Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಬಾಲಿಯ ಹೋಟೆಲ್‌ನಲ್ಲಿ ಭಾರತೀಯ ಪ್ರವಾಸಿಗರ ಕೈಚಳಕ: ಡೋರ್ ಮ್ಯಾಟ್, ಹೇರ್ ಡ್ರೈಯರ್ ಕಳ್ಳತನ; ಲಗೇಜ್ ಚೆಕ್ ವಿಡಿಯೋ ವೈರಲ್!

22/04/2026 7:45 PM

BIG BREAKING: ನಾಳೆ ಮಧ್ಯಾಹ್ನ 12 ಗಂಟೆಗೆ SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ: ಸಚಿವ ಮಧು ಬಂಗಾರಪ್ಪ ಘೋಷಣೆ

22/04/2026 7:38 PM

ಸಿಎಂ ಭೇಟಿ ಬಳಿಕ SSLC ಪರೀಕ್ಷೆ ಫಲಿತಾಂಶ ಪ್ರಕಟ: ಸಚಿವ ಮಧು ಬಂಗಾರಪ್ಪ

22/04/2026 7:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಈ ‘ಮಿಯಾ ಜಾಕಿ’ ಮಾವಿನ ಹಣ್ಣಿನ ಬೆಲೆ ಎಷ್ಟು ಗೊತ್ತಾ? ಕೇಳಿದರೆ ತಲೆ ಸುತ್ತೋದಂತೂ ಗ್ಯಾರಂಟಿ!
KARNATAKA

ಈ ‘ಮಿಯಾ ಜಾಕಿ’ ಮಾವಿನ ಹಣ್ಣಿನ ಬೆಲೆ ಎಷ್ಟು ಗೊತ್ತಾ? ಕೇಳಿದರೆ ತಲೆ ಸುತ್ತೋದಂತೂ ಗ್ಯಾರಂಟಿ!

By kannadanewsnow0513/05/2025 6:58 PM

ಧಾರವಾಡ : ಬೇಸಿಗೆ ಶುರುವಾದರೆ ಸಾಕು ಮಾವಿನ ಹಣ್ಣಿನದೇ ದರ್ಬಾರ್, ಇತ್ತೀಚಿನ ದಿನಗಳಲ್ಲಿ ಅಂತೂ ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ಮಹಾನಗರಗಳಲ್ಲಿ ಮಾವಿನ ಹಣ್ಣಿನಿಂದ ತರ ತರದಲ್ಲಿ ಖಾದ್ಯಗಳನ್ನು ತಯಾರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ 1 ಬಾಕ್ಸ್ ಮಾವಿನ ಹಣ್ಣಿಗೆ 300, 350 ಅಥವಾ 400 ರೂ. ಇರುತ್ತದೆ. ಆದರೆ ಇಲ್ಲೊಂದು ಮಾವಿನ ಹಣ್ಣಿನ ಕೆಜಿಗೆ ಬರೋಬ್ಬರಿ 2.7 ಲಕ್ಷ ರೂ. ಆಗಿದ್ದು, 1 ಮಾವಿನ ಹಣ್ಣಿಗೆ 10 ಸಾವಿರ ರೂ. ಬೆಲೆಯಿದೆ.

ಹೌದು ಈ ಮಾವಿನ ಹಣ್ಣಿನ ಹೆಸರು ಮಿಯಾ ಜಾಕಿ, ಇದು ಜಪಾನ್ ದೇಶದ ಮಾವಿನ ಹಣ್ಣಿನತಳಿಯಾಗಿದೆ. ಈ ಹಣ್ಣನ್ನು ಧಾರವಾಡದ ರೈತ ಪ್ರಮೋದ ಗಾಂವಕರ ಕಲಕೇರಿಯ ತಮ್ಮ ತೋಟದಲ್ಲಿ ಬೆಳೆದಿದ್ದಾರೆ. ಪ್ರತಿವರ್ಷ ಏಳೆಂಟು ಹಣ್ಣು ಬಿಡುತ್ತಿದ್ದ ಮಿಯಾ ಜಾಕಿ ಮರಗಳು, ಈ ವರ್ಷ 25-26 ಹಣ್ಣುಗಳನ್ನು ಬಿಟ್ಟಿವೆ. ಧಾರವಾಡದಲ್ಲಿ ನಡೆದ ಮಾವಿನ ಮೇಳದಲ್ಲೂ ಈ ಮಿಯಾ ಜಾಕಿ ಮಾವಿನ ಹಣ್ಣು ಎಲ್ಲರ ಗಮನ ಸೆಳೆಯಿತು.

