ಚಿಕ್ಕಬಳ್ಳಾಪುರ: ಜಿಲ್ಲೆಯ ಖಾಸಗಿ ಕಾಲೇಜೊಂದರ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಪೋಲಿಸ್ ಅಧಿಕಾರಿಗಳ ಮೇಲೆ ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ನಂದಿಗಿರಿಧಾಮ ಪೊಲೀಸ್ ಠಾಣೆಗೆ ಸೇರಿದ ಎಎಸ್‌ಐ ಗಂಗರಾಜು ಹಾಗೂ ಓರ್ವ ಪೊಲೀಸ್ ಕಾನ್ಸ್‌ಟೇಬಲ್ ಈ ದಾಳಿಗೆ ಒಳಗಾದ ದುರ್ದೈವಿಗಳಾಗಿದ್ದು, ಸದ್ಯ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.ಈ ಕುರಿತು ಕರ್ನಾಟಕ ರಾಷ್ಟ್ರ ಸಮಿತಿ ವಿಡಿಯೋ ಹಂಚಿಕೊಂಡಿದೆ.
ನಂದಿಗಿರಿಧಾಮ ಪೊಲೀಸ್ ಠಾಣೆಯ ಎಎಸ್‌ಐ ಗಂಗರಾಜು ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಪುಂಡ ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿದ್ದಾರೆ. ಕಾಲೇಜಿನಲ್ಲಿ ಕಾರ್ಯಕ್ರಮವಿದ್ದ ಕಾರಣ ಸಿನಿಮಾ ನಟ ನಟಿಯರು ಆಗಮಿಸಿದ್ದರು. ಭದ್ರತೆಗೆ ಪೊಲೀಸರು ಕಾಲೇಜಿನ ಗೇಟ್ ಬಳಿ ತೆರಳಿದ್ದರು. ಈ ವೇಳೆ ಹತ್ತಾರು ಮಂದಿ ವಿದ್ಯಾರ್ಥಿಗಳು ಸೈಲೆನ್ಸರ್ ಅಲ್ಟರ್ ಮಾಡಿಕೊಂಡಿದ್ದ ಬೈಕ್‌ಗಳಲ್ಲಿ ಕರ್ಕಶ ಶಬ್ಧ ಮಾಡಿಕೊಂಡು ಓಡಾಡಿದ್ದರು.
ಬೈಕ್ ಕರ್ಕಶ ಶಬ್ಧ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಎಎಸ್‌ಐ ಗಂಗರಾಜು ಸೈಲೆಂಟ್ ಆಗಿ ಹೋಗಿ ಎಂದು ಹೇಳಿದ್ದರಂತೆ. ಈ ವೇಳೆ ಪೊಲೀಸರ ಎಚ್ಚರಿಕೆಗೆ ಕ್ಯಾರೆ ಎನ್ನದೇ ಒಬ್ಬ ವಿದ್ಯಾರ್ಥಿ ಬೈಕ್ ಜೋರು ಸೌಂಡ್ ಮಾಡಿದ್ದಾನೆ. ಬೇರೆ ವಿದ್ಯಾರ್ಥಿಗಳು ಬೇಡ ಅಂದ್ರೂ ಅವನೊಬ್ಬ ಪೊಲೀಸ್ ಏನು ಮಾಡ್ತಾನೆ ಎಂದು ಮತ್ತೆ ಶಬ್ಧ ಮಾಡಿದ್ದಾನೆ. ಈ ವೇಳೆ ಕೆರಳಿದ ಎಎಸ್‌ಐ ಲಾಠಿ ಬೀಸಿದ್ದು, ರಕ್ತ ಬಂದಿದೆ ಎನ್ನಲಾಗಿದೆ.
ಇದರಿಂದ ಕೆರಳಿದ ಪುಂಡ ವಿದ್ಯಾರ್ಥಿಗಳು ರಕ್ತ ಬರುವ ಹಾಗೆ ಹೊಡಿತೀಯಾ ಅಂತ ಎಎಸ್‌ಐ ಮೇಲೆ ಮುಗಿಬಿದ್ದು ಹಲ್ಲೆ ಮಾಡಿದ್ದಾರೆ. ಬಿಡಿಸಲು ಪ್ರಯತ್ನಿಸಿದ ಕಾನ್ಸ್ಟೇಬಲ್‌ನನ್ನು ನೂಕಿ ಹಲ್ಲೆ ಮಾಡಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಪುಂಡರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇವರೇನು ಓದೋದಿಕ್ಕೆ ಬರುತ್ತಾರೋ ಅಥವಾ ರೌಡಿಯಂ ಮಾಡೋದಕ್ಕೆ ಕಾಲೇಜುಗಳಿಗೆ ಸೇರಿಕೊಳ್ಳುತ್ತಾರೆ ಗೊತ್ತಿಲ್ಲ ಎಲ್ಲಿಯವರು ಯಾವ ರಾಜ್ಯದವರು ಇವರು ?😡😡😡
ವಲಸಿಗ ವಿದ್ಯಾರ್ಥಿಗಳ ಹಾವಳಿ ಜಾಸ್ತಿಯಾಗಿದೆ ನಮ್ಮ ಬೆಂಗಳೂರಿನಲ್ಲಿ ಇದಕ್ಕೆ ಕಾರಣ ಭ್ರಷ್ಟ ಆಡಳಿತ, ಎಲ್ಲ ವಿಷಯದಲ್ಲೂ ವಲಸಿಗರ ಓಲೆಗೆ ರಾಜಕೀಯ, ನಿಷ್ಠಾವಂತ ಪೊಲೀಸ್ ಅಧಿಕಾರಿಗಳಿಗೆ… pic.twitter.com/lW640EHz7P
— ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) May 9, 2026








