Author: kannadanewsnow05

ಧಾರವಾಡ : ಬೇಸಿಗೆ ಶುರುವಾದರೆ ಸಾಕು ಮಾವಿನ ಹಣ್ಣಿನದೇ ದರ್ಬಾರ್, ಇತ್ತೀಚಿನ ದಿನಗಳಲ್ಲಿ ಅಂತೂ ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ಮಹಾನಗರಗಳಲ್ಲಿ ಮಾವಿನ ಹಣ್ಣಿನಿಂದ ತರ ತರದಲ್ಲಿ ಖಾದ್ಯಗಳನ್ನು ತಯಾರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ 1 ಬಾಕ್ಸ್ ಮಾವಿನ ಹಣ್ಣಿಗೆ 300, 350 ಅಥವಾ 400 ರೂ. ಇರುತ್ತದೆ. ಆದರೆ ಇಲ್ಲೊಂದು ಮಾವಿನ ಹಣ್ಣಿನ ಕೆಜಿಗೆ ಬರೋಬ್ಬರಿ 2.7 ಲಕ್ಷ ರೂ. ಆಗಿದ್ದು, 1 ಮಾವಿನ ಹಣ್ಣಿಗೆ 10 ಸಾವಿರ ರೂ. ಬೆಲೆಯಿದೆ. ಹೌದು ಈ ಮಾವಿನ ಹಣ್ಣಿನ ಹೆಸರು ಮಿಯಾ ಜಾಕಿ, ಇದು ಜಪಾನ್ ದೇಶದ ಮಾವಿನ ಹಣ್ಣಿನತಳಿಯಾಗಿದೆ. ಈ ಹಣ್ಣನ್ನು ಧಾರವಾಡದ ರೈತ ಪ್ರಮೋದ ಗಾಂವಕರ ಕಲಕೇರಿಯ ತಮ್ಮ ತೋಟದಲ್ಲಿ ಬೆಳೆದಿದ್ದಾರೆ. ಪ್ರತಿವರ್ಷ ಏಳೆಂಟು ಹಣ್ಣು ಬಿಡುತ್ತಿದ್ದ ಮಿಯಾ ಜಾಕಿ ಮರಗಳು, ಈ ವರ್ಷ 25-26 ಹಣ್ಣುಗಳನ್ನು ಬಿಟ್ಟಿವೆ. ಧಾರವಾಡದಲ್ಲಿ ನಡೆದ ಮಾವಿನ ಮೇಳದಲ್ಲೂ ಈ ಮಿಯಾ ಜಾಕಿ ಮಾವಿನ ಹಣ್ಣು ಎಲ್ಲರ ಗಮನ ಸೆಳೆಯಿತು. ಮಾವಿನ ಮೇಳದಲ್ಲಿ ಮಿಯಾ ಜಾಕಿ…

Read More

ಉತ್ತರಕನ್ನಡ : ಆಸ್ತಿ ಗಾಗಿ ನಾಲ್ವರನ್ನು ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ಪ ಮಗನಿಗೆ ಇದೀಗ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ಅಪ್ಪನಿಗೆ ಜೀವಾವಧಿ ಮತ್ತು ಮಗನಿಗೆ ಗಲ್ಲು ಶಿಕ್ಷೆ ವಿಧಿಸಿ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಪ್ರಕರಣ ಹಿನ್ನೆಲೆ? 2013 ಫೆಬ್ರವರಿ 24ರಂದು ಹಾಡುಹಳ್ಳಿಯಲ್ಲಿ ಈ ಒಂದು ಭೀಕರ ಕೊಲೆ ನಡೆದಿತ್ತು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುಹಳ್ಳಿ ಗ್ರಾಮದಲ್ಲಿ ಆಸ್ತಿಗಾಗಿ ಸೊಸೆಯಾದ ವಿದ್ಯಾ ಭಟ್ ತಂದೆ ಶ್ರೀಧರ್, ಹಾಗೂ ವಿದ್ಯಾ ಭಟ್ ತಮ್ಮನಾದ ಜನಾರ್ಧನ ಭಟ್ ನಾಲ್ವರನ್ನು ಭೀಕರವಾಗಿ ಕೊಲೆ ಮಾಡಿದ್ದರು. ವಿದ್ಯಾ ಭಟ್ ಳ ಅತ್ತೆ, ಮಾವ, ಮೈದುನ ಹಾಗೂ ಮೈದುನನ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ್ದರು. ಅನಾರೋಗ್ಯದಿಂದ ಪತಿ ಮೃತಪಟ್ಟ ಬಳಿಕ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಕೊಟ್ಟಿದ್ದಕ್ಕೆ ಸೊಸೆ ವಿದ್ಯಾ ಭಟ್ ತಕರಾರು ತೆಗೆದಿದ್ದಾರೆ. ವಿದ್ಯಾ ಭಟ್ ಕಲಹದ ಹಿಂದೆ ತಂದೆ ಮತ್ತು ಆಕೆಯ ತಮ್ಮನ ಬೆಂಬಲವಿತ್ತು. ಶಂಭೋ ಭಟ್, ಮಹಾದೇವಿ…