ಮಾವಿನ ಮೇಳದಲ್ಲಿ ಮಿಯಾ ಜಾಕಿ ಕಂಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಈ ಮಿಯಾ ಜಾಕಿ ಹಣ್ಣನ್ನು ಯಾವ ರೈತರೂ ಬೆಳೆಯುತ್ತಿಲ್ಲ. ಆ ಹಣ್ಣಿನ ಉತ್ಪಾದನೆ ಹೆಚ್ಚಾದರೆ ಅದರ ದರವೂ ಕಡಿಮೆಯಾಗುತ್ತದೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಿಯಾ ಜಾಕಿ ಹಣ್ಣಿನ ತಳಿಯ ಸಸಿಗಳನ್ನು ತರಿಸಿ, ಇತರ ರೈತರೂ ಅದನ್ನು ಬೆಳೆಯುವಂತೆ ಪ್ರೋತ್ಸಾಹಿಸಬೇಕಿದೆ. ಒಂದು ಹಣ್ಣಿಗೆ 10 ಸಾವಿರ ಎಂದರೆ ಅದು ದುಬಾರಿಯಾಗುತ್ತದೆ. ಆದ್ದರಿಂದ ಆ ಹಣ್ಣಿನ ಉತ್ಪಾದನೆ ಹೆಚ್ಚಳ ಮಾಡಬೇಕಿದೆ ಎಂದು ಹೇಳಿದರು.

ಏನಿದು ‘ಮಿಯಾ ಜಾಕಿ’?

ಮಿಯಾ ಜಾಕಿ ಎಂಬುದು ಜಪಾನ್ ದೇಶದ ಓರ್ವ ರೈತನ ಹೆಸರು. ಮಿಯಾ ಜಾಕಿ ಎಂಬ ರೈತ ಅಲ್ಲಿ ಈ ಮಾವಿನ ಹಣ್ಣು ಬೆಳೆದಿದ್ದ. ಹೀಗಾಗಿ ಆ ಹಣ್ಣಿಗೆ ಮಿಯಾಜಾಕಿ ಎಂಬ ರೈತನ ಹೆಸರಿಡಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರಮೋದ್ ಅವರು ಜಪಾನ್‌ಗೆ ತೆರಳಿದ್ದ ವೇಳೆ ಅಲ್ಲಿಂದ ಈ ಹಣ್ಣಿನ ಎರಡು ಸಸಿಗಳನ್ನು ತಂದು, ತಮ್ಮ ತೋಟದಲ್ಲಿ ನೆಟ್ಟಿದ್ದರು.

ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ಎರಡೂ ಸಸಿಗಳು ಬೆಳೆದು ಇದೀಗ ಫಲ ಕೊಡಲಾರಂಭಿಸಿವೆ. ಪ್ರವೋದ್ ಗಾಂವಕರ ಅವರು ತಮ್ಮ ತೋಟದಲ್ಲಿ ಇಸ್ರೇಲ್, ಅಮೆರಿಕ, ಜಪಾನ್, ಇಟಲಿ, ಥೈಲ್ಯಾಂಡ್ ಸೇರಿ ವಿವಿಧ ದೇಶಗಳ ಸುಮಾರು 25 ಜಾತಿಯ ಮಾವಿನ ಹಣ್ಣಿನ ಸಸಿಗಳನ್ನು ಬೆಳೆದಿದ್ದಾರೆ. ಸದ್ಯ ಮಾವಿನ ಮೇಳದಲ್ಲಿ ಪ್ರಮೋದ್ ಗಾಂವಕರ ಅವರು ಬೆಳೆದ ಮಿಯಾಜಾಕಿ ಎಲ್ಲರ ಗಮನ ಸೆಳೆದಿದೆ.

