Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ವಾಹನ ಸವಾರರಿಗೆ ಬಿಗ್ ಶಾಕ್ ಎದುರಾಗಿದ್ದು, ವಾಹನ ಪ್ರಯಾಣಿಕರಿಗೆ ಏಪ್ರಿಲ್ 1 ರಿಂದ ಟೋಲ್ ದರ ಏರಿಕೆ ಬಿಸಿ ತಟ್ಟಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಶೇಕಡಾ 3 ರಿಂದ 5 ರಷ್ಟು ದರ ಏರಿಕೆಯಾಗಲಿದೆ. ರಾಜ್ಯದ 9 ಪ್ರಮುಖ ರಾಷ್ಟ್ರೀಯ ಹೆದ್ದಾರಿಯ ಟೋಲ್‌ಗಳಿಗೂ ಅನ್ವಯವಾಗಲಿವೆ. ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ವೇ ಪ್ರಯಾಣ ಇನ್ನಷ್ಟು ದುಬಾರಿಯಾಗಲಿದೆ. ಹೌದು ಏಪ್ರಿಲ್ 1 ರಿಂದ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇ ಹೆದ್ದಾರಿ ಸೇರಿದಂತೆ ರಾಜ್ಯದ 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೇಕಡಾ 3 ರಿಂದ ಶೇಕಡಾ 5ರಷ್ಟು ಟೋಲ್ ದರ ಹೆಚ್ಚಳವಾಗಲಿದೆ. ಈ ಮೂಲಕ ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಿದೆ. ವಾರ್ಷಿಕ ಹಣದುಬ್ಬರ ಆಧಾರಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳ ನಿರ್ಣಯ ಮತ್ತು ಸಂಗ್ರಹ) ನಿಯಮ 2008ರ ಅನ್ವಯ ಪ್ರತಿ ವರ್ಷ ಟೋಲ್‌ದರ ಶೇ.3 ರಿಂದ ಶೇ.5ರವರೆಗೆ ಹೆಚ್ಚಳ ಆಗಲಿದೆ. ಕಳೆದ ಎರಡು ವರ್ಷಗಳಿಂದ ಇದೇ ರೀತಿ ಟೋಲ್…
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಕೊಲೆ ನಡೆದಿದ್ದು ದುಷ್ಕರ್ಮಿಗಳು ರಾಡ್ ನಿಂದ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿ ರಸ್ತೆ ಬದಿ ಶವ ಬಿಸಾಕಿರುವ ಘಟನೆ ಬೆಂಗಳೂರಿನ ಕೆಂಗೇರಿ ಮಾದೇಶ್ವರ ಬಡಾವಣೆಯಲ್ಲಿ ನಡೆದಿದೆ. ರಾಡ್ ನಿಂದ ಹಲ್ಲೆಗೆ ಒಳಗಾದ ಕೆಂಪಮ್ಮ (45) ಕೊಲೆಯಾದ ಮಹಿಳೆ. ಕೊಲೆ ಮಾಡಿ ದುಷ್ಕರ್ಮಿಗಳು ಶವವನ್ನು ರಸ್ತೆ ಬದಿಯಲ್ಲಿ ಬಿಸಾಕಿ ಪರಾರಿಯಾಗಿದ್ದಾರೆ. ಶವ ನೋಡಿದ ತಕ್ಷಣ ಸ್ಥಳೀಯರು 112 ಗೆ ಕರೆ ಮಾಡಿ ಪೊಲೀಸ್ರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕೆಂಗೇರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ನವದೆಹಲಿ : ಅಮೆರಿಕಾದಲ್ಲಿ ಕೆನಡಾದ ಜೆಟ್ ವಿಮಾನ ಪಥನಗೊಂಡು ಏಳು ಜನರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನ್ಯೂಯಾರ್ಕ್ ನ ಲಾಗ್ವಾರ್ಡಿಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಅಗ್ನಿಶಾಮಕ ವಾಹನಕ್ಕೆ ಏರ್ ಕೆನಡಾ ವಿಮಾನ ಡಿಕ್ಕಿ ಹೊಡೆದ ಪರಿಣಾಮ ಕೆನಡಾ ವಿಮಾನ ಪತನವಾಗಿದೆ. ಅಪಘಾತದಲ್ಲಿ ಏಳು ಜನ ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ. ನ್ಯೂಯಾರ್ಕ್ ನ ಲಾಗ್ವಾರ್ಡಿಯ ವಿಮಾನ ನಿಲ್ದಾಣದಲ್ಲಿ ಈ ಒಂದು ಘಟನೆ ಸಂಭವಿಸಿದೆ. ವಿಮಾನ ಪತನದ ಕುರಿತು ಇನ್ನಷ್ಟು ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.