Read More

ಬಳ್ಳಾರಿ : ಬಳ್ಳಾರಿಯಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ರಾರವಿ ಗ್ರಾಮದಲ್ಲಿ ಸಿಡಿಲು ಬಡಿದು ಮೂವರು ಸಾವನಪ್ಪಿದ್ದಾರೆ. ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಇದೀಗ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಮೃತರನ್ನು ಬೀರಪ್ಪ (45) ಸುನಿಲ್ (26) ಮತ್ತು ವಿನೋದ್ (14) ಎಂದು ತಿಳಿದು ಬಂದಿದೆ. ಕುರಿ ಮೇಯಿಸಲು ಹೋದಾಗ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಇದೀಗ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮಳೆ ಬಂದಾಗ ಮೂವರು ಮರದ ಕೆಳಗೆ ನಿಂತಿದ್ದಾರೆ. ಈ ವೇಳೆ ಭಾರಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಘಟನೆ ಕುರಿತಂತೆ ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ದಾವಣಗೆರೆ : ವಾಹನಗಳ ತಪಾಸಣೆ ಸಂದರ್ಭದಲ್ಲಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಜಿಲ್ಲಾ ಸಶಸ್ತ್ರ ಮೀಸಲು ಪಡೆ (DRA) ಪೇದೆಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಹೆಬ್ಬಾಳು ಗ್ರಾಮದ ಟೋಲ್‌ಗೇಟ್ ಬಳಿ ಇಂದು ಸಂಭವಿಸಿದೆ. ಮೃತ ಕಾನ್ಸ್ಟೇಬಲ್ ಬಾಗಲಕೋಟೆ ಜಿಲ್ಲೆಯ ಹಿಬ್ಬರಗಿ ಇಂಡಿ ಗ್ರಾಮದ ರಾಮಪ್ಪ ಪೂಜಾರಿ (33) ಎಂದು ತಿಳಿದುಬಂದಿದೆ.ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಮಪ್ಪ ಪೂಜಾರಿ ಅವರನ್ನು ಹೆಬ್ಬಾಳು ಟೋಲ್‌ಗೇಟ್ ಬಳಿ ಲೈನ್‌ಡಿಸಿಪ್ಲಿನ್ ಡ್ಯೂಟಿಗೆ ನಿಯೋಜಿಸಲಾಗಿತ್ತು. ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಬರುತ್ತಿದ್ದ ಲಾರಿ ಎದುರಿಗೆ ನಿಲ್ಲಿಸಲು ಸೂಚನೆ ನೀಡಿದರು.ಆದರೆ, ಚಾಲಕ ಲಾರಿ ನಿಲ್ಲಿಸದೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ರಾಮಪ್ಪ ಪೂಜಾರಿ ಅವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾದ ಲಾರಿ ಚಾಲಕನಿಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ. ಲಾರಿಯ ಸಂಖ್ಯೆ ಮತ್ತು ಚಾಲಕನ ಗುರುತನ್ನು…