Share. Facebook Twitter LinkedIn WhatsApp Email

Related Posts

BIG BREAKING: ನಾಳೆ ಮಧ್ಯಾಹ್ನ 12 ಗಂಟೆಗೆ SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ: ಸಚಿವ ಮಧು ಬಂಗಾರಪ್ಪ ಘೋಷಣೆ

22/04/2026 7:38 PM1 Min Read

ಸಿಎಂ ಭೇಟಿ ಬಳಿಕ SSLC ಪರೀಕ್ಷೆ ಫಲಿತಾಂಶ ಪ್ರಕಟ: ಸಚಿವ ಮಧು ಬಂಗಾರಪ್ಪ

22/04/2026 7:31 PM2 Mins Read

ಸಾಗರ ಮೀನು ಮಾರುಕಟ್ಟೆಗೆ ಕಾಯಕಲ್ಪ: ಶೀಘ್ರದಲ್ಲೇ ಸುಸಜ್ಜಿತ ಮಳಿಗೆ ಲೋಕಾರ್ಪಣೆಯೆಂದ ಶಾಸಕರು

22/04/2026 6:54 PM2 Mins Read
Recent News

​ಬಾಲಿಯ ಹೋಟೆಲ್‌ನಲ್ಲಿ ಭಾರತೀಯ ಪ್ರವಾಸಿಗರ ಕೈಚಳಕ: ಡೋರ್ ಮ್ಯಾಟ್, ಹೇರ್ ಡ್ರೈಯರ್ ಕಳ್ಳತನ; ಲಗೇಜ್ ಚೆಕ್ ವಿಡಿಯೋ ವೈರಲ್!

22/04/2026 7:45 PM

BIG BREAKING: ನಾಳೆ ಮಧ್ಯಾಹ್ನ 12 ಗಂಟೆಗೆ SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ: ಸಚಿವ ಮಧು ಬಂಗಾರಪ್ಪ ಘೋಷಣೆ

22/04/2026 7:38 PM

ಸಿಎಂ ಭೇಟಿ ಬಳಿಕ SSLC ಪರೀಕ್ಷೆ ಫಲಿತಾಂಶ ಪ್ರಕಟ: ಸಚಿವ ಮಧು ಬಂಗಾರಪ್ಪ

22/04/2026 7:31 PM

ಅಮೆರಿಕಾಕ್ಕೆ ಬಿಗ್ ಶಾಕ್: ಇರಾನ್ ಯುದ್ಧದ ಮಧ್ಯೆ 2,000 ಕೋಟಿ ರೂ. ಮೌಲ್ಯದ ‘ಟ್ರೈಟಾನ್’ ಡ್ರೋನ್ ಪತನ!

22/04/2026 7:31 PM
State News
KARNATAKA

BIG BREAKING: ನಾಳೆ ಮಧ್ಯಾಹ್ನ 12 ಗಂಟೆಗೆ SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ: ಸಚಿವ ಮಧು ಬಂಗಾರಪ್ಪ ಘೋಷಣೆ

By kannadanewsnow0922/04/2026 7:38 PM KARNATAKA 1 Min Read

ಬೆಂಗಳೂರು: ನಾಳೆ ಮಧ್ಯಾಹ್ನ 12 ಗಂಟೆಗೆ ಎಸ್ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಿಸುವುದಾಗಿ ಸಚಿವ ಮಧು ಬಂಗಾರಪ್ಪ ಅವರು…

ಸಿಎಂ ಭೇಟಿ ಬಳಿಕ SSLC ಪರೀಕ್ಷೆ ಫಲಿತಾಂಶ ಪ್ರಕಟ: ಸಚಿವ ಮಧು ಬಂಗಾರಪ್ಪ

22/04/2026 7:31 PM

ಸಾಗರ ಮೀನು ಮಾರುಕಟ್ಟೆಗೆ ಕಾಯಕಲ್ಪ: ಶೀಘ್ರದಲ್ಲೇ ಸುಸಜ್ಜಿತ ಮಳಿಗೆ ಲೋಕಾರ್ಪಣೆಯೆಂದ ಶಾಸಕರು

22/04/2026 6:54 PM

ಸಾಗರದಲ್ಲಿ ‘ಹೈಟೆಕ್ ಸಬ್ ರಿಜಿಸ್ಟ್ರಾರ್ ಕಚೇರಿ’ ನಿರ್ಮಾಣ: ಶಾಸಕ ಗೋಪಾಲಕೃಷ್ಣ ಬೇಳೂರು

22/04/2026 6:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.