Subscribe to Updates
Get the latest creative news from FooBar about art, design and business.
Author: kannadanewsnow05
ಅಶ್ಲೀಲ ವಿಡಿಯೋ ಹಂಚಿಕೆ ಕೇಸ್ ನಲ್ಲಿ, ಜೆಡಿಎಸ್ ಕಾರ್ಯಕರ್ತರ ಹೆಸರು ಉಲ್ಲೇಖ : ಅಚ್ಚರಿಗೆ ಕಾರಣವಾದ SIT ಚಾರ್ಜ್ ಶೀಟ್!
ಹಾಸನ : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೆಡಿಎಸ್ ವಲಯದಲ್ಲಿ SIT ಅಧಿಕಾರಿಗಳು ಸಲ್ಲಿಸಿದ್ದ ಚಾರ್ಜ್ ಶೀಟ್ ಇದೀಗ ಭಾರಿ ಸಂಚಲನ ಮೂಡಿಸಿದೆ. ಚಾರ್ಜ್ ಶೀಟ್ ನಲ್ಲೂ ಜೆಡಿಎಸ್ ಕಾರ್ಯಕರ್ತರ ಹೆಸರು ಸಹ ಇದೀಗ SIT ಉಲ್ಲೇಖ ಮಾಡಿದೆ. ಆರೋಪಿಗಳ ಪಟ್ಟಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಹೆಸರು ಉಲ್ಲೇಖಿಸಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಜೆಡಿಎಸ್ ಕಾರ್ಯಕರ್ತರ ಹೆಸರು ಉಲ್ಲೇಖಿಸಲಾಗಿದೆ. ಶಾಸಕ ಸ್ವರೂಪ ಚಿಕ್ಕಪ್ಪ ಹರ್ಷ ಪುತ್ರ ರೇವಂತ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದ್ದು, ರೇವಂತ ಸ್ನೇಹಿತ ಎಂಸಿ ಹರೀಶ್, ಜೆಡಿಎಸ್ ಕಾರ್ಯಕರ್ತ ಬುವನಹಳ್ಳಿಯ ಮಂಜು ಅಲಿಯಾಸ್ ವಸಂತ ಕುಮಾರ್, ಬಾಲಸುಬ್ರಮಣ್ಯ ಜಯಸೂರ್ಯ ಸೇರಿ 7ಕ್ಕೂ ಹೆಚ್ಚು ಜನರ ಹೆಸರು ಉಲ್ಲೇಖಿಸಲಾಗಿದೆ. ಪ್ರಜ್ವಲ್ ಅಶೀಲ ವಿಡಿಯೋ ವೈರಲ್ ಆರೋಪ ಪ್ರಕರಣದ A30 ಜೆಡಿಎಸ್ ಶಾಸಕ ಸ್ವರೂಪ ಚಿಕ್ಕಪ್ಪನ ಮಗ ರೇವಂತ್ A33 ಮಂಜು A35 ಬಾಲಸುಬ್ರಮಣ್ಯ A36 ಚಿರಂತ್ A38 ಜಯಸೂರ್ಯ A28…
ಚಿಕ್ಕಮಗಳೂರು : ಯುಗಾದಿ ಹಬ್ಬದ ದಿನವೇ ದೇವಾಲಯದ ಮುಂದೆ ವಾಮಾಚಾರ ನಡೆಸಲಾಗಿದೆ. ನಿನ್ನೆ ಅಮಾವಾಸ್ಯೆ ಹಿನ್ನೆಲೆ ದೇವಾಲಯದ ವಾಮಾಚಾರ ಮಾಡಿದ್ದಾರೆ. ಕಂಚಿನಕೆರೆ ಕಾಲಭೈರವೇಶ್ವರ ದೇಗುಲದ ಎದುರೇ ಕಿಡಿಗೇಡಿಗಳು ವಾಮಾಚಾರ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕಂಚಿನಕೆರೆ ಗ್ರಾಮದಲ್ಲಿರುವ ಕಾಲಭೈರವೇಶ್ವರ ದೇಗುಲದಲ್ಲಿ ಕಲ್ಲುಗಳನಿಟ್ಟು ಅರಿಶಿಣ, ಕುಂಕುಮ ಹಾಗೂ ನಿಂಬೆಹಣ್ಣು ಬಳಸಿ ವಾಮಾಚಾರ ಮಾಡಿದ್ದಾರೆ. ದೇಗುಲದ ಮುಂದೆ ಕಲ್ಲುಗಳಿಂದ ವೃತ್ತ ರಚಿಸಿ ಮಧ್ಯದಲ್ಲಿ ವಾಮಾಚಾರ ನಡೆಸಿದ್ದಾರೆ. ಕಳೆದು ವರ್ಷ ಯುಗಾದಿ ಹಿಂದಿನ ದಿನವೇ ಕಳ್ಳತನ ಕೂಡ ನಡೆದಿತ್ತು. ಇದೀಗ ಈ ಬಾರಿಯೂ ಕೂಡ ಯುಗಾದಿ ಹಿಂದಿನ ದಿನ ಅಂದರೆ ಅಮಾವಾಸ್ಯೆಯ ದಿನದಂದು ಕಿಡಿಗೇಡಿಗಳು ವಾಮಾಚಾರ ನಡೆಸಿದ್ದಾರೆ.
