Subscribe to Updates
Get the latest creative news from FooBar about art, design and business.
Author: kannadanewsnow05
ಹೈದ್ರಾಬಾದ್ : ಕೆಲವರು ಸುಖಾಸುಮ್ಮನೆ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪ ಮಾಡಿಕೊಂಡು ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಾರೆ. ಹೈದರಾಬಾದ್ ನಲ್ಲಿ ಇದೀಗ ಅಂತದ್ದೇ ಘಟನೆ ನಡೆದಿದ್ದು, ಕುಟುಂಬಸ್ಥರು ಬೆಕ್ಕನ್ನು ಸಾಕೋದು ಬೇಡ ಎಂದಿದ್ದಕ್ಕೆ ಮನನೊಂದು 23 ವರ್ಷದ ವೈದ್ಯೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಹೌದು ಹೈದರಾಬಾದ್‌ನ ಅಲ್ವಾಲ್ ನಿವಾಸಿಯಾಗಿರುವ ವೈದ್ಯೆ ಟಿ ಪ್ರಿನ್ಸಿ ಅಲಿಯಾಸ್ ಶ್ರೇಷ್ಠ ಶುಕ್ರವಾರ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಿನ್ಸಿ ತನ್ನ ತಾಯಿ ಕುಸುಮಲತಾ ಮತ್ತು ಅಜ್ಜಿಯೊಂದಿಗೆ ವಾಸಿಸುತ್ತಿದ್ದರು. ಕೆಲವು ವಾರಗಳ ಹಿಂದೆ, ಪ್ರಿನ್ಸಿ ಬೆಕ್ಕನ್ನು ಮನೆಗೆ ಕರೆತಂದಿದ್ದರು. ನಂತರ ಅವರು ನಿರಂತರವಾಗಿ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಬೆಕ್ಕನ್ನು ಸಾಕುವುದು ಬೇಡ ಎಂದು ಕುಟುಂಬಸ್ಥರು ವಿರೋಧಿಸಿದ್ದರು. ಶುಕ್ರವಾರ ವೈದ್ಯೆಯ ತಾಯಿ ಮತ್ತು ಅಜ್ಜಿ ಕೆಲಸಕ್ಕೆ ಹೋಗಿದ್ದರು. ಅವರು ಸಂಜೆ ಹಿಂತಿರುಗಿದಾಗ, ಪ್ರಿನ್ಸಿ ತನ್ನ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ವಿಚಾರ ಗೊತ್ತಾಗಿದೆ. ಅವರು…
ದಾವಣಗೆರೆ : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಜಟಾಪಟಿ ನಡೆಯುತ್ತಿದ್ದು, ಅಂತಿಮವಾಗಿ ಹೈಕಮಾಂಡ್ ಎಲ್ಲರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸುಖಾಂತ್ಯ ಕಂಡಿದೆ. ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ನಡೆಸಿದ ಸಂಧಾನ ಮಾತುಕತೆಯು ಯಶಸ್ವಿಯಾಗಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಅಂತಿಮವಾಗಿ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಹಾಗು ಬಾಗಲಕೋಟೆ ಕ್ಷೇತ್ರದಲ್ಲಿ ಉಮೇಶ್ ಮೇಟಿ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ದಾವಣಗೆರೆ ಟಿಕೆಟ್ ಮುಸ್ಲಿಂ ಸಮುದಾಯಕ್ಕೆ ನೀಡಬೇಕೆಂದು ಸಚಿವ ಜಮೀರ್ ಅಹಮದ್ ಸಹಿತ ಪ್ರಮುಖ ಅಲ್ಪಸಂಖ್ಯಾತ ನಾಯಕರು ಪಟ್ಟು ಹಿಡಿದಿದ್ದರು. ಕಾಂಗ್ರೆಸ್ ಹೈಕಮಾಂಡ್ ನಾಳೆ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಿದ್ದು, ಸೋಮವಾರ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.