ಶಿವಮೊಗ್ಗ : ಕಳೆದ ಎರಡು ದಿನಗಳ ಹಿಂದೆ ಇಲ್ಲಿನ ಮೃಗಾಲಯದಲ್ಲಿ ನೀರಾನೆ ದಾಳಿಯಿಂದ ಮೃತಪಟ್ಟ ಟ್ರೈನಿ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಅವರ ಹೆಸರನ್ನು ಬನ್ನೇರುಘಟ್ಟದಲ್ಲಿ ಈಚೆಗೆ ಜನಿಸಿದ ಆನೆ ಮರಿಗೆ ನಾಮಕರಣ ಮಾಡುವುದಾಗಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ ತಿಳಿಸಿದರು. ಶಿವಮೊಗ್ಗ ಮೃಗಾಲಯಕ್ಕೆ ಭೇಟಿ ನೀಡಿದ್ದ ಅವರು ಅಧಿಕಾರಿಗಳ ಬಳಿ ಮಾಹಿತಿ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಇದರ ಜೊತೆಗೆ ಡಾ.ಸಮೀಕ್ಷಾ ರೆಡ್ಡಿ ಅವರಿಗೆ ಹುತಾತ್ಮ ಪಟ್ಟ ನೀಡುವ ಬಗ್ಗೆಯೂ ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು. ಡಾ.ಸಮೀಕ್ಷಾ ರೆಡ್ಡಿ ಸಾವು ತೀವ್ರ ಆಘಾತ ತಂದಿದೆ. ಇಂತಹ ಘಟನೆ ನಡೆಯಬಾರದಿತ್ತು, ನಡೆದಿದೆ. ಪೊಲೀಸ್ ಹಾಗೂ ಅರಣ್ಯ ಇಲಾಖೆ ವತಿಯಿಂದ ಘಟನೆ ಕುರಿತು ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ನೀರಾನೆ ಎರಡು ಬಾರಿ ಮರಿ ಕಳೆದುಕೊಂಡಿದೆ. ಮೂರನೇ ಸಲ ಗರ್ಭ ಧರಿಸಿದ್ದು ಈ ಬಾರಿಯಾದರೂ ಮರಿ ಉಳಿಸಿಕೊಳ್ಳಬೇಕೆಂಬ ವಿಶೇಷ ಕಾಳಜಿಯಿಂದ ಸಮೀಕ್ಷಾ ಅವರ ಮೇಲೆ…
ಬೆಂಗಳೂರು : ಬೆಂಗಳೂರಿನಲ್ಲಿ ಪತಿ ಕಳೆದುಕೊಂಡವರು ಹಾಗೂ ಪತಿಯನ್ನು ಬಿಟ್ಟು ದೂರವಾದವರೇ ಈ ಕಿರಾತಕನ ಟಾರ್ಗೆಟ್ ಆಗಿದ್ದಾರೆ. ಒಂದಲ್ಲ ಎರಡಲ್ಲ ಇವರು ಹೆಣ್ಣು ಮಕ್ಕಳ ಬಾಳಿನಲ್ಲಿ ಈ ಕಿರಾತಕ ಆಟ ಆಡಿದ್ದು ಬಾಳು ಕೊಡೋದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಹಣ ಚಿನ್ನ ಪಡೆದು ಐವರು ಮಹಿಳೆಯರಿಗೆ ಮೋಸ ಮಾಡಿದ್ದಾನೆ. ಸೂರ್ಯ ಮ್ಯಾನೇಜ್ಮೆಂಟ್ ಸರ್ವಿಸ್ ಎಂಡಿ ರಾಮಾಂಜಿ (38) ಈ ಕೃತ್ಯ ಎಸಗಿದ್ದು, ಇದೀಗ ಆತನ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ದಾಖಲಾಗಿದ್ದು, ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ಅಪಾರ್ಟ್ಮೆಂಟ್ ಗಳಲ್ಲಿ ಸೆಕ್ಯೂರಿಟಿ, ಹೌಸ್ ಕೀಪಿಂಗ್ ಕೆಲಸವನ್ನು ಮಾಡಿಸುತ್ತಿದ್ದ. ಈತನ ಬಳಿ ಸುಮಾರು 60ಕ್ಕೂ ಹೆಚ್ಚು ಜನ ಕೆಲಸಕ್ಕೆ ಇದ್ದರು. ಕೆಲಸಕ್ಕೆ ಬರುವ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕುತ್ತಿದ್ದ ಎಂದು ಗೊತ್ತಾಗಿದೆ. ಅಪ್ಪ ಅಮ್ಮನ ಬಿಟ್ಟು ಬೆಂಗಳೂರಿಗೆ ಬರುವ ಹೆಣ್ಣು ಮಕ್ಕಳು ಇಲ್ಲಿ ಕೆಲಸ ಹುಡುಕಿಕೊಂಡು ಬರುತ್ತಾರೆ. ಅಲ್ಲದೆ ಗಂಡನನ್ನು ಕಳೆದುಕೊಂಡವರು ಅಥವಾ ಗಂಡನಿಂದ ಡಿವೋರ್ಸ್ ಪಡೆದ…
ವಿಜಯನಗರ : ವಿಜಯನಗರದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ತಂದೆಯ ಕಣ್ಣೇದುರಲ್ಲೇ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸಹೋದರರು ನೀರಿನಲ್ಲಿ ಮುಳುಗಿ ದಾರುಣ ಸಾವನ್ನಪ್ಪಿದ್ದಾರೆ. ಹೌದು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ಘಟನೆ ನಡೆದಿದೆ. ಮನು (19) ಹಾಗೂ ಪ್ರಜ್ವಲ್ (18) ಮೃತ ಸಹೋದರರು. ತಂದೆಯ ಕಣ್ಣೆದುರಲ್ಲೇ ಅಣ್ಣ-ತಮ್ಮ ಪ್ರಾಣ ಬಿಟ್ಟಿದ್ದಾರೆ. ತಂದೆಯೊಂದಿಗೆ ತುಂಗಭದ್ರಾ ನದಿಗೆ ಮೂವರು ಸಹೋದರರು ಈಜಲು ತೆರಳಿದ್ದರು. ಇಬ್ಬರು ಸಹೋದರರು ಆಯತಪ್ಪಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ತಂದೆ ಮಂಜಪ್ಪ ಅವರ ಸಮಯ ಪ್ರಜ್ಞೆಯಿಂದ ಕೊನೆಯ ಮಗ ಚಿರಂಜೀವಿ ಸಾವಿನಿಂದ ಪಾರಾದರು.ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸೈಬರ್ ವಂಚಕರು 94 ವರ್ಷದ ವೃದ್ಧನಿಗೆ ಡಿಜಿಟಲ್ ಅರೆಸ್ಟ್ ಮಾಡಿ 5 ಕೋಟಿ ರೂಪಾಯಿ ವಂಚನೆ ಎಸಗಿದ್ದಾರೆ. ನಿವೃತ್ತ ಸಂಶೋಧಕನಿಗೆ ಸೈಬರ್ ವಂಚಕರು ಭಾರಿ ವಂಚನೆ ಎಸಗಿದ್ದಾರೆ. ಲ್ಯಾಂಡ್ ಲೈನ್ ಗೆ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮೂಲಕ 5 ಕೋಟಿ ರೂಪಾಯಿ ವಂಚನೆ ಎಸಗಿದ್ದಾರೆ. ಮೊದಲು ಟೆಲಿಕಾಂ ಆಫೀಸ್ ನಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದ ಬಳ್ಳಾರಿಯಲ್ಲಿ ಮಾನವ ಕಳ್ಳ ಸಾಗಾಣಿಕೆ ಕೆಎಸ್ ದಾಖಲಾಗಿದೆ. ಇನ್ಸ್ಪೆಕ್ಟರ್ ಕರೆ ಮಾಡುತ್ತಾರೆ ಎಂದು ಕಾಲ್ ಕಟ್ ಮಾಡಿದ್ದ. ಬಳಿಕ ಸಂದೀಪ್ ರಾವ್ ಹೆಸರಿನಲ್ಲಿ ವೃದ್ಧನಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದಾನೆ. ಸಿಬಿಐ ಅಧಿಕಾರಿ ಎಂದು ಆಧಾರ್ ಕಾರ್ಡ್ ವಾಟ್ಸಪ್ಪ್ ಮಾಡಿಸಿಕೊಂಡಿದ್ದ. ವೃದ್ಧರ ಮೊಬೈಲ್ ನಂಬರ್ ಗೆ ನಕಲಿ ಎಫ್ಐಆರ್ ಕಳುಹಿಸಿದ್ದ ಆರೋಪಿ ನಂತರ ಸಿ ಬಿ ಐ ಪೊಲೀಸರ ರೀತಿ ಡ್ರೆಸ್ ಹಾಕಿ ವಿಡಿಯೋ ಕಾಲ್ ಮಾಡಿದ್ದಾನೆ. ನಾವು ಹೇಳಿದಂತೆ ಕೇಳಬೇಕು ಎಂದು ಆರೋಪಿ ಬೆದರಿಕೆ ಹಾಕಿದ್ದಾನೆ. ಕೊನೆಗೆ ಕೇಸ್ ಕೈ ಬಿಡಲು…
ಬೆಳಗಾವಿ : 500 ರೂ. ಮುಖಬೆಲೆಯ ಖೋಟಾ ನೋಟು ಬೆಳಗಾವಿಯಲ್ಲಿ ಚಲಾವಣೆ ಮಾಡಲು ಯತ್ನಿಸಿದ್ದ ಗೋವಾ ಗ್ಯಾಂಗ್ ಹೆಡೆಮುರಿ ಕಟ್ಟುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಲ್ವರು ಆರೋಪಿಗಳನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ನಗರದ ಖಡೇಬಜಾರ್ ಅಂಗಡಿಯಲ್ಲಿ ಖೋಟಾ ನೋಟು ಚಲಾವಣೆಗೆ ಆರೋಪಿಗಳು ಯತ್ನಿಸಿದ್ದಾರೆ. ಸಂಶಯಗೊಂಡ ಅಂಗಡಿ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಲರ್ಟ್ ಆಗಿ ಕಾರ್ಯಾಚರಣೆಗೆ ಇಳಿದ ಮಾರ್ಕೆಟ್ ಠಾಣೆ ಪೊಲೀಸರು, ಗೋವಾ ರಾಜ್ಯದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಒಂದು ಕಾರ್, 2 ಲಕ್ಷದ 40 ಸಾವಿರ ಖೋಟಾ ನೋಟು ಮತ್ತು 4 ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ. ಗೋವಾದಲ್ಲಿ 1 ಲಕ್ಷಕ್ಕೆ 2 ಲಕ್ಷ ಖೋಟಾ ನೋಟು ಕೊಟ್ಟು ಬೆಳಗಾವಿಗೆ ಬಂದಿದ್ದ ಈ ಗ್ಯಾಂಗ್, ಇಲ್ಲಿ ಖೋಟಾ ನೋಟು ಚಲಾವಣೆ ಮಾಡಲು ಬಂದಿದ್ದರು ಎಂಬ ಮಾಹಿತಿಯನ್ನು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು : ಭಾರತಕ್ಕೆ ಕಚ್ಚಾ ದೈಲ ತುಂಬಿದ್ದ ಮತ್ತೊಂದು ಹಡಗು ಇದೀಗ ಎಂಟ್ರಿ ಕೊಟ್ಟಿದೆ ತೈಲಪಟ್ಟಿನ ಮಧ್ಯೆ ಭಾರತಕ್ಕೆ ರಷ್ಯ ಸಹಾಯ ಮಾಡಿದ್ದು ಮಂಗಳೂರು ಬಂದರಿಗೆ ಅಕ್ವಾ ಟೈಟಾನ್ ಇದೀಗ ಕಚ್ಚಾ ತೈಲು ಹಡಗು ಆಗಮಿಸಿದೆ. ಚೀನಾಗೆ ಹೋಗುತ್ತಿದ್ದ ಕಚ್ಚಾ ತೈಲ ಹಡಗು ಇದೀಗ ಮಂಗಳೂರು ಬಂದರಿಗೆ ಬಂದು ತಲುಪಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ರಷ್ಯಾ ಹಡಗು ಯೂಟರ್ನ್ ತೆಗೆದುಕೊಂಡಿದೆ. ಮಂಗಳೂರು ಬಂದರಿಗೆ ಬಂದಿದೆ. 7.7 ಲಕ್ಷ ಬ್ಯಾರೆಲ್ ಕಚ್ಚಾ ಟೈಲರ್ ತುಂಬಿರುವಂತಹ ಹಡಗು ಇದೀಗ ಮಂಗಳೂರು ಬಂದರಿಗೆ ಬಂದಿದೆ.
BREAKING : ಬೆಂಗಳೂರಲ್ಲಿ ನಾಯಿಗೆ ಹಾಕುವ ಆಹಾರದ ಬಾಕ್ಸ್ ನಲ್ಲಿ ಡ್ರಗ್ಸ್ ಸಾಗಾಟ : 10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ!
ಬೆಂಗಳೂರು : ಬೆಂಗಳೂರಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದೆಹಲಿಯಿಂದ ಬೆಂಗಳೂರಿಗೆ ರೈಲಿನಲ್ಲಿ ನಾಯಿಗೆ ನೀಡುವ ಆಹಾರದ ಬಾಕ್ಸ್ ಗಳಲ್ಲಿ ಮಾದಕ ವಸ್ತು ತರುತ್ತಿದ್ದ ಆರೋಪದ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಿ ಸುಮಾರು 10 ಕೋಟಿ ರೂ.ಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ರಾಜಧಾನಿ ಎಕ್ಸ್ ಪ್ರಸ್ ರೈಲಿನಲ್ಲಿ ನಾಯಿಗಳಿಗೆ ಹಾಕುವ ಆಹಾರದ ಬಾಕ್ಸ್ ಗಳಲ್ಲಿ ಕೆ.ಜಿ.ಗಟ್ಟಲೇ ಮಾದಕ ವಸ್ತು ತರಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಡಿಆರ್‌ಐ ಅಧಿ ಕಾರಿ ಗಳು ದಾಳಿ ನಡೆಸಿ, ಆರೋಪಿಯನ್ನು ಮಾಲು ಸಮೇತ ಬಂಧಿಸಿದ್ದಾರೆ. ಈತನ ಮಾಹಿತಿ ಮೇರೆಗೆ ಬೆಂಗಳೂರಿನಲ್ಲಿ ಇತರೆ ಇಬ್ಬರು ಆರೋಪಿಗಳ ಬಂಧಿಸಲಾಗಿದೆ. ಬಳಿಕ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ, 40 ಡೆಬಿಟ್ ಕಾರ್ಡ್ 70 ಕ್ಕೂ ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಆರೋಪಿಗಳಿಂದ ಸುಮಾರು 10 ಕೋಟಿ ರೂ.ಗೂ ಅಧಿಕ ಮೌಲ್ಯದ ಮಾದಕ…














