K 100), ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಫೋಟೋ ಸರಿಪಡಿಸಿಕೊಳ್ಳಬೇಕು. ಸಂಪರ್ಕದ ಸಮಸ್ಯೆ ಎದುರಾದಲ್ಲಿ (Error K 54), ಸ್ವಲ್ಪ ಸಮಯದ ನಂತರ ಪುನಃ ಪ್ರಯತ್ನಿಸಲು ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಥವಾ ದೂರುಗಳಿಗಾಗಿ ಸಾರ್ವಜನಿಕರು ಪಂಚಮಿತ್ರ ಸಹಾಯವಾಣಿ: 8277506000 ಅನ್ನು ಸಂಪರ್ಕಿಸಬಹುದಾಗಿದೆ.

'face authentication' is mandatory for the attendance of laborers! A break to irregularities in the employment guarantee scheme: From now on
Share. Facebook Twitter LinkedIn WhatsApp Email

Related Posts

BIG NEWS : ಸರ್ಕಾರ `ಭೂಸ್ವಾಧೀನ’ ಪ್ರಕರಣಗಳಲ್ಲಿ ಭೂಮಿಯ ಬೆಲೆ ನಿಗದಿಪಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Mins Read

BREAKING: `ನಮ್ಮ ಮೆಟ್ರೋ’ದಲ್ಲಿ ಪ್ರಯಾಣಿಸಿದ ಸಿಎಂ ಡಿ.ಕೆ.ಶಿವಕುಮಾರ್ : ವಿಡಿಯೋ ವೈರಲ್ | WATCH VIDEO

1 Min Read

ನಿಮ್ಮ ಮನೆಯ `ಅಡುಗೆ ಎಣ್ಣೆ’ ಬಳಕೆಗೆ ಯೋಗ್ಯವಾಗಿದೆಯೇ? ಇಲ್ಲಿದೆ ಪತ್ತೆ ಹಚ್ಚುವ 6 ಸುಲಭ ವಿಧಾನಗಳು!

2 Mins Read
Recent News

BIG NEWS : ಸರ್ಕಾರ `ಭೂಸ್ವಾಧೀನ’ ಪ್ರಕರಣಗಳಲ್ಲಿ ಭೂಮಿಯ ಬೆಲೆ ನಿಗದಿಪಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

BREAKING: `ನಮ್ಮ ಮೆಟ್ರೋ’ದಲ್ಲಿ ಪ್ರಯಾಣಿಸಿದ ಸಿಎಂ ಡಿ.ಕೆ.ಶಿವಕುಮಾರ್ : ವಿಡಿಯೋ ವೈರಲ್ | WATCH VIDEO

ನಿಮ್ಮ ಮನೆಯ `ಅಡುಗೆ ಎಣ್ಣೆ’ ಬಳಕೆಗೆ ಯೋಗ್ಯವಾಗಿದೆಯೇ? ಇಲ್ಲಿದೆ ಪತ್ತೆ ಹಚ್ಚುವ 6 ಸುಲಭ ವಿಧಾನಗಳು!

BREAKING : ವನ್ಯಜೀವಿ ಬೇಟೆಯಾಡಲು ಸಂಚು : ಬೆಂಗಳೂರಲ್ಲಿ 7 ಆರೋಪಿಗಳು ಅರೆಸ್ಟ್!

State News
KARNATAKA

BIG NEWS : ಸರ್ಕಾರ `ಭೂಸ್ವಾಧೀನ’ ಪ್ರಕರಣಗಳಲ್ಲಿ ಭೂಮಿಯ ಬೆಲೆ ನಿಗದಿಪಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ ಭೂಸ್ವಾಧೀನ ಪ್ರಕ್ರಿಯೆಗಳಲ್ಲಿ ರೈತರು ಮತ್ತು ಭೂಮಾಲೀಕರಿಗೆ ನ್ಯಾಯಯುತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹಾಗೂ ಅನಗತ್ಯ ಕೋರ್ಟ್ ವ್ಯಾಜ್ಯಗಳನ್ನು…

BREAKING: `ನಮ್ಮ ಮೆಟ್ರೋ’ದಲ್ಲಿ ಪ್ರಯಾಣಿಸಿದ ಸಿಎಂ ಡಿ.ಕೆ.ಶಿವಕುಮಾರ್ : ವಿಡಿಯೋ ವೈರಲ್ | WATCH VIDEO

ನಿಮ್ಮ ಮನೆಯ `ಅಡುಗೆ ಎಣ್ಣೆ’ ಬಳಕೆಗೆ ಯೋಗ್ಯವಾಗಿದೆಯೇ? ಇಲ್ಲಿದೆ ಪತ್ತೆ ಹಚ್ಚುವ 6 ಸುಲಭ ವಿಧಾನಗಳು!

BREAKING : ವನ್ಯಜೀವಿ ಬೇಟೆಯಾಡಲು ಸಂಚು : ಬೆಂಗಳೂರಲ್ಲಿ 7 ಆರೋಪಿಗಳು ಅರೆಸ್ಟ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.