ಬೆಳಗಾವಿ : ಈ ಸಾವು ಅನ್ನೋದು ಯಾರಿಗೆ ಯಾವಾಗ ಹೇಗೆ ಬರುತ್ತೆ ಅಂತ ಹೇಳೋಕ್ ಆಗಲ್ಲ. ಹೌದು ಸ್ವಿಮ್ಮಿಂಗ್ ಮಾಡುವಾಗಲೇ ಹೃದಯಾಘಾತದಿಂದ ಸೇನಾಧಿಕಾರಿ ಸಾವನ್ನಪ್ಪಿದ ಘಟನೆ ಬೆಳಗಾವಿಯ ನಾನಾವಾಡಿಯ ಕಮಾಂಡೋ ವಿಂಗ್ ಆವರಣದಲ್ಲಿ ನಡೆದಿದೆ. ವಿಂಗ್ ಆವರಣದಲ್ಲಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಸ್ವಿಮ್ಮಿಂಗ್ ಮಾಡುವ ವೇಳೆ ಘಟನೆ ನಡೆದಿದ್ದು, ಹರಿಯಾಣ ಮೂಲದ ಲೆಫ್ಟಿನೆಂಟ್ ಅಮಿತ್‌ಸಿಂಗ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೆಳಗಾವಿಯ ಎಂಎಲ್ಐಆರ್‌ಸಿ ಕಮಾಂಡೋ ವಿಂಗ್‌ನಲ್ಲಿ ಟ್ರೇನಿಂಗ್‌ನಲ್ಲಿ ಅಧಿಕಾರಿಯಾಗಿದ್ದರು ಎನ್ನಲಾಗಿದೆ. ಸ್ವಿಮ್ಮಿಂಗ್ ಮಾಡುವಾಗಲೇ ತೀವ್ರ ಹೃದಯಾಘಾತವಾಗಿದೆ. ಅಧಿಕಾರಿಯನ್ನು ಮೇಲಕ್ಕೆ ತಂದು ಲೈಫ್ ಗಾರ್ಡ್ ಪ್ರದೀಪ್ ಕುಮಾರ್ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ಅಂಬುಲೆನ್ಸ್ ಮೂಲಕ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ರವಾನಿಸಲಾಯಿತಾದರೂ ಮಾರ್ಗಮಧ್ಯದಲ್ಲೇ ಲೆಫ್ಟಿನೆಂಟ್ ಅಮಿತ್ ಸಿಂಗ್ ಸಾವನ್ನಪ್ಪಿದ್ದಾರೆ. ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದಾವಣಗೆರೆ : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಜಟಾಪಟಿ ನಡೆಯುತ್ತಿದ್ದು, ಅಂತಿಮವಾಗಿ ಹೈಕಮಾಂಡ್ ಎಲ್ಲರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸುಖಾಂತ್ಯ ಕಂಡಿದೆ. ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ನಡೆಸಿದ ಸಂಧಾನ ಮಾತುಕತೆಯು ಯಶಸ್ವಿಯಾಗಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಅಂತಿಮವಾಗಿ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಹಾಗು ಬಾಗಲಕೋಟೆ ಕ್ಷೇತ್ರದಲ್ಲಿ ಉಮೇಶ್ ಮೇಟಿ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ದಾವಣಗೆರೆ ಟಿಕೆಟ್ ಮುಸ್ಲಿಂ ಸಮುದಾಯಕ್ಕೆ ನೀಡಬೇಕೆಂದು ಸಚಿವ ಜಮೀರ್ ಅಹಮದ್ ಸಹಿತ ಪ್ರಮುಖ ಅಲ್ಪಸಂಖ್ಯಾತ ನಾಯಕರು ಪಟ್ಟು ಹಿಡಿದಿದ್ದರು. ಕಾಂಗ್ರೆಸ್ ಹೈಕಮಾಂಡ್ ನಾಳೆ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಿದ್ದು, ಸೋಮವಾರ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.
ಬೆಂಗಳೂರು : ಇರಾನ್ ಇಸ್ರೇಲ್ ಯುದ್ಧದ ಪರಿಣಾಮದಿಂದ ಇದೀಗ ಭಾರತದ ಡಿಫೆನ್ಸ್ ಹಾಗೂ ರೈಲ್ವೆ ವಲಯಕ್ಕೂ ಯುದ್ಧದ ಎಫೆಕ್ಟ್ ತಟ್ಟಿದೆ. ಕಚ್ಚಾ ವಸ್ತು ಸರಬರಾಜು ಮಾಡುತ್ತಿದ್ದ ಆಟೋಮೊಬೈಲ್ ಇಂಡಸ್ಟ್ರಿ ಬಂದ್ ಮಾಡಲಾಗಿದೆ. ಬೆಂಗಳೂರಿನ ಪೀಣ್ಯದಲ್ಲಿರುವ ಶ್ರೀ ಲಕ್ಷ್ಮಿ ಪ್ರೊಫೈಲ್ ಇಂಡಸ್ಟ್ರಿ ಇದೀಗ ಬಂದಾಗಿದೆ. ಡಿಫೆನ್ಸ್ ವಾಹನಗಳ ತಯಾರಿಕೆಗೆ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು. ವಿಪ್ರೊ ಸೇರಿದಂತೆ ಹಲವು ಇಂಡಸ್ಟ್ರಿಗಳಿಗೆ ಕಚ್ಚಾ ವಸ್ತು ಸಿದ್ಧಪಡಿಸಿ ಸರಬರಾಜು ಮಾಡಲಾಗುತ್ತಿತ್ತು. ಕಳೆದ ಒಂದು ವಾರದಿಂದ ಎಲ್ಪಿಜಿ ಗ್ಯಾಸ್ ಸಿಗುತ್ತಿಲ್ಲ. ಪೈಲ್ ಇಂಡಸ್ಟ್ರಿಗೆ ಪ್ರತಿನಲ್ಲಿ 8 ರಿಂದ 10 ಎಲ್ಪಿಜಿ ಸಿಲಿಂಡರ್ ಗಳು ಬೇಕು. ಆದರೆ ಸಿಲಿಂಡರ್ ಗಳು ಕೊರತೆಯಿಂದ ಇದೀಗ ಆಟೋಮೊಬೈಲ್ ಇಂಡಸ್ಟ್ರಿ ಬಂದ್ ಆಗಿದೆ. ಒಂದು ವಾರದಿಂದ ಇಂಡಿಯನ್ ಆಯಿಲ್ ಕಂಪನಿ ಸಿಲಿಂಡರ್ ನೀಡುತ್ತಿಲ್ಲ. ಗ್ಯಾಸ್ ಇಲ್ಲದೆ ಇಂಡಸ್ಟ್ರಿ ಸಂಪೂರ್ಣ ಮಾಡಲಾಗಿದೆ ಕೆಲಸ ಹಾಗೂ ವೇತನ ಕಡಿತದ ಆತಂಕದಲ್ಲಿ ಉದ್ಯೋಗಗಳು ಇದ್ದಾರೆ. ಕಮರ್ಷಿಯಲ್ ಸಿಲಿಂಡರ್ ಕೊರತೆ ಹಿನ್ನೆಲೆ ಇಂಡಸ್ಟ್ರಿಗಳು ಬಂದ್ ಆಗಿವೆ. ಇದೇ ರೀತಿ…
ಬೆಂಗಳೂರು : ಬೆಂಗಳೂರಲ್ಲಿ ಕಾರ್ ಡ್ರಿಫ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಕಾರು ಡಿಫ಼್ಟ್ರಿಂಗ್ ಮಾಡಿದ್ದಾನೆ ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಎರಡು ಮೂರು ಬಾರಿ ಕಾರ್ ಡ್ರೈಫ್ಟಿಂಗ್ ಮಾಡಿರುವ ರಿಕ್ಕಿ ರೈ ಇದೀಗ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಕಾರು ಸಿಜ್ ಮಾಡಿದ್ದಾರೆ. KA05 NR 0009 ನಂಬರ್ ಇರುವ ಲ್ಯಾಂಬೋರ್ಗಿನಿ ಕಾರ್ ಅನ್ನು ಕಬ್ಬನ್ ಪಾರ್ಕ್ ಠಾಣೆ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಸದಾಶಿವ ನಗರದಲ್ಲಿರುವ ರಿಕ್ಕಿ ರೈ ನಿವಾಸದಲ್ಲಿ ಕಾರು ಪತ್ತೆಯಾಗಿದೆ. ನಿನ್ನೆ ಈ ಒಂದು ವಿಡಿಯೋ ವೈರಲ್ ಆದ ಸಂದರ್ಭದಲ್ಲಿ ಕಾರು ನಂಬರ್ ಪರಿಶೀಲಿಸಿದ ವೇಳೆ ಕಾರ್ ನಂಬರ್ ಸರಿಯಾಗಿರಲಿಲ್ಲ. ಹಾಗಾಗಿ ಕಾರನ್ನು ಬೇರೆ ಹೆಸರಲ್ಲಿ ರಿಜಿಸ್ಟ್ರೇಷನ್ ಮಾಡಿತ್ತಾ ಅಥವಾ ನಂಬರ್ ಪ್ಲೇಟ್ ಚೇಂಜ್ ಮಾಡಿ ಕಾರು ಓಡಿಸಿದರ ಅನ್ನೋ ಅನುಮಾನ ಇತ್ತು. ಜೊತೆಗೆ ಜನಸಂದಣಿ ಇರುವ ಜಾಗದಲ್ಲಿ ಕಾರು ಡ್ರೆಸ್ಸಿಂಗ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು ಪೊಲೀಸರು ಕಾರು…
ಬೆಂಗಳೂರು : ದೆಹಲಿಯಲ್ಲಿ UNI ಸುದ್ದಿ ಸಂಸ್ಥೆಯ ಮೇಲೆ ಪೊಲೀಸರು ನಡೆಸಿರುವ ದಾಳಿಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸುತ್ತದೆ. ಈ ಕ್ರಮವು ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತದ್ದಾಗಿದ್ದು, ಪ್ರಜಾಪ್ರಭುತ್ವದ ಮೂಲ ಮೌಲ್ಯಗಳಿಗೂ ವಿರುದ್ಧವಾಗಿದೆ. ಪತ್ರಕರ್ತರ ಖಾಸಗಿ ವಸ್ತುಗಳನ್ನು ತೆಗೆದುಕೊಳ್ಳಲು ಅವಕಾಶ ನೀಡದೆ, ಮಹಿಳೆ ಎನ್ನುವುದನ್ನೂ ಲೆಕ್ಕಿಸದೇ ನಡೆಸಿದ ವರ್ತನೆ ಅಕ್ಷಮ್ಯ ಮತ್ತು ಖಂಡನೀಯ. ಈ ಘಟನೆ ಮಾಧ್ಯಮಗಳ ಮೇಲೆ ಅನಗತ್ಯ ಒತ್ತಡ ಹೇರಲು ಪ್ರಯತ್ನಿಸಿರುವುದನ್ನು ಸ್ಪಷ್ಟಪಡಿಸುತ್ತದೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಆಗ್ರಹಿಸಿದ್ದಾರೆ