Read More

ಉತ್ತರಪ್ರದೇಶ : ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಸ್ವಲ್ಪ ಮೊದಲು ಚೆನ್ನಾಗಿ ಓಡಾಡಿಕೊಂಡಿದ್ದವರು ಹಠಾತ್ತನೆ ಹೃದಯಾಘಾತಕ್ಕೆ ಬಲಿಯಾಗುತ್ತಾರೆ. ಅಂತಹದ್ದೇ ಘಟನೆ ಇದೀಗ ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಮೊರಾದಾಬಾದ್ ನ ಕತ್ ಘರ್ ಪೊಲೀಸ್ ಠಾಣೆ ವ್ಯಾಪ್ತಿಯ ಪಚ್ ಪೇಡಾ ಪ್ರದೇಶವೊಂದರಲ್ಲಿ ವ್ಯಕ್ತಿಯೊಬ್ಬ ಬೈಕ್‌ ಓಡಿಸುತ್ತಿದ್ದಾಗಲೇ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜಾಲತಾಣದಲ್ಲಿ ಹರಿದಾಡುತ್ತಿದೆ. ಸಿಸಿಟಿವಿ ದೃಶ್ಯದಲ್ಲಿ 22 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಪ್ರಯಾಣಿಸುತ್ತಿರಬೇಕಾದರೆ ಹಠಾತ್ತನೆ ಹೃದಯಾಘಾತವಾಗಿ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದಾನೆ. ಕೂಡಲೇ ಅಲ್ಲಿನ ಸ್ಥಳೀಯರು ಆತನ ಸಹಾಯಕ್ಕೆ ಮುಂದಾಗಿ ಸಿಪಿಆರ್‌ ನೀಡಿದ್ಧಾರೆ. ಜೊತೆಗೆ ಆಸ್ಪತ್ರೆಗೂ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. https://twitter.com/priyarajputlive/status/1914916166213963787?t=-yjszDayrk71uV4pCCY-vg&s=19

Read More

ಬೆಂಗಳೂರು : ಇಂದು ಬೆಂಗಳೂರು ಮಹಾನಗರದಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಮಳೆಯಿಂದಾಗಿ ಹತ್ತಾರು ಅವಾಂತರಗಳು ಸೃಷ್ಟಿಯಾಗಿದ್ದು, ಭಾರಿ ಮಳೆಯಿಂದಾಗಿ ಮಾನ್ಯತಾ ಟೆಕ್ ಪಾರ್ಕ್ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ. ಮಾನ್ಯತಾ ಟೆಕ್ ಪಾರ್ಕ್ ಬಳಿ BMTC ಬಸ್ಸಿಗೆ ನೀರು ನುಗ್ಗಿದೆ. ಕಾವೇರಿ ಜಂಕ್ಷನ್ ಬಳಿ ಮರದ ಕೊಂಬೆ ಒಂದು ಮುರಿದು ಬಿದ್ದಿದೆ. ವಿಂಡ್ಸರ್ ಮ್ಯಾನರ್ ಅಂಡರ್ ಪಾಸ್ ನಿಂದ ಅರಮನೆ ಮೈದಾನದತ್ತ ತೆರಳುವ ಮಾರ್ಗದಲ್ಲಿ ಮರದ ಕೊಂಬೆ ಮುರಿದುಬಿದ್ದಿದೆ. ಈ ವೇಳೆ ಯಾವುದೇ ವಾಹನ ಸಂಚಾರ ಇಲ್ಲದಿದ್ದರಿಂದ ಭಾರಿ ಅನಾಹುತ ಒಂದು ತಪ್ಪಿದೆ. ಹತ್ತರಿಂದ ಹದಿನೈದು ನಿಮಿಷ ಸುರಿದ ಮಳೆಗೆ ರಸ್ತೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಶೇಷಾದ್ರಿಪುರಂನಲ್ಲಿ ರಸ್ತೆಯ ಮೇಲೆ ನೀರು ನದಿಯಂತೆ ಹರಿಯುತ್ತಿದೆ. ಜಯನಗರದಲ್ಲಿ ವಾಹನ ಸವಾರರು ಪರದಾಟ ನಡೆಸಿದರು. ಕೆರೆಯಂತಾದ ರಸ್ತೆಯಲ್ಲಿ ಬಿಎಂಡಬ್ಲ್ಯೂ ಕಾರು ಚಾಲಕ ಪರದಾಟ ನಡೆಸಿದ್ದಾನೆ. ಕಲ್ಯಾಣ ನಗರ ಬಾಣಸವಾಡಿ ಸುತ್ತಮುತ್ತಲು ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ.