ಚಿಕ್ಕಮಗಳೂರು : ಇತ್ತೀಚಿಗೆ ನಮ್ಮ ಮೊಬೈಲ್ ಗಳಿಗೆ ಅಪರಿಚಿತ ಲಿಂಕ್ ಗಳು ಹೆಚ್ಚಾಗಿ ಬರುತ್ತಿದ್ದು ಇದು ಸೈಬರ್ ವಂಚಕರು ನಮ್ಮ ಖಾತೆಯಲ್ಲಿರುವ ದುಡ್ಡು ಹೊಡೆಯುವ ಪ್ಲಾನ್ ಆಗಿದೆ. ಹಾಗಾಗಿ ಅಪರಿಚಿತ ಲಿಂಕ್ ಬಂದ ತಕ್ಷಣ ಆ ಲಿಂಕನ್ನು ಓಪನ್ ಮಾಡದೆ ಡಿಲೀಟ್ ಮಾಡುವುದು ಆದಷ್ಟು ಸೂಕ್ತ ಇದೀಗ ಚಿಕ್ಕಮಗಳೂರಲ್ಲಿ ಕೂಡ ಇಂತಹದೇ ಘಟನೆ ನಡೆದಿದ್ದು, ಅನುಮಾನಾಸ್ಪದ APK ಫೈಲ್ ಲಿಂಕ್ ಕ್ಲಿಕ್ ಮಾಡಿದ 62 ವರ್ಷದ ಹಿರಿಯ ನಾಗರಿಕರೊಬ್ಬರು, ತಮ್ಮ ಬ್ಯಾಂಕ್ ಖಾತೆಯಿಂದ 3.12 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಅಪರಿಚಿತ ಲಿಂಕ್‌ಗಳ ಬಗ್ಗೆ ಜಾಗರೂಕರಾಗಿರುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಚಿಕ್ಕಮಗಳೂರು ನಗರದ ವ್ಯಕ್ತಿಯ ಮೊಬೈಲ್‌ಗೆ ಅನುಮಾನಾಸ್ಪದ ಲಿಂಕ್ ಬಂದಿತ್ತು. ಅದರ ಬಗ್ಗೆ ತಿಳಿಯದೇ ಅವರು ಕ್ಲಿಕ್ ಮಾಡಿದ್ದರು. ಈ ಲಿಂಕ್ APK ಫೈಲ್ ರೂಪದಲ್ಲಿದ್ದು, ಅದನ್ನು ಡೌನ್‌ಲೋಡ್ ಮಾಡಿ ತೆರೆಯುತ್ತಿದ್ದಂತೆ, ಸೈಬರ್ ಕಳ್ಳರು ಅವರ ಮೊಬೈಲ್‌ನಲ್ಲಿದ್ದ ವೈಯಕ್ತಿಕ ಹಾಗೂ ಬ್ಯಾಂಕ್ ಸಂಬಂಧಿತ…
ಬೆಳಗಾವಿ : ಸಂತ ಬಾಳು ಮಾಮಾ ಅವರು ಮಹಾರಾಷ್ಟ್ರ ಮತ್ತು ಕರ್ನಾಟಕದಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿರುವ ಶಕ್ತಿಶಾಲಿ ಮತ್ತು ಪವಾಡ ಪುರುಷರೆಂದು ಪ್ರಸಿದ್ಧರಾಗಿದ್ದಾರೆ. ಬಾಳು ಮಾಮಾ ಅವರು ತಮ್ಮ ಜೀವನದುದ್ದಕ್ಕೂ ಕುರಿಗಳನ್ನು ಕಾಯುವ ಕಾಯಕವನ್ನು ಮಾಡಿದರು. ಅವರು ಸಾಕುತ್ತಿದ್ದ ಕುರಿಗಳನ್ನು ಬಾಳು ಮಾಮಾ ಅವರ ಕುರಿಗಳು ಎಂದೇ ಕರೆಯಲಾಗುತ್ತಿತ್ತು. ಅವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿದ್ದರೆಂದು