ನವದೆಹಲಿ : ಇರಾನ್ ಇಸ್ರೇಲ್ ಯುದ್ಧದ ಪರಿಣಾಮ ಇದೀಗ ವಿಮಾನಗಳಿಗೂ ಆ ಒಂದು ಬಿಸಿ ತಟ್ಟಿದ್ದು, ವಿಮಾನಗಳಿಗೂ ತೈಲ ಅಭಾವ ಬಿಸಿ ತಟ್ಟಿದೆ ಹಾಗಾಗಿ ಏಪ್ರಿಲ್ ಒಂದರಿಂದ ವಿಮಾನ ಪ್ರಯಾಣದ ಏರಿಕೆ ಆಗುವ ಸಾಧ್ಯತೆ ಇದೆ. ಹೌದು ಈ ಬಗ್ಗೆ ಕೇಂದ್ರ ವಿಮಾನಯಾನ ಸಚಿವ ರಾಮ ಮೋಹನ ನಾಯ್ಡು ದರ ಏರಿಕೆ ಕುರಿತು ಇದೀಗ ಸುಳಿವು ನೀಡಿದ್ದಾರೆ. ವಿಮಾನಯಾನ ಸಂಸ್ಥೆಯ ವೆಚ್ಚದಲ್ಲಿ ಇಂಧನಂದೇ ಪಾಲಾಗಿದ್ದು ಶೇಕಡ 35 ರಿಂದ 45ರಷ್ಟು ಇಂಧನದ್ದೆ ಪಾಲು ಇದೆ ಕೊಲ್ಲಿ ರಾಷ್ಟ್ರಗಳ ಉದ್ವಿಗ್ನತೆಯಿಂದ ಕಚ್ಚಾ ತೈಲಗಳ ಬೆಲೆ ಏರಿಕೆಯಾಗಿದ್ದು ಹಾಗಾಗಿ ವಿಮಾನಯನ ಪ್ರಯಾಣದರ ಏರಿಕೆ ಆಗಲೇ ಬೇಕಾಗುತ್ತದೆ ಎನ್ನುವ ಸುಳಿವು ನೀಡಿದ್ದು ಈಗಾಗಲೇ ಇಂಧನ ಸರ ಚಾರ್ಜ್ ವಿಧಿಸಿರುವ ಕೆಲ ಸಂಸ್ಥೆಗಳು ಏರ್ ಇಂಡಿಯಾ, ಇಂಡಿಗೋ, ಏರ್ ಅಕಾಸ್ ಸಂಸ್ಥೆಗಳು ಸಮಸ್ಯೆಗಳ ಕುರಿತು ವಿವರಿಸಿವೆ.
ನವದೆಹಲಿ : ವಿಮಾನಯಾನ ಟಿಕೆಟ್ ದರ ಮಿತಿಯನ್ನು ಹಿಂಪಡೆದ ಕೇಂದ್ರ ಸರ್ಕಾರ, ದೇಶೀಯ ವಿಮಾನಯಾನ ಟಿಕೆಟ್ ದರಗಳ ಮೇಲಿನ ತಾತ್ಕಾಲಿಕ ಮಿತಿಯನ್ನು ಇದೀಗ ಕೇಂದ್ರ ಸರ್ಕಾರ ಹಿಂಪಡೆದಿದೆ. ಆದೇಶ ಹಿಂಪಡೆದ ನಾಗರಿಕ ವಿಮಾನಯಾನ ಸಚಿವಾಲಯ ಟಿಕೆಟ್ ದರ ಮಿತಿ ಹಿಂಪಡೆದ ಆದೇಶ ನಾಳೆಯಿಂದಲೇ ಜಾರಿ ಆಗಲಿದೆ. ಕಳೆದ ವರ್ಷ ಇಂಡಿಗೋ ಏರ್ಲೈನ್ಸ್ನಲ್ಲಿ ಉಂಟಾಗಿತ್ತು. ಪೈಲೆಟ್ ರೋಸ್ಟರಿಂಗ್ ಬಿಕ್ಕಟಿನಿಂದ ವಿಮಾನಗಳು ರದ್ದಾಗಿದ್ದವು. ಇದರಿಂದ ವಿಮಾನ ಪ್ರಯಾಣದ ಟಿಕೆಟ್ ಗಗನಕ್ಕೆ ಏರಿತು. ಪ್ರಯಾಣಿಕರ ದೃಷ್ಟಿಯಿಂದ ಟಿಕೆಟ್ ದರದ ಮೇಲೆ ಮಿತಿ ವಿಧಿಸಿತ್ತು. ಸರ್ಕಾರ ವಿಮಾನಗಳ ಟಿಕೆಟ್ ದರದ ಮೇಲೆ ಗರಿಷ್ಠ ಮಿತಿ ವಿಧಿಸಿತ್ತು ಕಾರ್ಯಾಚರಣೆ ಸಹಜ ಸ್ಥಿತಿಗೆ ಮರಳಿರುವ ಹಿನ್ನೆಲೆಯಲ್ಲಿ, ಆದೇಶವನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ದರ ಮಿತಿ ಆದೇಶ ಹಿಂಪಡೆದರು ಕೂಡ ಮನಬಂದಂತೆ ವಿಮಾನಯನ ಸಂಸ್ಥೆಗಳು ದರ ಹೆಚ್ಚಿಸಬಾರದು, ದರ ಏರಿಕೆ ಕುರಿತು ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಪ್ರಯಾಣಿಕರಿಗೆ ಸಮಸ್ಯೆ ಆಗುವಂತೆ ದರ ಏರಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ…
ಕಲಬುರ್ಗಿ : ಕಲ್ಬುರ್ಗಿ ವಿಭಾಗೀಯ ಕಚೇರಿಯ ಜೆಇ ಸುನಿಲ್ ಹಕ್ಕಿ ಮೊಬೈಲ್ ಅನ್ನು ಮನೆಯಲ್ಲಿ ಬಿಟ್ಟು ನಾಪತ್ತೆಯಾಗಿದ್ದಾರೆ. ಕಳೆದ ಭಾನುವಾರದಿಂದ ಪಿಡಬ್ಲ್ಯೂಡಿ ಇಂಜಿನಿಯರ್ ಸುನಿಲ್ ಹಕ್ಕಿ ನಾಪತ್ತೆಯಾಗಿದ್ದಾರೆ. ಮಾರ್ಚ್ 15 ಮಧ್ಯಾಹ್ನ 12 ಗಂಟೆಗೆ ಸುನಿಲ್ ಮನೆಯಿಂದ ಹೋಗಿದ್ದಾರೆ. ತಾಯಿಯ ಬಳಿ 15,000 ಹಣ ತೆಗೆದುಕೊಂಡು ಸುನಿಲ್ ಮನೆ ಬಿಟ್ಟು ಹೋಗಿದ್ದಾರೆ ಮೊಬೈಲ್ ಮನೆಯಲ್ಲಿ ಬಿಟ್ಟು ಆಫೀಸ್ಗೆ ಹೋಗುವುದಾಗಿ ಹೇಳಿದ್ದರು. ಮೊಬೈಲ್ ತೆಗೆದುಕೊಂಡು ಹೋಗುವಂತೆ ತಾಯಿ ಹೇಳಿದರೂ ಕೂಡ ಬಹಳ ಕಾಲ್ಗಳು ಬರುತ್ತವೆ ಬೇಡ ಅಂತ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ. ವಾಪಸ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ಸುನಿಲ್ ಗಾಗಿ ಹುಡುಕಾಟ ನಡೆಸಿದ್ದಾರೆ ಸುನಿಲ್ ಅತ್ತೆಯಾಗದ ಹಿನ್ನೆಲೆಯಲ್ಲಿ ಇದೀಗ ಕುಟುಂಬಸ್ಥರು ಎಂಬಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂ ಪಿ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಮನೆಯಲ್ಲಿಯೇ ಮೊಬೈಲ್ ಬಿಟ್ಟು ಪಿಡಬ್ಲ್ಯೂಡಿ ಇಂಜಿನಿಯರ್ ನಾಪತ್ತೆಯಾಗಿದ್ದಾರೆ.