Read More

ಶ್ರೀನಗರ : ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಶೂಕಲ್ ಕೆಲ್ಲರ್ ಮೇಲೆ ಮಂಗಳವಾರ (ಮೇ 13) ಭಾರತೀಯ ಸೇನೆ ಭಯೋತ್ಪಾದಕರ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿತು. ಈ ಆಪರೇಷನ್ ಕಿಲ್ಲರ್ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾದ ಮುಖ್ಯ ಕಮಾಂಡರ್ ಶಹೀದ್ ಕುಟ್ಟಾಯ್ ಸೇರಿದಂತೆ ಮೂವರು ಉಗ್ರರನ್ನು ಭಾರತೀಯ ಸೇನೆಯು ಹೊಡೆದುರುಳಿಸಿದೆ. ರಾಷ್ಟ್ರೀಯ ರೈಫಲ್ಸ್ ಘಟಕವು ಒದಗಿಸಿದ ಗುಪ್ತಚರ ವರದಿಯ ಮೇರೆಗೆ ಬೆಳಿಗ್ಗೆ ಭಾರತೀಯ ಸೇನೆ ಮತ್ತು ಸ್ಥಳೀಯ ಭದ್ರತಾ ಪಡೆಗಳನ್ನು ಒಳಗೊಂಡ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಪರಿಸ್ಥಿತಿ ಶೀಘ್ರವಾಗಿ ಉಲ್ಬಣಗೊಂಡಿತು ಮತ್ತು ಎರಡೂ ಕಡೆಯಿಂದ ಭಾರೀ ಗುಂಡಿನ ಚಕಮಕಿ ನಡೆಯಿತು. ಇದರ ಪರಿಣಾಮವಾಗಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದರು. ಹತ್ಯೆಗೀಡಾದ ಭಯೋತ್ಪಾದಕರನ್ನು ಶಾಹಿದ್ ಕುಟ್ಟಯ್ ಮತ್ತು ಅದ್ನಾನ್ ಶಫಿ ಎಂದು ಗುರುತಿಸಲಾಗಿದ್ದು, ಇಬ್ಬರೂ ಲಷ್ಕರ್-ಎ-ತೋಯ್ಬಾ/ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಕಾರ್ಯಕರ್ತರಾಗಿದ್ದು, ಮೂರನೇ ಭಯೋತ್ಪಾದಕನ ಗುರುತನ್ನು ಖಚಿತಪಡಿಸಲಾಗುತ್ತಿದೆ. ಶಾಹೀನ್ ಕಾಶ್ಮೀರದಲ್ಲಿ ಟಿಆರ್‌ಎಫ್‌ನ ಕಾರ್ಯಾಚರಣೆಯ ಕಮಾಂಡರ್ ಆಗಿದ್ದರು.