ಹೇಳಲಾಗುತ್ತದೆ. ರೋಗಿಗಳನ್ನು ಗುಣಪಡಿಸುವುದು, ಮಳೆ ಬರಿಸುವುದು ಮತ್ತು ಭಕ್ತರ ಸಂಕಷ್ಟಗಳನ್ನು ದೂರಮಾಡುವ ಮೂಲಕ ಅವರು ಜನಪ್ರಿಯರಾದರು. “ಸತ್ಯ ಮತ್ತು ಸರಳತೆಯೇ ಭಗವಂತನನ್ನು ತಲುಪುವ ದಾರಿ” ಎಂಬುದು ಅವರ ಮುಖ್ಯ ಸಂದೇಶವಾಗಿತ್ತು. ಬಾಳು ಮಾಮಾ ಅವರು ಅಕ್ಟೋಬರ್ 3, 1892 ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಮಾಯಪ್ಪ ಮತ್ತು ತಾಯಿ ಸತ್ಯವ್ವ. ಬಾಲ್ಯದಿಂದಲೇ ಅವರು ಆಧ್ಯಾತ್ಮಿಕತೆಯತ್ತ ಒಲವು ಹೊಂದಿದ್ದರು. ಬಾಳು ಮಾಮಾ ಅವರು ಆಗಸ್ಟ್ 19, 1966 ರಂದು ಕೊಲ್ಲಾಪುರ ಜಿಲ್ಲೆಯ ಆದಮಾಪುರದಲ್ಲಿ (Admapur) ದೈಹಿಕವಾಗಿ…
ದಕ್ಷಿಣಕನ್ನಡ : ಕರಾವಳಿ ಭಾಗದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿದೆ.ಹಿಂದೂ ವಿದ್ಯಾರ್ಥಿನಿಯರ ಜೊತೆಗೆ ಇದ್ದ ಮುಸ್ಲಿಂ ವಿದ್ಯಾರ್ಥಿಗೆ ಹಲ್ಲೆ ನಡೆಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಈ ಒಂದು ಘಟನೆ ನಡೆದಿದೆ. ಜನಾರ್ಧನ ಸ್ವಾಮಿ ದೇಗುಲದ ಬ್ರಹ್ಮ ಕಳಶೋತ್ಸವ ಜಾತ್ರೆಯಲ್ಲಿ ಈ ಒಂದು ಘಟನೆ ನಡೆದಿದೆ. 17 ವರ್ಷದ ಮುಸ್ಲಿಂ ಬಾಲಕನ ದೂರಿನ ಮೇರೆಗೆ ಇದೀಗ ಕೇಸ್ ದಾಖಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದೂ ಸ್ನೇಹತೆಯರ ಜೊತೆಗೆ ಮುಸ್ಲಿಂ ಬಾಲಕ ಜಾತ್ರೆಗೆ ಬಂದಿದ್ದ. ಬಜರಂಗದಳ ಯುವಕರಿಂದ ಹಲ್ಲೆ ಮತ್ತು ಅಪಹರಣ ಮಾಡಿರುವ ಆರೋಪ ಕೇಳಿ ಬಂದಿದೆ. ಹಲ್ಲೆ ಮಾಡಿ ಕಿಡ್ನ್ಯಾಪ್ ಮಾಡಿರುವ ಆರೋಪ ಕೇಳಿ ಬಂದಿದೆ. ಹಿಂದೂ ಹುಡುಗಿಯರನ್ನು ಲಾಡ್ಜ್ ಗೆ ಕರೆದೊಯುತ್ತಿದ್ದಿಯಾ ಅಂತ ನಿಂದನೆ ಮಾಡಿದ್ದಾರೆ ಎಂದು ಬಾಲಕ ಆರೋಪಿಸಿದ್ದಾನೆ.
