ಹಾವೇರಿ : ಹಾವೇರಿಯಲ್ಲಿ ಬೀದಿ ನಾಯಿಗಳಿಗೆ ಅಟ್ಯಾಕ್ ನಡೆಸಿದ್ದು ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಹಾವೇರಿ ನಗರದ ಶಿವಾಜಿನಗರ, ನೆಲೋಗಲ್ಲ, ಗುತ್ತಲ, ದೇವಗಿರಿ ಹಾಗೂ ಬ್ಯಾಡಗಿ ತಾಲೂಕಿನ ಹಿರೇಹಳ್ಳಿಯಲ್ಲಿ ನಡೆದಿದೆ. ಹತ್ತಕ್ಕೂ ಅಧಿಕ ಜನರಿಗೆ ಗಾಯಗಳಾಗಿವೆ. ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ನಡೆಸಿವೆ.
ಒಂದೇ ದಿನ ಆರು ಮಕ್ಕಳು ಓರ್ವ ವಿರುದ್ಧ ಸೇರಿದಂತೆ 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಪೃಥ್ವಿಕ್ (7) ಯಶವಂತ (3) ಫಾತಿಮಾ (5) ಅಹ್ಮದ್ ಅಲಿ (4) ಭುವನ್ (2) ಕಾರ್ತಿಕ್ (6) ಇನ್ನು 70 ವರ್ಷದ ನಿಂಗಮ್ಮ ಎನ್ನುವ ವೃದ್ದೆಗೆ ಗಂಭೀರವಾದ ಗಾಯಗಳಾಗಿವೆ. ದಾಳಿ ಮಾಡಿದ ಬೀದಿ ನಾಯಿಗಳಿಗೆ ರೇಬಿಸ್ ಸೋಂಕು ಇರುವ ಶಂಕೆ ವ್ಯಕ್ತವಾಗಿದ್ದು, ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಗಾಯಾಳು ಮಕ್ಕಳಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.