Read More

ಪಂಜಾಬ್ : ಆಪರೇಷನ್ ಸಿಂಧೂರ್ ಬಳಿಕ ಇಂದು ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ನ ಆದಂಪುರ ಏರ್ ಬೇಸ್ ಗೆ ಬೇಟಿ ನೀಡಿದ್ದಾರೆ. ಪಂಜಾಬಿನ ಆದಂಪುರ ವಾಯುನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೈನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು. ಮತ್ತೊಮ್ಮೆ ಉಗ್ರರು ಏನಾದರೂ ದಾಳಿ ಮಾಡಿದರೆ ಭಾರತದ ಪ್ರತಿ ದಾಳಿ ಇನ್ನೂ ಘೋರವಾಗಿರುತ್ತದೆ. ಪಾಕಿಸ್ತಾನದ ನ್ಯೂಕ್ಲಿಯರ್ ಬೆದರಿಕೆಗೆ ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ಇಡೀ ವಿಶ್ವವೇ ಭಾರತದ ಬೆಂಬಲಕ್ಕೆ ನಿಂತಿದೆ. ಉಗ್ರರು ಪಾಕಿಸ್ತಾನದೊಳಗೆ ಅಡಗಿದರು ಸಹ ನುಗ್ಗಿ ಹೊಡೆಯುತ್ತೇವೆ ಭಾರತೀಯ ಸೇನೆಯ ಕಾರ್ಯ ಕ್ಷಮತೆ ಅದ್ಭುತವಾಗಿದೆ ಎಂದರು. ಆಪರೇಷನ್ ಸಿಂಧೂರ ಸಾಮಾನ್ಯ ಮಿಲಿಟರಿ ಕಾರ್ಯಾಚರಣೆ ಅಲ್ಲ. ನಿಮ್ಮ ಶೌರ್ಯ ಪ್ರತಿಧ್ವನಿ ಎಲ್ಲೆಡೆ ಕೇಳಿ ಬರುತ್ತಿದೆ. ಉಗ್ರರ ಸದೆಬಡೆಯುವದಾಗಿ ಭಾರತ ಲಕ್ಷ್ಮಣ ರೇಖೆ ಎಳೆದಿದೆ. ಭಾರತದ ಶಸ್ತ್ರಾಸ್ತ್ರಗಳಿಂದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಆಗಿದೆ. ಭಾರತೀಯ ಸೇನೆಗೆ ಆಧುನಿಕ ತಂತ್ರಜ್ಞಾನದ ಶಕ್ತಿ ಇದೆ. ಪಾಕಿಸ್ತಾನದ ಸೇನೆಯನ್ನು ನಮ್ಮ ಸೇನೆ ಧೂಳಿಪಟ ಮಾಡಿದೆ. ಆಪರೇಷನ್ ಸಿಂಧೂರ ಒಂದು…

Read More

ಪಂಜಾಬ್ : ಪಂಜಾಬ್ : ಆಪರೇಷನ್ ಸಿಂಧೂರ್ ಬಳಿಕ ಇಂದು ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ನ ಆದಂಪುರ ಏರ್ ಬೇಸ್ ಗೆ ಬೇಟಿ ನೀಡಿದ್ದಾರೆ. ಪಂಜಾಬಿನ ಆದಂಪುರ ವಾಯುನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೈನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು. ಮತ್ತೊಮ್ಮೆ ಉಗ್ರರು ಏನಾದರೂ ದಾಳಿ ಮಾಡಿದರೆ ಭಾರತದ ಪ್ರತಿ ದಾಳಿ ಇನ್ನೂ ಘೋರವಾಗಿರುತ್ತದೆ. ಪಾಕಿಸ್ತಾನದ ನ್ಯೂಕ್ಲಿಯರ್ ಬೆದರಿಕೆಗೆ ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ಇಡೀ ವಿಶ್ವವೇ ಭಾರತದ ಬೆಂಬಲಕ್ಕೆ ನಿಂತಿದೆ. ಉಗ್ರರು ಪಾಕಿಸ್ತಾನದೊಳಗೆ ಅಡಗಿದರು ಸಹ ನುಗ್ಗಿ ಹೊಡೆಯುತ್ತೇವೆ ಭಾರತೀಯ ಸೇನೆಯ ಕಾರ್ಯ ಕ್ಷಮತೆ ಅದ್ಭುತವಾಗಿದೆ ಎಂದರು. ಆಪರೇಷನ್ ಸಿಂಧೂರ ಸಾಮಾನ್ಯ ಮಿಲಿಟರಿ ಕಾರ್ಯಾಚರಣೆ ಅಲ್ಲ. ನಿಮ್ಮ ಶೌರ್ಯ ಪ್ರತಿಧ್ವನಿ ಎಲ್ಲೆಡೆ ಕೇಳಿ ಬರುತ್ತಿದೆ. ಉಗ್ರರ ಸದೆಬಡೆಯುವದಾಗಿ ಭಾರತ ಲಕ್ಷ್ಮಣ ರೇಖೆ ಎಳೆದಿದೆ. ಭಾರತದ ಶಸ್ತ್ರಾಸ್ತ್ರಗಳಿಂದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಆಗಿದೆ. ಭಾರತೀಯ ಸೇನೆಗೆ ಆಧುನಿಕ ತಂತ್ರಜ್ಞಾನದ ಶಕ್ತಿ ಇದೆ. ಪಾಕಿಸ್ತಾನದ ಸೇನೆಯನ್ನು ನಮ್ಮ ಸೇನೆ ಧೂಳಿಪಟ ಮಾಡಿದೆ. ಆಪರೇಷನ್…