ಬೆಂಗಳೂರು : ನಮ್ಮ ಮೆಟ್ರೋ ರೈಲಿನಲ್ಲಿ ಹಾಡು ಹಾಡಿದವರ ವಿರುದ್ಧ ಇದೀಗ ದೂರು ದಾಖಲಾಗಿದೆ. ಭಾನುವಾರ ರಾತ್ರಿ ನಮ್ಮ ಮೆಟ್ರೋ ರೈಲಿನಲ್ಲಿ ಈ ಒಂದು ಘಟನೆ ನಡೆದಿತ್ತು. ಸಂಗೀತ ಕಾರ್ಯಕ್ರಮದಲ್ಲಿ ಯುವಜನರ ಗುಂಪು ಒಂದು ಭಾಗಿಯಾಗಿತ್ತು. ಮೆಟ್ರೋದಲ್ಲಿ ಪ್ರಯಾಣಿಸುವಾಗ ಈ ಒಂದು ಯುವಜನರ ಗುಂಪು ಜೋರಾಗಿ ಹಾಡು ಹಾಡಿದ್ದಾರೆ. ಇದು ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದೆ. ಮೆಟ್ರೋದಲ್ಲಿ ಕೆಳಗೆ ಕುಳಿತು ಯುವತಿಯರು ಹಾಡು ಹಾಡಿದ್ದರು. ಈ ಕುರಿತು ಮೆಟ್ರೋ ಅಧಿಕಾರಿ ಒಬ್ಬರು ಪೀಣ್ಯ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಮೆಟ್ರೋ ಸಿಬ್ಬಂದಿ ದೂರಿನ ಅನ್ವಯ ಇದೀಗ ಪೀಣ್ಯ ಪೊಲೀಸ್ ಠಾಣೆಯಲ್ಲಿ NCR ದಾಖಲಾಗಿದೆ.
ಬಾಗಲಕೋಟೆ : ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ, ಬಾಗಲಕೋಟೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 15.50 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ದಾಖಲೆ ಇಲ್ಲದೆ ಸಾಗಿಸುತ್ತಿದ್ದ 15.50 ಲಕ್ಷ ರೂಪಾಯಿಗಳನ್ನು ಇದೀಗ ಸೀಜ್ ಮಾಡಿಕೊಳ್ಳಲಾಗಿದೆ. ನಾಯನಗೇಲಿ ಚೆಕ್ ಪೋಸ್ಟ್ ನಲ್ಲಿ 15.50 ಲಕ್ಷ ಜಪ್ತಿ ಮಾಡಿಕೊಳ್ಳಲಾಗಿದೆ. ವಿಜಯಕುಮಾರ್ ಎನ್ನುವವರು ಈ ಹಣವನ್ನು ಸಾಗಿಸುತ್ತಿದ್ದರು. ವಿಜಯಪುರದಿಂದ ಕುಷ್ಟಗಿ ಕಡೆಗೆ ಕಾರು ತೆರಳುತ್ತಿತ್ತು. ಈ ವೇಳೆ ಹಣ ಜಪ್ತಿ ಮಾಡಿ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ತನ್ನ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸಿದೆ. ಮಾಜಿ ಸಚಿವರಾದ ಎಚ್.ವೈ. ಮೇಟಿ ಹಾಗೂ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಈ ಎರಡು ಕ್ಷೇತ್ರಗಳಿಗೆ ಏಪ್ರಿಲ್ 9, 2026 ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿ ಪಟ್ಟಿ ಬಿಡುಗಡೆ ಮಾಡಿದೆ. ಬಾಗಲಕೋಟೆಯಿಂದ ವೀರಭದ್ರಯ್ಯ ಚರಂತಿಮಠ ಮತ್ತು ದಾವಣಗೆರೆ ದಕ್ಷಿಣದಿಂದ ಶ್ರೀನಿವಾಸ ಟಿ ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಆಮೂಲಕ, ದಾವಣಗೆರೆ ಬಿಜೆಪಿ ಘಟಕಕ್ಕೆ ಕೇಂದ್ರದ ನಾಯಕರು ಅಚ್ಚರಿಯನ್ನು ಮೂಡಿಸಿದ್ದಾರೆ.
ಬೀದರ್ : ಯುಗಾದಿ ಹಬ್ಬದಂದೆ ಬೀದರ್ ನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಬೈಕ್ ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ಚಲಿಸುತ್ತಿದ್ದ ದಂಪತಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ನಡೆದಿದೆ. ಮೃತ ದಂಪತಿಗಳನ್ನು ಬಸವಕಲ್ಯಾಣ ನಗರದ ಖಡಿ ಝಂಡಾ ಕಾಲೋನಿಯ ನಿವಾಸಿ ಸೈಯದ್ ದಸ್ತಗೀರ್ (35) ಮತ್ತು ಅವರ ಪತ್ನಿ ಯಾಸ್ಮೀನ್ ದಸ್ತಗೀರ್ (33) ಸಾವನ್ನಪ್ಪಿದ ದಂಪತಿ. ಸದ್ಯ ತ್ರಿಪುರಾಂತ ಬಳಿಯ ಕಾಲೋನಿಯೊಂದರಲ್ಲಿ ವಾಸಿಸುತ್ತಿದ್ದ ಮೃತರು, ಬೈಕ್ನಲ್ಲಿ ಬಸ್ ನಿಲ್ದಾಣ ಕಡೆಯಿಂದ ಖಡಿ ಝಂಡಾ ಕಾಲೋನಿಯತ್ತ ತೆರಳುತ್ತಿದ್ದಾಗ ಈ ಅವಘಡ ನಡೆದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಪಘಾತ ಸ್ಥಳಕ್ಕೆ ಬಸವಕಲ್ಯಾಣ ಸಿಪಿಐ ಅಲಿಸಾಬ್, ಸಂಚಾರ ಠಾಣೆ ಪಿಎಸ್‌ಐ ಸಿದ್ದೇಶ್ವರ ಹಾಗೂ ನಗರ ಠಾಣೆ ಪಿಎಸ್‌ಐ ಚಂದ್ರಶೇಖರ್ ನಾರಾಯಣಪುರ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು : ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೇರಿದಂತೆ ಚಿಕ್ಕಮಂಗಳೂರು ಜಿಲ್ಲೆಯಿಂದ ಒಟ್ಟು 15 ಜನರಿಗೆ ಗಡಿಪಾರು ನೋಟಿಸ್ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲಾಡಳಿತ ಬಿಜೆಪಿ ಯುವ ಮೋರ್ಚಾ ಸೇರಿದಂತೆ 15 ಜನರ ವಿರುದ್ಧ ಈ ಒಂದು ಗಡಿಪಾರು ಆದೇಶ ಹೊರಡಿಸಿದೆ. ವಿಚಾರಣೆಗೆ ಬರುವಂತೆ ಜಿಲ್ಲಾಡಳಿತದಿಂದ ಗಡಿಪಾರು ನೋಟಿಸ್ ಜಾರಿ ಮಾಡಿದ್ದು, ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್, ಬಜರಂಗದಳ ಹಾಸನ ವಿಭಾಗದ ಸಹ ಸಂಯೋಜಕ ಶ್ಯಾಮ್ ವಿ.ಗೌಡ ಮುಸ್ಲಿಂ ಸಂಘಟನೆಯ ನಾಲ್ವರು ಸೇರಿದಂತೆ 15 ಜನರಿಗೆ ಇದೀಗ ಗಡಿಪಾರು ನೋಟಿಸ್ ನೀಡಲಾಗಿದೆ. ಪೊಲೀಸ್ ಕಾಯ್ದೆ 1963ರ ಕಲಂ 58ರ ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಉಪವಿಭಾಗಾಧಿಕಾರಿ ನಟೇಶ್ ನೋಟಿಸ್ ಜಾರಿ ಮಾಡಿದ್ದಾರೆ. ಗಡಿಪಾರು ಮಾಡುವಂತೆ ಜಿಲ್ಲಾಡಳಿತಕ್ಕೆ ಪೊಲೀಸರು ಪ್ರಸ್ತಾವನೆ ಕಳುಹಿಸಿದ್ದರು. ಮಾರ್ಚ್ 25ರಂದು ವಿಚಾರಣೆಗೆ ಹಾಜರಾಗುವಂತೆ 15 ಜನರಿಗೆ ಸೂಚನೆ ನೀಡಲಾಗಿದೆ ಚಿಕ್ಕಮಂಗಳೂರು ಎಸಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ ಸಾರ್ವಜನಿಕ ಶಾಂತಿಗೆ ಭಂಗ, ನೈತಿಕ ಪೊಲೀಸ್ ಗಿರಿ,…