Read More

ಪಂಜಾಬ್ : ಆಪರೇಷನ್ ಸಿಂಧೂರ್ ಬಳಿಕ ಇಂದು ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ನ ಆದಂಪುರ ಏರ್ ಬೇಸ್ ಗೆ ಬೇಟಿ ನೀಡಿದ್ದಾರೆ. ಪಂಜಾಬಿನ ಆದಂಪುರ ವಾಯುನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೈನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು. ಆದಂಪುರ ಏರ್ ಬೇಸ್ ನಲ್ಲಿ ಪ್ರಧಾನಿ ಮೋದಿ ಸೈನಿಕರ ಉದ್ದೇಶಿಸಿ ಮಾತನಾಡಿ, ಉಗ್ರರು ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸಿದರು. ಸಿಂಧೂರ ಅಳಿಸಿದ್ದ ಉಗ್ರರನ್ನು ಸದೆ ಬಡಿದಿದ್ದೇವೆ. ಉಗ್ರರನ್ನು ಭಾರತೀಯ ಸೇನೆ ಮಣ್ಣಲ್ಲಿ ಹೂತುಹಾಕಿದೆ. ಭಾರತೀಯ ಸೇನೆ ಉಗ್ರ ಹುಟ್ಟಡಗಿಸಿದೆ. ಉಗ್ರ ಪೋಷಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದೇವೆ. ಉಗ್ರರ ಮಹಾವಿನಾಶ ಇಲ್ಲಿಂದ ಆರಂಭವಾಗಿದೆ. ಭಾರತೀಯ ಸೇನೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ ಪಾಕಿಸ್ತಾನ ನಡುಕ ಹುಟ್ಟಿಸಿದ್ದೇವೆ. ಪಾಕಿಸ್ತಾನಕ್ಕೆ ತಿನ್ನುವುದಕ್ಕೆ ಅನ್ನವಿಲ್ಲ ಆದರೆ ಉಗ್ರರನ್ನು ಪೋಷಿಸುತ್ತಿದೆ. 100ಕ್ಕೂ ಹೆಚ್ಚು ಉಗ್ರರನ್ನು ಸದೆ ಬಡಿದಿದ್ದೇವೆ. ಪಾಕಿಸ್ತಾನದ ಒಳಗೆ ನುಗ್ಗಿ ಭಾರತೀಯ ಸೇನಾಪಡೆ ಉಗ್ರರನ್ನು ಹೊಡೆದಿದೆ. ಡ್ರೋನ್ ಮತ್ತು ಜೆಟ್ ವಿಮಾನಗಳನ್ನು ಹೊಡೆದುರಿಸಿಳಿದ್ದೇವೆ. ನಮ್ಮ ವೀರಯೋಧರು…

Read More